ನವದೆಹಲಿ: ಹದಿನೆಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ(IPL 2025) ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುವ ಮೂಲಕ ಎಲ್ಲರ ಗಮನ ಸೆಳೆದಿದ್ದ ಪಂಜಾಬ್ ಕಿಂಗ್ಸ್ ಓಪನರ್ ಪ್ರಿಯಾಂಶ್ ಆರ್ಯ (Priyansh Arya), ಇದೀಗ ನಡೆಯುತ್ತಿರುವ ಡೆಲ್ಲಿ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ (DPL 2025) ಶತಕ ಸಿಡಿಸುವ ಮೂಲಕ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ. ಈಸ್ಟ್ ಡೆಲ್ಲಿ ರೈಡರ್ಸ್ ವಿರುದ್ದದ ಪಂದ್ಯದಲ್ಲಿ ಅವರು ಆಡಿದ ಕೇವಲ 56 ಎಸೆತಗಳಲ್ಲಿ 111 ರನ್‌ಗಳನ್ನು ಸಿಡಿಸಿದ್ದರು. ಇದರಲ್ಲಿ ಅವರು 9 ಸಿಕ್ಸರ್ ಹಾಗೂ 7 ಬೌಂಡರಿಗಳನ್ನು ಬಾರಿಸಿದರು. ಈ ಶತಕದ ಮೂಲಕ ಅವರು ಡಿಪಿಎಲ್ ಟೂರ್ನಿಯಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ.
ಆಗಸ್ಟ್ 8 ರಂದು ಶುಕ್ರವಾರ ನೆಡಿದದ್ದ ಪಂದ್ಯದಲ್ಲಿ ಔಟರ್ ಡೆಲ್ಲಿ ವಾರಿಯರ್ಸ್ ಪರ ಇನಿಂಗ್ಸ್ ಆರಂಭಿಸಿದ ಪ್ರಿಯಾಂಶ್ ಆರ್ಯ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಆ ಮೂಲಕ ಡೆಲ್ಲಿ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎರಡನೇ ಶತಕವನ್ನು ಬಾರಿಸಿದ್ದರು. ಆ ಮೂಲಕ ಈ ಟೂರ್ನಿಯಲ್ಲಿ ಒಂದಕ್ಕಿಂತ ಹೆಚ್ಚು ಶತಕವನ್ನು ಸಿಡಿಸಿದ ಮೊದಲನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇವರ ಶತಕದ ಮೂಲಕ ಔಟರ್ ಡೆಲ್ಲಿ ವಾರಿಯರ್ಸ್ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 231 ನ್‌ಗಳನ್ನು ಕಲೆ ಹಾಕಿತ್ತು.
IND vs ENG: ಅರ್ಷದೀಪ್ ಸಿಂಗ್ ಬದಲು ಅನ್ಶುಲ್ ಕಾಂಬೋಜ್‌ಗೆ ಸ್ಥಾನ ನೀಡಿದ್ದೇಕೆ? ಅರುಣ್ ಲಾಲ್ ಪ್ರಶ್ನೆ!
2024ರ ಡೆಲ್ಲಿ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಪ್ರಿಯಾಂಶ್ ಆರ್ಯ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಅಂದು ಅವರು ಆಡಿದ್ದ 10 ಇನಿಂಗ್ಸ್‌ಗಳಿಂದ 67.56ರ ಸರಾಸರಿ ಹಾಗೂ 200ದ ಸ್ಟ್ರೈಕ್ ರೇಟ್‌ನಲ್ಲಿ 608 ರನ್‌ಗಳನ್ನು ಬಾರಿಸಿದ್ದರು. ಆ ಮೂಲಕ ಅವರು 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದರು. ತಮ್ಮ ಪದಾರ್ಪಣೆ ಐಪಿಎಲ್ ಟೂರ್ನಿಯಲ್ಲಿಯೇ ಅವರು 17 ಇನಿಂಗ್ಸ್‌ಗಳಿಂದ 475 ರನ್‌ಗಳನ್ನು ಬಾರಿಸಿದ್ದರು. ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 103 ರನ್‌ಗಳನ್ನು ಬಾರಿಸಿದ್ದರು. ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಪ್ರಿಯಾಂಶ್ ಆರ್ಯ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು.
ಪ್ರಸಕ್ತ ಟೂರ್ನಿಯ ಆರಂಭಿಕ ಮೂರು ಇನಿಂಗ್ಸ್‌ಗಳಲ್ಲಿ ಅವರು ಕ್ರಮವಾಗಿ 26, 16 ಹಾಗೂ 8 ರನ್‌ಗಳನ್ನು ಗಳಿಸಿ ವಿಫಲರಾಗಿದ್ದರು. ಆ ಮೂಲಕ ನಾಲ್ಕನೇ ಪಂದ್ಯದಲ್ಲಿಯೇ ಅವರು ಅಬ್ಬರದ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದಾರೆ. ಈಸ್ಟ್ ಡೆಲ್ಲಿ ರೈಡರ್ಸ್ ಬೌಲರ್‌ಗಳ ವಿರುದ್ದ ಅವರ ಸ್ಪೋಟಕ ಬ್ಯಾಟಿಂಗ್ ಪ್ರದರ್ಶವನ್ನು ತೋರಿದ್ದರು. ಅವರು ಕರಣ್ ಗರ್ಗ್ ಅವರ ಜೊತೆಗೆ 46 ಎಸೆತಗಳಲ್ಲಿ 92 ರನ್‌ಗಳನ್ನು ಕಲೆ ಹಾಕಿದ್ದರು.
IND vs ENG: ಟೀಕೆಗಳಿಗೆ ಗುರಿಯಾಗಿರುವ ಜಸ್‌ಪ್ರೀತ್ ಬುಮ್ರಾಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ!
ಪ್ರಿಯಾಂಶ್ ಆರ್ಯ ಅವರ ಸ್ಪೋಟಕ ಶತಕದ ಹೊರತಾಗಿಯೂ ಔಟರ್ಸ್ ಡೆಲ್ಲಿ ವಾರಿಯರ್ ತಂಡ ಸೋಲು ಅನುಭವಿಸಿತು. 232 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಈಸ್ಟ್ ಡೆಲ್ಲಿ ರೈಡರ್ಸ್ ತಂಡ, ಅನುಜ್ ರಾವತ್ ( 84 ರನ್) ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ ಗೆಲುವು ಪಡೆಯಿತು. ಮಯಾಂಕ್ ರಾವತ ಅವರು ಕೊನೆಯಲ್ಲಿ ಕೇವಲ 11 ಎಸೆತಗಳಲ್ಲಿ ಅಜೇಯ 32 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.