Winter Hacks: ಚಳಿಗಾಲದಲ್ಲಿ ನಿಮ್ಮ ರೂಂ ಬೆಚ್ಚಗೆ ಇರಬೇಕೆ..?; ಹಾಗಾದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ
Winter Hacks To Make Your Room Warm: ಚಳಿಗಾಲದಲ್ಲಿ ರೋಗ ರುಜಿನಗಳು ಕಾಡುವುದು ಸಹಜ, ಅದಕ್ಕೆ ಆರೋಗ್ಯದ ಬಗ್ಗೆ ಸಾಕಷ್ಟು ನಿಗಾವಹಿಸಬೇಕಾಗುತ್ತದೆ. ಅದರ ಜೊತೆಗೆ ಸರಿಯಾದ ಆಹಾರ ಕ್ರಮದೊಂದಿಗೆ ವ್ಯಾಯಾಮ ಮಾಡಿಕೊಂಡಿದ್ದರೆ ಆಗ ಖಂಡಿತವಾಗಿಯೂ ಸೋಂಕುಗಳಿಂದ ರಕ್ಷಣೆ ಪಡೆಯಬಹುದು. ಇದರೊಂದಿಗೆ ದೇಹವನ್ನು ಬೆಚ್ಚಗೆ ಇಡಲು ದಪ್ಪಗಿನ ಹತ್ತಿ ಬಟ್ಟೆ, ಶಾಲ್ ಗಳನ್ನು ಬಳಸುವುದರ ಜೊತೆ ನೀವು ಮಲಗವ ಕೋಣೆಯನ್ನು ಬೆಚ್ಚಗಿಟ್ಟರೆ ಚಳಿಗಾಲದಲ್ಲಿ ಅನಾರೋಗ್ಯಕ್ಕೆ ಹೀಡಾಗುವುದು ತಪ್ಪುತ್ತದೆ. ಹಾಗಾದ್ರೆ ಬೆಡ್ ರೂಂ ಅನ್ನು ವಾರ್ಮ್ ಆಗಿ ಹಿಡುವುದೇಗೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಇನ್ನೇನು ಮಳೆಗಾಲ(Monsoon)ಕಳೆದು ಚಳಿಗಾಲದ(Winter season) ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಈ ವಿಂಟರ್ ಸೀಸನ್ ಬಂತು ಅಂತ ಅಂದರೆ ಮೈ ನಡುಕ ಶುರುವಾಗುತ್ತದೆ. ಬೆಳಿಗ್ಗೆ ಹಾಸಿಗೆಯಿಂದ ಎದ್ದು ಹೊರ ಬರುವುದೇ ಬೇಡ ಎಂದೆನಿಸುತ್ತದೆ. ಈ ಶೀತಲ ವಾತಾವರಣದಿಂದ ತಪ್ಪಿಸಿಕೊಳ್ಳಲು ಜನರು ಶಾಲ್, ಟೋಪಿ, ಸ್ವೆಟರ್, ಪುಲ್‍ಓವರ್, ಸ್ವೆಟ್‍ಶರ್ಟ್‍ಗಳ ಮೊರೆಹೋಗುತ್ತಾರೆ. ಅದರಲ್ಲೂ ರಾತ್ರಿ ಮಲಗುವಾಗ ಸ್ವೆಟರ್ ಎರೆಡೆರಡು ಬೆಡ್ ಶೀಟ್, ಹೊದಿಕೆಗಳು ಬೇಕಾಗುತ್ತದೆ. ವರ್ಷಾಂತ್ಯದಲ್ಲಿ ಬರುವ ಚಳಿಗಾಲ ಜನರನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ. ಆದ್ರೆ ನಾವು ಹೇಳುವ ಕೆಲ ಟಿಪ್ಸ್ ಗಳನ್ನು ನೀವು ಪಾಲಿಸಿದ್ದರೆ ಮೈ ಕೊರೆಯುವ ಚಳಿಯಿಂದ ತಪ್ಪಿಸಿಕೊಳ್ಳಬಹುದಾಗಿದ್ದು, ಶಿಮ್ಲಾ ಮನಾಲಿ ಅಂತೆ ಇರುವ ನಿಮ್ಮ ಬೆಡ್ ರೂಮ್ ನಲ್ಲಿ ಬೆಚ್ಚಗಿನ(Warm Weather) ವಾತಾವರಣ ಸೃಷ್ಟಿಸಬಹುದಾಗಿದೆ.
ಹೌದು ಚಳಿಗಾಲ ಬಂತು ಅಂದರೆ, ಹಾಸಿಗೆಯ ಹೊರಗೆ ಕಾಲಿಟ್ಟರೆ ಸಾಕು ತಣ್ಣನೆಯ ಗಾಳಿ ಮೈಮುರಿಯುವಂತೆ ಹೊಡೆಯುತ್ತದೆ. ಕಿಟಕಿ, ಬಾಗಿಲುಗಳನ್ನೆಲ್ಲ ಬಿಗಿಯಾಗಿ ಮುಚ್ಚಿದರೂ ತಂಪು ಗಾಳಿ ಒಂದಲ್ಲೊಂದು ಕಡೆಗಿಂದ ಒಳನುಗ್ಗುತ್ತದೆ. ನೆಲಕ್ಕೆ ಕಾಲಿಟ್ಟರೆ ಮಂಜುಗಡ್ಡೆಯ ಮೇಲೆ ನಿಂತಿದ್ದೇವೆ ಎನ್ನುವ ಅನುಮಾನ. ಹೊರಗೆ ಹೋಗುವುದಂತೂ ಕಷ್ಟ ಅಸಾಧ್ಯ, ಒಳಗಡೆಯೇ ಬೆಚ್ಚಗೆ ಇರೋಣವೆಂದರೂ ಸಾಧ್ಯವಾಗದ ಸ್ಥಿತಿ. ಇಂತಹ ಪರಿಸ್ಥಿತಿಯಲ್ಲಿ ಬೆಚ್ಚಗೆ ಇರಬೇಕು ಎಂದ್ರೆ ನಿಮ್ಮ ಕೋಣೆಯಲ್ಲಿ ಈ ಸರಳ ಬದಲಾವಣೆಗಳನ್ನು ಮಾಡಿ ಸಾಕು.
ಕಿಟಕಿಗೆ ದಪ್ಪ ಕರ್ಟನ್ ಅಳವಡಿಸಿ
ಕಿಟಕಿಯ ಬಾಗಿಲು ಮುಚ್ಚಿದ್ದರು ಅದರ ಎಡೆಯಲ್ಲಿ ಚೂರೇ ಚೂರು ಜಾಗವಿದ್ದರೂ ಗಾಳಿ ಒಳಬರುವ ಸಾಧ್ಯತೆ ಹೆಚ್ಚು. ಈ ತಣ್ಣನೆಯ ಗಾಳಿಯನ್ನು ತಡೆಯಲು ದಪ್ಪ ಕರ್ಟನ್‌ಗಳು ಅತ್ಯುತ್ತಮ. ಇವು ಹೊರಗಿನ ಚಳಿಗಾಳಿ ಒಳಬಾರದಂತೆ ಹಾಗೂ ಒಳಗಿನ ಬಿಸಿಗಾಳಿ ಹೊರಹೋಗದಂತೆ ತಡೆಯುತ್ತದೆ. ಬಿಸಿಲು ಬಂದಾಗ ಕರ್ಟನ್ ಬದಿಗೆ ಸರಿಸಿ ಸೂರ್ಯನ ಕಿರಣಗಳು ಒಳಬಂದು ಮನೆಯನ್ನು ನೈಸರ್ಗಿಕವಾಗಿ ಬಿಸಿಗೊಳಿಸುತ್ತವೆ.
ನೆಲಕ್ಕೆ ಕಾರ್ಪೆಟ್ ಹಾಕಿ
ಚಳಿಗಾಲದಲ್ಲಿ ನೆಲ ತುಂಬ ತಣ್ಣಗಾಗಿರುತ್ತದೆ, ಕಾಲುಗಳನ್ನು ನೆಲದ ಮೇಲಿಡುವುದು ಕಷ್ಟವಾಗುತ್ತದೆ. ಅದಕ್ಕೆ ದಪ್ಪದಾದ ಉಣ್ಣೆಯ ಕಾರ್ಪೆಟ್ ಅಥವಾ ಮ್ಯಾಟ್ ಹಾಕಿದ್ದರೆ ಈ ತಣ್ಣನೆಯ ಅನುಭವ ಕಡಿಮೆ ಆಗುತ್ತದೆ. ಜೊತೆಗೆ, ಕಾರ್ಪೆಟ್ ಕೋಣೆಯ ಉಷ್ಣಾಂಶವನ್ನು ಉಳಿಸುವಲ್ಲಿ ಸಹಾಯಮಾಡುತ್ತದೆ. ಹಾಗೆಯೇ ಬಿಸಿ ನೀರಿನಿಂದ ನೆಲವನ್ನು ಒರೆಸುವುದರಿಂದ ಶೀತಲ ವಾತಾವರಣದಿಂದ ಮುಕ್ತಿ ಪಡೆಯಬಹುದಾಗಿದ್ದು, ಸೋಂಕು ಹಾಗೂ ನೆಗಡಿ ಅಂತಹ ರೋಗ ರುಜಿನಗಳು ನಿಮ್ಮ ಹತ್ತಿರ ಸುಳಿಯದಂತೆ ನೋಡಿ ಕೊಳ್ಳಬಹುದು.
ಕಿಟಕಿ ಒಳಭಾಗಕ್ಕೆ ಪ್ಲಾಸ್ಟಿಕ್ ಹೊದಿಕೆ ಹಾಕಿ
ಕಿಟಕಿಯ ಒಳಭಾಗದಲ್ಲಿ ಪ್ಲಾಸ್ಟಿಕ್ ಕವರ್ ಅಳವಡಿಸುವುದರಿಂದ ಚಳಿಗಾಳಿ ಒಳ ಬರುವುದನ್ನು ತಪ್ಪಿಸಬಹುದಾಗಿದ್ದು, ಬಿಸಿಗಾಳಿ ಹೊರ ಹೋಗದಂತೆ ತಡೆಯ ಬಹುದು. ಇದರಿಂದ ಕೋಣೆಯ ತಾಪಮಾನ ಸ್ಥಿರವಾಗಿರುತ್ತದೆ ಮತ್ತು ಮನೆಯೊಳಗೆ ಬೆಚ್ಚಗಿನ ಅನುಭವ ಸಿಗುತ್ತದೆ.
ಹೊದಿಕೆಗೆ ಬಿಸಿ ನೀರಿನ ಶಾಖ ನೀಡಿ
ಹೊದಿಕೆಯನ್ನು ಬೆಚ್ಚಗಿರಿಸಲು ಅದರ ಕೆಳಭಾಗದಲ್ಲಿ ಬಿಸಿ ನೀರಿನ ಬ್ಯಾಗ್ ಇಡಿ. ಇಲ್ಲದಿದ್ದರೆ ಬಿಸಿ ನೀರಿನ ಬ್ಯಾಗ್‌ನಿಂದ ಹೊದಿಕೆಯ ಮೇಲೆ ಸ್ವಲ್ಪ ಹೊತ್ತು ಇಸ್ತ್ರಿ ಮಾಡಿದರೂ ಅದು ಬಿಸಿಯಾಗುತ್ತದೆ. ಈ ವಿಧಾನದಿಂದ ಹಾಸಿಗೆ ಬೆಚ್ಚಗೆ ಆಗಿ ಆರಾಮವಾಗಿ ನಿದ್ರಿಸಬಹುದು.
ಹೇರ್ ಡ್ರೈಯರ್‌ಯಿಂದ ಹೀಗೆ ಮಾಡಿ
ಮಲಗುವ ಮೊದಲು ಬೆಡ್‌ಶೀಟ್ ಮೇಲೆ ಹೇರ್‌ಡ್ರೈಯರ್‌ನಿಂದ ಸ್ವಲ್ಪ ಹೊತ್ತು ಬಿಸಿ ಗಾಳಿ ಹಾಯಿಸಿ. ಇದರಿಂದ ಹಾಸಿಗೆ ತಕ್ಷಣ ಬೆಚ್ಚಗಾಗುತ್ತದೆ ಮತ್ತು ಮಲಗುವಾಗಲೂ ಬೆಚ್ಚಗಿನ ಅನುಭವ ನೀಡುತ್ತದೆ. ಇನ್ನು ಇದೇ ರೀತಿ, ಮಲಗುವಾಗ ಐರನ್ ಮಾಡಿರುವ ಉಡುಪನ್ನು ಅಥವಾ ನೈಟ್ ಡ್ರೆಸ್ ಹಾಕಿಕೊಳ್ಳುವುದರಿಂದ ಚಳಿಯಿಂದ ತಪ್ಪಿಸಿಕೊಳ್ಳಬಹುದಾಗಿದೆ.