ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chardham Yatra: ಅಡಿಗಾಸ್‌ ಯಾತ್ರಾದಿಂದ ಚಾರ್‌ ಧಾಮ್‌ ಪ್ರವಾಸ ಪ್ಯಾಕೇಜ್‌; ಯಾವೆಲ್ಲಾ ಸ್ಥಳ ನೋಡಬಹುದು? ಇಲ್ಲಿದೆ ಮಾಹಿತಿ

Chardham Yatra: ಕಳೆದ 32 ವರ್ಷಗಳಿಂದಲೂ 3 ಲಕ್ಷಕ್ಕೂ ಹೆಚ್ಚು ಪ್ರವಾಸಿಗರಿಗೆ ಪ್ರವಾಸ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿರುವ ಬೆಂಗಳೂರಿನ ಅಡಿಗಾಸ್‌ ಯಾತ್ರಾ ಸಂಸ್ಥೆಯು ಇದೀಗ ಚಾರ್ ಧಾಮ್ ಯಾತ್ರೆ ಹಮ್ಮಿಕೊಂಡಿದೆ. ಈ ಟೂರ್‌ ಪ್ಯಾಕೇಜ್‌ನಲ್ಲಿ ಯಾವೆಲ್ಲಾ ಸ್ಥಳಗಳಿಗೆ ಭೇಟಿ ನೀಡಬಹುದು ಎಂಬ ಕುರಿತ ವಿವರವಾದ ಮಾಹಿತಿ ಇಲ್ಲಿ ನೀಡಲಾಗಿದೆ.

ಅಡಿಗಾಸ್‌ ಯಾತ್ರಾ ಚಾರ್‌ ಧಾಮ್‌ ಪ್ರವಾಸ.

ಬೆಂಗಳೂರು: ಕೇಂದ್ರ ಸರಕಾರದ 'ಅನುಭವಿ ಸೇವಾ ಪೂರೈಕೆದಾರʼ ಎಂಬ ಮಾನ್ಯತೆ ಗಳಿಸಿರುವ ಅಡಿಗಾಸ್‌ ಯಾತ್ರಾ ಟ್ರಾವೆಲ್‌ ಸಂಸ್ಥೆಯು ಚಾರ್‌ ಧಾಮ್‌ ಪ್ರವಾಸ ಪ್ಯಾಕೇಜ್‌ ಅನ್ನು ಘೋಷಿಸಿದೆ. ಕಳೆದ 32 ವರ್ಷಗಳಿಂದಲೂ 3 ಲಕ್ಷಕ್ಕೂ ಹೆಚ್ಚು ಪ್ರವಾಸಿಗರಿಗೆ ಪ್ರವಾಸ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿರುವ ಅಡಿಗಾಸ್‌, ಇದೀಗ ಈ ವರ್ಷದ ಚಾರ್‌ ಧಾಮ್‌ ಯಾತ್ರಾವನ್ನು ಹಮ್ಮಿಕೊಂಡಿದೆ. ಪ್ರವಾಸಿಗರಿಗೆ ಸಸ್ಯಾಹಾರಿ ಊಟೋಪಚಾರ, ನುರಿತ ಮಾರ್ಗದರ್ಶನ, ಡೀಲಕ್ಸ್‌ ಬಸ್‌, ಸ್ಟ್ಯಾಂಡರ್ಡ್‌ ರೂಮ್‌, ಟ್ರಾವೆಲ್‌ ವಿಮೆಯನ್ನು ಅಡಿಗಾಸ್‌ ಯಾತ್ರಾದಲ್ಲಿ ಒದಗಿಸಲಾಗುತ್ತಿದೆ.

15 ದಿನಗಳ ಚಾರ್ ಧಾಮ್ ಯಾತ್ರೆ:

15 ದಿನಗಳ ಚಾರ್‌ ಧಾಮ್‌ ಯಾತ್ರೆ ಪ್ಯಾಕೇಜ್‌ನಲ್ಲಿ ಹರಿದ್ವಾರ, ಹನುಮಾನ್‌ ಚಟ್ಟಿ, ಯಮುನೋತ್ರಿ, ಉತ್ತರಕಾಶಿ, ಗಂಗೋತ್ರಿ, ರುದ್ರಪ್ರಯಾಗ, ಗುಪ್ತಕಾಶಿ, ಕೇದಾರನಾಥ, ಕರ್ಣ ಪ್ರಯಾಗ, ಬದರಿನಾಥ, ವಿಷ್ಣುಪ್ರಯಾಗ, ಜೋಷಿಮಠ, ನಂದ ಪ್ರಯಾಗ, ಋಷಿಕೇಶ, ದಿಲ್ಲಿಯ ಭೇಟಿ ಇರಲಿದೆ. ಏಪ್ರಿಲ್‌ 19ರಿಂದ ಅಕ್ಟೋಬರ್‌ 25ರ ತನಕ ಈ ಪ್ರವಾಸಗಳು ನಡೆಯಲಿವೆ.

_Chardham Yatra  (2)

12 ದಿನಗಳ ಫಿಕ್ಸೆಡ್‌ ಡಿಪಾರ್ಚರ್ ಪ್ಯಾಕೇಜ್‌:

ಚಾರ್‌ ಧಾಮ್‌ಗೆ 12 ದಿನಗಳ ಫಿಕ್ಸೆಡ್‌ ಡಿಪಾರ್ಚರ್ ಪ್ಯಾಕೇಜ್‌ ಕೂಡ ಲಭ್ಯವಿದೆ. ಇದರಲ್ಲಿ ಹರಿದ್ವಾರ, ಋಷಿಕೇಶ, ಯಮುನೋತ್ರಿ, ಗುಪ್ತಕಾಶಿ, ಕೇದಾರನಾಥ, ಬದರಿನಾಥ, ಮಾನ, ರುದ್ರಪ್ರಯಾಗದ ಭೇಟಿ ಇರುತ್ತದೆ. ಬದರಿ-ಕೇದಾರನಾಥಕ್ಕೆ 8 ದಿನಗಳ ಯಾತ್ರಾ ಪ್ರವಾಸವೂ ಲಭ್ಯವಿದೆ. ಇದರಲ್ಲಿ ಹರಿದ್ವಾರ, ಋಷಿಕೇಶ, ಬದರಿನಾಥ, ಮಾನ, ರುದ್ರ ಪ್ರಯಾಗದ ಭೇಟಿ ಇದೆ.

_Chardham Yatra

ಹೆಲಿಕಾಪ್ಟರ್ ಯಾತ್ರೆ ಅವಕಾಶ:

ಚಾರ್‌ ಧಾಮ್‌ ಯಾತ್ರೆಯನ್ನು ಹೆಲಿಕಾಪ್ಟರ್‌ನಲ್ಲಿ ಕೈಗೊಳ್ಳಬಹುದು. ಇಲ್ಲಿ 7 ದಿನಗಳ ಚಾರ್ ಧಾಮ್‌ ಯಾತ್ರಾ, 3/5 ದಿನಗಳ ಬದರಿನಾಥ, ಕೇದಾರನಾಥ ಯಾತ್ರಾ ವ್ಯವಸ್ಥೆ ಇರುತ್ತದೆ. ವಿಐಪಿ ದರ್ಶನ, ಲಕ್ಸುರಿ ವಾಸ್ತವ್ಯ, ಕಾಯ್ದಿರಿಸಿದ ವಾಹನ, ಟ್ರಾವೆಲ್‌ ಇನ್ಶೂರೆನ್ಸ್‌, ಸಸ್ಯಾಹಾರಿ ಊಟೋಪಚಾರ ಸಿಗುತ್ತದೆ.

ಯಾತ್ರಿಕರ ಅನುಕೂಲಕ್ಕಾಗಿ ಕಸ್ಟಮೈಸ್ಡ್‌ ಪ್ರವಾಸಗಳನ್ನೂ ಅಡಿಗಾಸ್‌ ಆಯೋಜಿಸಿದೆ. ಇದರಲ್ಲಿ ಪ್ರವಾಸಿಗರು ಅವರು ಬಯಸಿದ ದಿನಗಳಲ್ಲಿ ಕ್ಲಾಸಿಕ್-ಡಿಲಕ್ಸ್-ಲಕ್ಸುರಿ-ಪ್ರೀಮಿಯಂ ಕೆಟಗರಿಗಳಲ್ಲಿ 3 ದಿನಗಳಿಂದ 21 ದಿನಗಳ ತನಕ 500ಕ್ಕೂ ಹೆಚ್ಚು ವೈವಿಧ್ಯಮಯ ಪ್ರವಾಸಗಳನ್ನು ಮಾಡಬಹುದು.

_Chardham Yatra  (4)

ಇದನ್ನೂ ಓದಿ : Golden Chariot: ಚಕ್ರಗಳ ಮೇಲೆ ರಾಜ್ಯದ ಸಾಮ್ರಾಜ್ಯಗಳು; 6 ದಿನ ಹೋಗಿ ಅರಸರಾಗಿ ಬನ್ನಿ

ಕಸ್ಟಮೈಸ್ಡ್‌ ಪ್ರವಾಸ:

ಕಸ್ಟಮೈಸ್ಡ್‌ ಪ್ರವಾಸದಲ್ಲಿ 12 ದಿನಗಳ ಚಾರ್‌ ಧಾಮ್‌ ಯಾತ್ರಾ ಕೈಗೊಳ್ಳಬಹುದು. ಇದರಲ್ಲಿ ದಿಲ್ಲಿ/ ಡೆಹ್ರಾಡೂನ್‌, ಯಮುನೋತ್ರಿ, ಉತ್ತರಕಾಶಿ, ಗಂಗೋತ್ರಿ, ಗುಪ್ತಕಾಶಿ, ಕೇದಾರನಾಥ, ಬದರಿನಾಥ, ರುದ್ರಪ್ರಯಾಗ, ಋಷಿಕೇಶ ಭೇಟಿ ಇದೆ.

12 ದಿನಗಳ ಬದರಿನಾಥ ಯಾತ್ರೆಯಲ್ಲಿ ಹರಿದ್ವಾರ, ಋಷಿಕೇಶ, ರುದ್ರ ಪ್ರಯಾಗ, ಬದರಿನಾಥ, ಜೋಷಿಮಠ, ಪೀಪಲ್‌ ಕೋಟಿ ಪ್ರವಾಸ ಇದೆ. 8 ದಿನಗಳ ಬದರಿ-ಕೇದಾರ ಯಾತ್ರಾದಲ್ಲಿ ಹರಿದ್ವಾರ, ಋಷಿಕೇಶ, ರುದ್ರಪ್ರಯಾಗ, ಕೇದಾರನಾಥ, ಬದರಿನಾಥ ಯಾತ್ರ ಕೈಗೊಳ್ಳಬಹುದು.

7 ದಿನಗಳ ಗಂಗೋತ್ರಿ-ಯಮುನೋತ್ರಿ ಪ್ರವಾಸದಲ್ಲಿ ಹರಿದ್ವಾರ, ಯಮುನೋತ್ರಿ, ಉತ್ತರಕಾಶಿ, ಗಂಗಾನಾನಿ, ಗಂಗೋತ್ರಿಯ ದರ್ಶನ ಕೈಗೊಳ್ಳಬಹುದು.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಮೊಬೈಲ್-‌93641 04366/ 70222 59007/ 70222 59008