| ಶೀಲಾ ಸಿ. ಶೆಟ್ಟಿ, ಬೆಂಗಳೂರು
ದೇಶ ಪ್ರೇಮ ಬಿಂಬಿಸಲು ನೀವು ರೆಡಿಯಿದ್ದೀರಾ! ಹಾಗಾದಲ್ಲಿ, ನಿಮ್ಮ ದೇಶ ಪ್ರೇಮವನ್ನು ನಿಮ್ಮ ಔಟ್‌ಲುಕ್‌ನಿಂದಲೂ ಬಿಂಬಿಸಬಹುದು. ಇದಕ್ಕೆ ಪೂರಕ ಎಂಬಂತೆ, ಈಗಾಗಲೇ ಮಾರುಕಟ್ಟೆಯಲ್ಲಿ ನಾನಾ ಬಗೆಯ ಡಿಸೈನರ್‌ವೇರ್‌ಗಳು ಎಂಟ್ರಿ ನೀಡಿದ್ದು, ಇವುಗಳನ್ನು ಧರಿಸಿ, ಸೂಕ್ತ ಸ್ಟೈಲಿಂಗ್ ಮಾಡಿದಲ್ಲಿ ಆಕರ್ಷಕವಾಗಿ ಕಾಣಿಸಬಹುದು ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ದೇಶಪ್ರೇಮ ಬಿಂಬಿಸುವ ಫ್ಯಾಷನ್
ಗಣರಾಜ್ಯೋತ್ಸವದಂದು ಆದಷ್ಟೂ ಖಾದಿ, ಕಾಟನ್, ಖಾದಿ ಸಿಲ್ಕ್‌ನ ಉಡುಗೆಗಳನ್ನು ಆಯ್ಕೆ ಮಾಡಿ, ಧರಿಸಿ. ಮಾನಿನಿಯರು ಸೀರೆ, ಕುರ್ತಾ, ಸೆಲ್ವಾರ್ ಆಯ್ಕೆ ಮಾಡಬಹುದು. ಪುರುಷರು ಧೋತಿ, ಕುರ್ತಾ-ಪೈಜಾಮ ಧರಿಸಬಹುದು.
ಉಡುಗೆ ಫಂಕಿಯಾಗಿರಕೂಡದು!
ರಾಷ್ಟ್ರ ಪ್ರೇಮದ ಹೆಸರಲ್ಲಿ ಯಾವತ್ತೂ ನಗೇಪಾಟಲಿಗೀಡಾಗುವಂತಹ ಫಂಕಿ ಉಡುಪನ್ನು ಧರಿಸಕೂಡದು. ಫಂಕಿ ಲುಕ್ ನೋಡಲು ನೀವಿನ್ನೂ ಹುಡುಗಾಟದ ಹುಡುಗಿ ಅಥವಾ ಹುಡುಗನಂತೆ ನಿಮ್ಮನ್ನು ಬಿಂಬಿಸಬಹುದು. ಹಾಗಾಗಿ ನಿಮ್ಮ ಇಮೇಜಿಗೆ ತಕ್ಕಂತೆ ನಿಮ್ಮ ಉಡುಗೆ ಧರಿಸಿ ಎನ್ನುತ್ತಾರೆ ಸ್ಟೈಲಿಸ್ಟ್ಸ್.
ಉಡುಗೆಗಳ ಬಣ್ಣದ ಆಯ್ಕೆ ಹೀಗಿರಲಿ
ಆದಷ್ಟೂ ರಾಷ್ಟ್ರಪ್ರೇಮ ಬಿಂಬಿಸುವ ವರ್ಣಗಳ ಆಯ್ಕೆ ಮಾಡಿ. ಆರೆಂಜ್, ಹಾಫ್ ವೈಟ್, ವೈಟ್, ಕ್ರೀಮ್ ಶೇಡ್‌ನ ಉಡುಗೆಗಳನ್ನು ಆಯ್ಕೆ ಮಾಡಿ ಧರಿಸಿ.
ಆಕ್ಸೆಸರೀಸ್ ಮ್ಯಾಚ್ ಮಾಡಿ
ಎಂತಹ ಔಟ್‌ಫಿಟ್ ಧರಿಸಿದರೂ ಅದಕ್ಕೆ ತಕ್ಕಂತೆ ಆಕ್ಸೆಸರೀಸ್ ಮ್ಯಾಚ್ ಮಾಡಿ. ಎಲ್ಲದಕ್ಕಿಂತ ಹೆಚ್ಚಾಗಿ, ಮಾರುಕಟ್ಟೆಯಲ್ಲಿ ದೊರೆಯುವ ತಿರಂಗಾ ಹೆಡ್‌ಬ್ಯಾಂಡನ್ನು ಮಕ್ಕಳು ಹಾಗೂ ಯುವಕರು ಧರಿಸಬಹುದು. ಮಾನಿನಿಯರು ತಿರಂಗಾ ಬಳೆ, ದುಪಟ್ಟಾ ಧರಿಸಬಹುದು.
Winter Fashion 2026: ಚುಮುಚುಮು ಚಳಿಗೆ ಬಂತು ವಿಂಟರ್ ಹೆಡ್ ಬ್ಯಾಂಡ್ಸ್
ಧಕ್ಕೆ ತರುವಂತಹ ಸ್ಟೈಲ್ ಸ್ಟೇಟ್‌ಮೆಂಟ್ ಬೇಡ
ಇನ್ನು ಕೆಲವರಿಗೆ ಯಾವ ಮಟ್ಟಿಗೆ ರಾಷ್ಟ್ರಾಭಿಮಾನದ ಅತಿರೇಕ ಹೆಚ್ಚಾಗಿ ಇರುತ್ತದೆ ಎಂದರೇ, ಮುಖದ ಮೇಲೆ ಮಾತ್ರವಲ್ಲ, ದೇಹದ ಇನ್ನಿತರೇ ಭಾಗದಲ್ಲೂ ಧ್ವಜ ಹಾಗೂ ಅಶೋಕ ಚಕ್ರದ ಸ್ಟಿಕ್ಕರ್ ಅಂಟಿಸಿಕೊಳ್ಳುವುದು ಕಂಡು ಬರುತ್ತದೆ. ಇದು ನಾಟ್ ಓಕೆ. ಇದು ರಾಷ್ಟ್ರದ ಘನತೆಗೆ ಕುಂದು ತರುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅವನ್ನು ಹಾಕಿಸಿದರೂ ಅಭಾಸವಾಗದ ರೀತಿಯಲ್ಲಿರಬೇಕು ಎನ್ನುತ್ತಾರೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)