ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Darshan: ಕೊಲೆ ಆರೋಪಿ ಜೊತೆ ಕಾಣಿಸಿಕೊಂಡ ನಟ ದರ್ಶನ್‌; ಅಷ್ಟಕ್ಕೂ ಯಾರೀತ?

ನಿನ್ನೆ ಕೇರಳದ ಕಣ್ಣೂರಿನಲ್ಲಿ ಇರುವ ಶ್ರೀ ಭಗವತೀ ದೇವಸ್ಥಾನದಲ್ಲಿ ಪುತ್ತೂರು ಸ್ನೇಹಿತರ ಮಾರ್ಗದರ್ಶನದಿಂದ ದರ್ಶನ್ ಶತ್ರು ಸಂಹಾರ ಪೂಜೆ ನೆರವೇರಿಸಿದ್ದರು. ಈ ವೇಳೆ ಅವರ ಜೊತೆ ಕೊಲೆ ಆರೋಪಿ ಪ್ರಜ್ವಲ್ ರೈ ಕೂಡ ಕಾಣಿಸಿಕೊಂಡಿದ್ದಾನೆ. 2017ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಕರೋಪಾಡಿ ಜಲೀಲ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಪ್ರಜ್ವಲ್ ರೈ ಅರೆಸ್ಟ್‌ ಆಗಿದ್ದ ಎನ್ನಲಾಗಿದೆ.

ಕೊಲೆ ಆರೋಪಿ ಜೊತೆ ಕಾಣಿಸಿಕೊಂಡ ನಟ ದರ್ಶನ್‌; ಅಷ್ಟಕ್ಕೂ ಯಾರೀತ?

Profile Rakshita Karkera Mar 23, 2025 11:28 AM

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಯಾದ ನಂತರ ನಟ ದರ್ಶನ್(Actor Darshan) ನಿನ್ನೆ ಕೇರಳದಲ್ಲಿ ಶತ್ರು ಸಂಹಾರ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಅವರು ಕೋಲೆ ಆರೋಪಿಯೊಬ್ಬನ ಜೊತೆ ಕಾಣಿಸಿಕೊಂಡಿರುವುದು ಮತ್ತೆ ಚರ್ಚೆಗೆಗ್ರಾಸವಾಗಿದೆ. ಆದರೆ ಆತ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಕೊಲೆ ಆರೋಪಿಯಲ್ಲ. ಬೇರೊಂದು ಕೊಲೆ ಪ್ರಕರಣದ ಆರೋಪಿ. ನಿನ್ನೆ ಕೇರಳದ ಕಣ್ಣೂರಿನಲ್ಲಿ ಇರುವ ಶ್ರೀ ಭಗವತೀ ದೇವಸ್ಥಾನದಲ್ಲಿ ಪುತ್ತೂರು ಸ್ನೇಹಿತರ ಮಾರ್ಗದರ್ಶನದಿಂದ ದರ್ಶನ್ ಶತ್ರು ಸಂಹಾರ ಪೂಜೆ ನೆರವೇರಿಸಿದ್ದರು. ಈ ವೇಳೆ ಅವರ ಜೊತೆ ಕೊಲೆ ಆರೋಪಿ ಪ್ರಜ್ವಲ್ ರೈ ಕೂಡ ಕಾಣಿಸಿಕೊಂಡಿದ್ದಾನೆ. 2017ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಕರೋಪಾಡಿ ಜಲೀಲ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಪ್ರಜ್ವಲ್ ರೈ ಅರೆಸ್ಟ್‌ ಆಗಿದ್ದ ಎನ್ನಲಾಗಿದೆ. ಇನ್ನು ಈತನೇ ಶತ್ರು ಸಂಹಾರ ಪೂಜೆಗೆ ದರ್ಶನ್‌ ಅವರನ್ನು ಕರೆದೊಯ್ದಿದ್ದ ಎನ್ನಲಾಗಿದೆ.

ಕೇರಳದ ಈ ದೇಗುಲ ಶತ್ರು ಸಂಹಾರ ಪೂಜೆಗೆ ಪ್ರಸಿದ್ಧಿಯಾಗಿದೆ. ಹಲವು ರಾಜಕಾರಣಿಗಳು ಶತ್ರು ಸಂಹಾರ ಪೂಜೆ ಮಾಡಿಸಲು ಇಲ್ಲಿಗೆ ತೆರಳುತ್ತಾರೆ. ಹೀಗಾಗಿ ನಟ ದರ್ಶನ್ ಕುಟುಂಬ ಸಮೇತ ಈ ದೇಗುಲಕ್ಕೆ ತೆರಳಿದ್ದು, ಶತ್ರು ಸಂಹಾರ ಪೂಜೆ ಮಾಡಿಸಿದ್ದಾರೆ ಎನ್ನಲಾಗಿದೆ. ‌ ಈ ದೇವಸ್ಥಾನದ ವಿಶೇಷ ಏನೆಂದರೆ ಹಿಂದಿನ ಕಾಲದ ರಾಜರು ರಾಜ್ಯ ರಕ್ಷಣೆಗೋಸ್ಕರ ತಾಂತ್ರಿಕ ಹಾಗೂ ಮಾಂತ್ರಿಕ ಶಕ್ತಿಗಾಗಿ ಈ ದೇಗುಲದ ಮೊರೆ ಹೋಗುತ್ತಿದ್ದರು. ಇಲ್ಲಿ ದೇವಿ ಕಾಳಿಯನ್ನು ಆರಾಧನೆ ಮಾಡುವುದೇ ವಿಶೇಷ. ಇಲ್ಲಿ ನಡೆಯುವ ಪೂಜೆಗಳು ಬಹಳಷ್ಟು ರಹಸ್ಯವಾಗಿರುತ್ತದೆ. ಇಲ್ಲಿ ಪೂಜೆ ಮಾಡಿದರೆ ಶತ್ರು ಸಂಹಾರವಾಗಲಿದೆ ಎಂದು ಹಲವು ಭಕ್ತರು ನಂಬಿದ್ದಾರೆ.

ದರ್ಶನ್ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್‌ಗೆ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನು ರದ್ದು ಕೋರಿ ಪೊಲೀಸ್‌ ಇಲಾಖೆ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಸಮ್ಮತಿಸಿತ್ತು. ಏಪ್ರಿಲ್ 2 ರಂದು ಅರ್ಜಿ ವಿಚಾರಣೆ ನಡೆಯಲಿದೆ. ಪ್ರಕರಣದ ಎ2 ಆರೋಪಿ ನಟ ದರ್ಶನ್ ಸೇರಿ ಪ್ರಮುಖ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಈ ಜಾಮೀನು ಆದೇಶ ಪ್ರಶ್ನಿಸಿ ಪೊಲೀಸರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಏಪ್ರಿಲ್ 2 ರಂದು ನಟ ದರ್ಶನ್ ಮತ್ತು ಗ್ಯಾಂಗ್‌ನ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಗೃಹ ಇಲಾಖೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ಮೇಲ್ಮನವಿ ಸಲ್ಲಿಸಲು ಪೊಲೀಸ್ ಇಲಾಖೆಗೆ ಅನುಮತಿ ನೀಡಿದ್ದರಿಂದ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.