ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Umesh: ಮನೆಯಲ್ಲಿ ಜಾರಿಬಿದ್ದ ಸ್ಯಾಂಡಲ್‌ವುಡ್‌ ನಟ ಉಮೇಶ್‌ ಆರೋಗ್ಯ ಹೇಗಿದೆ? ಟೆಸ್ಟ್‌ ವೇಳೆ ಆಘಾತಕಾರಿ ವಿಚಾರ ರಿವೀಲ್‌

ಬೆಂಗಳೂರಿನ ಶಾಂತಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ನಟ ಉಮೇಶ್‌ ಅವರ ಆರೋಗ್ಯದ ಬಗ್ಗೆ ಆಘಾತಕಾರಿ ವಿಚಾರ ರಿವೀಲ್‌ ಆಗಿದೆ. ಟೆಸ್ಟ್‌ ವೇಳೆ ಅವರಿಗೆ ಲಿವರ್‌ ಕ್ಯಾನ್ಸರ್‌ ಇರುವುದು ಪತ್ತೆಯಾಗಿದ್ದು, ಖಚಿತಪಡಿಸಿಕೊಳ್ಳಲು ಇನ್ನಷ್ಟು ಟೆಸ್ಟ್‌ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ.

ಬೆಂಗಳೂರು, ಅ. 11: ತಮ್ಮ ವಿಶಿಷ್ಟ ಮ್ಯಾನರಿಸಂ, ಡೈಲಾಗ್‌ ಡೆಲಿವರಿ, ಹಾಸ್ಯ ಪ್ರಜ್ಞೆ ಮೂಲಕ ಸ್ಯಾಂಡಲ್‌ವುಡ್‌ ಸಿನಿಪ್ರಿಯರನ್ನು ನಗೆಗಡಲಿನಲ್ಲಿ ತೇಲಿಸಿದ ಹಿರಿಯ ನಟ ಉಮೇಶ್‌ (Actor Umesh) ಅ. 10ರಂದು ಮನೆಯಲ್ಲಿ ಬಿದ್ದು ಗಾಯಗೊಂಡಿದ್ದು, ಅವರನ್ನು ಬೆಂಗಳೂರಿನ ಶಾಂತಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಈ ವೇಳೆ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. 80 ವರ್ಷದ ಉಮೇಶ್‌ ಅವರಿಗೆ ಲಿವರ್ ಕ್ಯಾನ್ಸರ್ (Liver cancer) ಇರುವ ವಿಚಾರ ಗೊತ್ತಾಗಿದೆ. ರೋಗವನ್ನು ಖಚಿತಪಡಿಸಿಕೊಳ್ಳಲು ಮತ್ತಷ್ಟು ಪರೀಕ್ಷೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಜಾರಿಬಿದ್ದ ಕಾರಣ ಉಮೇಶ್‌ ಅವರಿಗೆ ಮೂಳೆಗೆ ಏಟಾಗಿದೆ. ಈ ಹಿನ್ನೆಲೆಯಲ್ಲಿ ವೈದ್ಯರು ಅವರ ಸ್ಕ್ಯಾನಿಂಗ್‌ ನಡೆಸಿದರು. ಈ ಪರೀಕ್ಷೆಯ ವೇಳೆ ಉಮೇಶ್‌ ಅವರ ಲಿವರ್‌ನಲ್ಲಿ ಗಡ್ಡೆ ಇರುವುದು ತಿಳಿದು ಬಂತು. ಮತ್ತಷ್ಟು ಪರೀಕ್ಷೆಗೆ ಒಳಪಡಿಸಿದಾಗ ಅದು ಕ್ಯಾನ್ಸರ್‌ ಗಡ್ಡೆ ಎನ್ನುವುದು ಗೊತ್ತಾಗಿದೆ. ಸದ್ಯ ಈ ವಿಚಾರ ತಿಳಿದು ಅವರ ಮನೆಯವರ ಜತೆಗೆ ಅಭಿಮಾನಿಗಳಿಗೂ ಆಘಾತವಾಗಿದ್ದು, ಶೀಘ್ರದಲ್ಲೇ ಚೇತರಿಸಿಕೊಳ್ಳುವಂತೆ ಹಾರೈಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Actor Jayakrishnan: ಕ್ಯಾಬ್‌ ಚಾಲಕನನ್ನು ಭಯೋತ್ಪಾದಕ ಎಂದು ಕರೆದ ಮಲಯಾಳಂ ನಟ; ಮಂಗಳೂರಿನಲ್ಲಿ ಬಂಧನ

ʼʼಲಿವರ್​ನಲ್ಲಿ ಕ್ಯಾನ್ಸರ್ ಉಂಟಾಗಿದ್ದು, ಅದು ಬೇರೆ ಅಂಗಗಳಿಗೆ ಹರಡಿದೆ. ಕ್ಯಾನ್ಸರ್‌ ಖಚಿತಪಡಿಸಲು ಇನ್ನೂ ಕೆಲವು ಟೆಸ್ಟ್ ಮಾಡಬೇಕಿದೆ. ಹೀಗಾಗಿ ಲಿವರ್ ಒಳಗೆ ಇರುವ ಗಡ್ಡೆಯನ್ನು ತೆಗೆದು ಪರೀಕ್ಷೆಗೆ ಕಳುಹಿಸುತ್ತೇವೆ. ಸದ್ಯ ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದೆ. ಇಂಜೆಕ್ಷನ್‌ನಲ್ಲಿ ಗಡ್ಡೆ ಕರಗಿಸುವ ಪ್ರಯತ್ನ ನಡೆಯುತ್ತಿದೆ. ಗುಣಮುಖರಾಗುವ ಸಾಧ್ಯತೆ ಇದೆʼʼ ಎಂದು ವೈದ್ಯರು ಹೇಳಿದ್ದಾರೆ.

350 ಚಿತ್ರಗಳಲ್ಲಿ ನಟನೆ

ಮೈಸೂರಿನಲ್ಲಿ ಜನಿಸಿದ ಉಮೇಶ್‌ ರಂಗಭೂಮಿ ಮೂಲಕ ನಟನಾ ಕೇತ್ರಕ್ಕೆ ಕಾಲಿಟ್ಟರು. 4ನೇ ವರ್ಷದಲ್ಲಿ ಅವರು ನಾಟಕಗಳಲ್ಲಿ ಅಭಿನಯಿಸತೊಡಗಿದರು. 1960ರಲ್ಲಿ ತೆರೆಕಂಡ ಕನ್ನಡದ ʼಮಕ್ಕಳ ರಾಜ್ಯʼ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದರು. ಹಾಸ್ಯ ಪಾತ್ರದ ಮೂಲಕ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದ್ದಾರೆ.

ಉಮೇಶ್‌ 60 ವರ್ಷಗಳಲ್ಲಿ ಸುಮಾರು 350 ಚಿತ್ರಗಳಲ್ಲಿ ನಟಿಸಿದ್ದಾರೆ. 1975ರಲ್ಲಿ ತೆರೆಕಂಡ ʼಕಥಾ ಸಂಗಮʼ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ. ಉಮೇಶ್‌ ನಟಿಸಿದ ಕೊನೆಯ ಚಿತ್ರ 2023ರಲ್ಲಿ ರಿಲೀಸ್‌ ಆದ ʼಡೇರ್‌ಡೆವಿಲ್‌ ಮುಸ್ತಫʼ. ಕೆಲವು ವರ್ಷಗಳಿಂದ ನಡನೆಗೆ ಬ್ರೇಕ್‌ ತೆಗೆದುಕೊಂಡಿದ್ದಾರೆ.