ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhavana Ramanna: IVF ಮೂಲಕ ಗರ್ಭಿಣಿಯಾಗಿದ್ದ ನಟಿ ಭಾವನಾ ರಾಮಣ್ಣಗೆ ಹೆರಿಗೆ; ಅವಳಿ ಮಕ್ಕಳಲ್ಲಿ ಒಂದು ಮಗು ನಿಧನ

ಖ್ಯಾತ ನಟಿ, ರಾಜಕಾರಣಿ, ಡ್ಯಾನ್ಸರ್ ಭಾವನಾ ರಾಮಣ್ಣ ಅವರು ಮದುವೆಯಾಗದೆ, 40ನೇ ವಯಸ್ಸಿನಲ್ಲಿ ತಾಯಿಯಾಗಿದ್ದಾರೆ. (Bhavana Ramanna) ಭಾವನಾ ಐವಿಎಫ್ ಚಿಕಿತ್ಸೆ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಲು ಸಜ್ಜಾಗಿದ್ದರು. ಆದರೆ ದುರಾದೃಷ್ಟವಶತ್‌ ಇಬ್ಬರು ಮಕ್ಕಳ ಪೈಕಿ ಒಂದು ಮಗು ಸಾವನ್ನಪ್ಪಿದೆ.

ಬೆಂಗಳೂರು: ಖ್ಯಾತ ನಟಿ, ರಾಜಕಾರಣಿ, ಡ್ಯಾನ್ಸರ್ ಭಾವನಾ ರಾಮಣ್ಣ ಅವರು ಮದುವೆಯಾಗದೆ, 40ನೇ ವಯಸ್ಸಿನಲ್ಲಿ ತಾಯಿಯಾಗಿದ್ದಾರೆ. (Bhavana Ramanna) ಭಾವನಾ ಐವಿಎಫ್ ಚಿಕಿತ್ಸೆ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಲು ಸಜ್ಜಾಗಿದ್ದರು. ಸದ್ಯ ಎಂಟನೇ ತಿಂಗಳಿನಲ್ಲಿರುವ ನಟಿಗೆ ಈಗಲೇ ಹೆರಿಗೆ ಮಾಡಿಸಲಾಗಿದೆ. ವೈದ್ಯರ ಸಲಹೆ ಮೂಲಕ ಎರಡು ವಾರಗಳ ಹಿಂದೆಯೇ ಹೆರಿಗೆ ಮಾಡಿಸಲಾಗಿದೆ. ಆದರೆ ದುರಾದೃಷ್ಟವಶತ್‌ ಇಬ್ಬರು ಮಕ್ಕಳ ಪೈಕಿ ಒಂದು ಮಗು ಸಾವನ್ನಪ್ಪಿದೆ. ಇನ್ನೊಂದು ಹೆಣ್ಣು ಮಗು ಬದುಕುಳಿದಿದ್ದು, ತಾಯಿ ಹಾಗೂ ಶಿಶು ಕ್ಷೇಮವಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಇತ್ತೀಚೆಗಷ್ಟೇ ಭಾವನಾ ಸೀಮಂತ ಮಾಡಿಕೊಂಡಿದ್ದರು. ಆದರೆ ಏಳನೇ ತಿಂಗಳಿನಲ್ಲಿರುವಾಗ ನಟಿಗೆ ಕೆಲವು ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಹೀಗಾಗಿ ವೈದ್ಯರು ಎಂಟನೇ ತಿಂಗಳಿಗೆ ಹೆರಿಗೆ ಮಾಡಿಸುವ ಸೂಚನೆ ನೀಡಿದ್ದರು. ಎರಡು ವಾರಗಳ ಹಿಂದೆ ಹೆರಿಗೆ ಮಾಡಿಸಲಾಗಿತ್ತು. ಆದರೆ ಒಂದು ಮಗು ಮೃತಪಟ್ಟಿದೆ. ಭಾವನಾ ಅವರ ಸೀಮಂತ ಶಾಸ್ತ್ರದ ವಿಡಿಯೋ ವೈರಲ್‌ ಆಗಿತ್ತು. ಸರಳವಾಗಿ ನಡೆದರೂ ಸಂಪ್ರದಾಯದ ಪ್ರಕಾರ ಸೀಮಂತ ನಡೆದಿತ್ತು. ಚಿತ್ರರಂಗದ ಸ್ನೇಹಿತೆಯರು ಹಾಗೂ ಆಪ್ತರು ಭಾಗವಹಿಸಿ ಶುಭ ಕೋರಿದ್ದರು.

ತಾಯಿ ಆಗುವ ಆಸೆ ಇತ್ತು, ಅದೀಗ ನೆರವೇರುತ್ತಿದೆ. ತುಂಬ ಸಮಯದಿಂದ ಮಹಿಳೆಯರು ಸಿಂಗಲ್‌ ಪೇರೆಂಟ್‌ ಆಗೋದನ್ನು ಕಾನೂನು ಬೆಂಬಲಿಸಿರಲಿಲ್ಲ. ಕಾನೂನು ಕೆಲಸ ಆದಬಳಿಕ ನಾನು ಈ ನಿರ್ಧಾರಕ್ಕೆ ಬಂದೆ. ಐವಿಎಫ್‌ ಕ್ಲಿನಿಕ್‌ ಹೋಗಿ ನಾನು ಈ ಬಗ್ಗೆ ವಿಚಾರಿಸಿದೆ ಎಂದು ಈ ಹಿಂದೆ ಭಾವನಾ ಹೇಳಿದ್ದರು. ನಾನು ನನ್ನ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿದ್ದೇನೆ.

ಈ ಸುದ್ದಿಯನ್ನೂ ಓದಿ: Kantara: ಕಾಂತಾರ ರಿಲೀಸ್‌ಗೆ ಇನ್ನು ಕೇವಲ 27 ದಿನಗಳಷ್ಟೇ ಬಾಕಿ; ಹೊಂಬಾಳೆ ಫಿಲ್ಮ್‌ ಹೇಳಿದ್ದೇನು?

ನನ್ನ ಮಕ್ಕಳ ಭವಿಷ್ಯಕ್ಕೆ ನಾನು ತಯಾರಿ ಮಾಡಿಕೊಂಡಿದ್ದೇನೆ. ನನ್ನ ತಾಯಿ ಬದುಕಿದ್ದಿದ್ದರೆ ಈ ವಿಷಯ ಕೇಳಿ ಫುಲ್‌ ಖುಷಿಯಾಗುತ್ತಿದ್ದಳು. ತಂದೆಯಿಲ್ಲದೆ ಮಕ್ಕಳನ್ನು ಬೆಳೆಸಿದರೆ ಸಮಾಜವು ಅವರಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳುತ್ತದೆ ಎನ್ನೋದು ನನಗೆ ಗೊತ್ತಿದೆ. ನಾನು ಪುರುಷ ವಿರೋಧಿಯಲ್ಲ, ಆದರೆ ಪುರುಷನಿಲ್ಲದೆ ಬದುಕೋದು ಸರಿ ಅಂತ ಕೂಡ ಹೇಳುತ್ತಿಲ್ಲ. ಜೀವನದಲ್ಲಿ ಪ್ರೀತಿ ಮುಖ್ಯ, ಪ್ರಾಮಾಣಿಕತೆ ಇರಬೇಕು ಎನ್ನೋದನ್ನು ನನ್ನ ಮಕ್ಕಳಿಗೆ ಕಲಿಸಿಕೊಡ್ತೀನಿ ಎಂದು ಅವರು ಹೇಳಿದ್ದಾರೆ.