ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kantara: ಕಾಂತಾರ ರಿಲೀಸ್‌ಗೆ ಇನ್ನು ಕೇವಲ 27 ದಿನಗಳಷ್ಟೇ ಬಾಕಿ; ಹೊಂಬಾಳೆ ಫಿಲ್ಮ್‌ ಹೇಳಿದ್ದೇನು?

ಸ್ಯಾಂಡಲ್‌ವುಡ್‌ ಬಹುನಿರೀಕ್ಷಿತ ಚಿತ್ರ ಕಾಂತಾಂರ ಬಿಡುಗಡೆಗೆ ಇನ್ನು 27 ದಿನಗಳು ಮಾತ್ರ ಬಾಕಿ ಇದೆ. ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಅವರ ಬಹುನಿರೀಕ್ಷಿತ ಸಿನಿಮಾ ಕಾಂತಾರ ಪ್ರೀಕ್ವೆಲ್ ಈಗಾಗಲೇ ಎಲ್ಲ ರೆಡಿಯಾಗಿದೆ. ಕಾಂತಾರಾ ಚಾಪ್ಟರ್-1 ಚಿತ್ರ ಅಕ್ಟೋಬರ್-2 ರಂದು ರಿಲೀಸ್ ಆಗುತ್ತಿದೆ.

ಕಾಂತಾರ ರಿಲೀಸ್‌ಗೆ ಇನ್ನು ಕೇವಲ 27 ದಿನಗಳಷ್ಟೇ ಬಾಕಿ

-

Vishakha Bhat Vishakha Bhat Sep 5, 2025 2:20 PM

ಬೆಂಗಳೂರು: ಸ್ಯಾಂಡಲ್‌ವುಡ್‌ ಬಹುನಿರೀಕ್ಷಿತ ಚಿತ್ರ ಕಾಂತಾಂರ (Kantara) ಬಿಡುಗಡೆಗೆ ಇನ್ನು 27 ದಿನಗಳು ಮಾತ್ರ ಬಾಕಿ ಇದೆ. ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಅವರ ಬಹುನಿರೀಕ್ಷಿತ ಸಿನಿಮಾ ಕಾಂತಾರ ಪ್ರೀಕ್ವೆಲ್ ಈಗಾಗಲೇ ಎಲ್ಲ ರೆಡಿಯಾಗಿದೆ. ಕಾಂತಾರಾ ಚಾಪ್ಟರ್-1 ಚಿತ್ರ ಅಕ್ಟೋಬರ್-2 ರಂದು ರಿಲೀಸ್ ಆಗುತ್ತಿದೆ. ಬಹು ಭಾಷೆಯಲ್ಲಿಯೇ ಈ ಸಿನಿಮಾವನ್ನ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ರಿಲೀಸ್ ಮಾಡುತ್ತಿದೆ. ಬಹು ವೆಚ್ಚದ ಈ ಚಿತ್ರದ ಬಗ್ಗೆ ಭಾರೀ ಹೋಪ್ ಇದೆ.

ಹೊಂಬಾಳೆ ಫಿಲಂ ಈ ಪ್ಯಾನ್​ ಇಂಡಿಯಾ ಸಿನಿಮಾಕ್ಕೆ ಬಂಡವಾಳ ಹೂಡಿಕೆ ಮಾಡಿದೆ. ಕನ್ನಡ, ಹಿಂದಿ, ಇಂಗ್ಲಿಷ್, ತೆಲುಗು, ತಮಿಳು, ಮಲಯಾಳಂ ಹಾಗೂ ಬೆಂಗಾಲಿ ಒಟ್ಟು 7 ಭಾಷೆಗಳಲ್ಲಿ ಕಾಂತಾರ ಪ್ರೀಕ್ವೆಲ್​ ರಿಲೀಸ್​ ಆಗಲಿದೆ. ಈ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲಂ ಸದ್ಯದಲ್ಲೇ ಬಿಗ್ ಅಪ್​ಡೇಟ್ ಕೊಡುವ ಸಾಧ್ಯತೆ ಇದೆ. ಚಿತ್ರದ ಸೆಟ್​ನಲ್ಲಿ ಸಾಕಷ್ಟ ಅವಘಡಗಳು ಸಂಭವಿಸಿದವು. ಈ ಕಾರಣದಿಂದ ಸಿನಿಮಾ ರಿಲೀಸ್ ವಿಳಂಬ ಆಗಲಿದೆ ಎಂದು ಹೇಳಲಾಗುತ್ತಿತ್ತು. ಈ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹಬ್ಬಿದ್ದವು. ಆದರೆ, ಇದನ್ನು ತಂಡ ಅಲ್ಲಗಳೆದಿದೆ. ಅಂದುಕೊಂಡ ದಿನಾಂಕದಂದೇ ಸಿನಿಮಾ ಬಿಡುಗಡೆ ಆಗಲಿದೆ ಎಂದು ತಂಡ ಮಾಹಿತಿ ನೀಡಿದೆ.

ಈ ಸುದ್ದಿಯನ್ನೂ ಓದಿ: Kantara Chapter 1: 'ಕಾಂತಾರ: ಚಾಪ್ಟರ್‌ 1' ಚಿತ್ರತಂಡದಿಂದ ಹೊರಬಿತ್ತು ಮತ್ತೊಂದು ಅಪ್‌ಡೇಟ್‌; ಮುಖ್ಯ ಪಾತ್ರದಲ್ಲಿ ಕರ್ನಾಟಕ ಮೂಲದ ಬಾಲಿವುಡ್‌ ನಟ

ಕಾಂತಾರ ಪ್ರೀಕ್ವೆಲ್​​​ ಶ್ರೀಮಂತ ಸಾಂಸ್ಕೃತಿಕ ಅಂಶಗಳು ಮತ್ತು ನಮ್ಮಲ್ಲಿ ಆಳವಾಗಿ ಬೇರೂರಿರುವ ಸಂಪ್ರದಾಯಗಳಂತಹ ವಿಷಯಗಳಿಂದ ಪ್ರೇಕ್ಷಕರಿಗೆ ಅದ್ಭುತ ಸಿನಿಮೀಯ ಅನುಭವವನ್ನೊದಗಿಸುವ ಭರವಸೆ ನೀಡಿದೆ. ಚಿತ್ರತಂಡ ಈ ಮೊದಲೇ ಘೋಷಿಸಿರುವ ಅಕ್ಟೋಬರ್ 2, 2025ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಹಳ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಹೊರರಾಜ್ಯಗಳಿಂದಲೂ ಬೇಡಿಕೆ ಹೆಚ್ಚಾದ ಕಾರಣ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗೆ 'ಕಾಂತಾರ' ಚಿತ್ರವನ್ನು ಡಬ್ ಮಾಡಲಾಗಿದೆ. ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.