ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nivedita Gowda: ನ್ಯೂಯಾರ್ಕ್‌ ಬೀದಿಗಳಲ್ಲಿ ಕನ್ನಡ ಹಾಡಿಗೆ ಸ್ಟೆಪ್ ಹಾಕಿದ್ದ ನಟಿ ನಿವೇದಿತಾ ಗೌಡ- ವಿಡಿಯೊ ವೈರಲ್

Nivedita Gowda Video: ನಟಿ ನಿವೇದಿತಾ ಗೌಡ ಅವರಿಗೆ ಮೊದಲಿನಿಂದಲೂ ಟ್ರಿಪ್ , ಪಾರ್ಟಿ ಎಂದರೆ ಬಹಳ ಇಷ್ಟ. ಹೀಗಾಗಿ ವರ್ಷ ವರ್ಷವೂ ಹೊಸ ಸ್ಥಳಕ್ಕೆ , ವಿದೇಶಿ ಪ್ರವಾಸಕ್ಕೆ ತೆರಳುತ್ತಾರೆ. ಈ ಬಾರಿ ನಟಿ ನಿವೇದಿತಾ ಗೌಡ ನ್ಯೂಯಾರ್ಕ್‌ಗೆ ತೆರಳಿದ್ದಾರೆ. ತಮ್ಮ ಸ್ನೇಹಿತೆ ಪ್ರತಿಭಾ ಗೌಡ ಜೊತೆ ವಿದೇಶದ ಪ್ರವಾಸ ದಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ನವದೆಹಲಿ: ಬಿಗ್ ಬಾಸ್ ಇತರ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದ ನಿವೇದಿತಾ ಗೌಡ (Niveditha Gowda) ಅವರು ಸೋಶಿಯಲ್ ಮಿಡಿಯಾದಲ್ಲಿ ಬಹಳ ಆ್ಯಕ್ಟಿವ್ ಆಗಿದ್ದಾರೆ. ರೀಲ್ಸ್, ಡ್ಯಾನ್ಸ್ ಇತ್ಯಾದಿಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡುವ ಇವರಿಗೆ ದೊಡ್ಡ ಮಟ್ಟಿನ ಫ್ಯಾನ್ಸ್ ಫಾಲೋವರ್ಸ್ ಕೂಡ ಇದ್ದಾರೆ. ಕನ್ನಡವನ್ನು ಇಂಗ್ಲಿಷ್ ಶೈಲಿಯಲ್ಲಿ ಮಾತನಾಡುವ ನಿವೇದಿತಾ ಅವರು ತಮ್ಮ ಕ್ಯೂಟ್ ನೆಸ್ ನಿಂದ ಹೆಚ್ಚು ಫೇಮಸ್ ಆಗಿದ್ದಾರೆ ಎಂದೇ ಹೇಳಬಹುದು. ಪಾರ್ಟಿ, ಟಿವಿ ಶೋ ಹಾಗೂ ವಿದೇಶಿ ಪ್ರವಾಸವನ್ನು ಹೆಚ್ಚು ಇಷ್ಟ ಪಡುವ ನಿವೇದಿತಾ ಅವರು ಕೆಲವು ಶಾರ್ಟ್ ಮೂವಿನಲ್ಲಿ ಕೂಡ ಅಭಿನಯಿಸಿದ್ದಾರೆ. ಇತ್ತೀಚೆಗಷ್ಟೆ ಇವರು ನ್ಯೂಯಾರ್ಕ್ ನಲ್ಲಿ ಪ್ರವಾಸಕ್ಕೆ ತೆರಳಿದ್ದಾರೆ. ಅಲ್ಲಿ ಪ್ರವಾಸದಲ್ಲಿ ಕನ್ನಡಾಭಿಮಾನ ಸಾರಿದ್ದ ಅವರ ಕೆಲವು ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಕನ್ನಡದ ಹಾಡಿಗೆ ಖುಷಿ ಖುಷಿಯಿಂದ ಹೆಜ್ಜೆ ಹಾಕುವ ಇವರ ಭಾಷಾಭಿಮಾನ ನೆಟ್ಟಿಗರ ಗಮನ ಸೆಳೆಯುತ್ತಿದೆ ಎನ್ನಬಹುದು.

ನಟಿ ನಿವೇದಿತಾ ಗೌಡ ಅವರಿಗೆ ಮೊದಲಿನಿಂದಲೂ ಟ್ರಿಪ್ , ಪಾರ್ಟಿ ಎಂದರೆ ಬಹಳ ಇಷ್ಟ. ಹೀಗಾಗಿ ವರ್ಷ ವರ್ಷವೂ ಹೊಸ ಸ್ಥಳಕ್ಕೆ , ವಿದೇಶಿ ಪ್ರವಾಸಕ್ಕೆ ತೆರಳುತ್ತಾರೆ. ಈ ಬಾರಿ ನಟಿ ನಿವೇದಿತಾ ಗೌಡ ನ್ಯೂಯಾರ್ಕ್‌ಗೆ ತೆರಳಿದ್ದಾರೆ. ತಮ್ಮ ಸ್ನೇಹಿತೆ ಪ್ರತಿಭಾ ಗೌಡ ಜೊತೆ ವಿದೇಶದ ಪ್ರವಾಸದಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿಂದ ತಮ್ಮ ಅಭಿಮಾನಿಗಳಿಗೆ ನ್ಯೂಯಾರ್ಕ್ ಪ್ರವಾಸದ ಅಪ್‌ಡೇಟ್‌ಗಳನ್ನು ಕೂಡ ನೀಡುತ್ತಿದ್ದಾರೆ.



ನಟಿ ನಿವೇದಿತಾ ಅವರು ನ್ಯೂಯಾರ್ಕ್​​ನ ಟೈಮ್ಸ್​​ ಸ್ಕ್ವೇರ್​ನ ಹತ್ತಿರ ಡ್ಯಾನ್ಸ್‌ ಮಾಡಿದ್ದಾರೆ. ಕಿಚ್ಚ ಸುದೀಪ್ ಅಭಿನಯದ ಕೆಂಪೇಗೌಡ ಚಿತ್ರದ ಥರ ಥರ ಹಿಡಿಸಿದೆ ಹಾಡಿಗೆ ನಿವೇದಿತಾ ನೃತ್ಯ ಮಾಡಿದ್ದು ಈ ವಿಡಿಯೋವನ್ನು ತಮ್ಮ ಇನ್ ಸ್ಟಾ ಗ್ರಾಂ ಖಾತೆ ಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಮೂಲಕ ಈ ಹಾಡು ನನಗೆ ಬಹಳ ಇಷ್ಟ ಹಾಗಾಗಿ ಇದಕ್ಕೆ ನೃತ್ಯ ಮಾಡುತ್ತಿರುವುದಾಗಿ ಅವರು ಹೇಳಿದ್ಧಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದನ್ನು ಓದಿ:Chandan Shetty-Niveditha: ಅಮ್ಮ ಕಾಲ್ ಮಾಡಿ ಕಣ್ಣೀರು ಹಾಕ್ತಾರೆ: ಚಂದನ್ ಶೆಟ್ಟಿ ಭಾವುಕ

ಈ ವಿಡಿಯೋ ವೈರಲ್ ಆದ ಕೆಲವೇ ಗಂಟೆಯಲ್ಲಿ 38 ಸಾವಿ ರಕ್ಕೂ ಅಧಿಕ ಜನ ಈ ವಿಡಿಯೋ ವನ್ನು ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಅವರ ಡ್ಯಾನ್ಸ್ ಗೆ ತರತರನಾಗಿ ಕಾಮೆಂಟ್‌ಗಳನ್ನು ಕೂಡ ಹಾಕಿದ್ದಾರೆ. ನೈಸ್ ಡ್ಯಾನ್ಸ್ , ನಿಮ್ಮ ಕನ್ನಡಾಭಿಮಾನ ಹೀಗೆ ಇರಲಿ ಎಂದು ನೆಟ್ಟಿಗರೊಬ್ಬರು ಈ ಬಗ್ಗೆ ಕಾಮೆಂಟ್ ಹಾಕಿದ್ದಾರೆ.

ನಿವೇದಿತಾ ಗೌಡ ಅವರು ಚಂದನ್ ಶೆಟ್ಟಿ ಅವರನ್ನು ಮದುವೆಯಾಗಿ ಬಳಿಕ ವಿಚ್ಛೇದನ ಕೂಡ ಪಡೆದರು. ವಿಚ್ಛೇದನದ ಬಳಿಕ ಚಿತ್ರರಂಗದಲ್ಲಿ ತಮ್ಮ ಮಾಜಿ ಪತಿ ಚಂದನ್ ಶೆಟ್ಟಿ ಜೊತೆ 'ಮುದ್ದು ರಾಕ್ಷಸಿ' ಎಂಬ ಹೆಸರಿನ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಇದರೊಂದಿಗೆ ಮಜಾ ಟಾಕೀಸ್ ಖ್ಯಾತಿಯ ಸೃಜನ್ ಲೊಕೇಶ್ ಜೊತೆ ನಿವೇದಿತಾ ಗೌಡ ಅಭಿನಯದ 'ಜಿಎಸ್‌ಟಿ' ಚಿತ್ರದಲ್ಲಿ ಕೂಡ ಅಭಿನಯಿಸಿದ್ದು ಇವೆರಡು ಸಿನಿಮಾ ಶೀಘ್ರವೇ ತೆರೆ ಮೇಲೆ ಬರಲಿದೆ. ಹೀಗಾಗಿ ಅವರ ಅಭಿ ಮಾನಿಗಳಿಗೆ ಈ ಸಿನಿಮಾ ಮೇಲೆ ನಿರೀಕ್ಷೆ ಕೂಡ ಹೆಚ್ಚಿದೆ ಎನ್ನಬಹುದು.