Chandan Shetty-Niveditha: ಅಮ್ಮ ಕಾಲ್ ಮಾಡಿ ಕಣ್ಣೀರು ಹಾಕ್ತಾರೆ: ಚಂದನ್ ಶೆಟ್ಟಿ ಭಾವುಕ
ನಿವೇದಿತಾ ಗೌಡ ಅವರಿಂದ ದೂರವಾದ ಬಳಿಕ ಚಂದನ್ ಶೆಟ್ಟಿ ಸದಾ ಸುದ್ದಿಯಲ್ಲಿದ್ದಾರೆ. ಇದೀಗ ಚಂದನ್ ಶೆಟ್ಟಿ ತಮ್ಮ ವೈಯಕ್ತಿಕ ಜೀವನದ ಕುರಿತು ಮಾತನಾಡಿದ್ದಾರೆ. ಖಾಸಗಿ ಯೂಟ್ಯೂಬ್ ಚಾನೆಲ್ವೊಂದರ ಸಂದರ್ಶನದಲ್ಲಿ ಡಿವೋರ್ಸ್ ಕುರಿತು ತಮ್ಮ ತಾಯಿಯ ಭಾವನಾತ್ಮಕ ಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ.

Niveditha Gowda and Chandan Shetty

ನಿವೇದಿತಾ ಗೌಡ ಅವರಿಂದ ದೂರವಾದ ಬಳಿಕ ಚಂದನ್ ಶೆಟ್ಟಿ (Chandan Shetty) ಸದಾ ಸುದ್ದಿಯಲ್ಲಿದ್ದಾರೆ, ಸಿನಿಮಾ ವಿಚಾರವಾಗಿ ಹಾಗೂ ವೈಯಕ್ತಿಕ ವಿಷಯಗಳ ಬಗ್ಗೆಯೂ ಗಾಸಿಪ್ ಹರಿದಾಡುತ್ತಿದೆ. ಇತ್ತೀಚೆಗಷ್ಟೆ ಸಲಗ ಸುಂದರಿ ಸಂಜನಾ ಆನಂದ್ ಅವರ ಜೊತೆ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಸಂಜನಾ ಆನಂದ್ ಜೊತೆ ಚಂದನ್ ಶೆಟ್ಟಿ ಎರಡನೇ ಮದುವೆ ಆಗ್ತಾರೆ ಎಂದು ಹೇಳಲಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಅನೇಕ ಪೋಸ್ಟ್ಗಳು ಹರಿದಾಡಿದವು. ಬಳಿಕ ಇತ್ತೀಚೆಗಷ್ಟೆ ಈ ಗಾಳಿ ಸುದ್ದಿಗಳಿಗೆ ಒಂದೇ ವೇದಿಕೆಯಲ್ಲಿ ನಿಂತು ಚಂದನ್ ಶೆಟ್ಟಿ ಮತ್ತು ಸಂಜನಾ ಆನಂದ್ ಸ್ಪಷ್ಟನೆ ಕೊಟ್ಟರು.
ಇದೀಗ ಚಂದನ್ ಶೆಟ್ಟಿ ತಮ್ಮ ವೈಯಕ್ತಿಕ ಜೀವನದ ಕುರಿತು ಮಾತನಾಡಿದ್ದಾರೆ. ಖಾಸಗಿ ಯೂಟ್ಯೂಬ್ ಚಾನೆಲ್ವೊಂದರ ಸಂದರ್ಶನದಲ್ಲಿ ಡಿವೋರ್ಸ್ ಕುರಿತು ತಮ್ಮ ತಾಯಿಯ ಭಾವನಾತ್ಮಕ ಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ. ‘‘ಇತ್ತೀಚೆಗೆ ಅಮ್ಮ ಯಾವುದೋ ಒಂದು ಮದುವೆಗೆ ಹೋಗಿ ಬಂದಿದ್ದರು. ಮದುವೆಯಲ್ಲಿ ಎಲ್ರೂ, ನಿಮ್ಮ ಮಗನಿಗೆ ಹೀಗೆ ಆಗಬಾರದಿತ್ತು, ಒಳ್ಳೆಯ ಹುಡುಗ ಹೀಗೆ ಆಗೋಗಿದೆ. ಇನ್ನೊಂದು ಮದುವೆ ಮಾಡ್ಸಿ ಅಂತ ಹೇಳ್ತಾರೆ.. ನೀನು ನೋಡಿದ್ರೆ ಮದುವೆನೇ ಆಗೋದಿಲ್ಲ ಅಂತ ಹೇಳ್ತಿದ್ದೀಯಾ’’ ಅಂತ ಅಮ್ಮ ಕಾಲ್ ಮಾಡಿ ಕಣ್ಣೀರಿಟ್ಟರು ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.
ನಮ್ಮ ನಡುವೆ ಹೊಂದಾಣಿಕೆಯ ಸಮಸ್ಯೆ ಇದೆ ಎಂಬುದು ಅಮ್ಮನಿಗೆ ಮೊದಲೇ ಗೊತ್ತಿತ್ತು. ಅಮ್ಮ ಅಂದ್ರೆನೇ ಹಾಗೆ, ಅವರಿಗೆ ಮಕ್ಕಳ ಬಗ್ಗೆ, ಮಕ್ಕಳ ಮನಸ್ಸಿನಲ್ಲಿ ಇರೋದರ ಬಗ್ಗೆ ಹೇಳದಿದ್ದರೂ ಗೊತ್ತಾಗುತ್ತೆ, ಅದೇ ಅಮ್ಮಂದಿರ ಸ್ಪೆಷಾಲಿಟಿ ಎನ್ನಬಹುದು. ನಾನು ಹೇಳದಿದ್ದರೂ ಅಮ್ಮನಿಗೆ ನಮ್ಮಿಬ್ಬರ ನಡುವೆ ಹೊಂದಾಣಿಕೆ ಆಗುತ್ತಿಲ್ಲ ಎಂಬ ಸೂಕ್ಷ್ಮ ವಿಷಯ ಗಮನಕ್ಕೆ ಬಂದಿತ್ತು ಎಂದಿದ್ದಾರೆ.
Mokshitha Pai: ಥಾರ್ನಲ್ಲಿ ಬೆಂಕಿ ಎಂಟ್ರಿ ಕೊಟ್ಟ ಲೇಡಿ ಟೈಗರ್ ಮೋಕ್ಷಿತಾ: ವಿಡಿಯೋ ನೋಡಿ
ನಾನು ಅಮ್ಮನನ್ನು ಆದಷ್ಟು ಸಮಾಧಾನ ಪಡಿಸ್ತೇನೆ. ನಾನು ಮದುವೆ ಆಗೋದಿಲ್ಲ ಅಂತ ಹೇಳ್ತಿಲ್ಲ. ಅವರು ನನಗೆ ಒಳ್ಳೆಯ ಪಾರ್ಟ್‌ನರ್ ಅಂತ ಅನಿಸಬೇಕು ಆಗ ಮದುವೆ ಆಗ್ತೀನಿ. ಈಗಾಗಲೇ ಒಂದು ಸಲ ಎಡವಿದ್ದೇನೆ. ಎರಡನೇ ಬಾರಿ ಆ ರೀತಿ ಯಾವುದೇ ಅವಕಾಶವನ್ನು ಪಡೆಯಲು ನಾನು ಬಯಸುವುದಿಲ್ಲ. ನಮ್ಮನ್ನು ಅರ್ಥ ಮಾಡಿಕೊಂಡು ಜೊತೆಗೆ ಇರುವವರು ಇದ್ರೆ ಲೈಫ್ ಟೈಮ್ ಸ್ಪೆಂಡ್ ಮಾಡಬೇಕು ಅಂತ ಅಮ್ಮನಿಗೆ ಹೇಳಿದ್ದೇನೆ ಎಂಬ ವಿಚಾರವನ್ನು ಚಂದನ್ ಹಂಚಿಕೊಂಡಿದ್ದಾರೆ.