Actress Samantha: ರೆಟ್ರೋ ಲುಕ್ನಲ್ಲಿ ಸಮಂತಾ ಫುಲ್ ಮಿಂಚಿಂಗ್! ಫ್ಯಾನ್ಸ್ ಕ್ಲೀನ್ ಬೋಲ್ಡ್
ನಟಿ ಸಮಂತಾ ರುತ್ ಪ್ರಭು ಟಾಲಿವುಡ್ ನ ಖ್ಯಾತ ನಟಿ ಎನಿಸಿಕೊಂಡಿದ್ದಾರೆ. ತಮ್ಮ ಬ್ಯೂಟಿ ಮತ್ತು ಅದ್ಭುತ ಫ್ಯಾಷನ್ ಸೆನ್ಸ್ ನಿಂದ ಸುದ್ದಿಯಲ್ಲಿರುವ ನಟಿ ಸಮಂತಾ ಸೋಷಿಯಲ್ ಮೀಡಿಯಾದಲ್ಲೂ ಸಕ್ರಿಯರಾಗಿದ್ದಾರೆ. ಇದೀಗ ಅವರು ಶೇರ್ ಮಾಡಿದ ಬ್ಲ್ಯಾಕ್ ಆ್ಯಂಡ್ ವೈಟ್ ಸುಂದರ ಸೀರೆ ಫೋಟೋ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಡೀಪ್ ಕಟ್ ಬ್ಲೌಸ್ನಲ್ಲಿ ಕಾಣುವ 'YMC' 'ಯೇ ಮಾಯಾ ಚೇಸಾವೆ' ಟ್ಯಾಟೂ ಕೂಡ ಗಮನ ಸೆಳೆದಿದೆ.



ನಟಿ ಸಮಂತಾ ಅವರು ಸಿನಿಮಾಕ್ಕಿಂತಲೂ ವೈಯಕ್ತಿಕ ಜೀವನದ ವಿಚಾರಕ್ಕೆ ಹೆಚ್ಚು ಸುದ್ದಿ ಯಲ್ಲಿರುತ್ತಾರೆ. ಆಗಾಗ ಬೋಲ್ಡ್ ಫೋಟೋ ಶೂಟ್ ಮಾಡಿಸುವ ಸಮಂತಾ ಈ ಭಾರಿ 50 ರ ದಶಕದ ಕಪ್ಪು ಬಿಳುಪು ಬಣ್ಣದ ವಿನ್ಟೇಜ್ ಫ್ಲೋರಲ್ ಸೀರೆ ಧರಿಸಿ ಫೋಟೋ ಶೂಟ್ ಮಾಡಿಸಿದ್ದಾರೆ.

ಸಿಂಪಲ್ ಹೇರ್ ಸ್ಟೈಲ್ ಹಾಗೂ ಡ್ರಾಪ್ ಕಿವಿವೊಲೆ ಧರಿಸಿದ ಸಮಂತಾ ಲುಕ್ ವಿಭಿನ್ನವಾಗಿದ್ದು ಫ್ಯಾನ್ಸ್ ಕೂಡ ಇಷ್ಟ ಪಟ್ಟಿದ್ದಾರೆ. ನಟಿ ಸಮಂತಾ ಹೊಸ ಅವತಾರವನ್ನು ನಟಿ ದಿಶಾ ಪಟಾನಿ, ರಿಯಾ ಚಕ್ರವರ್ತಿ, ಕೃತಿ ಕರಬಂಧ ಸೇರಿದಂತೆ ಹಲವಾರು ಮೆಚ್ಚಿಕೊಂಡಿದ್ದಾರೆ.

‘ಯೇ ಮಾಯಾ ಚೇಸಾವೆ’ ಚಿತ್ರದ ಮೂಲಕ 2010ರಲ್ಲಿ ಸಿನಿ ಜರ್ನಿ ಆರಂಭಿಸಿದ ಸಮಂತಾ, ನಂತರ ತಮ್ಮ ಸಹನಟ ನಾಗ ಚೈತನ್ಯ ಅವರನ್ನೇ ಮದುವೆಯಾಗಿದ್ದರು. ಈ ಚಿತ್ರವನ್ನು ಸ್ಮರಣಾರ್ಥವಾಗಿ ಇಟ್ಟುಕೊಳ್ಳಲು ಅವರು 'ಏ ಮಾಯ ಚೇಸಾವೆ’ ಸಿನಿಮಾದ ಹೆಸರನ್ನು ನಟಿ ಸಮಂತಾ ತಮ್ಮ ಬೆನ್ನ ಮೇಲೆ, ಕತ್ತಿನ ಕೆಳಭಾಗದಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದರು .ಈ ಟ್ಯಾಟೂ ಕೂಡ ಈ ಫೋಟೋಗಳಲ್ಲಿ ಗಮನ ಸೆಳೆಯುತ್ತಿದೆ.

ಸುಮಾರು 10 ವರ್ಷಗಳ ಕಾಲ ಸಮಂತಾ ಮತ್ತು ನಾಗ ಚೈತನ್ಯ ಪ್ರೀತಿ ಮಾಡಿದ್ದರು. ಆರಂಭದಲ್ಲಿ ಇವರಿಬ್ಬರೂ ಸ್ನೇಹಿತರಾಗಿದ್ದರು. ನಂತರ ಮದುವೆ ಆದರು, ಇವರ ಮದುವೆಗೆ ನಾಲ್ಕು ವರ್ಷ ತುಂಬುವುದರೊಳಗೆ ವಿಚ್ಛೇದಿತರಾದರು.

ಅದೇ ರೀತಿ ಪ್ರೀತಿಯ ನೆನಪಿಗಾಗಿ ನಾಗ ಚೈತನ್ಯ ಹೆಸರನ್ನು , ಪುಟ್ಟದಾಗಿ 'ಚೈ' ಎಂದು ನಟಿ ಸಮಂತಾ ಟ್ಯಾಟೂ ಹಾಕಿಸಿಕೊಂಡಿದ್ದರು. ಈ ಟ್ಯಾಟೂ ಬಗ್ಗೆ ಈ ಹಿಂದೆ ಪೋಸ್ಟ್ ಹಾಕಿದ ಸಮಂತಾ, 'ಲೈವಿಂಗ್ ಮೈ ಬೆಸ್ಟ್ ಲೈಫ್, ನಾನು ಹೊಂದಿರುವ ಏಕೈಕ ಹಚ್ಚೆ ಎಂದು ಬರೆದು ಕೊಂಡಿದ್ದರು. ಆದರೆ ಇತ್ತೀಚಿನ ಫೋಟೋಗಳಲ್ಲಿ ಈ ಟ್ಯಾಟಿನ ಅಚ್ಚು ಅಳಿಸದಂತೆ ಕಂಡು ಬಂದಿದ್ದು ಸಮಂತಾ ಟ್ಯಾಟು ತೆಗೆಯಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

ಈ ನಡುವೆ ನಟಿ ಸಾಮಂತಾ ರಾಜ್ ನಿಧಿಮೋರು ಜತೆ ಸಂಬಂಧದಲ್ಲಿದ್ದಾರೆ ಎಂಬ ವದಂತಿ ಯೂ ಇದೆ. ಇತ್ತನಾಗ ಚೈತನ್ಯ ಅವರು ಈಗ ನಟಿ ಶೋಭಿತಾ ದುಲೀಪಾಲ ಜತೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.