ಬೆಂಗಳೂರು: ನಗರದ ಕಗ್ಗದಾಸಪುರದಲ್ಲಿ ಇತ್ತೀಚೆಗೆ ಬೀದಿ ನಾಯಿಗಳನ್ನು ಚೀಲದಲ್ಲಿ ಕಟ್ಟಿ ಅಮಾನವೀಯಾಗಿ ಸಾಗಿಸಿದ್ದ ಘಟನೆ (Brutality on street dogs) ನಡೆದಿತ್ತು. ಈ ಕ್ರಮವನ್ನು ಖಂಡಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರಾಣಿಪ್ರಿಯರಿಂದ ಶನಿವಾರ ಬೃಹತ್ ಪ್ರತಿಭಟನೆ ನಡೆದಿದ್ದು, ಈ ವೇಳೆ ಶ್ವಾನಗಳ ಮೇಲೆ ದೌರ್ಜನ್ಯವನ್ನು ನೆನೆದು ಸ್ಯಾಂಡಲ್‌ವುಡ್ ನಟಿ ರಮ್ಯಾ (Actress Ramya) ಕಣ್ಣೀರು ಹಾಕಿದ್ದಾರೆ.
ನಾಯಿಗಳ ಮೇಲೆ ನಡೆಸಿದ ಕ್ರೌರ್ಯವನ್ನು ನೆನೆದು ಪ್ರತಿಭಟನೆಯಲ್ಲಿ ನಟಿ ರಮ್ಯಾ ಅವರು ಭಾವುಕರಾಗಿದ್ದಾರೆ. ಈ ವೇಳೆ ಮಾತನಾಡಿದ ರಮ್ಯಾ ಅವರು 'ನನ್ನ ರಕ್ತ ಕುದಿಯುತ್ತಿದೆ' ಎಂದು ಹೇಳಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ನಾಯಿಗಳಿಗೆ ಏನಾಗಿರಬಹುದು ಎಂಬುದನ್ನು ಕಲ್ಪಿಸಿಕೊಂಡರೆ ಮನಸ್ಸಿಗೆ ತುಂಬಾ ನೋವಾಗುತ್ತದೆ. ಇಂತಹ ಘಟನೆ ನಡೆದಿದೆ ಎಂದು ತಿಳಿದಾಗ ನನಗೆ ತೀವ್ರ ಆಘಾತವಾಯಿತು. ಪ್ರತಿಷ್ಠಿತ ಸಂಸ್ಥೆಯೊಂದು ಇಷ್ಟು ಬೇಜವಾಬ್ದಾರಿಯಾಗಿ ನಡೆದುಕೊಂಡಿರುವುದು ಖಂಡನೀಯ. ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಯಿಗಳ ಮೇಲಿನ ಕ್ರೌರ್ಯದ ವಿಡಿಯೊ ನೋಡಿ ನನಗೆ ರಕ್ತ ಕುದಿಯಿತು. ನಾವು ನಂಬುವಂತಹ ಸಂಸ್ಥೆಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ನಾಪತ್ತೆಯಾಗಿರುವ 20ಕ್ಕೂ ಹೆಚ್ಚು ನಾಯಿಗಳು ಸುರಕ್ಷಿತವಾಗಿದ್ದರೆ ನಮಗೆ ತೋರಿಸಿ, ಇಲ್ಲದಿದ್ದರೆ ಈ ಕೃತ್ಯಕ್ಕೆ ಕಾರಣರಾದವರನ್ನು ಕಠಿಣವಾಗಿ ಶಿಕ್ಷಿಸಿ ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಈಗಾಗಲೇ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣವು ಸದ್ಯ ಹೈಕೋರ್ಟ್‌ನಲ್ಲಿದೆ. ಏಪ್ರಿಲ್ 16 ರಂದು ನ್ಯಾಯಾಲಯದಲ್ಲಿ ಮುಂದಿನ ವಿಚಾರಣೆ ನಡೆಯಲಿದ್ದು, ಪ್ರಾಣಿ ಪ್ರಿಯರು ನ್ಯಾಯದ ನಿರೀಕ್ಷೆಯಲ್ಲಿದ್ದಾರೆ.
Asha Bhosle: ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಬಾಲಿವುಡ್ ತಾರೆಯರು ಸಂತಾಪ
ಈ ಹಿಂದೆಯೂ ಅನೇಕ ಬಾರಿ ಪ್ರಾಣಿಗಳ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದ ನಟಿ ರಮ್ಯಾ, ಶ್ವಾನಗಳ ರಕ್ಷಣೆಗಾಗಿ ಮತ್ತೊಮ್ಮೆ ಬೀದಿಗೆ ಇಳಿದಿದ್ದಾರೆ.