ನವದೆಹಲಿ: ಕನ್ನಡದ ಕಿರುತೆರೆ ಲೋಕದಲ್ಲಿ ಆ್ಯಂಕರ್ ಅನುಶ್ರೀ (Anushree) ಎಂದರೆ ಬಹುತೇಕರಿಗೆ ಅಚ್ಚು ಮೆಚ್ಚು. ಜೀ ಕನ್ನಡ ವಾಹಿನಿಯ ಬಹುತೇಕ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದ ಇವರು ತಮ್ಮ ಸ್ವಂತ ಯೂಟ್ಯೂಬ್ ಚಾನೆಲ್ ಮೂಲಕವು ಸೆಲೆಬ್ರಿಟಿಗಳ ಇಂಟರ್ ವ್ಯೂವ್ ಮಾಡಿಕೊಂಡು ಪ್ರೇಕ್ಷಕರನ್ನು ರಂಜಿಸುತ್ತಲೇ ಇರುತ್ತಾರೆ. ಇವರು ನಟ ರಕ್ಷಿತ್ ಶೆಟ್ಟಿ ಯನ್ನು ವಿವಾಹವಾಗುತ್ತಾರೆ ಎಂದು ಮೊದಲು ಹೇಳಲಾಗಿತ್ತು. ಬಳಿಕ ಹಾಸ್ಯ ನಟ ಚಿಕ್ಕಣ್ಣ ಅವರೊಂದಿಗೆ ಲವ್ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇತ್ತೀಚೆಗಷ್ಟೇ ಕೊಡಗು ಮೂಲದ ಐಟಿ ಉದ್ಯೋಗಿಯಾಗಿರುವ ರೋಷನ್ ರಾಮಮೂರ್ತಿ ಅವರನ್ನು ಪ್ರೀತಿಸಿ ವಿವಾಹವಾಗುವ ಮೂಲಕ ಉಂಟಾದ ಎಲ್ಲ ವದಂತಿಗಳಿಗೂ ತೆರೆ ಎಳೆದರು. ಇದೀಗ ತಮ್ಮ ಪತಿ ರೋಷನ್ ಅವರ ಹುಟ್ಟುಹಬ್ಬಕ್ಕೆ ಅವರ ಪತ್ನಿ, ಆ್ಯಂಕರ್ ಅನುಶ್ರೀ ಅವರು ಇನ್‌ಸ್ಟಾಗ್ರಾಂನಲ್ಲಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಫೋಟೋಗಳೊಂದಿಗೆ ವಿಶೇಷ ಕವನವೊಂದನ್ನು ಬರೆದು ವಿಶೇಷವಾಗಿ ಶುಭಕೋರಿದ್ದಾರೆ.
ಅಕ್ಟೋಬರ್ 14ರಂದು ರೋಷನ್ ಅವರ ಜನ್ಮದಿನವಾಗಿದ್ದು ಈ ಬಾರಿ ನಟಿ, ಆ್ಯಂಕರ್ ಅನುಶ್ರೀ ಅವರು ಪತಿಗೆ ವಿಭಿನ್ನವಾಗಿ ವಿಶ್ ಮಾಡಿದ್ದಾರೆ. ಪತಿಯ ಜೊತೆಗಿನ ವಿಶೇಷ ಕ್ಷಣಗಳ ಫೋಟೋ ಗಳನ್ನು ಅವರು ಹಂಚಿಕೊಂಡಿದ್ದಾರೆ. ಮದುವೆ ಸಂದರ್ಭದಲ್ಲಿ ತೆಗೆದ ಫೋಟೊ, ಬಳಿಕ ಟ್ರಿಪ್ ಹೋಗಿದ್ದ ಫೋಟೊ ಜೊತೆಗೆ ನಿನ್ನ ಜೊತೆಗೆ ನಾನು ಮಾತ್ರವೇ ಇರಬೇಕು ಎಂಬ ಅರ್ಥದಲ್ಲಿ ವಿಶೇಷ ಪೋಸ್ಟ್ ನಲ್ಲಿ ಬರೆದಿದ್ದಾರೆ. ಇದನ್ನು ಕಂಡ ಅವರ ಫ್ಯಾನ್ಸ್ ರೋಷನ್ ಗೆ ಶುಭ ಕೋರುವ ಮೂಲಕ ಪೋಸ್ಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅನುಶ್ರೀ ಅವರು ಬರೆದ ಕವನ ಬಹಳ ಮುದ್ದು ಮುದ್ದಾಗಿದ್ದು ಜೊತೆಯಲಿ ನಿನ್ನ ಜೊತೆಯಲಿ… ಸದಾ ಸಂತೋಷ ಇರಲಿ...ಜೊತೆಯಲಿ ನಿನ್ನ ಜೊತೆಯಲಿ ನಿನ್ನೆಲ್ಲಾ ಕನಸು ನನಸಾಗಲಿ…ಜೊತೆಯಲಿ ನಿನ್ನ ಜೊತೆಯಲಿ. ಅನು ನಾನಿರಲಿ, ಅನು ಮಾತ್ರ ಇರಲಿ...ಹುಟ್ಟು ಹಬ್ಬದ ಶುಭಾಶಯಗಳು ಹಬಿ ಎಂದು ಕವನ ಬರೆದಿದ್ದಾರೆ. ಈ ಕವನದ ಕೊನೆಯ ಸಾಲಿನಲ್ಲಿ ನಿನ್ನ ಜೊತೆ ಅನು ಮಾತ್ರ ಇರಲಿ ಎಂಬ ಅರ್ಥದಲ್ಲಿ ಕವನದ ಸಾಲು ಬರೆದಿದ್ದು ನಿನ್ನ ಬದುಕಲ್ಲಿ ನಾನು ಮಾತ್ರ ಇರಬೇಕು.... ಗಂಡನನ್ನು ಬಿಟ್ಟುಕೊಡಲ್ಲ ಎಂದು ಪರೋಕ್ಷವಾಗಿ ಕವನ ಮೂಲಕ ಅಭಿವ್ಯಕ್ತ ಪಡಿಸಿದ್ದಾರೆ. ಈ ಮೂಲಕ ಮಾತಿನ ಮಲ್ಲಿ ಅನುಶ್ರೀ ತನ್ನ ಪತಿಯ ವಿಚಾರಕ್ಕೆ ತುಂಬಾ ಪೊಸೆಸಿವ್ ಇದ್ದಾರೆ ಎಂಬುದು ಅರ್ಥೈಸಿಕೊಳ್ಳಬಹುದು.
ಇದನ್ನೂ ಓದಿ:Anushree: ಮದುವೆಯಾಗಿ 1 ತಿಂಗಳು ಕೂಡ ಆಗಿಲ್ಲ, ಆಗಲೇ..: ಅನುಶ್ರೀ ವಿರುದ್ಧ ಕೋಪಗೊಂಡ ಫ್ಯಾನ್ಸ್
ಅನುಶ್ರೀ ಅವರ ಪೋಸ್ಟ್ ಕಂಡು ನೆಟ್ಟಿಗರು ನಾನಾ ತರನಾಗಿ ಕಾಮೆಂಟ್ ಹಾಕಿದ್ದಾರೆ. ಹ್ಯಾಪಿ ಬರ್ತ್ ಡೇ , ಯಾವತ್ತೂ ಖುಷಿ ಖುಷಿಯಾಗಿ ಇರಿ ಈ ಪ್ರೀತಿಯ ಬೆಸುಗೆಗೆ ಯಾವ ಕೆಟ್ಟ ದೃಷ್ಟಿಯು ಬೀಳ ದಿರಲಿ ಎಂದು ನೆಟ್ಟಿಗರೊಬ್ಬರು ಶುಭ ಹಾರೈಸಿದ್ದಾರೆ. ನಮ್ಮಕ್ಕ ಭಾವನ ವಿಚಾರದಲ್ಲಿ ನೋ ಕಾಂಪ್ರ ಮೈಸ್, ಹುಟ್ಟು ಹಬ್ಬದ ಶುಭಾಶಯಗಳು ಭಾವ...ದೇವರು ಆಯುಷ್ಯ ಕೊಟ್ಟು ನಿಮ್ಮನ್ನು ಹರಸಿ ಹಾರೈಸಲಿ ಎಂದು ಶುಭ ಹಾರೈಸಿದ್ದಾರೆ.
ಅನುಶ್ರೀ ಅವರ ಪತಿ ರೋಷನ್ ರಾಮಮೂರ್ತಿ ಅವರು ಕೊಡಗು ಮೂಲದವರಾಗಿದ್ದಾರೆ. ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿರುವ ಇವರಿಗೆ ನಟ ಪುನೀತ್ ರಾಜ್‌ಕುಮಾರ್ ಎಂದರೆ ಬಹಳ ಇಷ್ಟ. ಪುನೀತ್ ಅವರ ಕಾರ್ಯಕ್ರಮವೊಂದರಲ್ಲಿ ಅನುಶ್ರೀ ಹಾಗೂ ರೋಷನ್ ಅವರ ಪರಿಚಯವಾಗಿದ್ದು. ಬಳಿಕ ಸ್ನೇಹವಾಗಿದೆ. ಅನಂತರ ಪ್ರೀತಿಯಲ್ಲಿ ಇಬ್ಬರು ಬಿದ್ದಿದ್ದು ವಿವಾಹವಾಗುವ ಮೂಲಕ ಸತಿ ಪತಿಗಳಾಗಿದ್ದಾರೆ.