ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Malayalam Season 7 : ಮಲಯಾಳಂ ಬಿಗ್ ಬಾಸ್‌ ಸೀಸನ್ 7ರ ವಿನ್ನರ್‌ ಆದ ಖ್ಯಾತ ನಿರೂಪಕಿ, ನಟಿ

ಅನುಮೋಲ್ ( Anumol) ಅವರ ಆಟ ಮನೆಯಲ್ಲಿ ಸುಲಭವಾಗಿರಲಿಲ್ಲ. ವಾರಗಟ್ಟಲೆ ಅವರನ್ನು ಗುರಿಯಾಗಿಸಲಾಯಿತು, ನಾಮಿನೇಟ್‌ (Nominate) ಕೂಡ ಮಾಡಲಾಗಿತ್ತು. ಟ್ರೋಲ್ (Bigg Boss Malayalam) ಕೂಡ ಮಾಡಲಾಯಿತು. ಆದರೆ ಅವರು ಎಂದಿಗೂ ತಮ್ಮ ಆಟವನ್ನ ಬದಲಾಯಿಸಲಿಲ್ಲ. ಅವರ ನೇರ ಮಾತು ಅವರನ್ನು ಇಂದು ಗೆಲ್ಲಿಸಿದೆ. ಅನೀಶ್ (Anish) ಕೊನೆಯವರೆಗೂ ತೀವ್ರವಾಗಿ ಪ್ರಯತ್ನಿಸಿದರು ಅನೀಶ್ ಎರಡನೇ ಸ್ಥಾನ ಪಡೆದರು, ಶಾನವಾಸ್ ಮೂರನೇ ಸ್ಥಾನ ಪಡೆದರು.

Bigg Boss Malayalam Season 7 Winner

98 ದಿನಗಳ ಬಳಿಕ ಮಲಯಾಳಂ ಬಿಗ್ ಬಾಸ್‌ ನ ಸೀಸನ್ 7 (Bigg Boss Malayalam) ನವೆಂಬರ್‌ 9ರಂದು ಮುಕ್ತಾಯವಾಗಿದೆ. ಅದ್ಧೂರಿಯಾಗಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ (Grand Finale) ನಿರೂಪಕಿಯಾಗಿ ಹೆಸರು ಮಾಡಿರುವ ಕಿರುತೆರೆಯ ನಾಯಕಿಯಾಗಿಯೂ ಆಗಿರುವ ಅನುಮೋಲ್ ( BB winner Anumol) ವಿಜೇತರಾಗಿ ಹೊರ ಹೊಮ್ಮಿದ್ದಾರೆ.

45 ಲಕ್ಷ ರೂ , ಒಂದು ಕಾರು ಮತ್ತು ಸೀಸನ್ 7 ಟ್ರೋಫಿಯನ್ನು ಗೆದ್ದಿದ್ದಾರೆ. ಅನೀಶ್, ಶಾನವಾಸ್, ಅಕ್ಬರ್ ಖಾನ್ ಮತ್ತು ನೆವಿನ್‌ರನ್ನು ಹಿಂದಿಕ್ಕಿ ಅಂತೂ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಅನೀಶ್ ಕೊನೆಯವರೆಗೂ ತೀವ್ರವಾಗಿ ಪ್ರಯತ್ನಿಸಿದರು ಅನೀಶ್ ಎರಡನೇ ಸ್ಥಾನ ಪಡೆದರು, ಶಾನವಾಸ್ ಮೂರನೇ ಸ್ಥಾನ ಪಡೆದರು.

ಇದನ್ನೂ ಓದಿ: Bigg Boss Kannada 12: ರಕ್ಷಿತಾ ಮಾತಿನ ಸ್ಟೈಲ್​ನಲ್ಲೇ ಅಣುಕಿಸಿ ವಿಷಕಾರಿದ ಧ್ರುವಂತ್‌! ಗಿಲ್ಲಿ ಬಗ್ಗೆ ಹೇಳಿದ್ದೇನು?

ಆಟ ಸುಲಭವಾಗಿರಲಿಲ್ಲ!

ಅನುಮೋಲ್ ಅವರ ಆಟ ಮನೆಯಲ್ಲಿ ಸುಲಭವಾಗಿರಲಿಲ್ಲ. ವಾರಗಟ್ಟಲೆ ಅವರನ್ನು ಗುರಿಯಾಗಿಸಲಾಯಿತು, ನಾಮಿನೇಟ್‌ ಕೂಡ ಮಾಡಲಾಗಿತ್ತು. ಟ್ರೋಲ್ ಕೂಡ ಮಾಡಲಾಯಿತು. ಆದರೆ ಅವರು ಎಂದಿಗೂ ತಮ್ಮ ಆಟವನ್ನ ಬದಲಾಯಿಸಲಿಲ್ಲ. ಅವರ ನೇರ ಮಾತು ಅವರನ್ನು ಇಂದು ಗೆಲ್ಲಿಸಿದೆ.

"ಅವರು ಬಿಗ್ ಬಾಸ್ ಆಡಲಿಲ್ಲ, ಅವರು ಅದರಂತೆ ಬದುಕಿದರು" ಎಂದು ಫ್ಯಾನ್ಸ್‌ ಕಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನೂ ಈ ಬಾರಿ ಮಲಯಾಳಂನ ''ಬಿಗ್ ಬಾಸ್'' ಮನೆಯಲ್ಲಿ ಜನಸಾಮಾನ್ಯರಿಗೆ ಕೂಡ ಅವಕಾಶ ನೀಡಲಾಗಿತ್ತು. ಬರಹಗಾರ ಮತ್ತು ವ್ಲಾಗರ್ ಆದ ಅನೀಶ್ ಟಿಎ ಅವರನ್ನು ಈ ಬಾರಿ ಆಯ್ಕೆ ಮಾಡಲಾಗಿತ್ತು.



ಸಲಿಂಗ ವಿವಾಹ

5 ಜನ ವೈಲ್ಡ್ ಕಾರ್ಡ್‌ ಮೂಲಕ ಮನೆಯೊಳಗೆ ಹೋಗಿದ್ದರು. ಆ ಪೈಕಿ ಸಲಿಂಗ ವಿವಾಹವಾದ LGBTQ+ ಸಮುದಾಯದ ಪರ ಕಾನೂನು ಹೋರಾಟವನ್ನು ಕೂಡ ಮಾಡುವ ಅಧಿಲಾ ಮತ್ತು ನೂರಾ ಕೂಡ ಹೋಗಿದ್ದರು. ಅನೇಕರು ಈ ಬಾರಿಯ ''ಬಿಗ್ ಬಾಸ್'' ಗೆಲ್ಲುವುದು ಇವರೇ ಎಂದು ಅಂದುಕೊಂಡಿದ್ದರು.

ಬಿಗ್ ಬಾಸ್ ಮಲಯಾಳಂ ಸೀಸನ್ 7

ಬಿಗ್ ಬಾಸ್ ಮಲಯಾಳಂ ಆವೃತ್ತಿಯನ್ನು ಗೆದ್ದ ಎರಡನೇ ಮಹಿಳೆ ಅವರು. ದಿನದ ಆರಂಭದಲ್ಲಿ, ಅಂತಿಮ ಸ್ಪರ್ಧಿಗಳಾದ ಶಾನವಾಸ್, ನೆವಿನ್ ಮತ್ತು ಅಕ್ಬರ್ ಅವರನ್ನು ಕಾರ್ಯಕ್ರಮದಿಂದ ಹೊರಹಾಕಲಾಯಿತು. ಬಿಗ್ ಬಾಸ್ ಮಲಯಾಳಂ ಸೀಸನ್ 7 ರೇಣು ಸುಧಿ , ಅಪ್ಪಾನಿ ​​ಶರತ್, ಶೈತ್ಯ ಸಂತೋಷ್, ಅಧಿಲಾ, ನೂರಾ , ಸಾರಿಕಾ, ರಂಜೀತ್, ಗಿಜೆಲೆ ಥಕ್ರಾಲ್, ಬಿನ್ನಿ ನೂಬಿನ್, ರೇನಾ ಫಾತಿಮಾ, ಅಭಿಲಾಷ್, ಆರ್ಯನ್ ಕಥುರಿಯಾ, ಆರ್ ಜೆ ಬಿನ್ಸಿ, ಒನೆಲ್ ಸಾಬು, ಆರ್ ಜೆ ಬಿನ್ಸಿ, ಫೈನಲ್ ಸಾಬು, ನೀಲಭವನ್ ಸಾಬು ಸೇರಿದಂತೆ 20 ಸ್ಪರ್ಧಿಗಳೊಂದಿಗೆ ಪ್ರಾರಂಭವಾಯಿತು.

ಇದನ್ನೂ ಓದಿ: Bigg Boss Kannada 12: ನಿಮ್ಮ ಜೊತೆ ಮಾತಾಡೋಕೆ ಹೆಣ್ಮಕ್ಕಳಿಗೆ ಇಷ್ಟ ಇಲ್ಲ! ಧ್ರುವಂತ್‌ಗೆ ಚಳಿ ಬಿಡಿಸಿದ್ರು ರಾಶಿಕಾ, ಕಾವ್ಯ

ಈ ಸೀಸನ್ ಹಿಂದಿನ ಆವೃತ್ತಿಗಳಿಗಿಂತ ಭಿನ್ನವಾಗಿತ್ತು, ಪರಿಚಿತ ಮುಖಗಳ ಕಡೆಗೆ ಹೆಚ್ಚು ಒಲವು ತೋರುತ್ತಿತ್ತು . ಬಿಗ್ ಬಾಸ್ ಮಲಯಾಳಂ ಆವೃತ್ತಿಯನ್ನು ಗೆದ್ದ ಎರಡನೇ ಮಹಿಳೆ ಅವರು.

Yashaswi Devadiga

View all posts by this author