ʻಅಣ್ಣಯ್ಯʼನ ಅಬ್ಬರ ಜೋರು; ಟಾಪ್ 5 ಸೀರಿಯಲ್ಗಳು ಇವೇನೆ!
ಕನ್ನಡ ಕಿರುತೆರೆಯಲ್ಲಿ ಸೀರಿಯಲ್ಗಳ (Kannada Serial) ಲೆಕ್ಕಾಚಾರ ವಾರದಿಂದ ವಾರಕ್ಕೆ ಬದಲಾಗುತ್ತ ಇರುತ್ತದೆ. ಪ್ರತಿವಾರ ನಿರ್ದೇಶಕರು ಜನರನ್ನು ಸೆಳೆಯಲು ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಾ ಇರುತ್ತಾರೆ. ಆದರೀಗ ವೀಕ್ಷಕರು ಊಹಿಸಿರೋ ಧಾರಾವಾಹಿ ನಂಬರ್ 1 ಟಿಆರ್ಪಿಯಲ್ಲಿದೆ. ಕಳೆದ ಕೆಲವು ವಾರಗಳಿಂದ ಅಣ್ಣಯ್ಯ ಧಾರಾವಾಹಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇದು ಧಾರಾವಾಹಿ ಟಿಆರ್ಪಿ ಹೆಚ್ಚಲು ಕಾರಣ ಆಗಿದೆ. ಅಣ್ಣಯ್ಯ ಧಾರಾವಾಹಿ ಸಖತ್ ಇಂಟ್ರೆಸ್ಟಿಂಗ್ ಆಗಿ ಮೂಡಿ ಬರುತ್ತಿದೆ.