ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sushant Singh Death Case: ಸುಶಾಂತ್‌ ಸಿಂಗ್‌ ಡೆತ್‌ ಕೇಸ್‌ನಲ್ಲಿ ರಿಯಾ ಚಕ್ರವರ್ತಿಗೆ ಬಿಗ್‌ ರಿಲೀಫ್‌; ಸಿಬಿಐ ವರದಿಯಲ್ಲೇನಿದೆ?

Sushant Singh: ಜೂನ್ 14, 2020 ರಂದು ಸುಶಾಂತ್ ಸಿಂಗ್ ಅನುಮಾನಸ್ಪದವಾಗಿ ಸಾವನಪ್ಪಿದ್ದರು. ಇವರ ಸಾವು ನಿಗೂಢವಾಗಿದ್ದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದ ಮೇಲೆ ವಿವಿಧ ಆಯಾಮದಲ್ಲಿ ಕಳೆದ 5ವರ್ಷಗಳಿಂದ ತನಿಖೆ ನಡೆಯುತ್ತಿದೆ. ಇದೀಗ ಅವರ ಆತ್ಮಹತ್ಯೆ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿ ವಿರುದ್ಧ ವಿವಿಧ ಆರೋಪಗಳು ಕೇಳಿಬಂದಿತ್ತು. ಇದೀಗ ಸಿಬಿಐ ರಿಯಾ ಚಕ್ರ ವರ್ತಿಗೆ ಕ್ಲೀನ್‌ಚಿಟ್ ನೀಡಿದೆ.

Sushant Singh

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ತಮ್ಮ ಅದ್ಭುತ ಅಭಿನಯದಿಂದ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದ ನಟರಾಗಿದ್ದರು. ಪಿ.ಕೆ., ಚಿಚೋರೆ, ಎಂ. ಎಸ್. ಧೋನಿ ಅನ್ ಟೋಲ್ಡ್ ಸ್ಟೋರಿ ಇತರ ಸಿನಿಮಾ ಹಾಗೂ ಪವಿತ್ರ ರಿಶ್ತಾ, ಝಲಕ್ ದಿಖ್ಲಾಜಾ, ಕೈ ಪೋ ಚೆ ಇನ್ನು ಅನೇಕ ಟಿವಿ ಶೋ ಮೂಲಕ ಇವರು ಖ್ಯಾತಿ ಪಡೆದಿದ್ದರು. ಆದರೆ ಜೂನ್ 14, 2020 ರಂದು ಇವರು ಅನುಮಾನಸ್ಪದವಾಗಿ ಸಾವನಪ್ಪಿದ್ದರು. ಇವರ ಸಾವು ನಿಗೂಢವಾಗಿದ್ದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದ ಮೇಲೆ ವಿವಿಧ ಆಯಾಮದಲ್ಲಿ ಕಳೆದ 5ವರ್ಷಗಳಿಂದ ತನಿಖೆ ನಡೆಯುತ್ತಿದೆ. ಇದೀಗ ಅವರ ಆತ್ಮಹತ್ಯೆ ಪ್ರಕರಣ ದಲ್ಲಿ ನಟಿ ರಿಯಾ ಚಕ್ರವರ್ತಿ (Rhea Chakraborty) ವಿರುದ್ಧ ವಿವಿಧ ಆರೋಪಗಳು ಕೇಳಿ ಬಂದಿತ್ತು. ಇದೀಗ ಸಿಬಿಐ ರಿಯಾ ಚಕ್ರವರ್ತಿಗೆ ಕ್ಲೀನ್‌ಚಿಟ್ ನೀಡಿದೆ.

ಸುಶಾಂತ್ ಅವರು ಬಾಂದ್ರಾದಲ್ಲಿರುವ ತಮ್ಮ ಫ್ಲ್ಯಾಟ್ ನ ಬೆಡ್ ರೂಮ್ ನಲ್ಲಿ ನೇಣು ಬಿಗಿದು ಕೊಂಡಿರುವ ಸ್ಥಿತಿಯಲ್ಲಿದ್ದರು. ಪೊಲೀಸರು ಈ ಬಗ್ಗೆ ತನಿಖೆ ನಡೆಸಿದರೂ ಅವರಿಗೆ ಇದರಲ್ಲಿ ಯಾವುದೇ ತರನಾಗಿ ಕೊಲೆ ಅಂಶ ಪತ್ತೆಯಾಗಿರಲಿಲ್ಲ. ಪ್ರಕರಣ ಸಂಬಂಧ ಸುಶಾಂತ್ ಸಿಂಗ್ ತಂದೆ ಕೆ.ಕೆ. ಸಿಂಗ್ (kk Singh) ಅವರು ರಿಯಾ ಚಕ್ರವರ್ತಿ ಮೇಲೆ ಆರೋಪ ಹೊರಿಸಿದ್ದು ರಿಯಾ ಚಕ್ರವರ್ತಿ ಮತ್ತು ಕುಟುಂಬದ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು. ಅದೇ ರೀತಿ ಸುಶಾಂತ್ ಅವರ ಸಹೋದರಿಯರ ವಿರುದ್ಧ ಮುಂಬೈನಲ್ಲಿ ರಿಯಾ ಚಕ್ರವರ್ತಿ ಪ್ರಕರಣ ದಾಖಲಿಸಿದ್ದರು. ಎರಡೂ ಪ್ರಕರಣದ ವಿಚಾರಣೆ ನಡೆಸಿ ಸಿಬಿಐ ವರದಿ ನೀಡಿದದ್ದು ರಿಯಾ ಅವರಿಗೆ ಕ್ಲೀನ್ ಚೀಟ್ ನೀಡಿದೆ.

ರಿಯಾ ಮತ್ತು ಸುಶಾಂತ್ ಏಪ್ರಿಲ್ 2019 ರಿಂದ ಜೂನ್ 2020 ರವರೆಗೆ ಲಿವ್-ಇನ್ ರಿಲೇಶನ್ಶಿಪ್ ನಲ್ಲಿದ್ದರು. ಈ ಸಂದರ್ಭದಲ್ಲಿ ಸುಶಾಂತ್, ರಿಯಾಗಾಗಿ ಸಾಕಷ್ಟು ಹಣ ಖರ್ಚು ಮಾಡಿ‌ದ್ದರು. ಜೊತೆಗೆ ತಮ್ಮ ಆಪ್ತರಿಗೂ ಆಕೆಯನ್ನು ಪರಿಚಯಿಸಿ ತಮ್ಮ ಕುಟುಂಬದ ಒಂದು ಭಾಗವೆಂದೆ ಹೇಳುತ್ತಿದ್ದರಂತೆ. ಆದರೆ ಇಬ್ಬರ ನಡುವೆ ವೈಮನಸ್ಸು ಮೂಡಿದೆ ರಿಯಾ ಹಣಕಾಸಿನ ವಿಚಾರದಲ್ಲಿ ಮೋಸ ಮಾಡಿದ್ದಾಳೆ, ಆತ್ಮಹತ್ಯೆಗೆ ಪ್ರಚೋದಿಸಿದ್ದಾಳೆ, ಕೊಲೆ ಬೆದರಿಕೆ ಹಾಕಿದ್ದಾಳೆ ಎಂದು ಸುಶಾಂತ್ ತಂದೆ ರಿಯಾ ವಿರುದ್ಧ ಕೇಸ್ ದಾಖಲಿಸಿದ್ದರು.

ಸುಶಾಂತ್ ಸಿಂಗ್ ಜೂನ್ 14 ರಂದು ಸಾವನ್ನಪ್ಪಿದ್ದು ರಿಯಾ ಮತ್ತು ಶೋವಿಕ್ ಜೂನ್ 8 ರಂದೇ ಸುಶಾಂತ್ ಬಾಂದ್ರಾ ಫ್ಲ್ಯಾಟ್ ತೊರೆದಿದ್ದರು ಎಂದು ವರದಿಯಲ್ಲಿದೆ. ಅಂದರೆ ಅವರ ಸಾವಿಗೂ 6 ದಿನಗಳ ಮೊದಲು ರಿಯಾ ಅಪಾರ್ಟ್ಮೆಂಟ್‌ನಿಂದ ಹೊರಟಿದ್ದರು. ಜೊತೆಗೆ ಯಾವುದೆ ಹಣಕಾಸಿನ ಅವ್ಯವಹಾರ ನಡೆದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ರಿಯಾ ವಿರುದ್ಧ ಸುಶಾಂತ್ ಕುಟುಂಬದವರು ಕಳ್ಳತನದ ಆರೋಪ ಮಾಡಿದ್ದು ಅದನ್ನು ಕೂಡ ತನಿಖೆ ನಡೆಸಲಾಗಿದೆ. ಆಗ ನಟಿಯು ಲ್ಯಾಪ್ ಟಾಪ್ ಮತ್ತು ಗಿಫ್ಟ್ ಆಗಿ ನೀಡಿದ್ದ ಆಪಲ್ ವಾಚ್ ಮಾತ್ರ ತೆಗೆದುಕೊಂಡಿದ್ದರು. ಬೇರೆ ಯಾವುದೇ ವಸ್ತುವನ್ನು ಅವರು ತೆಗೆದುಕೊಂಡಿಲ್ಲ ಎಂದು ತಿಳಿದುಬಂದಿದೆ.

ಇದನ್ನು ಓದಿ:BRAT Movie: ಡಾರ್ಲಿಂಗ್ ಕೃಷ್ಣ ಅಭಿನಯದ ʼಬ್ರ್ಯಾಟ್ʼ ಚಿತ್ರದ ಟ್ರೇಲರ್ ಔಟ್‌

ಸುಶಾಂತ್ ಅವರು ತಮ್ಮ ಇಚ್ಛೆಯಂತೆ ರಿಯಾಗಾಗಿ ಹಣ ಖರ್ಚು ಮಾಡಿದ್ದು ಅದು ಕಳ್ಳತನ ವಾಗಲಾರದು. ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪಗಳಿಗೆ ಯಾವ ಸಾಕ್ಷಿಯೂ ಲಭ್ಯವಾಗಿಲ್ಲ ಹೀಗಾಗಿ ಸಿಬಿಐ ಈ ಆರೋಪ ತಳ್ಳಿಹಾಕಿದೆ. ಜೊತೆಗೆ ಆತ್ಮಹತ್ಯೆಗೆ ಪ್ರಚೋದಿಸುವಂತದ್ದು ಏನೂ ನಡೆದಿಲ್ಲ ಎಂದು ಸಿಬಿಐ ವರದಿಯಲ್ಲಿ ತಿಳಿಸಿದೆ.

ಸುಶಾಂತ್ ಸಹೋದರಿ ಮೀತು ಸಿಂಗ್ ಜೂ.8ರಿಂದ ಜೂ.12ರವರೆಗೆ ಸುಶಾಂತ್ ಅವರೊಂದಿಗಿದ್ದರು. ಬಳಿಕ ಅವರು ಇರಲಿಲ್ಲ ಎಂಬುದು ತಿಳಿದು ಬಂದಿದೆ. ಇನ್ನು ಅವರ ಮ್ಯಾನೇಜರ್ ಶ್ರುತಿ ಮೋದಿ 2020ರ ಫೆಬ್ರವರಿಯಿಂದ ಕಾಲಿಗೆ ಗಾಯವಾದ ಕಾರಣ ಸುಶಾಂತ್ ಅವರ ಮನೆಗೆ ಬಂದಿರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಕ್ಲೋಸರ್ ರಿಪೋರ್ಟ್ ನ ಮುಂದಿನ ವಿಚಾರಣೆ ಡಿಸೆಂಬರ್ 20, 2025 ರಂದು ಪಾಟ್ನಾ ನ್ಯಾಯಾಲಯದಲ್ಲಿ ನಡೆಯಲಿದ್ದು ಅಲ್ಲಿಯೇ ಅಂತಿಮ ತೀರ್ಪು ತಿಳಿದುಬರಲಿದೆ.