ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sushant Singh Rajput: ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣ; ಅನುಮಾನಕ್ಕೆ ತೆರೆ ಎಳೆದ ಸಿಬಿಐ ವರದಿಯಲ್ಲಿ ಏನಿದೆ?

Sushant Singh Rajput Death Case: ದೇಶಾದ್ಯಂತ ತೀವ್ರ ಚರ್ಚೆ ಹುಟ್ಟುಹಾಕಿದ್ದ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣಕ್ಕೆ ಸಿಬಿಐ ಅಂತ್ಯ ಹಾಡಿದೆ. ತನಿಖಾ ಸಂಸ್ಥೆಯ ಮುಕ್ತಾಯ ವರದಿಯು ಇದು ಯಾವುದೇ ದುರುದ್ದೇಶವಿಲ್ಲದ ಆತ್ಮಹತ್ಯೆ ಪ್ರಕರಣ ಎಂದು ಹೇಳಿದೆ.

ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣ;  ಅನುಮಾನಕ್ಕೆ ತೆರೆ

ಸುಶಾಂತ್ ಸಿಂಗ್ ರಜಪೂತ್.

Profile Ramesh B Mar 22, 2025 11:05 PM

ಮುಂಬೈ: ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (CBI) ಮುಕ್ತಾಯ ವರದಿಯನ್ನು (Closure report) ಸಲ್ಲಿಸಿದೆ ಎಂದು ಸಿಎನ್ಎನ್ ನ್ಯೂಸ್ 18 ವರದಿ ಮಾಡಿದೆ. 2020ರ ಜೂ. 14ರಂದು ಸುಶಾಂತ್‌ ಸಿಂಗ್‌ ಮೃತಪಟ್ಟಿದ್ದರು. ಆರಂಭದಲ್ಲಿ ಇದು ಆತ್ಮಹತ್ಯೆ ಎನ್ನಲಾಗಿತ್ತು. ಆದರೆ ಬಳಿಕ ನಟನ ಕುಟುಂಬ ಸದಸ್ಯರು ಇದೊಂದು ಕೊಲೆ ಎಂದು ಸಂದೇಹ ವ್ಯಕ್ತಪಡಿಸಿದ್ದರು. ಇದೀಗ ತನಿಖಾ ಸಂಸ್ಥೆಯ ಮುಕ್ತಾಯ ವರದಿಯು ಇದು ಯಾವುದೇ ದುರುದ್ದೇಶವಿಲ್ಲದ ಆತ್ಮಹತ್ಯೆ ಪ್ರಕರಣ ಎಂದು ಹೇಳಿದೆ. ಆ ಮೂಲಕ ಪ್ರಕರಣಕ್ಕೆ ತಾರ್ತಿಕ ಅಂತ್ಯ ಹಾಡಿದೆ.

"ಇದು ಕೊಲೆ ಪ್ರಕರಣ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ. ಸುಳ್ಳು ಆರೋಪಗಳನ್ನು ಮಾಡಿದ ಸುಶಾಂತ್‌ ಸಿಂಗ್‌ ಅವರ ಸಹೋದರಿಯನ್ನು ಪ್ರಶ್ನಿಸುವ ಅವಕಾಶಕ್ಕಾಗಿ ಸಿಬಿಐ ಇಷ್ಟು ಸಮಯ ಕಾದಿದೆ. ಆದರೆ ಅವರು ನ್ಯಾಯಾಲಯದ ಮುಂದೆ ಹಾಜರಾಗಲಿಲ್ಲ" ಎಂದು ಪ್ರಕರಣದ ಮೇಲ್ವಿಚಾರಣೆ ವಹಿಸಿದ್ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.



ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣವನ್ನು ಕೊಲೆ ಎನ್ನಲು ಬೇಕಾದ ವೈಜ್ಞಾನಿಕ ಪುರಾವೆಗಳು ಸಿಕ್ಕಿಲ್ಲ. ಆದ್ದರಿಂದ ಮುಕ್ತಾಯ ವರದಿಯನ್ನು ಸಲ್ಲಿಸುವ ನಿರ್ಧಾರಕ್ಕೆ ಬಂದಿದ್ದಾಗಿ ಅಧಿಕೃತ ಮೂಲಗಳು ಮಾಹಿತಿ ನೀಡಿವೆ.

ಈ ಸುದ್ದಿಯನ್ನೂ ಓದಿ: Avneet Kaur: ಆತ ನನ್ನ ಆ ಭಾಗಕ್ಕೆ...... ಹೋಳಿ ಹಬ್ಬದಂದು ನಟಿ ನಡೆದ ಘಟನೆ ನೆನಪಿಸಿಕೊಂಡ ಅವನೀತ್‌ ಕೌರ್‌ !

ಏನಿದು ಪ್ರಕರಣ?

2020ರ ಜೂ. 14ರಂದು ಬಾಲಿವುಡ್‌ನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ನಟರಲ್ಲಿ ಒಬ್ಬರೆನಿಸಿಕೊಂಡಿದ್ದ 34 ವರ್ಷದ ಸುಶಾಂತ್‌ ಸಿಂಗ್‌ ಮೃತದೇಹ ಮುಂಬೈಯ ಅವರ ಅಪಾರ್ಟ್‌ಮೆಂಟ್‌ನಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಆದರೆ ಸ್ಥಳದಲ್ಲಿ ಯಾವುದೇ ಡೆತ್‌ನೋಟ್‌ ಕಂಡು ಬಂದಿರಲಿಲ್ಲ. ಅದಾದ ಬಳಿಕ ಈ ಸಾವಿನ ಪ್ರಕರಣ ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಬಳಿಕ ಇದು ಆತ್ಮಹತ್ಯೆಯಲ್ಲ ಕೊಲೆ ಎಂಬ ಚರ್ಚೆ ವ್ಯಾಪಕವಾಗಿ ಕೇಳಿ ಬಂದಿತ್ತು.

ಸುಶಾಂತ್‌ ಸಿಂಗ್‌ ಮೃತಪಟ್ಟ ದಿನ ಮುಂಜಾನೆ 2 ಗಂಟೆಗೆ ಬಾಲಿವುಡ್‌ ನಟಿ ರಿಯಾ ಚಕ್ರವರ್ತಿ ಮತ್ತು ಕಿರುತೆರೆ ಕಲಾವಿದ ಮಹೇಶ್‌ ಶೆಟ್ಟಿಗೆ ಕರೆ ಮಾಡಿದ್ದರು. ಆದರೆ ಇಬ್ಬರೂ ಕಾಲ್‌ ರಿಸೀವ್‌ ಮಾಡಿರಲಿಲ್ಲ. ಸಾವಿನ ಬಳಿಕ ನಟನ ಮೊಬೈಲ್‌ ಪರಿಶೀಲಿಸಿದಾದ ಗೂಗಲ್‌ನಲ್ಲಿ ನೋವುರಹಿತ ಸಾವಿನ ಮಾಹಿತಿಗಾಗಿ ಹುಡುಕಾಡಿದ್ದು ಬೆಳಕಿಗೆ ಬಂದಿತ್ತು. ಮುಂಬೈ ಪೊಲೀಸರು ಈ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿ ಇದನ್ನು ಆತ್ಮಹತ್ಯೆ ಎಂದು ಪರಿಗಣಿಸಿದ್ದರು.

ಸುಶಾಂತ್ ಸಿಂಗ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅವರ ತಂದೆ ಹಾಗೂ ಕುಟುಂಬಸ್ಥರು ದಾಖಲಿಸಿದ್ದ ದೂರನ್ನು ಆಧರಿಸಿ ಸಿಬಿಐ ತನಿಖೆ ನಡೆಸಿತ್ತು. 2020ರ ಆಗಸ್ಟ್‌ನಲ್ಲಿ ಸಿಬಿಐ ಈ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಹೀಗೆ ಸುಮಾರು ನಾಲ್ಕೂವರೆ ವರ್ಷಗಳ ಸುದೀರ್ಘ ತನಿಖೆ ನಡೆಸಿದ ಸಿಬಿಐ ಇದೀಗ ಮುಂಬೈ ಕೋರ್ಟ್‌ಗೆ ವರದಿ ಸಲ್ಲಿಸಿದೆ. ಅ ಮೂಲಕ ಸಾವಿನ ಹಿಂದೆ ಕಾಣದ ಕೈವಾಡವಿದೆ ಎನ್ನುವ ಅನುಮಾನಕ್ಕೆ ತೆರೆ ಎಳೆದಿದೆ.