ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chowkidar Movie: ʼಚೌಕಿದಾರ್ʼ ಟೀಸರ್ ರಿಲೀಸ್; ಹೊಸ ಅವತಾರದಲ್ಲಿ ಪೃಥ್ವಿ ಅಂಬಾರ್‌ ಅಬ್ಬರ

ಪೃಥ್ವಿ ಅಂಬಾರ್‌ ಹಾಗೂ ಧನ್ಯಾ ರಾಮ್ ಕುಮಾರ್ ಮೊದಲ ಬಾರಿಗೆ ಮೊದಲ ಬಾರಿಗೆ ಜತೆಯಾಗಿ ನಟಿಸಿದ ʼಚೌಕಿದಾರ್ʼ ಕನ್ನಡ ಸಿನಿಮಾದ ಟೀಸರ್ ಎಂಆರ್‌ಟಿ ಮ್ಯೂಸಿಕ್ ಯುಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿದೆ. ಲವರ್‌ ಬಾಯ್‌ ಇಮೇಜ್‌ನಿಂದ ಹೊರ ಬಂದಿರುವ ಪೃಥ್ವಿ ರಕ್ತಸಿಕ್ತ ಅವತಾರವೆತ್ತಿದ್ದಾರೆ. ನಾಯಕಿ ಧನ್ಯಾ ರಾಮ್ ಕುಮಾರ್ ಡಿಗ್ಲಾಮರ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಬೆಂಗಳೂರು: ಇತ್ತೀಚೆಗೆಷ್ಟೇ ರಿಲೀಸ್‌ ಆದ 'ಕೊತ್ತಲವಾಡಿ' ಚಿತ್ರದ ಟೀಸರ್ ಮೂಲಕ ಗಮನ ಸೆಳೆದ ಸ್ಯಾಂಡಲ್‌ವುಡ್‌ ನಟ ಪೃಥ್ವಿ ಅಂಬಾರ್‌ (Pruthvi Ambaar) ಇದೀಗ ʼಚೌಕಿದಾರ್ʼ (Chowkidar Movie) ಮೂಲಕ ಮತ್ತೊಮ್ಮೆ ಮೋಡಿ ಮಾಡಿದ್ದಾರೆ. ಹೌದು, ಪೃಥ್ವಿ ಅಂಬಾರ್‌ ಹಾಗೂ ಧನ್ಯಾ ರಾಮ್ ಕುಮಾರ್ ಮೊದಲ ಬಾರಿಗೆ ಮೊದಲ ಬಾರಿಗೆ ಜತೆಯಾಗಿ ನಟಿಸಿದ ʼಚೌಕಿದಾರ್ʼ ಸಿನಿಮಾದ ಟೀಸರ್ ಎಂಆರ್‌ಟಿ ಮ್ಯೂಸಿಕ್ ಯುಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿದೆ. ರಕ್ತಸಿಕ್ತ ಅವತಾರವೆತ್ತಿರುವ ಪೃಥ್ವಿ ಹೊಸ ಲುಕ್ ಸಿನಿರಸಿಕರಿಗೆ ಕಿಕ್ ಕೊಟ್ಟಿದ್ದಾರೆ. ನಾಯಕಿ ಧನ್ಯಾ ರಾಮ್ ಕುಮಾರ್ ಡಿಗ್ಲಾಮರ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಟೀಸರ್‌ನಲ್ಲಿ ಎಲ್ಲ ಪಾತ್ರಗಳನ್ನು ತೋರಿಸಿರುವ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಕಥೆಯ ಗುಟ್ಟನ್ನು ಎಲ್ಲಿಯೂ ಬಿಟ್ಟು ಕೊಟ್ಟಿಲ್ಲ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಟೀಸರ್ ಬಿಡುಗಡೆ ಮಾಡಲಾಗಿದ್ದು, ಖಾಕಿ ಲುಕ್‌ನಲ್ಲಿ ಹಿರಿಯ ನಟಿ ಸುಧಾರಾಣಿ‌ ಖದರ್ ತೋರಿಸಿದ್ದಾರೆ. ಜತೆಗೆ ನಟ ಸಾಯಿ ಕುಮಾರ್ ಅವರು ಪೃಥ್ವಿಯ ತಂದೆ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಧರ್ಮ, ಹಿರಿಯ ನಟಿ ಶ್ವೇತಾ ಕೂಡ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ʼಚೌಕಿದಾರ್‌ʼ ಚಿತ್ರದ ಟೀಸರ್‌ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Kothalavadi Teaser: ಯಶ್ ತಾಯಿ ನಿರ್ಮಾಣದ 'ಕೊತ್ತಲವಾಡಿ' ಟೀಸರ್ ರಿಲೀಸ್; ಪೃಥ್ವಿ ಅಂಬಾರ್‌ ಚಿತ್ರಕ್ಕೆ ʼಅಧ್ಯಕ್ಷʼ ಶರಣ್‌ ಸಾಥ್‌

ಸಚಿನ್ ಬಸ್ರೂರ್ ಸಂಗೀತ ಟೀಸರ್‌ನಲ್ಲಿ ಗಮನಸೆಳೆಯುತ್ತಿದೆ. ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ. ವಿದ್ಯಾದೇವಿ ನಿರ್ಮಾಣದಲ್ಲಿ ಸಾಥ್ ಕೊಡುತ್ತಿದ್ದಾರೆ. ವಿ.ನಾಗೇಂದ್ರ ಪ್ರಸಾದ್‌, ಪ್ರಮೋದ್‌ ಮರವಂತೆ, ಸಂತೋಷ್ ನಾಯಕ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಸಿದ್ದು ಕಂಚನಹಳ್ಳಿ ಛಾಯಾಗ್ರಹಣ, ಪೃಥ್ವಿರಾಜ್ ಧಘಾರಿ ಸಹನಿರ್ದೇಶನ ಸಿನಿಮಾಗಿದೆ.

'ಚೌಕಿದಾರ್’ ಬಹುಭಾಷೆಯಲ್ಲಿ ಮೂಡಿ ಬರುತ್ತಿದ್ದು, ಟೀಸರ್ ನೋಡುತ್ತಿದ್ದರೆ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಹೊಸ ಮಾದರಿಯ ಕಥೆಯನ್ನು ತೆರೆದಿಡಲು ಹೊರಟಿರುವ ಸೂಚನೆ ಸಿಕ್ಕಿದೆ.

ಜೂ. 1ರಂದು ಮೊದಲ ಹಾಡು ರಿಲೀಸ್

ಟೀಸರ್ ಮೂಲಕ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಜೂ. 1ರಂದು ʼಚೌಕಿದಾರ್ʼ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಲಿದೆ. ಶೀಘ್ರದಲ್ಲೇ ಸಿನಿಮಾದ ರಿಲೀಸ್ ಡೇಟ್ ಅನ್ನು ಚಿತ್ರತಂಡ ರಿವೀಲ್ ಮಾಡಲಿದೆ.

Ramesh Ballamoole

View all posts by this author