ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepika Padukone: ಹೀಗಿದ್ದಾಳೆ ನೋಡಿ ರಣವೀರ್‌ ಸಿಂಗ್‌-ದೀಪಿಕಾ ಪಡುಕೋಣೆ ಪುತ್ರಿ ದುವಾ; ಮೊದಲ ಬಾರಿ ಫೋಟೊ ರಿವೀಲ್‌

Ranveer Singh: ಬಾಲಿವುಡ್‌ ಸ್ಟಾರ್‌ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಇದೇ ಮೊದಲ ಬಾರಿಗೆ ತಮ್ಮ ಪುತ್ರಿ ದುವಾ ಮುಖವನ್ನು ಮೊದಲ ಬಾರಿ ರಿವೀಲ್‌ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮಗಳಿಗೆ ಜನ್ಮ ನೀಡಿದ್ದರು. ಅದಾಗಿ 1 ವರ್ಷಗಳ ಕಾಲ ಮಗಳ ಮುಖವನ್ನು ರಿವೀಲ್‌ ಮಾಡಿರಲೇ ಇಲ್ಲ. ಇದೀಗ ದೀಪಾವಳಿ ಪ್ರಯುಕ್ತ ಮಗಳನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

ಮುಂಬೈ, ಅ. 21: ಬಾಲಿವುಡ್‌ ಸ್ಟಾರ್‌ ದಂಪತಿ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್‌ ಸಿಂಗ್‌ (Ranveer Singh) ತಮ್ಮ ಅಭಿಮಾನಿಗಳಿಗೆ ಭರ್ಜರಿ ದೀಪಾವಳಿ ಗಿಫ್ಟ್‌ ನೀಡಿದ್ದಾರೆ. ತಮ್ಮ ಪುತ್ರಿ ದುವಾ (Dua) ಮುಖವನ್ನು ಮೊದಲ ಬಾರಿ ರಿವೀಲ್‌ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮಗಳಿಗೆ ಜನ್ಮ ನೀಡಿದ್ದರು. ಅದಾಗಿ 1 ವರ್ಷಗಳ ಕಾಲ ಮಗಳ ಮುಖವನ್ನು ರಿವೀಲ್‌ ಮಾಡಿರಲಿಲ್ಲ. ಇದೀಗ ದೀಪಾವಳಿ ಪ್ರಯುಕ್ತ ರಣವೀರ್-ದೀಪಿಕಾ ತಮ್ಮ ಮುದ್ದು ಮಗಳನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ದೀಪಿಕಾ ಮತ್ತು ರಣವೀರ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಫೋಟೊ ಹಂಚಿಕೊಂಡಿದ್ದು, ವೈರಲ್‌ ಆಗಿದೆ.

ರಣವೀರ್‌ ಮತ್ತು ದೀಪಿಕಾ ಸಂಭ್ರಮದಿಂದ ದುವಾ ಜತೆ ದೀಪಾವಳಿ ಆಚರಿಸಿದ್ದಾರೆ. ರಣವೀರ್‌-ದೀಪಿಕಾ ಜತೆ ದುವಾ ಕುಡ ನಗುತ್ತಾ ಫೋಟೊಕ್ಕೆ ಪೋಸ್‌ ಕೊಟ್ಟಿದ್ದಾರೆ. ದೀಪಿಕಾ ತಲೆಗೆ ಮಲ್ಲಿಗೆ ಮುಡಿದು, ಕೈತುಂಬಾ ಬಳೆ ತೊಟ್ಟು, ಹಣೆಗೆ ಸಿಂದೂರ ಇಟ್ಟು ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ರಣವೀರ್‌ ಸಿಂಗ್‌ ಬಿಳಿ ಕುರ್ತಾ-ಪೈಜಾಮ ತೊಟ್ಟಿದ್ದಾರೆ. ದೀಪಿಕಾ ಮತ್ತು ದುವಾ ಕೆಂಪು ಬಣ್ಣದ ಬಟ್ಟೆ ತೊಟ್ಟು ಟ್ವಿನ್ನಿಂಗ್‌ನಲ್ಲಿ ಮಿಂಚಿದ್ದಾರೆ. ಜತೆಗೆ ಪೂಜೆ ವೇಳೆ ದೀಪಿಕಾ ಮಗಳನ್ನು ಮಡಿಲಲ್ಲಿ ಕೂರಿಸಿ ಕೈಮುಗಿದಿದ್ದಾರೆ.

ದೀಪಿಕಾ ಪಡುಕೋಣೆ ಇನ್‌ಸ್ಟಾಗ್ರಾಮ್‌ ಪೋಸ್ಟ್‌:



ʼʼದೀಪಾವಳಿಯ ಹಾರ್ದಿಕ ಶುಭಾಶಯಗಳುʼʼ ಎಂದು ಪೋಸ್ಟ್‌ಗೆ ಕ್ಯಾಪ್ಶನ್‌ ನೀಡಲಾಗಿದೆ. ದೀಪಿಕಾ ಮತ್ತು ರಣವೀರ್‌ 2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 2024ರ ಸೆಪ್ಟೆಂಬರ್‌ 8ರಂದು ದುವಾ ಜನಿಸಿದಳು. ಕಳೆದ ವರ್ಷ ದೀಪಾವಳಿ ವೇಳೆ ಮಗಳ ನಾಮಕರಣ ನೆರವೇರಿಸಿ ಈ ಬಗ್ಗೆ ದೀಪಿಕಾ ಮಾಹಿತಿ ಹಂಚಿಕೊಂಡಿದ್ದರು. ʼʼದುವಾ ಎಂದರೆ ಪ್ರಾರ್ಥನೆ. ಯಾಕೆಂದರೆ ಅವಳು ನಮ್ಮೆಲ್ಲ ಪ್ರಾರ್ಥನೆಗೆ ಉತ್ತರವಾಗಿ ಬಂದವಳುʼʼ ಎಂದು ದೀಪಿಕಾ ಬರೆದುಕೊಂಡಿದ್ದರು.

ಕಳೆದ ತಿಂಗಳು ದುವಾ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಳು. ಈ ವೇಳೆ ಸ್ವತಃ ದೀಪಿಕಾ ಮಗಳಿಗಾಗಿ ಕೇಕ್‌ ತಯಾರಿಸಿದ್ದರು. ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ದೀಪಿಕಾ ತಮ್ಮ ತಾಯ್ತನದ ಅನುಭವ ಬಿಚ್ಚಿಟ್ಟದ್ದರು. "ತಾಯಿಯಾದ ಮೇಲೆ ನನ್ನ ತಾಳ್ಮೆಯ ಮಟ್ಟ ಹೆಚ್ಚಾಗಿದೆ. ನಾನು ಮೊದಲಿನಿಂದಲೂ ತಾಯಿಯಾಗಬೇಕೆಂದು ಬಯಸಿದ್ದೆ. ಈಗ ನಾನು ನನ್ನ ಅತ್ಯುತ್ತಮ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ" ಎಂದು ಅವರು ಹೇಳಿದ್ದರು.

ನೆಟ್ಟಿಗರಿಂದ ಮೆಚ್ಚುಗೆ

ದುವಾ ಹೇಗಿದ್ದಾಳೆ ಎನ್ನುವುದು ಹಲವು ಅಭಿಮಾನಿಗಳ ಪ್ರಶ್ನೆಯಾಗಿತ್ತು. ಆಕೆಯ ಫೋಟೊ ತೋರಿಸುವಂತೆ ಅಭಿಮಾನಿಗಳು ದುಂಬಾಲು ಬಿದ್ದಿದ್ದರು. ಕೊನೆಗೂ ಅವರ ಬಹುದಿನಗಳ ಆಸೆ ಈಡೇರಿದೆ. ದುವಾ ಫೋಟೊ ನೋಡಿ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಬಹುತೇಕರು ಹಾರ್ಟ್‌ ಇಮೋಜಿ ಮೂಲಕ ಪ್ರತಿಕ್ರಿಯಿಸಿದ್ದಾರೆ. ಹಲವು ಸೆಲೆಬ್ರಿಟಿಗಳೂ ಕಮೆಂಟ್‌ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಸದ್ಯ ದೀಪಿಕಾ ಕೆಲವು ದಿನಗಳ ಬಿಡುವಿನ ಬಳಿಕ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅಟ್ಲಿ-ಅಲ್ಲು ಅರ್ಜುನ್‌ ಕಾಂಬಿನೇಷನ್‌ನ ಮುಂದಿನ ತೆಲುಗು ಚಿತ್ರದಲ್ಲಿ ಮತ್ತು ಶಾರುಖ್‌ ಖಾನ್‌ ಅವರ ʼಕಿಂಗ್‌ʼ ಬಾಲಿವುಡ್‌ ಸಿನಿಮಾದಲ್ಲಿ ದೀಪಿಕಾ ಅಭಿನಯಿಸುತ್ತಿದ್ದಾರೆ.