ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hansika Motwani: ಹನ್ಸಿಕಾ ಮೋಟ್ವಾನಿ ದಾಂಪತ್ಯ ಜೀವನ ಅಂತ್ಯ? ʼಬಿಂದಾಸ್‌ʼ ನಟಿಯ ಪತಿ ಕೊಟ್ರು ಸ್ಪಷ್ಟನೆ

Sohael Khaturiya: ಗೆಳತಿಯ ಪತಿಯನ್ನೇ ಮದುವೆಯಾಗಿದ್ದ ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ದಾಂಪತ್ಯ ಜೀವನ ಅಂತ್ಯವಾಯ್ತೆ? ಸದ್ಯ ಇಂತಹದ್ದೊಂದು ಪ್ರಶ್ನೆ ಹರಿದಾಡುತ್ತಿದೆ. ಹನ್ಸಿಕಾ ಮತ್ತು ಅವರ ಪತಿ ಸೊಹೇಲ್‌ ಖತುರಿಯಾ ಕೆಲವು ಸಮಯಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನುವ ವದಂತಿಯೂ ಜೋರಾಗಿ ಕೇಳಿಬರುತ್ತಿದೆ.

ಹನ್ಸಿಕಾ ಮೋಟ್ವಾನಿ ಮತ್ತು ಸೊಹೇಲ್‌ ಖತುರಿಯಾ.

ಮುಂಬೈ: ಬಹುಭಾಷಾ ನಟಿ, ಪುನೀತ್‌ ರಾಜ್‌ಕುಮಾರ್‌ ಜತೆ ಕನ್ನಡದ ʼಬಿಂದಾಸ್‌ʼ ಚಿತ್ರದಲ್ಲಿ ಅಭಿನಯಿಸಿದ್ದ ಹನ್ಸಿಕಾ ಮೋಟ್ವಾನಿ (Hansika Motwani) ಅವರ ದಾಂಪತ್ಯ ಜೀವನ ಅಂತ್ಯವಾಗಿದ ಎನ್ನುವ ಸುದ್ದಿ ಜೋರಾಗಿ ಕೇಳಿ ಬಂದಿದೆ. 2022ರ ಡಿಸೆಂಬರ್‌ನಲ್ಲಿ ಸೊಹೇಲ್‌ ಖತುರಿಯಾ (Sohael Khaturiya) ಜತೆ ಸಪ್ತಪದಿ ತಿಳಿದಿದ್ದ ಅವರು ಎರಡೂವರೆ ವರ್ಷಕ್ಕೇ ತಮ್ಮ ವೈವಾಹಿಕ ಜೀವನ ಅಂತ್ಯಗೊಳಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದೀಗ ಈ ವದಂತಿಗೆ ಸ್ವತಃ ಸೊಹೇಲ್‌ ಖತುರಿಯಾ ಪ್ರತಿಕ್ರಿಯೆ ನೀಡಿದ್ದಾರೆ.

2022ರ ಡಿಸೆಂಬರ್‌ನಲ್ಲಿ ಹನ್ಸಿಕಾ ಮತ್ತು ಸೊಹೇಲ್‌ ಜೈಪುರದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಇದೀಗ ಪತಿ-ಪತ್ನಿ ಮಧ್ಯೆ ಎಲ್ಲವೂ ಸರಿಯಿಲ್ಲ ಎನ್ನುವ ಉಸುಗುಸು ಆರಂಭವಾಗಿದೆ. ಮೊದಲೆಲ್ಲ ದಂಪತಿ ಸೋಶಿಯಲ್‌ ಮೀಡಿಯಾದಲ್ಲಿ ತಾವು ಜತೆಗಿರುವ ಫೋಟೊ, ವಿಡಿಯೋ ಪೋಸ್ಟ್‌ ಮಾಡುತ್ತ ಸಖತ್‌ ಆ್ಯಕ್ಟಿವ್‌ ಆಗಿದ್ದರು. ಆದರೆ ಇತ್ತೀಚೆಗೆ ಇವರು ಯಾವುದೇ ಫೋಟೊ ಹಂಚಿಕೊಂಡಿಲ್ಲ. ಅಲ್ಲದೆ ವಿವಾಹ ವಾರ್ಷಿಕೋತ್ಸವದಂದು ಹನ್ಸಿಕಾ ಯಾವುದೇ ಪೋಸ್ಟ್‌ ಶೇರ್‌ ಮಾಡಿಕೊಂಡಿರಲಿಲ್ಲ. ಇದರಿಂದ ಅನುಮಾನ ಮತ್ತಷ್ಟು ದಟ್ಟವಾಗಿದೆ.

ಈ ಸುದ್ದಿಯನ್ನೂ ಓದಿ: Sangeeta Bijlani: ನಟ ಸಲ್ಮಾನ್ ಖಾನ್ ಮಾಜಿ ಗೆಳತಿ ಸಂಗೀತಾ ಬಿಜಲಾನಿ ತೋಟದ ಮನೆಯಲ್ಲಿ ಕಳ್ಳತನ

ಸೊಹೇಲ್‌ ಖತುರಿಯಾ ಹೇಳಿದ್ದೇನು?

ಇದೀಗ ಈ ವದಂತಿಯನ್ನು ಸೊಹೇಲ್‌ ಖತುರಿಯಾ ನಿರಾಕರಿಸಿದ್ದು, ʼʼಇದು ಸುಳ್ಳುʼʼ ಎಂದು ಪ್ರತಿಕ್ರಿಯಿಸಿದ್ದಾರೆ. ಆ ಮೂಲಕ ವದಂತಿಗೆ ಫುಲ್‌ಸ್ಟಾಪ್‌ ಇಡಲು ಮುಂದಾಗಿದ್ದಾರೆ. ಆದರೆ ಈ ಬಗ್ಗೆ ಅವರು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಜತೆಗೆ ಕೆಲವು ದಿನಗಳಿಂದ ತಾವು ಮತ್ತು ಹನ್ಸಿಕಾ ಪ್ರತ್ಯೇಕವಾಗಿ ವಾಸಿಸುತ್ತಿರುವ ಬಗ್ಗೆ ಸ್ಪಷ್ಟನೆ ನೀಡದಿರುವುದು ಅನುಮಾನವನ್ನು ಇನ್ನಷ್ಟು ಹೆಚ್ಚಿಸಿದೆ.

ಅನುಮಾನ ಮೂಡಿದ್ದೇಕೆ?

ಕೆಲವು ಸಮಯಗಳಿಂದ ಹನ್ಸಿಕಾ ತಾಯಿಯ ಜತೆ ಪ್ರತ್ಯೇಕ ಮನೆಯಲ್ಲಿದ್ದರೆ ಸೊಹೇಲ್‌ ತಮ್ಮ ಪಾಲಕರೊಂದಿಗೆ ವಾಸವಾಗಿದ್ದಾರೆ ಎಂದು ಹಿಂದೂಸ್ಥಾನ್‌ ಟೈಮ್ಸ್‌ ವರದಿ ಮಾಡಿದೆ. ʼʼ2022ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹನ್ಸಿಕಾ ಸೊಹೇಲ್‌ ಜತೆ ಅವರ ಮನೆಯಲ್ಲಿದ್ದರು. ಆದರೆ ಬಳಿಕ ಸೊಹೇಲ್‌ ಕುಟುಂಬದೊಂದಿಗೆ ಹೊಂದಾಣಿಕೆ ಕಷ್ಟವಾಯ್ತು. ಹೀಗಾಗಿ ಹನ್ಸಿಕಾ ತಮ್ಮ ತಾಯಿಯೊಂದಿಗೆ ಅದೇ ಕಟ್ಟಡದಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದಾರೆʼʼ ಎಂದು ಹೇಳಿದೆ. ಈ ಬಗ್ಗೆ ಹನ್ಸಿಕಾ ಇನ್ನೂ ಪ್ರತಿಕ್ರಿಯಿಸಿಲ್ಲ.

ಗೆಳತಿಯ ಪತಿಯನ್ನೇ ಮದುವೆಯಾಗಿದ್ದ ಹನ್ಸಿಕಾ!

ವಿಶೇಷ ಎಂದರೆ ಸೊಹೇಲ್‌ ಆರಂಭದಲ್ಲಿ ಹನ್ಸಿಕಾ ಅವರ ಆಪ್ತ ಗೆಳತಿ ರಿಂಕಿ ಬಜಾಜ್‌ ಎಂಬವರನ್ನು ಮದುವೆಯಾಗಿದ್ದರು. ಅದಾದ ಬಳಿಕ ಹನ್ಸಿಕಾ ಜತೆ ಪ್ರೀತಿಯಲ್ಲಿ ಬಿದ್ದ ಸೊಹೇಲ್‌ ರಿಂಕಿ ಬಜಾಜ್‌ಗೆ ವಿಚ್ಚೇಧನ ನೀಡಿದ್ದರು. ನಂತರ ಹನ್ಸಿಕಾ ಕೈ ಹಿಡಿದಿದ್ದರು. ಈ ನಾಟಕೀಯ ಮದುವೆ ಭಾರಿ ಸುದ್ದಿಯಾಗಿತ್ತು. ಇದೀಗ ಈ ವಿವಾಹವೂ ಮುರಿದು ಬಿದ್ದಿದೆ ಎನ್ನಲಾಗುತ್ತಿದೆ.

ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಹನ್ಸಿಕಾ ಬಹುಭಾಷಾ ಕಲಾವಿದೆಯಾಗಿ ಗುರುತಿಸಿಕೊಂಡರು. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸಿದರು. 2008ರಲ್ಲಿ ತೆರೆಕಂಡ ʼಬಿಂದಾಸ್‌ʼ ಸಿನಿಮಾದಲ್ಲಿ ಪುನೀತ್‌ ರಾಜ್‌ಕುಮಾರ್‌ ಜತೆ ನಟಿಸುವ ಮೂಲಕ ಸ್ಯಾಂಲ್‌ವುಡ್‌ ಪ್ರೇಕ್ಷಕರಿಗೆ ಪರಿಚಿತರಾದರು. ಸದ್ಯ ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.