ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hrithik Roshan: ಮತ್ತೆ ಒಟ್ಟಿಗೆ ಕಾಣಿಸಿಕೊಂಡ ನಟ ಹೃತಿಕ್ ರೋಷನ್-ನಟಿ ಸಬಾ ಅಜಾದ್

ಸಾಮಾಜಿಕ ಮಾಧ್ಯಮದಲ್ಲಿ ಬಹಳ ಆ್ಯಕ್ಟಿವ್ ಆಗಿರುವ ನಟಿ ಸಬ್ ಆಜಾದ್ ತಮ್ಮ ವೈಯಕ್ತಿಕ ಫೋಟೊಗಳನ್ನು ಆಗಾಗ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈ ಬಾರಿ ವಿಂಟರ್ ವೆಕೇಶನ್‌ನಲ್ಲಿ ನಟ ಹೃತಿಕ್ ರೋಷನ್ ಅವರೊಂದಿಗೆ ಅದ್ಭುತ ಕ್ಷಣಗಳನ್ನು ಕಳೆದಿದ್ದಾರೆ. ಈ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಮುದ್ದಾದ ಜೋಡಿಗಳ ಫೋಟೊ ವೈರಲ್ ಆಗಿದ್ದು ಅಭಿಮಾನಿಗಳ ಗಮನ ಸೆಳೆಯುವಂತೆ ಮಾಡಿದೆ.

Hrithik Roshan

ಮುಂಬೈ: ನಟ ಹೃತಿಕ್ ರೋಷನ್ (Hrithik Roshan) ಮತ್ತು ನಟಿ ಸಬಾ ಅಜಾದ್ (Saba Azad) ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಸಿನಿಮಾ, ಜಾಹೀರಾತಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಕಾಲಕ್ರಮೇಣ ಸಾರ್ವಜನಿಕ ಸ್ಥಳದಲ್ಲಿ, ಸಿನಿಮಾ ಇವೆಂಟ್ ಹಾಗೂ ಏರ್‌ಪೋರ್ಟ್‌ನಲ್ಲಿಯೂ ಜತೆಯಾಗಿ ಕಾಣಿಸಿಕೊಳ್ಳುವ ಮೂಲಕ ದೊಡ್ಡ ಮಟ್ಟಿಗೆ ಸುದ್ದಿಯಾಗುತ್ತಿದೆ. ಸುಸೇನ್ ಖಾನ್ ​ಅವರೊಂದಿಗೆ 2014ರಲ್ಲಿ ವಿಚ್ಛೇದನ ಪಡೆದುಕೊಂಡಿರುವ ಹೃತಿಕ್ ಈಗ ಸಬಾ ಆಜಾದ್ ಜತೆ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನುವ ವಿಚಾರ ಅನೇಕ ವರ್ಷದಿಂದಲೂ ಹರಿದಾಡುತ್ತಿದೆ‌. ಸಬಾ ಆಜಾದ್ ಇದೀಗ ಹೃತಿಕ್ ಜತೆಗಿರುವ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ವಿಶೇಷ ಕ್ಯಾಪ್ಶನ್ ಕೂಡ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಬಹಳ ಆ್ಯಕ್ಟಿವ್ ಆಗಿರುವ ನಟಿ ಸಬಾ ಆಜಾದ್ ತಮ್ಮ ವೈಯಕ್ತಿಕ ಫೋಟೊಗಳನ್ನು ಆಗಾಗ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈ ಬಾರಿ ವಿಂಟರ್ ವೆಕೇಶನ್‌ ಅನ್ನು ನಟ ಹೃತಿಕ್ ರೋಷನ್ ಅವರೊಂದಿಗಿನ ಕಳೆದಿದ್ದು, ಅದ್ಭುತ ಕ್ಷಣಗಳ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಮುದ್ದಾದ ಜೋಡಿ ಫೋಟೊ ವೈರಲ್ ಆಗಿದ್ದು, ಅಭಿಮಾನಿಗಳ ಗಮನ ಸೆಳೆಯುವಂತೆ ಮಾಡಿದೆ.



ಸಬಾ ಆಜಾದ್ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹೃತಿಕ್ ರೋಷನ್ ಜತೆಗಿನ ಫೋಟೊ ಹಂಚಿಕೊಂಡಿದ್ದಾರೆ. "ಚಳಿಗಾಲದ ನಡಿಗೆಗಿಂತ ಉತ್ತಮವಾದದ್ದೇನೂ ಇಲ್ಲ" ಎಂದು ಕ್ಯಾಪ್ಶನ್ ಕೂಡ ಬರೆದಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ನಾನಾ ತರನಾಗಿ ಕಮೆಂಟ್ ಮಾಡಿದ್ದಾರೆ. ಈ ಜೋಡಿ ತುಂಬ ಕ್ಯೂಟ್ ಆಗಿದೆ. ಶೀಘ್ರವೇ ವಿವಾಹವಾಗಿ ಎಂದು ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮೇಡ್ ಫಾರ್ ಈಚ್ ಅದರ್ ಒಳ್ಳೆ ಜೋಡಿ, ಆದಷ್ಟು ಬೇಗ ಗುಡ್ ನ್ಯೂಸ್ ಕೊಡಿ ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನು ಓದಿ:Dies Irae Movie: ʼಹೃದಯಂʼ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ಪ್ರಣವ್ ಮೋಹನ್‌ಲಾಲ್ ನಟನೆಯ ʼಡೀಯಸ್ ಈರೇʼ ಚಿತ್ರದ ಟ್ರೈಲರ್‌ ಔಟ್‌

ನಟ ಹೃತಿಕ್ ಕೂಡ ಸಬಾ ಮತ್ತು ಚಲನಚಿತ್ರ ನಿರ್ಮಾಪಕ ಡ್ಯಾನಿಶ್ ರೆಂಜು ಅವರೊಂದಿಗಿನ ಫೋಟೊವನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಅವರು "ಹ್ಯಾಪಿ ಹಾಲಿ ಡೇ.. ಈ ಇಬ್ಬರು ಪ್ರತಿಭಾನ್ವಿತರೊಂದಿಗೆ ನಾನು ಇದ್ದಿದ್ದು ಖುಷಿ ಇದೆ. ನೀವು ಇನ್ನೂ 'ಸಾಂಗ್ಸ್ ಆಫ್ ಪ್ಯಾರಡೈಸ್' ಅನ್ನು ನೋಡಿಲ್ಲದಿದ್ದರೆ, ಈಗಲೇ ವೀಕ್ಷಿಸಿʼʼ ಎಂದು ಬರೆದಿದ್ದಾರೆ.

ಡ್ಯಾನಿಶ್ ರೆಂಜು ನಿರ್ದೇಶನದ ʼಸಾಂಗ್ಸ್ ಆಫ್ ಪ್ಯಾರಡೈಸ್ʼ ಚಿತ್ರದಲ್ಲಿ ಸಬಾ ಆಜಾದ್ ಕೂಡ ನಟಿಸಿದ್ದಾರೆ. ಚಿತ್ರದಲ್ಲಿ ಸಬಾ ಪ್ರಸಿದ್ಧ ಕಾಶ್ಮೀರಿ ಗಾಯಕ ರಾಜ್ ಬೇಗಂ ಅವರಿಂದ ಸ್ಫೂರ್ತಿ ಪಡೆದ ಝೀಬಾ ಅಖ್ತರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಎಕ್ಸೆಲ್ ಎಂಟರ್‌ಟೈನ್‌ಮೆಂಟ್, ಆ್ಯಪಲ್ ಟ್ರೀ ಪಿಕ್ಚರ್ಸ್ ಮತ್ತು ರೆಂಜು ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಿಸಿದೆ. ಹೃತಿಕ್ ಕೊನೆಯ ಬಾರಿಗೆ ಕಿಯಾರಾ ಅಡ್ವಾಣಿ ಮತ್ತು ಜೂ. ಎನ್‌ಟಿಆರ್ ಅವರೊಂದಿಗೆ ʼವಾರ್ 2ʼ ಚಿತ್ರದಲ್ಲಿ ನಟಿಸಿದ್ದರು. ಆದರೆ ಆ ಸಿನಿಮಾ ಅಷ್ಟಾಗಿ ಯಶಸ್ಸು ಪಡೆಯಲಿಲ್ಲ. ಇದೀಗ ಸಾಂಗ್ಸ್ ಆಫ್ ಪ್ಯಾರಡೈಸ್ ಸಿನಿಮಾ ರಿಲೀಸ್‌ಗೂ ಮೊದಲೇ ಭರವಸೆ ಹುಟ್ಟಿಸಿದೆ.