Hrithik Roshan: ಶ್ರೀಲಂಕಾದಲ್ಲಿ ಸಖತ್ ಸ್ಟೆಪ್ ಹಾಕಿದ ಹೃತಿಕ್ ರೋಷನ್! ವಿಡಿಯೊ ನೋಡಿ
ಬಾಲಿವುಡ್ ಸೂಪರ್‌ಸ್ಟಾರ್ ಹೃತಿಕ್ ರೋಷನ್ ಶ್ರೀಲಂಕಾದಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ತನ್ನ ಅದ್ಭುತ ನೃತ್ಯದ ಮೂಲಕ ಅಭಿಮಾನಿಗಳನ್ನು ಮಂತ್ರ ಮುಗ್ಧಗೊಳಿಸಿದ್ದಾರೆ. ಇತ್ತೀಚೆಗೆ ಕೊಲಂಬೊದಲ್ಲಿ ಹೊಸದಾಗಿ ಆರಂಭಿಸಲಾದ 'ಸಿಟಿ ಆಫ್ ಡ್ರೀಮ್ಸ್' ಎಂಬ ರೆಸಾರ್ಟ್‌ನ ಉದ್ಘಾಟನಾ ಸಮಾರಂಭದಲ್ಲಿ ಹೃತಿಕ್ ರೋಷನ್ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸಾವಿರಾರು ಅಭಿ ಮಾನಿಗಳು ಮತ್ತು ಗಣ್ಯರು ಸೇರಿದ್ದರು. ಅದರಲ್ಲೂ ವಿಶೇಷವಾಗಿ, 'ವಾರ್ 2' ಚಿತ್ರದ ಹೊಸ ಹಾಡು 'ಆವನ್ ಜಾವನ್' ಗೆ ಹೃತಿಕ್ ನೃತ್ಯ ಪ್ರದರ್ಶನ ನೀಡಿದ್ದು, ಇಡೀ ಸಮಾರಂಭದ ಹೈಲೈಟ್ ಇದಾಗಿತ್ತು.


ನವದೆಹಲಿ: ನಟ ಹೃತಿಕ್ ರೋಷನ್ (Hrithik Roshan) ಅವರು ಬಾಲಿವುಡ್‌ನ ಪ್ರಮುಖ ನಟರಲ್ಲಿ ಒಬ್ಬರು. ಕಹೋ ನಾ ಪ್ಯಾರ್ ಹೈ, ಕೋಯಿ ಮಿಲ್ ಗಯಾ, ಕ್ರಿಶ್ ಸರಣಿ, ಧೂಮ್ 2, ಜೋಧಾ ಅಕ್ಬರ್, ಜಿಂದಗಿ ನಾ ಮಿಲೇಗಿ ದೋಬಾರಾ, ಇತ್ಯಾದಿ ಅನೇಕ ಹಿಟ್ ಚಲನ ಚಿತ್ರಗಳಲ್ಲಿ ನಟಿಸಿ ಫೇಮ್ ಗಿಟ್ಟಿಸಿ ಕೊಂಡಿರುವ ಇವರು ಸದ್ಯ ವಾರ್ 2 ನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಜೂನಿ ಯರ್ ಎನ್ಟಿಆರ್, ಕಿಯಾರಾ ಅಡ್ವಾಣಿ ಮುಂತಾದವರು ನಟಿಸಿದ್ದು ಹೈ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಆಗಲಿದೆ. ಈಗಾಗಲೇ 'ವಾರ್ 2' ಚಿತ್ರದ ಮೊದಲ ಹಾಡು 'ಆವಾನ್ ಜಾವಾನ್' ಇತ್ತೀಚೆಗೆ ಬಿಡುಗಡೆಯಾಗಿ ಸಿನಿಪ್ರಿಯರಿಂದ ಮೆಚ್ಚುಗೆ ಗಳಿಸುತ್ತಿದೆ. ಈ ನಡುವೆ ಹೃತಿಕ್ ರೋಷನ್ ಶ್ರೀಲಂಕಾದಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ವಾರ್ 2 ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಬಾಲಿವುಡ್ ಸೂಪರ್‌ಸ್ಟಾರ್ ಹೃತಿಕ್ ರೋಷನ್ ಶ್ರೀಲಂಕಾದಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ತನ್ನ ಅದ್ಭುತ ನೃತ್ಯದ ಮೂಲಕ ಅಭಿಮಾನಿಗಳನ್ನು ಮಂತ್ರ ಮುಗ್ಧಗೊಳಿಸಿದ್ದಾರೆ. ಇತ್ತೀಚೆಗೆ ಕೊಲಂಬೊ ದಲ್ಲಿ ಹೊಸದಾಗಿ ಆರಂಭಿಸಲಾದ 'ಸಿಟಿ ಆಫ್ ಡ್ರೀಮ್ಸ್' ಎಂಬ ರೆಸಾರ್ಟ್‌ನ ಉದ್ಘಾಟನಾ ಸಮಾರಂಭದಲ್ಲಿ ಹೃತಿಕ್ ರೋಷನ್ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಮತ್ತು ಗಣ್ಯರು ಸೇರಿದ್ದರು. ಅದರಲ್ಲೂ ವಿಶೇಷ ವಾಗಿ, 'ವಾರ್ 2' ಚಿತ್ರದ ಹೊಸ ಹಾಡು 'ಆವನ್ ಜಾವನ್' ಗೆ ಹೃತಿಕ್ ನೃತ್ಯ ಪ್ರದರ್ಶನ ನೀಡಿದ್ದು ಇಡೀ ಸಮಾರಂಭದ ಹೈಲೈಟ್ ಇದಾಗಿತ್ತು.
ವೈರಲ್ ಆದ ವಿಡಿಯೊದಲ್ಲಿ ಹೃತಿಕ್ ರೋಷನ್ ಅತ್ಯಂತ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಆಕರ್ಷಕ ನೃತ್ಯ ನೋಡಿ ಅಲ್ಲಿದ್ದ ಪ್ರೇಕ್ಷಕರು ಹರ್ಷೋದ್ಗಾರ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು ಅನೇಕರು ಲವ್ ಎಮೋಜಿಗಳನ್ನು ಹಾಕಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಕಿಯಾರಾ ಅಡ್ವಾಣಿ ಅವರ ಹುಟ್ಟುಹಬ್ಬದಂದು ಬಿಡುಗಡೆ ಯಾದ 'ಆವಾನ್ ಜಾವಾನ್' ಹಾಡು, ಅರಿಜಿತ್ ಸಿಂಗ್ ಮತ್ತು ನಿಖಿತಾ ಗಾಂಧಿ ಹಾಡಿದ್ದಾರೆ. ಈ ಹಾಡಿಗೆ ಪ್ರೀತಮ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಡಿನಲ್ಲಿ ಹೃತಿಕ್ ಮತ್ತು ಕಿಯಾರಾ ಇಬ್ಬರೂ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷವಾಗಿ, ಹಾಡಿನ ಚಿತ್ರೀಕರಣ ಇಟಲಿಯ ಟಸ್ಕನಿ ಮತ್ತು ರೋಮ್‌ನಲ್ಲಿ ನಡೆದಿದ್ದು, ಈ ಸ್ಥಳಗಳ ಸುಂದರ ದೃಶ್ಯಗಳು ಹಾಡಿಗೆ ಮತ್ತಷ್ಟು ಮೆರುಗು ನೀಡಿದೆ
ಇದನ್ನು ಓದಿ:Su From So Movie: ಭಾಷೆ, ರಾಜ್ಯ, ದೇಶ ಗಡಿ ದಾಟುತ್ತಿದ್ದಾಳೆ ಸುಲೋಚನಾ; ವಿದೇಶದಲ್ಲಿ ʼಸು ಫ್ರಮ್ ಸೋʼ ರಿಲೀಸ್
ವಾರ್ 2’ ಸಿನಿಮಾವನ್ನು ಅಯಾನ್ ಮುಖರ್ಜಿ ನಿರ್ದೇಶನ ಮಾಡಿದ್ದಾರೆ. ಯಶ್ ರಾಜ್ ಫಿಲಮ್ಸ್ನ ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದು ಸಿನಿಮಾಕ್ಕೆ ಪ್ರೀತಂ ಸಂಗೀತ ನೀಡಿದ್ದಾರೆ. ಸಿನಿಮಾ ಆಗಸ್ಟ್ 14 ರಂದು ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.ಇತ್ತೀಚೆಗಷ್ಟೇ ‘ವಾರ್ 2’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು ಟ್ರೇಲರ್ನಲ್ಲಿ ಭರ್ಜರಿ ಆ್ಯಕ್ಷನ್ ದೃಶ್ಯಗಳನ್ನು ನೋಡಿ ಸಿನಿಪ್ರಿಯರು ಎಕ್ಸೈಟ್ ಆಗಿದ್ದಾರೆ.