ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರೇಣುಕಾಸ್ವಾಮಿ ಕೊಲೆ ಕೇಸ್‌; ಮಾಫಿ ಸಾಕ್ಷಿ ಸಂಬಂಧ ನಟ ದರ್ಶನ್‌ ಸಲ್ಲಿಸಿದ್ದ ಎರಡು ಅರ್ಜಿಗಳು ವಜಾ

ಮಾಫಿ ಸಾಕ್ಷಿ ದಾಖಲು ವೇಳೆ ಮೊದಲ ದಿನ ಒಂದು ವಿಚಾರ ಹೇಳಲು ಮರೆತಿದ್ದೆ ಎಂದು ಪ್ರದೋಷ್ ಎರಡನೇ ದಿನ ಹೇಳಿಕೆ ನೀಡಿದ್ದರು. ಇಂತಹ ಹೇಳಿಕೆಯನ್ನು ಮಾಫಿ ಸಾಕ್ಷಿಯಲ್ಲಿ ದಾಖಲು ಮಾಡಿಕೊಳ್ಳಬಾರದು ಎಂದು ದರ್ಶನ್‌ ಪರ ವಕೀಲರು ಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ ಅವರ ಮನವಿಯನ್ನು ಕೋರ್ಟ್‌ ತಿರಸ್ಕರಿಸಿದೆ.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಷ್ (Pradosh) ಮಾಫಿ ಸಾಕ್ಷಿ ಸಂಬಂಧ ದರ್ಶನ್ ಸಲ್ಲಿಸಿದ್ದ ಎರಡು ಅರ್ಜಿಗಳನ್ನ ಸೆಷನ್ಸ್ ಕೋರ್ಟ್ ವಜಾ ಮಾಡಿದೆ. ಜೈಲಿಂದ ಪ್ರದೋಷ್ ಕರೆತರುವಾಗ ಯಾರೊಂದಿಗೂ ಮಾತನಾಡಲು ಅವಕಾಶ ನೀಡಬಾರದು ಎಂದು ಸಿಆರ್‌ಪಿಸಿ ಸೆಕ್ಷನ್ 267 ಮತ್ತು ಬಿಎನ್‌ಎಸ್‌ಎಸ್ ಸೆಕ್ಷನ್ 302ರ ಅಡಿಯಲ್ಲಿ ಸಲ್ಲಿಸಿದ್ದ ಒಂದು ಅರ್ಜಿ, ಎವಿಡೆನ್ಸ್ ಆ್ಯಕ್ಟ್ ಸೆಕ್ಷನ್ 137 ಮತ್ತು 138 ಅಡಿಯಲ್ಲಿ ಸಲ್ಲಿಸಿದ್ದ ಮತ್ತೊಂದು ಅರ್ಜಿ ವಜಾಗೊಂಡಿದೆ.

ಮಾಫಿ ಸಾಕ್ಷಿ ದಾಖಲು ವೇಳೆ ಮೊದಲ ದಿನ ಒಂದು ವಿಚಾರ ಹೇಳಲು ಮರೆತಿದ್ದೆ ಎಂದು ಪ್ರದೋಷ್ ಎರಡನೇ ದಿನ ಹೇಳಿಕೆ ನೀಡಿದ್ದರು. ಇಂತಹ ಹೇಳಿಕೆಯನ್ನು ಮಾಫಿ ಸಾಕ್ಷಿಯಲ್ಲಿ ದಾಖಲು ಮಾಡಿಕೊಳ್ಳಬಾರದು. ಹೇಳಿಕೆ ಪ್ರಕ್ರಿಯೆಯಿಂದ ಆ ಅಂಶವನ್ನು ಡಿಲೀಟ್ ಮಾಡುವಂತೆ ದರ್ಶನ್ ಪರ ವಕೀಲರು ಮನವಿ ಸಲ್ಲಿಸಿದ್ದರು. ಆದರೆ, ವಾದ-ಪ್ರತಿವಾದ ಆಲಿಸಿ ದರ್ಶನ್ ಸಲ್ಲಿಸಿದ್ದ ಎರಡು ಅರ್ಜಿಗಳನ್ನು 59ನೇ ಸಿಸಿಹೆಚ್ ನ್ಯಾಯಾಲಯ ವಜಾ ಮಾಡಿದೆ.

ಇನ್ನು ಪ್ರದೋಷ್ ಡಾಕ್ಯುಮೆಂಟ್ ಮಾರ್ಕಿಂಗ್ ಪ್ರಕ್ರಿಯೆ ನಾಳೆ ಕೂಡ ಮುಂದುವರಿಯಲಿದೆ. ಪ್ರದೋಷ್ ಕುಟುಂಬಸ್ಥರ ಭೇಟಿಗೆ ಅವಕಾಶ ಕಲ್ಪಿಸದ ಜೈಲಾಧಿಕಾರಿಗಳ ಕ್ರಮದ ವಿರುದ್ಧ ಪ್ರದೋಷ್ ಸಲ್ಲಿಸಿದ್ದ ಅರ್ಜಿ ಸಂಬಂಧ ಜೈಲು ಅಧಿಕಾರಿಗಳಿಂದ ವರದಿ ಸಲ್ಲಿಕೆಗೆ ಕೋರ್ಟ್ ಸೂಚನೆ ನೀಡಿದ್ದು, ನಾಳೆಗೆ ಆದೇಶ ಪ್ರಕಟಿಸಲಿದೆ.

ʻರೆಬೆಲ್‌ ಸ್ಟಾರ್‌ʼ ಅಂಬರೀಶ್‌ಗೆ ‘ಕರ್ನಾಟಕ ರತ್ನ’ ನೀಡುವಂತೆ ಸರ್ಕಾರಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಪತ್ರ; ಕನ್ನಡ ರಾಜ್ಯೋತ್ಸವಕ್ಕೆ ಘೋಷಿಸಲು ಆಗ್ರಹ

ಪವಿತ್ರಗೌಡ ಬ್ಯಾರಕ್ ಬದಲಾವಣೆ ಸಂಬಂಧ ಆಕೆಯ ಆರೋಗ್ಯ ವರದಿಯನ್ನ ಇ-ಮೇಲ್ ಮೂಲಕ ಜೈಲಾಧಿಕಾರಿಗಳು ಸಲ್ಲಿಕೆ ಮಾಡಿದ್ದು, ನಾಳೆ ಈ ಆದೇಶವನ್ನ ಸಹ ನ್ಯಾಯಾಧೀಶರು ಪ್ರಕಟಿಸಲಿದ್ದಾರೆ.