JSK Movie: ಒಟಿಟಿಗೆ ಎಂಟ್ರಿ ಕೊಡಲು ಸಜ್ಜಾದ ‘ಜಾನಕಿ vs ಸ್ಟೇಟ್ ಆಫ್ ಕೇರಳ’; ಎಲ್ಲಿ, ಯಾವಾಗ ಸ್ಟ್ರೀಮಿಂಗ್?
Suresh Gopi: ಮಲಯಾಳಂ ನಟ ಹಾಗೂ ಕೇಂದ್ರ ಸಚಿವ ಸುರೇಶ್ ಗೋಪಿ ಮತ್ತು ಅನುಪಮಾ ಪರಮೇಶ್ವರನ್ ನಟನೆಯ ಕೋರ್ಟ್ ಡ್ರಾಮಾ ‘ಜಾನಕಿ vs ಸ್ಟೇಟ್ ಆಫ್ ಕೇರಳ’ ಚಿತ್ರ ಒಟಿಟಿ ಕೊಡಲು ಸಜ್ಜಾಗಿದೆ. ಸ್ವಾತಂತ್ರ್ಯ ದಿನಂದು (ಆಗಸ್ಟ್ 15) ಈ ಚಿತ್ರ zee5ನಲ್ಲಿ ಸ್ಟ್ರೀಮಿಂಗ್ ಆಗಲಿದೆ.


ತಿರುವನಂತಪುರಂ: ಮಲಯಾಳಂ ನಟ ಹಾಗೂ ಕೇಂದ್ರ ಸಚಿವ ಸುರೇಶ್ ಗೋಪಿ (Suresh Gopi) ಮತ್ತು ಅನುಪಮಾ ಪರಮೇಶ್ವರನ್ (Anupama Parameswaran) ನಟನೆಯ ‘ಜಾನಕಿ vs ಸ್ಟೇಟ್ ಆಫ್ ಕೇರಳ’ (J.S.K – Janaki V v/s State of Kerala) ಚಿತ್ರ ಒಟಿಟಿ ಎಂಟ್ರಿಗೆ ವೇದಿಕೆ ಸಜ್ಜಾಗಿದೆ. ಸ್ವಾತಂತ್ರ್ಯ ದಿನಂದು (ಆಗಸ್ಟ್ 15) ಈ ಚಿತ್ರ zee5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಪ್ರವೀಣ್ ನಾರಾಯಣನ್ ಕಥೆ ಬರೆದು ಚಿತ್ರವನ್ನು ನಿರ್ದೇಶಿಸಿದ್ದಾರೆ. ಜೆ. ಫಣೀಂದ್ರ ಕುಮಾರ್ ನಿರ್ಮಿಸಿದ್ದಾರೆ. ಸೇತುರಾಮನ್ ನಾಯರ್ ಕಂಕೋಲ್ ಸಹ-ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಟೈಟಲ್ ಕಾರಣಕ್ಕೆ ವಿವಾದ ಹುಟ್ಟುಹಾಕಿದ್ದ ಈ ಸಿನಿಮಾ ದೇಶಾದ್ಯಂತ ಸುದ್ದಿಯಾಗಿತ್ತು.
ಸುರೇಶ್ ಗೋಪಿ ವಕೀಲ ಡೇವಿಡ್ ಅಬೆಲ್ ಡೊನೊವನ್ ಪಾತ್ರದಲ್ಲಿ ಮತ್ತು ಅನುಪಮಾ ಪರಮೇಶ್ವರನ್ ಜಾನಕಿ ಪಾತ್ರದಲ್ಲಿ ನಟಿಸಿದ್ದಾರೆ. ದಿವ್ಯ ಪಿಳ್ಳೈ, ಶ್ರುತಿ ರಾಮಚಂದ್ರನ್, ಅಸ್ಕರ್ ಅಲಿ, ಮಾಧವ್ ಸುರೇಶ್ ಗೋಪಿ ಮತ್ತು ಬೈಜು ಸಂತೋಷ್ ಚಿತ್ರದಲ್ಲಿದ್ದಾರೆ. ಮಲಯಾಳಂ ಜತೆಗೆ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಚಿತ್ರ ಸ್ಟ್ರೀಮಿಂಗ್ ಆಗಲಿದೆ.
ಈ ಸುದ್ದಿಯನ್ನೂ ಓದಿ: Actor Dhanush: ಡಿವೋರ್ಸ್ ಬೆನ್ನಲ್ಲೇ ಬಹುಭಾಷಾ ನಟಿ ಜತೆ ಧನುಷ್ ಡೇಟಿಂಗ್?; ಈ ವಿಡಿಯೊದಲ್ಲಿದೆ ಸಾಕ್ಷಿ
ಕಾನೂನು ವ್ಯವಸ್ಥೆಯ ಕುರಿತಾದ ಸಿನಿಮಾ ಇದಾಗಿದ್ದು, ಜಾನಕಿ (ಅನುಪಮಾ) ಬಾಳಲ್ಲಿ ಒಂದು ಘಟನೆ ನಡೆಯುತ್ತದೆ. ಈ ವೇಳೆ ಆಕೆ ನ್ಯಾಯಕ್ಕಾಗಿ ಹೋರಾಡುತ್ತಾಳೆ. ಇದು ಚಿತ್ರದ ತಿರುಳು.
ZEE5ನ ತಮಿಳು ಮತ್ತು ಮಲಯಾಳಂ ಮಾರ್ಕೆಟಿಂಗ್ ಮುಖ್ಯಸ್ಥ ಲಾಯ್ಡ್ ಸಿ ಕ್ಸೇವಿಯರ್ ಮಾತನಾಡಿ, “ಈ ಸ್ವಾತಂತ್ರ್ಯ ದಿನದಂದು ಪ್ರೇಕ್ಷಕರಿಗೆ ʼಜಾನಕಿ V/S ಸ್ಟೇಟ್ ಆಫ್ ಕೇರಳʼ ಪ್ರಸ್ತುತಪಡಿಸಲು ನಾವು ಹೆಮ್ಮೆಪಡುತ್ತೇವೆ. ಇದೊಂದು ಕೋರ್ಟ್ ಡ್ರಾಮಾವಾಗಿದ್ದು, ಮನರಂಜನೆ ನೀಡುವುದಲ್ಲದೆ - ಚಿಂತನೆಯನ್ನು ಪ್ರಚೋದಿಸುತ್ತದೆ. ಕೇರಳದ ಈ ಕಥೆಯನ್ನು ಇನ್ನುಮುಂದೆ ಇಡೀ ರಾಷ್ಟ್ರವೇ ಮಾತನಾಡುತ್ತದೆ ಎನ್ನುವ ವಿಚಾರವೇ ರೋಮಾಂಚನಕಾರಿ. ಮಲಯಾಳಂ, ಹಿಂದಿ, ತಮಿಳು, ತೆಲುಗು ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆʼʼ ಎಂದರು.
ಸುರೇಶ್ ಗೋಪಿ ಮಾತನಾಡಿ, ʼʼಜಾನಕಿ V v/s ಸ್ಟೇಟ್ ಆಫ್ ಕೇರಳ ಚಿತ್ರಕ್ಕೆ ಚಿತ್ರಮಂದಿರಗಳಲ್ಲಿ ಸಿಕ್ಕ ಪ್ರತಿಕ್ರಿಯೆ ಉತ್ತಮವಾಗಿತ್ತು. ಪ್ರೇಕ್ಷಕರು ಈ ಕಥೆಯನ್ನು ಪ್ರೀತಿಯಿಂದ ಸ್ವೀಕರಿಸಿದ್ದಾರೆ ಎಂಬುದು ಸ್ಪಷ್ಟ. ನಮ್ಮ ಕಥೆ ಹೇಳುವಿಕೆಯ ಮೇಲೆ ಅವರು ಇಟ್ಟಿರುವ ನಂಬಿಕೆಗೆ ನಾನು ಅಭಾರಿʼʼ ಎಂದು ತಿಳಿಸಿದರು.
ನಟಿ ಅನುಪಮಾ ಪರಮೇಶ್ವರನ್, “ಜಾನಕಿ ನನ್ನ ವೃತ್ತಿ ಜೀವನದ ಅತ್ಯಂತ ಸವಾಲಿನ ಪಾತ್ರಗಳಲ್ಲಿ ಒಂದು ಎನಿಸಿಕೊಂಡಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ನಮಗೆ ದೊರೆತ ಪ್ರೀತಿ ಮತ್ತು ಬೆಂಬಲ ಅಗಾಧವಾಗಿತ್ತು. ಈಗ ದೇಶಾದ್ಯಂತ ಪ್ರೇಕ್ಷಕರು ZEE5ನಲ್ಲಿ ಚಿತ್ರವನ್ನು ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದಾರೆ. ಜಾನಕಿಯ ಧೈರ್ಯವು ನೋಡುವ ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡುತ್ತೆ ಎನ್ನುವ ವಿಶ್ವಾಸವಿದೆʼʼ ಎಂದು ಹೇಳಿದರು.