Amruthadhare Serial: ಕೊನೆಗೂ ಭೂಮಿಕಾ ಮುಂದೆ ಕಳಚಿಬಿತ್ತು ಶಕುಂತಲಾ ಮುಖವಾಡ: ರೋಚಕ ಘಟ್ಟದಲ್ಲಿ ಅಮೃತಧಾರೆ ಧಾರಾವಾಹಿ
ಭೂಮಿಕಾ, ಗೌತಮ್ ತಾಯಿ ಜೊತೆ ತನ್ನ ತವರು ಮನೆಗೆ ಹೋಗಿದ್ದಳು. ಆಕೆಗೆ ಮಾತು ಬರದ ಕಾರಣ ಕೈ ಮೂಲಕ ಚಿತ್ರ ಬಿಡಿಸಿ ನಿಜವಾದ ಕಳ್ಳಿ ಯಾರು ಎಂಬುದನ್ನು ಹೇಳಿದ್ದಾಳೆ. ಶಕುಂತಲಾ ಮಗುಗೆ ತೊಂದರೆ ಕೊಡೋಕೆ ಬರುತ್ತಿದ್ದಾಳೆ ಎಂದು ಗೌತಮ್ ತಾಯಿಯು ಭೂಮಿಕಾಗೆ ಹೇಳಿದ್ದಾಳೆ.

Amruthadare Serial

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ (Amruthadhare serial) ಕೆಲವೊಂದು ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಈ ಧಾರಾವಾಹಿಯಲ್ಲಿ ಕಥಾ ನಾಯಕ ಗೌತಮ್ ಮಲತಾಯಿ ಶಕುಂತಲ ಕೆಟ್ಟವಳು. ಆದರೆ, ಆಕೆ ಒಳ್ಳೆಯವಳು ಎಂಬ ಮುಖವಾಡ ತೊಟ್ಟಿದ್ದಾಳೆ. ಎಲ್ಲರೂ ಅದನ್ನು ನಂಬಿದ್ದಾರೆ ಕೂಡ. ಆದರೆ, ಈಗ ಹಂತ ಹಂತವಾಗಿ ಶಕುಂತಲಾಳ ನೈಜ್ಯ ಮುಖ ಬಯಲಾಗುತ್ತಿದೆ. ಮೊದಲನೆಯದಾಗಿ ಭೂಮಿಕಾಗೆ ಈ ವಿಷಯ ಗೊತ್ತಾಗಿ ಹೋಗಿದೆ. ಆಕೆ ನೇರವಾಗಿ ಶಕುಂತಲಾಗೆ ಚಾಲೆಂಜ್ ಕೂಡ ಮಾಡಿದ್ದಾಳೆ. ಈ ಮೂಲಕ ಧಾರಾವಾಹಿಗೆ ಮಹತ್ವದ ತಿರುವು ನೀಡಲಾಗಿದೆ.
ಗೌತಮ್ ಹಾಗೂ ಭೂಮಿಕಾ ದಂಪತಿಗೆ ಅವಳಿ ಮಕ್ಕಳು ಜನಿಸಿದರು. ಆದರೆ, ಒಂದು ಮಗುವನ್ನು ಆಸ್ಪತ್ರೆಯಲ್ಲಿ ಇರುವಾಗಲೇ ಶಕುಂತಲಾ ಹಾಗೂ ಆಕೆಯ ಮಗ ಜಯದೇವ್ ಕಿಡ್ನಾಪ್ ಮಾಡಿದ್ದಾರೆ. ಆ ಮಗು ಎಲ್ಲಿದೆ ಎಂಬುದು ಯಾರಿಗೂ ತಿಳಿದಿಲ್ಲ. ಈ ವಿಚಾರವನ್ನು ಭೂಮಿಕಾಳಿಂದ ಗೌತಮ್ ಮುಚ್ಚಿಟ್ಟಿದ್ದಾನೆ. ತನಗೆ ಜನಿಸಿದ್ದು ಒಂದೇ ಮಗು ಎಂದು ಭೂಮಿಕಾ ಬಳಿ ಹೇಳಿದ್ದಾನೆ. ಸದ್ಯ ಉಳಿದಿರುವ ಮತ್ತೊಂದು ಮಗುವನ್ನೂ ಇಲ್ಲದಂತೆ ಮಾಡುವುದು ಶಕುಂತಲ ಪ್ಲ್ಯಾನ್. ಆದರೀಗ ಈ ಎಲ್ಲ ಸತ್ಯ ಭೂಮಿಕಾಗೆ ಗೊತ್ತಾಗಿದೆ.
ಭೂಮಿಕಾ, ಗೌತಮ್ ತಾಯಿ ಜೊತೆ ತನ್ನ ತವರು ಮನೆಗೆ ಹೋಗಿದ್ದಳು. ಆಕೆಗೆ ಮಾತು ಬರದ ಕಾರಣ ಕೈ ಮೂಲಕ ಚಿತ್ರ ಬಿಡಿಸಿ ನಿಜವಾದ ಕಳ್ಳಿ ಯಾರು ಎಂಬುದನ್ನು ಹೇಳಿದ್ದಾಳೆ. ಶಕುಂತಲಾ ಮಗುಗೆ ತೊಂದರೆ ಕೊಡೋಕೆ ಬರುತ್ತಿದ್ದಾಳೆ ಎಂದು ಗೌತಮ್ ತಾಯಿಯು ಭೂಮಿಕಾಗೆ ಹೇಳಿದ್ದಾಳೆ. ಮಾತು ಬರುತ್ತಿದ್ದರು, ಒಳ್ಳೆಯ ಸಮಯ ನೋಡಿಕೊಂಡು ಮಾತಾಡೋಣ ಅಂತ ಸುಮ್ಮನಿಗೂ ಗೌತಮ್ ತಾಯಿ ಭಾಗ್ಯ ಅಸಲಿ ಸತ್ಯ ಏನು ಎಂದು ಹೇಳಿಬಿಟ್ಟಿದ್ದಾಳೆ.
ಈ ವಿಚಾರ ಕೇಳಿದ ಭೂಮಿಕಾ ಫುಲ್ ಶಾಕ್ ಆಗಿದ್ದಾಳೆ. ಅದೇ ಸಿಟ್ಟಿನಲ್ಲಿ ನೇರವಾಗಿ ಶಕುಂತಲಾಳ ಬಳಿಗೆ ಹೋಗಿ ನೀವು ಅಮೃತದ ಲೇಬಲ್ ಹಾಕಿರೋ ವಿಷ ಅಂತ ಭೂಮಿಕಾ ಕೆಂಡ ಕಾರಿದ್ದಾಳೆ. ಆಗ ಶಾಕುಂತಲಾ ನಿನಗೆ ಏನ್ ಗೊತ್ತಾಗಿದೇಯೋ ಅದೇ ಸತ್ಯ, ನೀನು ಯದ್ಧವನ್ನು ಡಿಕ್ಲೈರ್ ಮಾಡಿದ್ದೀಯಾ, ನಾನು ಅದನ್ನ ನೆಕ್ಸ್ಟ್ ಲೆವೆಲ್ಗೆ ತೆಗೆದುಕೊಂಡು ಹೋಗ್ತೀನಿ ಎಂದಿದ್ದಾರೆ. ಆಗ ಅದಕ್ಕೆ ಈ ಭೂಮಿಕಾ ಬಿಡೋದಿಲ್ಲ. ಆಟ ಈಗ ಶುರು ಎಂದು ಚಿಟಿಕೆ ಹೊಡೆದು ಭೂಮಿಕಾ ಗುಡುಗಿದ್ದಾಳೆ.
ಅಭಿಮಾನಿಗಳು ಈ ಒಂದು ತಿರುವಿಗೆ ಬಹಳ ದಿನಗಳಿಂದ ಕಾದು ಕುಳಿತಿದ್ದರು. ಮುಂದಿನ ದಿನಗಳಲ್ಲಿ ಮತ್ತಷ್ಟು ತಿರುವು ನಿರೀಕ್ಷಿಸಬಹುದಾಗಿದೆ. ಸದ್ಯ ಈ ಪ್ರೋಮೋ ನೋಡಿದ ವೀಕ್ಷಕರು, ಇಷ್ಟು ದಿನ ಒಂದ್ ಲೆಕ್ಕ, ಆದ್ರೆ ಇನ್ನೂ ಮುಂದೆ ಬೇರೆನೇ ಲೆಕ್ಕ, ಅಸಲಿ ಆಟ ಇನ್ನು ಮೇಲೆ ಶುರು ಎಂದೆಲ್ಲ ಹೇಳುತ್ತಿದ್ದಾರೆ.
Aishwarya Shindogi Birthday: ಹಾರ್ಟ್ ಸಿಂಬಲ್ ಜೊತೆಗೆ ಐಶ್ವರ್ಯಾ ಹುಟ್ಟುಹಬ್ಬಕ್ಕೆ ಶಿಶಿರ್ ಸ್ಪೆಷಲ್ ವಿಶ್