Viral Video: ವರದಕ್ಷಿಣೆಗಾಗಿ ಪತ್ನಿ ಮೇಲೆ ಮನಸೋ ಇಚ್ಛೆ ಹಲ್ಲೆ; ವೈರಲ್ ಆಯ್ತು ಪತಿಯ ಕ್ರೌರ್ಯ
10 ಲಕ್ಷ ರೂಪಾಯಿ ನಗದು ಮತ್ತು ಕಾರಿಗೆ ಬೇಡಿಕೆ ಇಟ್ಟು ಪತ್ನಿ ಮೇಲೆ ಹಲ್ಲೆ ನಡೆಸಿದ ಘಟನೆ, ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಆತ ಥಳಿಸಿರುವ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.


ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಉಧಂಪುರ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಮೇಲೆ ಆಕೆಯ ಪತಿ ವರದಕ್ಷಿಣೆಗಾಗಿ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಸಿರುವ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಜಮ್ ಅಲಿ ಎಂದು ಗುರುತಿಸಲ್ಪಟ್ಟ ಆ ವ್ಯಕ್ತಿ ತನ್ನ ಪತ್ನಿಯನ್ನು ಥಳಿಸಿದ್ದಾನೆ. ವರದಕ್ಷಿಣೆ ಎಂದು ಈತ 10 ಲಕ್ಷ ರೂಪಾಯಿ ನಗದು ಮತ್ತು ಕಾರಿಗೆ ಬೇಡಿಕೆ ಇಟ್ಟಿದ್ದ. ಆದರೆ ಆಕೆಯ ಮನೆಯವರು ಅದನ್ನು ಕೊಡಲು ವಿಫಲರಾಗಿದ್ದರು. ಹಲ್ಲೆಯಿಂದ ಆಕೆಗೆ ತೀವ್ರವಾದ ಗಾಯವಾಗಿದ್ದು, (Viral Video) ಚಿಕಿತ್ಸೆಗಾಗಿ ಉಧಂಪುರದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ವೈರಲ್ ಆದ ವಿಡಿಯೋದಲ್ಲಿ ಪತಿ ತನ್ನ ಹೆಂಡತಿಯ ಮೇಲೆ ಹಿಂಸಾತ್ಮಕವಾಗಿ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದು, ಆದರೆ ಆಕೆ ನೋವಿನಿಂದ ಅಳುತ್ತಿದ್ದಾಳೆ. ದೃಶ್ಯಾವಳಿಯಲ್ಲಿ, ಆ ವ್ಯಕ್ತಿ ಮೊದಲು ಮಹಿಳೆಯನ್ನು ಕ್ರೂರವಾಗಿ ಹೊಡೆಯುವುದನ್ನು, ನಂತರ ಬಲವಂತವಾಗಿ ಕೈ ಹಿಡಿದು ಮನೆಯ ಗೇಟ್ ಕಡೆಗೆ ಎಳೆದುಕೊಂಡು ಹೋಗುವುದನ್ನು ಕಾಣಬಹುದು. ಆಕೆ ತನ್ನನ್ನು ಬಿಟ್ಟು ಬಿಡುವಂತೆ ಪತಿ ಬಳಿ ಮನವಿ ಮಾಡಿಕೊಂಡಿದ್ದಾಳೆ. ಆದರೂ ಆತ ನಿರಂತವಾಗಿ ಆಕೆಗೆ ಥಳಿಸಿದ್ದಾನೆ.
Man assaults wife over Rs 10 lakh in cash and a car in dowry in Udhampur. The woman was hospitalised, while the man was arrested as the incident came to light. pic.twitter.com/1Kwjthg7et
— Vani Mehrotra (@vani_mehrotra) August 7, 2025
ಪತಿಯ ವಿರುದ್ಧ ರೆಹಂಬಲ್ ಪೊಲೀಸರಿಗೆ ಔಪಚಾರಿಕ ದೂರು ದಾಖಲಾಗಿದ್ದು , ಕುಟುಂಬವು ದೂರಿನಲ್ಲಿ ಅಜಮ್ ಅಲಿ ವಿರುದ್ಧ ನಿರಂತರ ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ದೌರ್ಜನ್ಯದ ಆರೋಪ ಹೊರಿಸಿದೆ. ಪೊಲೀಸರು ಕೂಡಲೇ ಐಪಿಸಿ 498ಎ ವರದಕ್ಷಿಣೆ ಕಿರುಕುಳ ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಯು ಸೈನಿಕನಾಗಿದ್ದು, ಈಗ ಆತನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಈ ಸುದ್ದಿಯನ್ನೂ ಓದಿ: Viral Video: ವರದಕ್ಷಿಣೆಗಾಗಿ ನಡೀತು ಬೀದಿ ರಂಪಾಟ-ವಿಡಿಯೊ ವೈರಲ್
ಪ್ರತ್ಯೇಕ ಘಟನೆಯಲ್ಲಿ ಮಗಳೇ ತಂದೆಯನ್ನು ಕೊಲೆ ಮಾಡಿದ್ದಾಳೆ. ಅಸ್ಸಾಂನ ದಿಬ್ರುಗಢ ಜಿಲ್ಲೆಯ ಬಾರ್ಬರುವಾದಲ್ಲಿ ಈ ಘಟನೆ ನಡೆದಿದ್ದು, ಪತ್ನಿ ಹಾಗೂ 16 ವರ್ಷದ ಮಗಳಿಂದಲೇ ಉದ್ಯಮಿಯೊಬ್ಬರು ಹತ್ಯೆಯಾಗಿದ್ದಾರೆ. ಈ ಸಂಬಂಧ ಮಹಿಳೆ, ಆಕೆಯ ಮಗಳು ಮತ್ತು ಓರ್ವ ಅಪ್ರಾಪ್ತ ಬಾಲಕ ಸೇರಿದಂತೆ ಇತರ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 52 ವರ್ಷದ ಉತ್ತಮ್ ಗೊಗೋಯ್ ಜುಲೈ 25 ರಂದು ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಆರಂಭದಲ್ಲಿ ದರೋಡೆಯಂತೆ ತೋರುತ್ತಿದ್ದ ಪ್ರಕರಣದಲ್ಲಿ ಕುಟುಂಬದ ಸದಸ್ಯರೇ ಸೇರಿ ಕೊಲೆ ಮಾಡಿದ್ದಾರೆ.