Aishwarya Shindogi Birthday: ಹಾರ್ಟ್ ಸಿಂಬಲ್ ಜೊತೆಗೆ ಐಶ್ವರ್ಯಾ ಹುಟ್ಟುಹಬ್ಬಕ್ಕೆ ಶಿಶಿರ್ ಸ್ಪೆಷಲ್ ವಿಶ್
‘‘ಮೋಸ್ಟ್ ಬ್ಯೂಟಿಫುಲ್ ಹಾಗೂ ಸ್ವೀಟೆಸ್ಟ್ ಪರ್ಸನ್‌ಗೆ ಹುಟ್ಟುಹಬ್ಬದ ಶುಭಾಶಯಗಳು. ಜಗತ್ತಿನಲ್ಲಿರುವ ಎಲ್ಲಾ ಸಂತೋಷಕ್ಕೆ ನೀನು ಅರ್ಹ. ತುಂಬಾ ಖುಷಿಯಾಗಿರು’’ ಎಂದು ಐಶ್ವರ್ಯಾ ಸಿಂಧೋಗಿ ಹುಟ್ಟುಹಬ್ಬಕ್ಕೆ ಶಿಶಿರ್ ಶಾಸ್ತ್ರಿ ವಿಶ್ ಮಾಡಿದ್ದಾರೆ. ಇದರೊಂದಿಗೆ ಹಾರ್ಟ್ ಸಿಂಬಲ್ ಕೂಡ ಹಾಕಿದ್ದಾರೆ.

Shishir Aishwarya

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಾದ ಐಶ್ವರ್ಯಾ ಸಿಂಧೋಗಿ (Aishwarya Shindogi) ಹಾಗೂ ಶಿಶಿರ್ ಶಾಸ್ತ್ರೀ ಎಷ್ಟು ಕ್ಲೋಸ್ ಎಂಬುದು ಇಡೀ ಕರ್ನಾಟಕ ಜನತೆಗೆ ತಿಳಿದಿದೆ. ದೊಡ್ಮನೆಯಲ್ಲಿದ್ದಾಗ ಇವರಿಬ್ಬರು ತುಂಬಾ ಆತ್ಮೀಯತೆಯಲ್ಲಿದ್ದರು. ಎಷ್ಟರ ಮಟ್ಟಿಗೆ ಎಂದರೆ ಒಂದೇ ಬೆಡ್ ಶೀಟ್ ಹೊದ್ದುಕೊಂಡು ಒಂದೇ ಕಾಫಿ ಕಪ್ ನಲ್ಲಿ ಜೊತೆಯಲ್ಲಿಯೇ ಕಾಫಿ ಕುಡಿದಿದ್ದರು. ಹೊರಬಂದ ಬಳಿಕ ಕೂಡ ಇವರಿಬ್ಬರು ಅನೇಕ ಬಾರಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರೂ ಜೊತೆಯಾಗಿ ವಿಡಿಯೋ ಶೂಟ್- ಫೋಟೋ ಶೂಟ್ ಕೂಡ ಮಾಡಿಸಿಕೊಳ್ಳುತ್ತ ಇರುತ್ತಾರೆ. ಇದೀಗ ಐಶ್ವರ್ಯಾ ಅವರ ಹುಟ್ಟುಹಬ್ಬಕ್ಕೆ ಶಿಶಿರ್ ಸ್ಪೆಷಲ್ ಆಗಿ ವಿಶ್ ಮಾಡಿದ ಫೋಟೋ ವೈರಲ್ ಆಗುತ್ತಿದೆ.
ಐಶ್ವರ್ಯಾ-ಶಿಶಿರ್ ಪ್ರೇಮಿಗಳು ಎಂಬ ಅನುಮಾನ ಎಲ್ಲರಿಗೂ ಇದೆ. ಆದರೆ, ಇವರು ಇದರ ಬಗ್ಗೆ ಕ್ಲಾರಿಫಿಕೇಷನ್ ಕೊಡುತ್ತಿಲ್ಲ. ಕೆಲ ಸಂದರ್ಶನದಲ್ಲಿ ಐಶ್ವರ್ಯಾ ಬಳಿ ಶಿಶಿರ್ ಬಗ್ಗೆ ಕೇಳಿದಾಗ ನಾಚಿ ನೀರಾಗಿದ್ದೂ ಉಂಟು. ಆದ್ರೆ ಇಬ್ಬರೂ ನಾವಿಬ್ರು ಒಳ್ಳೆಯ ಫ್ರೆಂಡ್ಸ್, ನಮ್ಮಿಬ್ಬರ ಮಧ್ಯೆ ಉತ್ತಮ ಸ್ನೇಹದ ಬಾಂಧವ್ಯ ಇದೆ ಎಂದಷ್ಟೆ ಹೇಳಿಕೊಂಡು ಬಂದಿದ್ದಾರೆ. ಆದರೀಗ ಐಶೂ ಹುಟ್ಟುಹಬ್ಬಕ್ಕೆ ಲವ್ ಸಿಂಬಲ್ ಜೊತೆಗೆ ಶಿಶಿರ್ ವಿಶ್ ಮಾಡಿದ್ದಾರೆ.
‘‘ಮೋಸ್ಟ್ ಬ್ಯೂಟಿಫುಲ್ ಹಾಗೂ ಸ್ವೀಟೆಸ್ಟ್ ಪರ್ಸನ್‌ಗೆ ಹುಟ್ಟುಹಬ್ಬದ ಶುಭಾಶಯಗಳು. ಜಗತ್ತಿನಲ್ಲಿರುವ ಎಲ್ಲಾ ಸಂತೋಷಕ್ಕೆ ನೀನು ಅರ್ಹ. ತುಂಬಾ ಖುಷಿಯಾಗಿರು’’ ಎಂದು ಐಶ್ವರ್ಯಾ ಸಿಂಧೋಗಿ ಹುಟ್ಟುಹಬ್ಬಕ್ಕೆ ಶಿಶಿರ್ ಶಾಸ್ತ್ರಿ ವಿಶ್ ಮಾಡಿದ್ದಾರೆ. ಇದರೊಂದಿಗೆ ಹಾರ್ಟ್ ಸಿಂಬಲ್ ಕೂಡ ಹಾಕಿದ್ದಾರೆ.
ಐಶ್ವರ್ಯಾ ತಮ್ಮ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ. ಶಿಶರ್ ಶಾಸ್ತ್ರಿ, ಮೋಕ್ಷಿತಾ ಪೈ, ಧರ್ಮಕೀರ್ತಿ ರಾಜ್ ಹಾಗೂ ಬಿಗ್ಬಾಸ್ 10 ಮಾಜಿ ಸ್ಪರ್ಧಿ ನೀತು ವನಜಾಕ್ಷಿ ಎಲ್ಲರೂ ಈ ಸೆಲೆಬ್ರೇಷನ್ನಲ್ಲಿ ಭಾಗಿಯಾಗಿದ್ದರು. ಬಿಗ್ಬಾಸ್ನಿಂದ ಆಚೆ ಬಂದ ಮೇಲೆ ಐಶ್ವರ್ಯ ನಿನ್ನ ಜೊತೆ ನನ್ನ ಕಥೆ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್ನಲ್ಲಿ ನಟಿಸುತ್ತಿದ್ದಾರೆ. ಅತ್ತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರುವ ಶ್ರೀ ಗಂಧದಗುಡಿ ಸೀರಿಯಲ್ಗೆ ನಾಯಕನಾಗಿ ಶಿಶಿರ್ ಎಂಟ್ರಿ ಕೊಟ್ಟಿದ್ದಾರೆ.
ಐಶ್ವರ್ಯಾ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರೀ ಇಬ್ಬರೂ ಬ್ಯುಸಿನೆಸ್ ಪಾರ್ಟ್ನರ್ಸ್ ಕೂಡ ಹೌದು. ಇವರು ಇತ್ತೀಚೆಗಷ್ಟೆ ರಾಮನವಮಿ ದಿನ ‘ಹರ ಸ್ಟುಡಿಯೋ’ ಆರಂಭಿಸಿದ್ದರು. ಇದೊಂದು ಪ್ರೊಡಕ್ಷನ್ ಹೌಸ್ ಆಗಿದ್ದು, ಕಾನ್ಸೆಪ್ಟ್ ಶೂಟ್ಸ್, ಪ್ರಿ ವೆಡ್ಡಿಂಗ್ ಫೋಟೋಶೂಟ್, ಜಾಹೀರಾತು, ಪೋರ್ಟ್‌ಫೋಲಿಯೋ ಶೂಟ್ಸ್, ಡೈರೆಕ್ಟರ್, ಕೊರಿಯೋಗ್ರಾಫರ್, ಸ್ಕ್ರಿಪ್ಟ್ ರೈಟರ್, ಮೇಕಪ್ ಆರ್ಟಿಸ್ಟ್, ಹೇರ್‌ಸ್ಟೈಲಿಸ್ಟ್ ಎಲ್ಲರೂ ಇದರ ಮುಖಾಂತರ ಸಿಗುತ್ತಾರೆ.
Raghavendra: ಮಹಾನಟಿ ವೇದಿಕೆ ಮೇಲೆ ರಾಘವೇಂದ್ರಗೆ ಚೆಕ್ ಕೊಟ್ಟು ಸಿನಿಮಾ ಆಫರ್ ನೀಡಿದ ತರುಣ್ ಸುಧೀರ್