ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rachita Ram: 8 ವರ್ಷಗಳ ಬಳಿಕ ಧ್ರುವ ಸರ್ಜಾಗೆ ಜೋಡಿಯಾಗ್ತಾರೆ ನಟಿ ರಚಿತಾ ರಾಮ್! ಯಾವ ಸಿನಿಮಾ, ಡೈರೆಕ್ಟರ್‌ ಯಾರು?

Rachita Ram New Movie: 'ಆಕ್ಷನ್‌ ಪ್ರಿನ್ಸ್‌' ಧ್ರುವ ಸರ್ಜಾ ಮತ್ತು ರಚಿತಾ ರಾಮ್‌ ಅವರು 8 ವರ್ಷಗಳ ಬಳಿಕ ಮತ್ತೆ ಒಂದಾಗುವ ಸಾಧ್ಯತೆ ಇದೆ. 2017ರಲ್ಲಿ ತೆರೆಕಂಡ 'ಭರ್ಜರಿ' ಸಿನಿಮಾದ ಬಳಿಕ ಈ ಜೋಡಿ ಈಗ ಹೊಸ ಸಿನಿಮಾಕ್ಕೆ ಸಿದ್ಧವಾಗುತ್ತಿದೆ. ಈ ಚಿತ್ರವನ್ನು ʻಕೆರೆಬೇಟೆʼ ಖ್ಯಾತಿಯ ರಾಜ್‌ ಗುರು ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಆಗಬೇಕಿದೆ.

ʻಆಕ್ಷನ್‌ ಪ್ರಿನ್ಸ್‌ʼ ಧ್ರುವ ಸರ್ಜಾ ಅವರು ಸದ್ಯ ʻಕೆಡಿʼ ಸಿನಿಮಾದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಈ ಮಧ್ಯೆ ಅವರ ಹೊಸ ಸಿನಿಮಾಗಳ ಬಗ್ಗೆ ಒಂದಷ್ಟು ಅಪ್ಡೇಟ್‌ಗಳು ಹೊರಬೀಳುತ್ತಿವೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಧ್ರುವ ಸರ್ಜಾ ಅವರ ಮುಂದಿನ ಸಿನಿಮಾಕ್ಕೆ ನಟಿ ರಚಿತಾ ರಾಮ್‌ ಅವರು ನಾಯಕಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

8 ವರ್ಷಗಳ ಬಳಿಕ ಒಂದಾಗುತ್ತಿರುವ ಜೋಡಿ

ಧ್ರುವ ಸರ್ಜಾ ಅವರ ಮೂರನೇ ಸಿನಿಮಾ ʻಭರ್ಜರಿʼಯಲ್ಲಿ ಜೋಡಿಯಾಗಿ ನಟಿ ರಚಿತಾ ರಾಮ್‌ ಕಾಣಿಸಿಕೊಂಡಿದ್ದರು. ಚೇತನ್ ಕುಮಾರ್ ನಿರ್ದೇಶನದ ಈ ಸಿನಿಮಾವು 2017ರಲ್ಲಿ ತೆರೆಕಂಡು ಉತ್ತಮ ರೆಸ್ಪಾನ್ಸ್‌ ಪಡೆದುಕೊಂಡಿತ್ತು. ಆನಂತರ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇದೀಗ ಹೊಸ ಸಿನಿಮಾದ ಮೂಲಕ ಇಬ್ಬರು ಮತ್ತೆ ಒಟ್ಟಿಗೆ ತೆರೆಹಂಚಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Dhruva Sarja: ಹುಟ್ಟುಹಬ್ಬದ ಸಂಭ್ರಮದಲ್ಲಿ ಧ್ರುವ ಸರ್ಜಾ: ಆ್ಯಕ್ಷನ್ ಪ್ರಿನ್ಸ್ ಸಿನಿ ಜರ್ನಿ ಬಗ್ಗೆ ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ

ಯಾರು ನಿರ್ದೇಶಕರು?

ಕಳೆದ ವರ್ಷ ತೆರೆಕಂಡಿದ್ದ ʻಕೆರೆಬೇಟೆʼ ಸಿನಿಮಾವನ್ನ ನಿರ್ದೇಶಿಸಿದ್ದ ರಾಜ್‌ ಗುರು ಈಗ ಧ್ರುವ ಸರ್ಜಾ ಜೊತೆ ಸಿನಿಮಾ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ. ಗ್ರಾಮೀಣ ಹಿನ್ನೆಲೆಯ ಆಕ್ಷನ್‌ ಡ್ರಾಮಾವೊಂದನ್ನು ಈ ಬಾರಿ ರಾಜ್‌ ಗುರು ಅವರು ಧ್ರುವ ಸರ್ಜಾಗೆ ಸಿನಿಮಾ ಮಾಡುತ್ತಿದ್ದು, ಗೋಲ್ಡ್‌ಮೈನ್ಸ್ ಟೆಲಿಫಿಲ್ಮ್ಸ್‌ನ ಮನೀಶ್ ಶಾ ಅವರು ಈ ಸಿನಿಮಾಕ್ಕೆ ಹಣ ಹಾಕುತ್ತಿದ್ದಾರೆ.

ಸದ್ಯ ಧ್ರುವ ಸರ್ಜಾ ಮತ್ತು ರಚಿತಾ ರಾಮ್‌ ಕಾಂಬಿನೇಷನ್‌ ಈ ಹೊಸ ಸಿನಿಮಾದ ಬಗ್ಗೆ ಇನ್ನೂ ಅಧಿಕೃತವಾಗಿ ಘೋಷಣೆ ಆಗಿಲ್ಲವಾದರೂ, ಶೀಘ್ರದಲ್ಲೇ ಅನೌನ್ಸ್‌ಮೆಂಟ್‌ ಆಗಲಿದೆಯಂತೆ. ಇನ್ನು, ಧ್ರುವ ಸರ್ಜಾ ಅವರು ದುನಿಯಾ ಸೂರಿ ಅವರೊಂದಿಗೆ ಒಂದು ಸಿನಿಮಾ ಮಾಡುವುದಕ್ಕೆ ಪ್ಲಾನ್‌ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಇದೆ. ಇನ್ಮುಂದೆ ವರ್ಷಕ್ಕೆ 2 ಸಿನಿಮಾ ಮಾಡಬೇಕು ಎಂದು ಧ್ರುವ ಸರ್ಜಾ ಅವರು ಪ್ಲ್ಯಾನ್‌ ಮಾಡಿಕೊಳ್ಳುತ್ತಿದ್ದಾರೆ.

ಅತ್ತ ರಚಿತಾ ರಾಮ್‌ ಅವರು ದುನಿಯಾ ವಿಜಯ್‌ ಅವರ ಜೊತೆಗೆ ʻಲ್ಯಾಂಡ್ ಲಾರ್ಡ್ʼ, ಜೈದ್ ಖಾನ್ ಜೊತೆ ʻಕಲ್ಟ್ʼ ಮತ್ತು ʻನೀನಾಸಂʼ ಸತೀಶ್ ಜೊತೆ ʻಅಯೋಗ್ಯ 2ʼ ಮುಂತಾದ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.

ʻಕೆಡಿʼ ಸಿನಿಮಾ ಯಾವಾಗ ರಿಲೀಸ್?‌

ಇನ್ನು, ಎಲ್ಲರ ಗಮನ ಧ್ರುವ ಸರ್ಜಾ ಅವರ ʻಕೆಡಿʼ ಚಿತ್ರದ ಮೇಲಿದೆ. ಈ ಚಿತ್ರ ಯಾವಾಗ ತೆರೆಗೆ ಬರಲಿದೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಜೋಗಿ ಪ್ರೇಮ್‌ ನಿರ್ದೇಶನದ ಈ ಸಿನಿಮಾವನ್ನು ಕೆವಿಎನ್‌ ಪ್ರೊಡಕ್ಷನ್ಸ್‌ ನಿರ್ಮಾಣ ಮಾಡಿದೆ. 2025ರಲ್ಲಿ ಈ ಚಿತ್ರ ತೆರೆಗೆ ಬರುವ ಸಾಧ್ಯತೆಗಳು ಕಮ್ಮಿ ಇದೆ. ಶೀಘ್ರದಲ್ಲೇ ಕೆಡಿ ಚಿತ್ರ ರಿಲೀಸ್‌ ಡೇಟ್‌ ಘೋಷಣೆ ಆಗಲಿದೆ.