ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Avinash GR

Senior Digital Content Editor

[email protected]

ಅವಿನಾಶ್‌ ಜಿ ಆರ್ ಅವರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯವನ್ನು ಪಡೆದುಕೊಂಡಿದ್ದಾರೆ. ಕಳೆದ ೧೪ ವರ್ಷಗಳಿಂದ ಸಿನಿಮಾ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ವಿಜಯವಾಣಿ ಪತ್ರಿಕೆಯಲ್ಲಿ 2 ವರ್ಷ ಸಿನಿಮಾ ವರದಿಗಾರನಾಗಿ, 4 ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡಿದ್ದಾರೆ. ʻವಿಜಯ ಕರ್ನಾಟಕʼ ವೆಬ್‌ನಲ್ಲಿ 6 ವರ್ಷ ಎಂಟರ್‌ಟೇನ್‌ಮೆಂಟ್ ವಿಭಾಗದಲ್ಲಿ ‌ʻಸೀನಿಯರ್ ಡಿಜಿಟಲ್‌ ಕಂಟೆಂಟ್ ಪ್ರೊಡ್ಯೂಸರ್ʼ ಆಗಿ ಕೆಲಸ ಮಾಡಿದ್ದಾರೆ. ಸಂದರ್ಶನಗಳು, ಸಿನಿಮಾ ವಿಮರ್ಶೆಗಳು, ಚಿತ್ರರಂಗ ಮತ್ತು ಕಿರುತೆರೆ ಕ್ಷೇತ್ರಕ್ಕೆ ಸಂಬಂಧಿಸಿದ ವಿಶ್ಲೇಷಣೆ, ಅಂಕಣಗಳನ್ನು ಬರೆದಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ರಾಜಕೀಯ, ಪ್ರವಾಸ, ಓದು ಇವರ ಆಸಕ್ತಿಗಳಾಗಿವೆ. ಪ್ರಸ್ತುತ ʻವಿಶ್ವವಾಣಿʼ ಡಿಜಿಟಲ್‌ನಲ್ಲಿ ʻಸೀನಿಯರ್‌ ಡಿಜಿಟಲ್‌ ಕಂಟೆಂಟ್‌ ಎಡಿಟರ್‌ʼ ಆಗಿ ಕೆಲಸ ಮಾಡುತ್ತಿದ್ದಾರೆ.

Articles
ʻಬಿಗ್‌ ಬಾಸ್‌ʼ ಕಾರ್ತಿಕ್‌ ಮಹೇಶ್‌ ನಟನೆಯ ʻರಾಮರಸʼ ಚಿತ್ರಕ್ಕೆ ‘ಡೆಡ್ಲಿ’ ಆದಿತ್ಯ ಎಂಟ್ರಿ; ‘ವೀರ ದುರ್ಮುರ್ಗಿ’ ಪಾತ್ರದಲ್ಲಿ ಅಬ್ಬರ

ಕಾರ್ತಿಕ್ ಮಹೇಶ್ ನಟನೆಯ ‘ರಾಮರಸ’ ಚಿತ್ರಕ್ಕೆ ಡೆಡ್ಲಿ ಆದಿತ್ಯ ಎಂಟ್ರಿ

Ramarsa Movie Updates: ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ನಟನೆಯ ಪೌರಾಣಿಕ ಕಥಾಹಂದರದ ʻರಾಮರಸʼ ಚಿತ್ರಕ್ಕೆ ‘ಡೆಡ್ಲಿ’ ಆದಿತ್ಯ ಸೇರ್ಪಡೆಯಾಗಿದ್ದಾರೆ. ‘ವೀರ ದುರ್ಮುರ್ಗಿ’ ಎಂಬ ಪಾತ್ರದಲ್ಲಿ ಅವರು ಅಬ್ಬರಿಸಲಿದ್ದು, ಕಥೆಯ ತಿರುವು ನೀಡುವ ‘ದಶ ಮಹಾವಿದ್ಯೆ’ಯ ರಹಸ್ಯ ಈ ಪಾತ್ರದ ಸುತ್ತ ಸಾಗಲಿದೆ. ಪ್ರಜ್ವಲ್ ದೇವರಾಜ್ ಮತ್ತು ಶರಣ್ ಕೂಡ ಚಿತ್ರದಲ್ಲಿದ್ದಾರೆ.

ಬಣ್ಣದ ಲೋಕದಲ್ಲಿ ಕಿಚ್ಚನ ಜರ್ನಿಗೆ 30 ವರ್ಷ; ಸುದೀಪ್‌ಗೆ ಮನಸಾರೆ ಶುಭಕೋರಿದ ಸಲ್ಮಾನ್‌ ಖಾನ್, ಗಂಗೂಲಿ, ಮೋಹನ್‌ಲಾಲ್, ರಿಷಬ್‌ ಶೆಟ್ಟಿ!

ಸುದೀಪ್‌ ಸಿನಿಜರ್ನಿಗೆ 30ರ ಹರೆಯ; ‌ಪ್ರೀತಿಯಿಂದ ಹಾರೈಸಿದ ಸಲ್ಮಾನ್, ಗಂಗೂಲಿ

Kichcha Sudeep 30 Years: ಕಿಚ್ಚ ಸುದೀಪ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಯಶಸ್ವಿ 30 ವರ್ಷಗಳನ್ನು ಪೂರೈಸಿದ್ದು, ಈ ಸಾಧನೆಯನ್ನು ಬಿಗ್‌ ಬಾಸ್‌ ವೇದಿಕೆಯಲ್ಲಿ ಸಂಭ್ರಮಿಸಲಾಯಿತು. ಬಾಲಿವುಡ್ ನಟ ಸಲ್ಮಾನ್ ಖಾನ್, ಸೊಹೈಲ್ ಖಾನ್, ಕ್ರಿಕೆಟ್ ದಿಗ್ಗಜ ಸೌರವ್ ಗಂಗೂಲಿ, ಮೋಹನ್‌ಲಾಲ್, ರಿಷಬ್ ಶೆಟ್ಟಿ ಹಾಗೂ ದೇವಿ ಶ್ರೀ ಪ್ರಸಾದ್ ಕಿಚ್ಚನ ಸಾಧನೆಯನ್ನು ಹೃತ್ಪೂರ್ವಕವಾಗಿ ಕೊಂಡಾಡಿದ್ದಾರೆ.

‘ರಾಮಾಯಣ’ ಚಿತ್ರದ ಕನ್ನಡ ವರ್ಷನ್ ‘ಜೈ ಜೈ ರಾಮ್’ ಸಾಂಗ್‌ ರಿಲೀಸ್‌; ಹಾಡಿಗೆ ಜೀವ ತುಂಬಿದ ಗಾಯಕರಾದ ರಾಘವ್ ಕೌಶಿಕ್ - ರಕ್ಷಿತಾ ಸುರೇಶ್

‘ರಾಮಾಯಣ’ ಚಿತ್ರದ ‘ಜೈ ಜೈ ರಾಮ್’ ಕನ್ನಡ ವರ್ಷನ್ ಸಾಂಗ್‌ ರಿಲೀಸ್‌

Ramayana Part 1: ‘ರಾಮಾಯಣ’ ಚಿತ್ರದ ಕನ್ನಡ ವರ್ಷನ್‌ ‘ಜೈ ಜೈ ರಾಮ್’ ಹಾಡು ಬಿಡುಗಡೆಯಾಗಿದೆ. ನಿತೀಶ್ ತಿವಾರಿ ನಿರ್ದೇಶನದಲ್ಲಿ ರಣಬೀರ್ ಕಪೂರ್ ಮತ್ತು ಯಶ್ ನಟಿಸಿರುವ ಈ ಸಿನಿಮಾಕ್ಕೆ ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿದ್ದು, ರಾಘವ್ ಕೌಶಿಕ್ ಹಾಗೂ ರಕ್ಷಿತಾ ಸುರೇಶ್ ಕನ್ನಡ ವರ್ಷನ್‌ಗೆ ಧ್ವನಿ ನೀಡಿದ್ದಾರೆ.

ಡಾ. ವಿಷ್ಣುವರ್ಧನ್ ಅಮೃತ ಮಹೋತ್ಸವ ಸಂಭ್ರಮ; ದಾದಾ ಅಭಿಮಾನಿಗಳಲ್ಲಿ ಬಹಿರಂಗ ಕ್ಷಮೆ ಕೋರಿದ ʻಕಿಚ್ಚʼ ಸುದೀಪ್!

ವಿಷ್ಣು ಅಮೃತ ಮಹೋತ್ಸವ; ದಾದಾ ಫ್ಯಾನ್ಸ್‌ಗೆ ಸುದೀಪ್ ಕ್ಷಮೆ ಕೇಳಿದ್ದೇಕೆ?

Dr Vishnuvardhan Amrutha Mahotsava: ಬೆಂಗಳೂರಿನಲ್ಲಿ ಡಾ. ವಿಷ್ಣುವರ್ಧನ್ ಅಮೃತ ಮಹೋತ್ಸವ ವಿಜೃಂಭಣೆಯಿಂದ ಆರಂಭವಾಗಿದೆ. ಈ ಅದ್ದೂರಿ ಸಮಾರಂಭಕ್ಕೆ ವೈಯಕ್ತಿಕ ಕಾರಣದಿಂದ ಪಾಲ್ಗೊಳ್ಳಲು ಅಸಾಧ್ಯವಾದ ಹಿನ್ನೆಲೆಯಲ್ಲಿ ನಟ ಕಿಚ್ಚ ಸುದೀಪ್ ಬಹಿರಂಗವಾಗಿ ಕ್ಷಮೆ ಕೋರಿದ್ದಾರೆ. ತಮ್ಮ ಆದರ್ಶ ಗುರುವಿಗಾಗಿ ಯಾವುದೇ ಕ್ಷಣದಲ್ಲೂ ಮುಂಚೂಣಿಯಲ್ಲಿ ನಿಲ್ಲುವೆ ಎಂದು ಅವರು ಹೇಳಿದ್ದಾರೆ.

ʻಬಿಗ್ ಬಾಸ್ʼ ಮನೆಗೆ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿ; ಎಲ್ಲರ ಮುಖವಾಡ ಕಳಚಲು ಬಂದ ಈ ಹೊಸ ಕಿಲಾಡಿಗಳ ಹಿಸ್ಟರಿ ಇಲ್ಲಿದೆ

ʻಬಿಗ್ ಬಾಸ್ʼ ಮನೆಗೆ ಮೂವರು ವೈಲ್ಡ್ ಕಾರ್ಡ್ ಎಂಟ್ರಿ: ಮುಖವಾಡ ಕಳಚುವ ಶಪಥ!

Bigg Boss Kannada 13: ಬಿಗ್‌ ಬಾಸ್‌ ಮನೆಗೆ ಮೂವರು ಪ್ರಬಲ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಅನಿರೀಕ್ಷಿತ ಪ್ರವೇಶ ಪಡೆದಿದ್ದಾರೆ. ಘಾಟಿ ಗಾನವಿ, ನಟ ಪ್ರಶಾಂತ್ ಹಾಗೂ ಸೋನಿಕಾ ಗೌಡ ಮನೆಯೊಳಗೆ ಕಾಲಿಡುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಇವರು ಹಾಲಿ ಸ್ಪರ್ಧಿಗಳ ಮುಖವಾಡ ಕಳಚುವ ಶಪಥ ಮಾಡಿದ್ದಾರಂತೆ!

ಜೀ ಕನ್ನಡದಲ್ಲಿ ಸೆ.28 ರಿಂದ ‘ಜಗದ್ಧಾತ್ರಿ’ ಧಾರಾವಾಹಿ ಶುರು; ಈ ಸೀರಿಯಲ್‌ಗಾಗಿ ಒಂದಾದ ಕಿರುತೆರೆ ಸ್ಟಾರ್ಸ್!‌

‘ಜಗದ್ಧಾತ್ರಿ’ ಸೀರಿಯಲ್‌ಗಾಗಿ ಒಂದಾದ ಮೋಕ್ಷಿತಾ, ವಿಜಯ್ ಸೂರ್ಯ, ಕವಿತಾ ಗೌಡ

Jagaddhatri serial: ‘ಜಗದ್ಧಾತ್ರಿ’ ಧಾರಾವಾಹಿಯು ಸೆಪ್ಟೆಂಬರ್ 28ರಂದು ಜೀ ಕನ್ನಡದಲ್ಲಿ ಪ್ರಸಾರ ಆರಂಭಿಸಲಿದೆ. ಅಂಡರ್‌ಕವರ್ ಪೊಲೀಸ್ ಆಫೀಸರ್ ಆಗಿ ಮೋಕ್ಷಿತಾ ಪೈ ನಟಿಸಿದ್ದು, ತಾಯಿಯ ಮೇಲಿನ ದೇಶದ್ರೋಹದ ಸುಳ್ಳು ಕಳಂಕ ತೊಡೆದುಹಾಕುವ ಮಹತ್ವದ ಹೋರಾಟ ಇದರಲ್ಲಿದೆ. ವಿಜಯ್ ಸೂರ್ಯ ಮತ್ತು ಕವಿತಾ ಗೌಡ ಕೂಡ ಈ ಸೀರಿಯಲ್‌ನಲ್ಲಿ ನಟಿಸಲಿದ್ದಾರೆ.

ಡಿಸೆಂಬರ್ 4ರಂದು ತೆರೆಗೆ ಬರಲಿದೆ ‘ಮ್ಯಾರೇಜ್ ಪಾರ್ಟಿ’: ಕನ್ನಡ - ಮಲಯಾಳಂನಲ್ಲಿ ರಿಲೀಸ್‌ ಮಾಡಲು ನಿರ್ಮಾಪಕರ ಪ್ಲ್ಯಾನ್

ಡಿಸೆಂಬರ್ 4ಕ್ಕೆ ಬರಲಿದೆ ‘ಮ್ಯಾರೇಜ್ ಪಾರ್ಟಿ’; ಕನ್ನಡ-ಮಲಯಾಳಂನಲ್ಲಿ ರಿಲೀಸ್

ಕರಾವಳಿಯ ‘ಮ್ಯಾರೇಜ್ ಪಾರ್ಟಿ’ ಸಿನಿಮಾವು ಡಿಸೆಂಬರ್ 4ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಚಯನ್ ಶೆಟ್ಟಿ ನಿರ್ದೇಶನದ ಈ ಹಾಸ್ಯಪ್ರಧಾನ ಕೌಟುಂಬಿಕ ಚಿತ್ರವನ್ನು ಕನ್ನಡ ಹಾಗೂ ಮಲಯಾಳಂ ಎರಡೂ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈ ಚಿತ್ರಕ್ಕೆ ಸಂತೋಷ್ ವಿ. ಬಂಡವಾಳ ಹೂಡಿದ್ದಾರೆ.

ನೆಗೆಟಿವ್‌ ಟಾಕ್‌ ನಡುವೆಯೂ ಮೊದಲ ದಿನ 88 ಕೋಟಿ ಬಾಚಿದ ʻಪ್ಯಾರಡೈಸ್‌ʼ ಸಿನಿಮಾ; ನಟ ನಾನಿ ಹೇಳಿದ ಆ ಮಾತಿಗೆ ಭೇಷ್‌ ಎಂದ್ರು ಫ್ಯಾನ್ಸ್‌!

Actor Nani: ಮೊದಲ ದಿನವೇ ‘ದಿ ಪ್ಯಾರಡೈಸ್’ ಚಿತ್ರಕ್ಕೆ ದಾಖಲೆಯ ಕಲೆಕ್ಷನ್!

The Paradise Movie Box Office Collection: ನಾನಿ ನಟನೆಯ ʻದಿ ಪ್ಯಾರಡೈಸ್‌ʼ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಮೊದಲ ದಿನವೇ ಬರೋಬ್ಬರಿ 88 ಕೋಟಿ ಗಳಿಸಿ ಮೈಲಿಗಲ್ಲು ಸ್ಥಾಪಿಸಿದೆ. ಸಾಮಾಜಿಕ ಜಾಲತಾಣದ ತೀವ್ರ ಟ್ರೋಲಿಂಗ್ ನಡುವೆಯೂ ನಾನಿ ಮತ್ತು ಶ್ರೀಕಾಂತ್ ಒಡೆಲಾ ಕಾಂಬಿನೇಷನ್‌ಗೆ ಮೊದಲ ದಿನ ಪ್ರೇಕ್ಷಕರು ಜೈ ಎಂದಿದ್ದಾರೆ. ವಿಮರ್ಶಕರ ಟೀಕೆಗಳನ್ನು ಮುಕ್ತವಾಗಿ ಸ್ವೀಕರಿಸಿ, ತಪ್ಪುಗಳಿಂದ ಪಾಠ ಕಲಿಯುವುದಾಗಿ ನಾನಿ ಹೇಳಿಕೆ ನೀಡಿರುವುದು ವಿಶೇಷ.

Premada Oorali Review: ಅಬ್ಬರವಿಲ್ಲದ ಹಳ್ಳಿ ಸೊಗಡಿನ ಮನಮುಟ್ಟುವ ಅಪ್ಪ- ಮಗನ ಬಾಂಧವ್ಯದ ಕಥೆ

ರಂಗಾಯಣ ರಘು, ಶ್ರೀರಾಮ್‌, ರಮಿಕಾ ನಟನೆಯ ʻಪ್ರೇಮದ ಊರಲಿʼ ಸಿನಿಮಾ ಹೇಗಿದೆ?

Premada Oorali Movie Review: ನಿರ್ದೇಶಕ ಮನೋಜ್ ಕುಮಾರ್ ಅವರು ಈ ಹಿಂದೆ ‘ಅಕ್ಷಿ’ ಸಿನಿಮಾ ಮಾಡಿ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದರು. ಈ ಬಾರಿ ಅವರು ‘ಪ್ರೇಮದ ಊರಲಿ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಮೂಲಕ ಒಂದು ಪಕ್ಕಾ ಕೌಟುಂಬಿಕ ಕಥೆಯನ್ನು ತೆರೆಗೆ ತಂದಿದ್ದಾರೆ. ಸೂಕ್ತವಾದ ಪಾತ್ರವರ್ಗ ಹಾಗೂ ತಾಂತ್ರಿಕ ಬಳಗ ಅವರಿಗೆ ಸಾಥ್ ನೀಡಿದೆ.

Spark Movie Review: ಸಹಕಾರಿ ಬ್ಯಾಂಕ್‌ಗಳ ಹಗರಣದ ಸುತ್ತ ಸಾಗುವ ಸಸ್ಪೆನ್ಸ್ ಥ್ರಿಲ್ಲರ್ ‘ಸ್ಪಾರ್ಕ್’

ನಿರಂಜನ್ - ʻನೆನಪಿರಲಿʼ ಪ್ರೇಮ್ ನಟನೆಯ ‘ಸ್ಪಾರ್ಕ್’ ಸಿನಿಮಾ ಹೇಗಿದೆ?

Spark Movie Review: ಸಹಕಾರಿ ಬ್ಯಾಂಕ್‌ನಲ್ಲಿ ಜನಸಾಮಾನ್ಯರು ಕಷ್ಟಪಟ್ಟು ಠೇವಣಿ ಇರಿಸಿದ ಹಣ ರಾಜಕೀಯ ಸ್ವಾರ್ಥಕ್ಕಾಗಿ ಲೂಟಿಯಾಗುತ್ತದೆ. ಈ ಹಗರಣವನ್ನು ಭೇದಿಸಲು ತನಿಖಾ ಪತ್ರಕರ್ತ ಹಾಗೂ ಪೊಲೀಸ್ ಅಧಿಕಾರಿ ಅಖಾಡಕ್ಕೆ ಇಳಿಯುತ್ತಾರೆ. ನೆನಪಿರಲಿ ಪ್ರೇಮ್ ನೆಗೆಟಿವ್ ಶೇಡ್‌ನಲ್ಲಿ ಅಬ್ಬರಿಸಿದ್ದು, ನಿರಂಜನ್ ಸುಧೀಂದ್ರ ತನಿಖಾ ಪತ್ರಕರ್ತನಾಗಿ ಮಿಂಚಿದ್ದಾರೆ.

ನಟ ದರ್ಶನ್‌ ಸೋದರಳಿಯನ ಹೋಟೆಲ್‌ ಬಗ್ಗೆ ಅಪಪ್ರಚಾರ! ʻದಯವಿಟ್ಟು ಈ ಥರ ಮಾಡಬೇಡಿ..ʼ ಎಂದು ಬೇಡಿಕೊಂಡ ʻಡಿ ಬಾಸ್‌ʼ ಅಕ್ಕನ ಮಗ ಚಂದು!

ನಟ ದರ್ಶನ್ ಸೋದರಳಿಯನ ಹೊಟೇಲ್ ವಿರುದ್ಧ ಷಡ್ಯಂತ್ರ; ಚಂದು ಮಾಡಿದ ಮನವಿ ಏನು?

ಮೈಸೂರಿನಲ್ಲಿ ದರ್ಶನ್‌ ಸೋದರಳಿಯ ಚಂದ್ರಕುಮಾರ್‌ (ಚಂದು) ಹೊಸದಾಗಿ ಆರಂಭಿಸಿರುವ ‘ನೆಮ್ಮದಿ ಊಟ’ ಹೋಟೆಲ್ ವಿರುದ್ಧ ಆನ್‌ಲೈನ್‌ನಲ್ಲಿ ಅಪಪ್ರಚಾರ ನಡೆಯುತ್ತಿದ್ದು, ಇದರಿಂದ ನೊಂದಿರುವ ಅವರು ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ. ಸೇವೆಯಲ್ಲಿ ಲೋಪಗಳಿದ್ದರೆ ನೇರವಾಗಿ ತಿಳಿಸಿ, ಸುಳ್ಳು ವದಂತಿ ಹಬ್ಬಿಸಬೇಡಿ ಎಂದು ಬೇಡಿಕೊಂಡಿದ್ದಾರೆ.

ಕೇವಲ 48 ಗಂಟೆಗಳಲ್ಲಿ ‘ಸ್ಕ್ರಿಪ್ಟ್ ಟು ಸ್ಕ್ರೀನ್’ ಸಿನಿಮಾ ನಿರ್ಮಾಣ; ಬೆಳ್ಳಿತೆರೆಗೆ ಸಿಎಂ ಆಗಿ ಎಂಟ್ರಿ ಕೊಡಲಿದ್ದಾರೆ ಸಿದ್ದರಾಮಯ್ಯ!

ಸಿಎಂ ಆಗಿ ಬೆಳ್ಳಿತೆರೆಗೆ ಸಿದ್ದರಾಮಯ್ಯ ಎಂಟ್ರಿ! ಯಾವುದು ಈ ಸಿನಿಮಾ?

ರಾಜೇಶ್‌ ಗೌಡ ಎಂಬುವವರ ಹೊಸ ಸಿನಿಮಾವೊಂದು ಕನ್ನಡ ಚಿತ್ರರಂಗದಲ್ಲಿ ಗಿನ್ನಿಸ್ ವಿಶ್ವದಾಖಲೆಯ ಗುರಿ ಹೊಂದಿದೆ. ಈ ಚಿತ್ರವನ್ನು ಕೇವಲ 48 ಗಂಟೆಗಳಲ್ಲಿ ಸಿದ್ಧಪಡಿಸಿ ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಈ ಸಿನಿಮಾದ ಮೂಲಕ ಬೆಳ್ಳಿಪರದೆಗೆ ತರಲು ಚಿತ್ರತಂಡ ಸಜ್ಜಾಗಿದೆ.

BBK 13: ‘ಇಷ್ಟು ದೊಡ್ಡ ತಪ್ಪು ಮಾಡಿದ್ದೀಯಾ, ನಾಚಿಕೆ ಆಗ್ತಿಲ್ವಾ?’: ಮಂಜನ ಬಳಿಕ ಕಿರಣ್ ಶಾಸ್ತ್ರಿ ವಿರುದ್ಧ ಸಿಡಿದೆದ್ದ ಸೌಂದರ್ಯಾ ಶೆಟ್ಟಿ!

ಏಕಾಏಕಿ ಸೌಂದರ್ಯಾ ರುದ್ರನರ್ತನ; ಕಿರಣ್ ಶಾಸ್ತ್ರಿ ಮೇಲೆ ಗುಡುಗಿದ ದೊಡ್ಮನೆ!‌

Bigg Boss Kannada 13: ಕಿರಣ್ ಶಾಸ್ತ್ರಿ ವಿರುದ್ಧ ನಟಿ ಸೌಂದರ್ಯಾ ಶೆಟ್ಟಿ ಅಕ್ಷರಶಃ ಕೆಂಡಕಾರಿದ್ದಾರೆ. ಮನಸ್ಸಿಗೆ ನೋವುಂಟು ಮಾಡಿದ ಶಾಸ್ತ್ರಿಯನ್ನು ಮನೆಯಲ್ಲಿ ಇರಲು ಬಿಡುವುದಿಲ್ಲ ಎಂದು ಸೌಂದರ್ಯಾ ಎಚ್ಚರಿಸಿದ್ದಾರೆ. ಲಿಖಿತ್ ಹಾಗೂ ವೈಷ್ಣವಿ ಕೂಡ ಕಿರಣ್ ವಿರುದ್ಧ ಆಕ್ರೋಶ ಹೊರಹಾಕಿದ್ದು, ಈ ಹೈಡ್ರಾಮಾದ ಅಸಲಿ ರಹಸ್ಯವು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

The Paradise Review: ಸ್ವರ್ಗದ ಹೆಸರಲ್ಲಿ ನರಕ ತೋರಿಸಿದ ನಾನಿ! ಪ್ರತಿ ದೃಶ್ಯದಲ್ಲೂ ರಾಚುವ ರಕ್ತದ ಹನಿ!

ನಾನಿ ನಟನೆಯ ‘ದಿ ಪ್ಯಾರಡೈಸ್ʼ ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

The Paradise Movie Review: ನಟ ನಾನಿ ಮತ್ತು ಶ್ರೀಕಾಂತ್ ಒಡೆಲಾ ಜೋಡಿಯ ‘ದಿ ಪ್ಯಾರಡೈಸ್’ ಚಿತ್ರವು ತೆರೆಕಂಡಿದೆ. ನಟನೆಯಲ್ಲಿ ನಾನಿ ಮಿಂಚಿದ್ದರೂ, ಚಿತ್ರದಲ್ಲಿನ ಮಿತಿಮೀರಿದ ರಕ್ತಪಾತ, ನಿಧಾನಗತಿಯ ದ್ವಿತೀಯಾರ್ಧ ಹಾಗೂ ದುರ್ಬಲ ತಾಯಿ-ಮಗನ ಸೆಂಟಿಮೆಂಟ್‌ ಪ್ರೇಕ್ಷಕರನ್ನು ನಿರಾಸೆಗೊಳಿಸುತ್ತದೆ. ಈ ಚಿತ್ರದ ಪೂರ್ಣ ವಿಮರ್ಶೆ ಇಲ್ಲಿದೆ.

Om Movie: ಅಬ್ಬಾ! ಮಾಜಿ ಮಾವ ರಜನಿಕಾಂತ್‌ ಮೇಲೆ ಧನುಷ್‌ಗೆ ಎಂಥ ಗೌರವ ನೋಡಿ; ಈ ಒಂದು ನಿರ್ಧಾರದಿಂದ ಎಲ್ಲರ ಮನಗೆದ್ದ ತಮಿಳು ನಟ

ಸಂಬಂಧ ಮುರಿದರೂ ಮಾಜಿ ಮಾವ ರಜನಿಕಾಂತ್ ಮೇಲಿನ ಧನುಷ್ ಪ್ರೀತಿ ಕಮ್ಮಿಯಾಗಿಲ್ಲ‌

Dhanush's Om Movie: ಸೂಪರ್‌ಸ್ಟಾರ್ ರಜನಿಕಾಂತ್ ಅವರ ‘ಜೈಲರ್ 2’ ಹಾಗೂ ನಟ ಸೂರ್ಯ ಅವರ ಹೊಸ ಚಿತ್ರಗಳಿಗೆ ಗೌರವ ನೀಡಿ ನಟ ಧನುಷ್‌ ತಮ್ಮ ʻಓಂʼ ಸಿನಿಮಾವನ್ನು ಮುಂದೂಡಿದ್ದಾರೆ. ಚಿತ್ರರಂಗದ ಹಿತದೃಷ್ಟಿಯಿಂದ ಅನಗತ್ಯ ಪೈಪೋಟಿ ತಪ್ಪಿಸಿರುವ ಧನುಷ್‌ ಅವರ ಈ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯ್ ದೇವರಕೊಂಡ - ರಶ್ಮಿಕಾ ಮಂದಣ್ಣ ಜೋಡಿಯ ‘ರಣಬಾಲಿ’ ಚಿತ್ರದ  ಮೊದಲು ಹಾಡು ರಿಲೀಸ್; ಮನಸೂರೆಗೊಳ್ಳುತ್ತಿದೆ ʻಎಂದಯ್ಯಾ ಸಾಮಿ‌ʼ ಸಾಂಗ್

ವಿಜಯ್‌ ದೇವರಕೊಂಡ–ರಶ್ಮಿಕಾ ಜೋಡಿಯ ‘ರಣಬಾಲಿ’ ಚಿತ್ರದ ಮೆಲೋಡಿ ಹಾಡು ರಿಲೀಸ್

Ranabaali Song Release: ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ʻರಣಬಾಲಿʼ ಪ್ಯಾನ್-ಇಂಡಿಯಾ ಚಿತ್ರವನ್ನು ರಾಹುಲ್ ಸಂಕೃತ್ಯನ್ ನಿರ್ದೇಶಿಸಿದ್ದು, ಅಜಯ್-ಅತುಲ್ ಸಂಗೀತ ಸಂಯೋಜಿಸಿದ್ದಾರೆ. 19ನೇ ಶತಮಾನದ ಬ್ರಿಟಿಷ್ ಕಾಲಘಟ್ಟದ ಹಿನ್ನೆಲೆಯುಳ್ಳ ಈ ಕೃತಿಯು ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 16ರಂದು ವಿಶ್ವದಾದ್ಯಂತ ಐದು ಭಾಷೆಗಳಲ್ಲಿ ತೆರೆಕಾಣಲಿದೆ.

ನಟ ದರ್ಶನ್‌ಗೆ ಹೈಕೋರ್ಟ್‌ನಲ್ಲೂ ಹಿನ್ನಡೆ; ಪತಿ ಪರವಾಗಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿ ವಜಾ, ವಿಚಾರಣಾ ನ್ಯಾಯಾಲಯದ ಆದೇಶ ಎತ್ತಿಹಿಡಿದ ಹೈಕೋರ್ಟ್

ದರ್ಶನ್‌ಗೆ ಹೈಕೋರ್ಟ್ ಶಾಕ್: ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿ ವಜಾ!

Actor Darshan Case: ನಟ ದರ್ಶನ್‌ಗೆ ಹೈಕೋರ್ಟ್‌ನಲ್ಲಿ ತೀವ್ರ ಹಿನ್ನಡೆಯಾಗಿದೆ. 14ನೇ ಆರೋಪಿ ಪ್ರದೋಷ್ ರಾವ್‌ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿದ 59ನೇ ಸಿಸಿಹೆಚ್ ಕೋರ್ಟ್ ಆದೇಶ ಪ್ರಶ್ನಿಸಿ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿ. ಶ್ರೀಶಾನಂದ ವಜಾಗೊಳಿಸಿದ್ದಾರೆ.

Vaishnavi Chaitanya: ‘ನನ್ನ ವಯಸ್ಸು 32 ಅಲ್ಲ, 25..’; ಆಧಾರ್ ಕಾರ್ಡ್ ತೋರಿಸಿ ಸ್ಪಷ್ಟನೆ ನೀಡಿದ ತೆಲುಗು ನಟಿ!

ಆಧಾರ್ ಕಾರ್ಡ್ ತೋರಿಸಿ ಅಸಲಿ ವಯಸ್ಸು ತಿಳಿಸಿದ ʻಬೇಬಿʼ ನಟಿ ವೈಷ್ಣವಿ ಚೈತನ್ಯ

Vaishnavi Chaitanya Age: ನಟಿ ವೈಷ್ಣವಿ ಚೈತನ್ಯ ಅವರು ತಮ್ಮ ವಯಸ್ಸಿನ ವಿವಾದಕ್ಕೆ ಅಧಿಕೃತ ತೆರೆ ಎಳೆದಿದ್ದಾರೆ. ವಿಕಿಪೀಡಿಯಾದಲ್ಲಿ ತಮ್ಮ ವಯಸ್ಸನ್ನು 32 ಎಂದು ಮಾಹಿತಿ ನೀಡಿದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಭುಗಿಲೆದ್ದಿತ್ತು. ಸಂದರ್ಶನವೊಂದರಲ್ಲಿ ತಮ್ಮ ಆಧಾರ್ ಕಾರ್ಡ್‌ ತೋರಿಸಿದ ಅವರು, ತಾವು 2001ರಲ್ಲಿ ಜನಿಸಿದ್ದು ಎಂದು ಹೇಳಿದ್ದಾರೆ.

ಪುನರ್ಜನ್ಮದ ಸುತ್ತ ಸಾಗುವ ಸಸ್ಪೆನ್ಸ್ ಥ್ರಿಲ್ಲರ್ 'ತರಂಗಾಂತರಂಗ' ಟೀಸರ್ ರಿಲೀಸ್: ಸ್ಯಾಂಡಲ್‌ವುಡ್‌ಗೆ ನಾಯಕ-ನಿರ್ದೇಶಕನಾಗಿ ಉಡುಪಿಯ ಶ್ರೀಷ ಎಂಟ್ರಿ!

ಪುನರ್ಜನ್ಮದ ಕಥೆ ಹೇಳುವ 'ತರಂಗಾಂತರಂಗ' ಸಿನಿಮಾದ ಟೀಸರ್‌ ರಿಲೀಸ್‌

Tarangantaranga Movie Teaser: 'ತರಂಗಾಂತರಂಗ' ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಉಡುಪಿಯ ಬೈಂದೂರು ಮೂಲದ ಪ್ರತಿಭೆ ಶ್ರೀಷ ಹೀರೋ ಹಾಗೂ ನಿರ್ದೇಶಕರಾಗಿ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದಾರೆ. ಪುನರ್ಜನ್ಮ ಹಾಗೂ ದೈವಿಕ ಹರಕೆ ತೀರಿಸದಿದ್ದಾಗ ಎದುರಾಗುವ ಪರಿಣಾಮಗಳ ಸುತ್ತ ಈ ಸಸ್ಪೆನ್ಸ್ ಥ್ರಿಲ್ಲರ್ ಸಾಗಲಿದೆ. ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರದಲ್ಲಿದ್ದಾರೆ.

Sigma Movie: ತಮಿಳುನಾಡು ಸಿಎಂ ವಿಜಯ್‌ ಪುತ್ರನ ಮೊದಲ ಸಿನಿಮಾದ ಹಾಡಿಗೆ ‌ʻಕಿಚ್ಚʼ ಸುದೀಪ್ ಪುತ್ರಿ ಸಾನ್ವಿ ಧ್ವನಿ; ಈ ಸಾಂಗ್‌ ಹೇಗಿದೆ ಗೊತ್ತಾ?

ತಮಿಳುನಾಡು CM ವಿಜಯ್‌ ಪುತ್ರನ ʻಸಿಗ್ಮಾʼ ಸಿನಿಮಾಗೆ ಹಾಡಿದ ಸಾನ್ವಿ ಸುದೀಪ್‌

Saanvi Sudeep: ತಮಿಳುನಾಡು ಸಿಎಂ ವಿಜಯ್‌ ಪುತ್ರ ಜೇಸನ್‌ ಸಂಜಯ್‌ ನಿರ್ದೇಶನದ ʻಸಿಗ್ಮಾʼ ಸಿನಿಮಾದ ‘ಸುಲೋಚನ’ ಹಾಡಿಗೆ ಸಾನ್ವಿ ಸುದೀಪ್ ಧ್ವನಿ ನೀಡಿದ್ದಾರೆ. ಸಂದೀಪ್ ಕಿಶನ್ ನಟನೆಯ ಈ ಚಿತ್ರಕ್ಕೆ ಎಸ್. ಥಮನ್ ಸಂಗೀತ ನೀಡಿದ್ದು, ಲೈಕಾ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ.

ʻಬಲರಾಮನ ದಿನಗಳುʼ ನಿರ್ಮಾಪಕರಿಗೆ ಮೋಸವಾಯ್ತಾ? ಪ್ರತಿಷ್ಠಿತ ಕೆವಿಎನ್‌ ಪ್ರೊಡಕ್ಷನ್ಸ್‌ ವಿರುದ್ಧ ನಿರ್ಮಾಪಕರ ಸಂಘಕ್ಕೆ ದೂರು, 2 ಕೋಟಿ ರೂ. ಪರಿಹಾರಕ್ಕೆ ಆಗ್ರಹ!

‘ಬಲರಾಮನ ದಿನಗಳು’ ಚಿತ್ರಕ್ಕೆ ಮೋಸ? ಕೆವಿಎನ್ ಪ್ರೊಡಕ್ಷನ್ಸ್ ವಿರುದ್ಧ ದೂರು!

Balaramana Dinagalu Movie: ವಿನೋದ್‌ ಪ್ರಭಾಕರ್‌ ನಟನೆಯ ʻಬಲರಾಮನ ದಿನಗಳುʼ ಸಿನಿಮಾದ ವಿತರಣೆಯಲ್ಲಿ ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯು ತಮಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದೆ ಎಂದು ಆರೋಪಿಸಿ ಚಿತ್ರದ ನಿರ್ಮಾಪಕರು ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ. ಸುಳ್ಳು ಲೆಕ್ಕಪತ್ರ ಸೃಷ್ಟಿ, ಗಳಿಕೆಯ ಹಣವನ್ನು ದುರ್ಬಳಕೆ ಹಾಗೂ ಜಿಎಸ್‌ಟಿ ವಂಚನೆಯ ಗಂಭೀರ ಆರೋಪ ಮಾಡಲಾಗಿದೆ.

ವಿದೇಶಿ ಗಲ್ಲಾಪೆಟ್ಟಿಗೆಯಲ್ಲಿ ‘ಹನುಮಾನ್ ಅಂಶ್’ ಅಬ್ಬರ; ಕೇವಲ 12 ದಿನಗಳಲ್ಲಿ 33 ಕೋಟಿ ರೂ. ಕಲೆಕ್ಷನ್; ವಿತರಣೆಯಲ್ಲಿ ಹೊಂಬಾಳೆ ಮೈಲಿಗಲ್ಲು!

ವಿದೇಶಿ ಗಲ್ಲಾಪೆಟ್ಟಿಗೆಯಲ್ಲಿ ‘ಹನುಮಾನ್ ಅಂಶ್’ ಅಬ್ಬರ; 33 ಕೋಟಿ ಕಲೆಕ್ಷನ್!

‘ಹನುಮಾನ್ ಅಂಶ್’ ಸಿನಿಮಾವು ವಿದೇಶಿ ಮಾರುಕಟ್ಟೆಯಲ್ಲಿ ಅಪಾರ ಯಶಸ್ಸು ಕಂಡಿದೆ. ಕೇವಲ 12 ದಿನಗಳಲ್ಲೇ 33+ ಕೋಟಿ ರೂಪಾಯಿ ಗಳಿಸಿ 2026ರ ಸಾಲಿನಲ್ಲಿ ದಾಖಲೆ ಬರೆದಿದೆ. ಮಹಾರಾಜ್‌ಜಿಯ ಭಕ್ತಿ ಸಂದೇಶ ಅನಿವಾಸಿ ಭಾರತೀಯರ ಮನಗೆದ್ದಿದೆ. ಹೊಂಬಾಳೆ ಸಂಸ್ಥೆಯ ಜಾಗತಿಕ ವಿತರಣೆಯು ಚಿತ್ರದ ಗೆಲುವಿಗೆ ಪ್ರಮುಖ ಶಕ್ತಿಯಾಗಿದೆ.

ʻಹಿಂಸೆ ತಡೆಯಲು ಆಗುತ್ತಿಲ್ಲ, ಒಂದು ತೊಟ್ಟು ವಿಷ ಕೊಡಿಸಿʼ; ಕೋರ್ಟ್‌ನಲ್ಲಿ ಪವಿತ್ರಾ ಗೌಡ ಪರ ವಕೀಲರು ಹೇಳಿದ್ರು ಶಾಕಿಂಗ್‌ ವಿಚಾರ!

ʻತೊಟ್ಟು ವಿಷ ಕೊಡಿಸಿʼ ಅಂತ ಪವಿತ್ರಾ ಕೇಳಿದ್ದೇಕೆ? ವಕೀಲರು ಹೇಳಿದ್ದೇನು?

ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಿಚಾರಣೆಯ ವೇಳೆ ಬೆಂಗಳೂರು ಸೆಷನ್ಸ್ ನ್ಯಾಯಾಲಯದಲ್ಲಿ ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ. ಪರಪ್ಪನ ಅಗ್ರಹಾರದಲ್ಲಿ ನೈಜೀರಿಯನ್ ಕೈದಿಗಳಿಂದ ತೀವ್ರ ಹಿಂಸೆ ಮತ್ತು ಕೊಲೆ ಬೆದರಿಕೆ ಎದುರಿಸುತ್ತಿರುವ ಪವಿತ್ರಾ, ‘ವಿಷವಾದರೂ ಕೊಡಿ’ ಎಂದು ಗೋಳಾಡುತ್ತಿದ್ದಾರೆ ಎಂದು ವಕೀಲರು ವಾದಿಸಿದ್ದಾರೆ.

‘ಚಂದ್ರಹಾಸ’ ಚಿತ್ರದ ಮೂಲಕ ಹೀರೋ ಆದ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಹರೀಶ್ ಹಿರಿಯೂರು; ಭರವಸೆ ಮೂಡಿಸಿದ ಟ್ರೇಲರ್, ಅಕ್ಟೋಬರ್ 23ಕ್ಕೆ ರಿಲೀಸ್!

ʻಚಂದ್ರಹಾಸʼ ಚಿತ್ರದ ಮೂಲಕ ಹೀರೋ ಆದ ʻಕಾಮಿಡಿ ಕಿಲಾಡಿಗಳುʼ ಹರೀಶ್ ಹಿರಿಯೂರು

ʻಕಾಮಿಡಿ ಕಿಲಾಡಿಗಳುʼ ಖ್ಯಾತಿಯ ಹಾಸ್ಯ ನಟ ಹರೀಶ್ ಹಿರಿಯೂರು ಅವರು ʻಚಂದ್ರಹಾಸʼ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ರಂಗಭೂಮಿ ಪ್ರತಿಭೆಗಳ ಸಂಗಮದಲ್ಲಿ ಆನಂದ್ ಕಲಕಬಂಡಿ ನಿರ್ದೇಶಿಸಿರುವ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅಕ್ಟೋಬರ್ 23 ರಂದು ಈ ಸಿನಿಮಾ ತೆರೆಗೆ ಬರುತ್ತಿದೆ.

Loading...