ನವದೆಹಲಿ: ಇತ್ತೀಚಿನ ದಿನದಲ್ಲಿ ಹಣದಾಸೆಗೆ ಏನು ಬೇಕಾದರೂ ಮಾಡುವ ಮನೋಭಾವನೆ ಉಂಟಾಗಿದೆ. ಆನ್ಲೈನ್ ನಲ್ಲಿ ವಂಚಿಸಿ ಹಣ ಪಡೆಯುವುದು ಒಂದು ಕಡೆಯಾದರೆ ಇನ್ನು ಕೆಲವೆಡೆ ಬೆದರಿಕೆ ಹಾಕಿ ಹಣ ವಂಚಿಸುವವರು ಇದ್ದಾರೆ. ತುಂಬಾ ನಂಬುವ ವ್ಯಕ್ತಿಯೇ ಖಾಸಗಿ ವಿಚಾರಗಳನ್ನು ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ್ದ ಅನೇಕ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತದೆ. ಅಂತೆಯೇ ಕಿರುತೆರೆ ನಟಿ ಆಶಾ ಜೋಯಿಸ್ (Asha Jois) ಅವರು ಮಹಿಳೆಯೊಬ್ಬರಿಗೆ ಬ್ಲ್ಯಾಕ್‌ಮೇಲ್(Blackmail Case) ಮಾಡಿದ್ದು ಈ ಆರೋಪದ ಅಡಿಯಲ್ಲಿ ಇತ್ತೀಚೆಗಷ್ಟೇ ಪ್ರಕರಣ ದಾಖಲಿಸಲಾಗಿದೆ. ಕಿರುತೆರೆ , ಸಿನಿಮಾ, ಫ್ಯಾಷನ್ ಇವೆಂಟ್ ನಲ್ಲಿ ಮಿಂಚಿದ್ದ ಈ ನಟಿಯ ವಿರುದ್ಧ ಹಣದಾಸೆಗೆ ತನ್ನ ಸ್ನೇಹಿತೆಗೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಎರಡು ಕೋಟಿ ಹಣವನ್ನು ನೀಡಬೇಕು ಇಲ್ಲವಾದರೆ ಆಕೆಯ ಖಾಸಗಿ ಫೋಟೊ , ವಿಡಿಯೊ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
61 ವರ್ಷದ ಪಾರ್ವತಿ ಹೆಸರಿನ ಮಹಿಳೆಯು ನಟಿ ಆಶಾ ಜೋಯಿಸ್ ವಿರುದ್ದ ಬೆಂಗಳೂರಿನ ತಿಲಕ್ ನಗರ ಠಾಣೆಯಲ್ಲಿ ಈ ಕುರಿತು ದೂರುದಾಖಲಿಸಿದ್ದಾರೆ. ಆಕೆಯ ದೂರಿನ ಅನ್ವಯ 3 ವರ್ಷದ ಹಿಂದೆ ಪಾರ್ವತಿ ಅವರಿಗೆ ಆಶಾ ಜೋಯಿಸ್ ಪರಿಚಯವಾಗಿದ್ದರು. ತಾನೊಬ್ಬಳು ಫೇಮಸ್ ನಟಿ, ಶೃಂಗೇರಿ ಮಠದ ಜೋಯಿಸ್ ಕುಟುಂಬದವಳು ಎಂದು ಅವರು ಹೇಳಿದ್ದರು. ಇದೆ ಪರಿಚಯವೇ ಬಳಿಕ ಒಳ್ಳೆಯ ಸ್ನೇಹ ಸಂಬಂಧ ಬೆಸೆಯುವಂತಾಯಿತು. ಬಳಿಕ ಅವರೊಂದಿಗೆ ಬಹಳ ಆಪ್ತ ವಾಗಿದ್ದೆ. ಅನೇಕ ಖಾಸಗಿ ವಿಚಾರಗಳನ್ನು ಕೂಡ ಶೇರ್ ಮಾಡಿಕೊಂಡಿದ್ದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪಾರ್ವತಿ ಅವರು ಪ್ರತಿಷ್ಠಿತ ಕಂಪೆನಿಯ ಮಾಲೀಕನನ್ನು ಮದುವೆಯಾಗಿದ್ದರು. ಈ ವಿಚಾರ ಗೊತ್ತಾಗಿದ್ದ ಕೂಡಲೇ ಪಾರ್ವತಿ ಅವರ ಫೋನ್‌ದಿಂದ ಖಾಸಗಿ ವಿಡಿಯೋ, ಫೋಟೊ ಮತ್ತು ವಾಯ್ಸ್ ರೆಕಾರ್ಡ್‌ಗಳನ್ನು ಎಲ್ಲವನ್ನು ಎಗರಿಸಿದ್ದರು. ಅಷ್ಟು ಮಾತ್ರವಲ್ಲದೆ ತನ್ನ ಪತಿಯ ವಿರುದ್ಧವೇ ಎತ್ತಿ ಕಟ್ಟಿದ್ದರು. ನಮ್ಮ ನಡುವೆ ಜಗಳ , ಮನಸ್ಥಾಪ ಉಂಟಾಗುವ ಹಾಗೆ ಅವರು ಮಾಡಿದ್ದಾರೆ ಎಂದು ದೂರಿದ್ದಾರೆ.
ಬಳಿಕ ತನ್ನಿಂದ ಹಣ ಲಪಟಾಯಿಸಲು ಆಶಾ ಎರಡು ಕೋಟಿ ಹಣವನ್ನು ತಮ್ಮ ಪತಿಯ ಬಳಿ ತೆಗೆದುಕೊಳ್ಳುವಂತೆ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದರು. ಇದಕ್ಕೆ ಒಪ್ಪದಿದ್ದಾಗ ಪಾರ್ವತಿ ಅವರ ಪರಿಚಯಸ್ಥರಿಗೆ ಖಾಸಗಿ ವಿಡಿಯೋ ಫೋಟೊ ಮತ್ತು ವಾಯ್ಸ್ ರೆಕಾರ್ಡ್ ಎಲ್ಲವನ್ನು ಕಳುಹಿಸಿ ದ್ದಾರೆ ಇನ್ನು ಬೇರೆ ಜನರಿಗೆ ಕೂಡ ಕಳಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ನನ್ನ ಮರ್ಯಾದೆ ಹಾನಿಯಾಗಿದೆ ಜೊತೆಗೆ ಆಕೆಯ ಬೆದರಿಕೆಯಿಂದ ಮಾನಸಿಕ ಖಿನ್ನತೆಗೆ ಸಮಸ್ಯೆಗೂ ಕೂಡ ಒಳಗಾಗಿದ್ದು ತತ್ ಕ್ಷಣ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ
ಇದನ್ನು ಓದಿ:I Am God Movie: ರವಿ ಗೌಡ ನಟನೆಯ ʼI am godʼ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ ರಿಯಲ್ ಸ್ಟಾರ್ ಉಪೇಂದ್ರ
ಆಶಾ ಅವರು ಈ ಹಿಂದೆ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಮಿಂಚಿದ್ದ ನಟಿಯಾಗಿದ್ದರು. ಮನಸು ಎಂಬ ಸಿನಿಮಾದಲ್ಲಿ ಕೂಡ ಅಭಿನಯಿಸಿದ್ದರು. ಆದರೆ ಅವರಿಗೆ ಅಷ್ಟಾಗಿ ಅವಕಾಶ ಸಿಕ್ಕಿರಲಿಲ್ಲ. ಬಳಿಕ ಮಿಸೆಸ್‌ಇಂಡಿಯಾ ಬ್ಯೂಟಿಫುಲ್ ಸ್ಮೈಲ್, ಬ್ಯೂಟಿಫುಲ್ ಹೇರ್ ಪ್ರಶಸ್ತಿಗಳನ್ನು ಕೂಡ ಮುಡಿಗೇರಿಸಿ ಕೊಂಡಿದ್ದರು. ಆದರೆ ಈಗ ಹಣದಾಸೆಗೆ ಸ್ನೇಹಿತೆಗೆ ಬ್ಲ್ಯಾಕ್ ಮೇಲೆ ಮಾಡಿದ್ದಾರೆ ಎಂಬ ದೂರಿನಲ್ಲಿ ಪೊಲೀಸರ ಅತಿಥಿ ಯಾಗಿದ್ದಾರೆ.ಸದ್ಯ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದು , ತನಿಖೆ ಶುರು ಮಾಡಿ, ವಿವಿಧ ಆಯಾಮದಲ್ಲಿ ವಿಚಾರಣೆ ಮಾಡುವ ಸಾಧ್ಯತೆ ಇದೆ. ಆದರೆ ಈ ಆರೋಪಗಳಿಗೆ ಆಶಾ ಜೋಯಿಸ್ ಇನ್ನು ಪ್ರತಿಕ್ರಿಯೆಯನ್ನು ನೀಡಿಲ್ಲ