ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rishab Shetty: 'ಕಾಂತಾರ: ಚಾಪ್ಟರ್‌ 1' ಚಿತ್ರಕ್ಕಾಗಿ 3 ವರ್ಷ ಮೀಸಲಿಟ್ಟ ರಿಷಬ್‌ ಶೆಟ್ಟಿಗೆ ಸಿಕ್ಕ ಸಂಭಾವನೆ ಎಷ್ಟು?

Kantara Chapter 1: ಈ ವರ್ಷದ ಬಹುನಿರೀಕ್ಷಿತ ಚಿತ್ರ ʼಕಾಂತಾರ: ಚಾಪ್ಟರ್‌ 1 ರಿಲೀಸ್‌ಗೆ ಸಜ್ಜಾಗಿದೆ. ಅಕ್ಟೋಬರ್‌ 2ರಂದು ವಿಶ್ವಾದ್ಯಂತ 7ಕ್ಕೂ ಹೆಚ್ಚು ಭಾಷೆಗಳಲ್ಲಿ ತೆರೆಗೆ ಬರಲಿದೆ. ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದು, ಅವರು ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನುವ ಕುತೂಹಲ ಮೂಡಿದೆ.

'ಕಾಂತಾರ: ಚಾಪ್ಟರ್‌ 1' ಚಿತ್ರಕ್ಕಾಗಿ ರಿಷಬ್‌ಗೆ ಸಿಕ್ಕ ಸಂಭಾವನೆ ಎಷ್ಟು?

-

Ramesh B Ramesh B Sep 30, 2025 5:54 PM

ಬೆಂಗಳೂರು: ಸಿನಿ ಜಗತ್ತೇ ಕುತೂಹಲದಿಂದ ಕಾಯುತ್ತಿರುವ ಸ್ಯಾಂಡಲ್‌ವುಡ್‌ನ ʼಕಾಂತಾರ ಚಾಪ್ಟರ್‌ 1ʼ (Kantara Chapter 1) ರಿಲೀಸ್‌ಗೆ ದಿನಗಣನೆ ಆರಂಭವಾಗಿದೆ. ರಿಷಬ್‌ ಶೆಟ್ಟಿ (Rishab Shetty)-ಹೊಂಬಾಳೆ ಫಿಲ್ಮ್ಸ್‌ (Hombale Films) 2ನೇ ಬಾರಿಗೆ ಒಂದಾಗುತ್ತಿರುವ ಈ ಚಿತ್ರದ ಮೇಲಿನ ನಿರೀಕ್ಷೆ ಬೆಟ್ಟದಷ್ಟಿದೆ. ಕನ್ನಡದ ಜತೆಗೆ ವಿವಿಧ ಭಾಷೆಗಳಲ್ಲಿ, 30ಕ್ಕೂ ಹೆಚ್ಚು ದೇಶಗಳಲ್ಲಿ ಅಕ್ಟೋಬರ್‌ 2ರಂದು ಚಿತ್ರ ರಿಲೀಸ್‌ ಆಗಲಿದೆ. ತುಳುನಾಡಿನ ಜಾನಪದ ಕಥೆಯನ್ನು, ನಂಬಿಕೆಯನ್ನು ರಿಷಬ್‌ ಶೆಟ್ಟಿ ರೋಚಕವಾಗಿ ಕಟ್ಟಿಕೊಟ್ಟಿದ್ದು, ನಾಯಕನಾಗಿಯೂ ನಟಿಸಿದ್ದಾರೆ. ಚಿತ್ರತಂಡ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದು, ವಿವಿಧ ನಗರಗಳಲ್ಲಿ ಪ್ರೆಸ್‌ಮೀಟ್‌, ಪ್ರೀ-ರಿಲೀಸ್‌ ಕಾರ್ಯಕ್ರಮ ಆಯೋಜಿಸುತ್ತಿದೆ. ಸದ್ದಿದಲ್ಲದೆ ಚಿತ್ರೀಕರಣ ಮುಗಿಸಿದ ರಿಷಬ್‌ ಆ್ಯಂಡ್‌ ಟೀಮ್‌ ಆರಂಭದಲ್ಲಿ ಕಲಾವಿದರು, ಕಥೆ ಸೇರಿದಂತೆ ಎಲ್ಲ ವಿಚಾರವನ್ನು ಗುಟ್ಟಾಗಿ ಇರಿಸಿತ್ತು. ಇತ್ತೀಚೆಗೆ ಚಿತ್ರದ ವಿವರಗಳನ್ನು ಒಂದೊಂದಾಗಿಯೇ ಬಹಿರಂಗಪಡಿಸುತ್ತಿದೆ. ಅದರಲ್ಲಿಯೂ ಕೆಲವು ದಿನಗಳ ಹಿಂದೆ ರಿಲೀಸ್‌ ಆದ ಮೇಕಿಂಗ್‌ ವಿಡಿಯೊ ನೋಡಿ ವೀಕ್ಷಕರು ದಂಗಾಗಿ ಹೋಗಿದ್ದರು.

ಸುಮಾರು 250ಕ್ಕೂ ಹೆಚ್ಚು ದಿನಗಳ ಕಾಲ ಶೂಟಿಂಗ್‌ ನಡೆದಿದ್ದು, ಇದಕ್ಕಾಗಿ ಸಾವಿರಾರು ಕಾರ್ಮಿಕರು ಹಗಲಿರುಳು ಶ್ರಮಿಸಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಅದಕ್ಕೆ ತಕ್ಕಂತೆ ರಿಷಬ್‌ ಶೆಟ್ಟಿ ಸುಮಾರು 3 ವರ್ಷ ಈ ಚಿತ್ರಕ್ಕಾಗಿಯೇ ಮೀಸಲಿಟ್ಟಿದ್ದರು. ಕುದುರೆ ಸವಾರಿ, ಕಳರಿಪಯಟ್ಟು ಕಲಿತಿದ್ದರು. ಬೆಂಗಳೂರು ಬಿಟ್ಟು ಕುಂದಾಪುರಕ್ಕೆ ತೆರಳಿ ಅಲ್ಲೇ ನೆಲೆಸಿದ್ದರು. ಹೀಗೆ ಚಿತ್ರಕ್ಕಾಗಿ ಸಾಕಷ್ಟು ಶ್ರಮಪಟ್ಟಿರುವ ಅವರು ಎಷ್ಟು ಸಂಭಾವನೆ ಪಡೆದಿರಬಹುದು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ.



ಈ ಸುದ್ದಿಯನ್ನೂ ಓದಿ: Singer Abby V: ಭಾರಿ ಸದ್ದು ಮಾಡುತ್ತಿದೆ ʼಕಾಂತಾರ: ಚಾಪ್ಟರ್‌ 1ʼ ಚಿತ್ರದ ʼಬ್ರಹ್ಮಕಲಶʼ ಹಾಡು; ಶಿವ ಸ್ತುತಿಗೆ ಜೀವ ತುಂಬಿದ ಸಿಂಗರ್‌ ಅಭಿ ಯಾರು?

ವರದಿಯೊಂದರ ಪ್ರಕಾರ ರಿಷಬ್‌ ಶೆಟ್ಟಿ ಈ ಚಿತ್ರದಲ್ಲಿನ ನಟನೆ ಮತ್ತು ನಿರ್ದೇಶನಕ್ಕಾಗಿ ಒಂದೇ ಒಂದು ರೂಪಾಯಿ ಸಂಭಾವನೆ ಪಡೆದಿಲ್ಲ. ಅದರ ಬದಲು ಅವರು ಬರುವ ಲಾಭಾಂಶದಲ್ಲಿ ಇಂತಿಷ್ಟು ಪ್ರಮಾಣದ ಷೇರು ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಅಂದರೆ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಎಷ್ಟು ಕಲೆಕ್ಷನ್‌ ಮಾಡುತ್ತೋ ಅದರ ಮೇಲೆ ರಿಷಬ್‌ ಶೆಟ್ಟಿ ಅವರ ಗಳಿಕೆ ನಿಂತಿದೆ. ಅವರು ಎಷ್ಟು ಪ್ರಮಾಣದ ಪಾಲು ಪಡೆದುಕೊಳ್ಳಲಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿಲ್ಲ.

ʼಕಾಂತಾರ: ಚಾಪ್ಟರ್‌ 1ʼ ಚಿತ್ರದ ಬಜೆಟ್‌ ಸುಮಾರು 125 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಮೂಲವೊಂದರೆ ಪ್ರಕಾರ ರಿಷಬ್‌ ನಿರ್ಮಾಣದಲ್ಲಿಯೂ ಕೈಜೋಡಿಸಿದ್ದಾರೆ ಎನ್ನುವ ವದಂತಿಯೂ ಇದೆ. ಅದಾಯೂ ಈ ಬಗ್ಗೆ ಅಧಿಕೃತವಾಗಿ ಅವರು ಎಲ್ಲೂ ಹೇಳಿಕೊಂಡಿಲ್ಲ. ವಿಶೇಷ ಎಂದರೆ ಚಿತ್ರದಲ್ಲಿ ವಸ್ತ್ರ ವಿನ್ಯಾಸಕಿಯಾಗಿ ರಿಷಬ್‌ ಅವರ ಪತ್ನಿ ಪ್ರಗತಿ ಶೆಟ್ಟಿ ಕಾರ್ಯ ನಿರ್ವಹಿಸಿದ್ದಾರೆ.

ಕಥೆಯ ಹಿನ್ನೆಲೆ ಏನು?

ಸದ್ಯ ಚಿತ್ರದ ಟ್ರೈಲರ್‌ ರಿಲೀಸ್‌ ಆಗಿದ್ದು, ಕಥೆಯ ಬಗ್ಗೆ ಒಂದಷ್ಟು ಹಿಂಟ್ಸ್‌ ಸಿಕ್ಕಿದೆ. ಚಿತ್ರ ಸುಮಾರು 4-5ನೇ ಶತಮಾನದ ಕದಂಬ ರಾಜ ಮನೆತನ ಆಡಳಿತದ ಕಾಲಘಟ್ಟದಲ್ಲಿ ಸಾಗಲಿದೆ. ಅಂದು ಕರಾವಳಿಯ ಜನಜೀವನ ಯಾವ ರೀತಿ ಇತ್ತು, ಬುಡಕಟ್ಟು ಜನಾಂಗದ ಸಂಸ್ಕೃತಿ ಹೇಗಿತ್ತು ಎನ್ನುವುದನ್ನು ರಿಷಬ್‌ ಶೆಟ್ಟಿ ತೆರೆ ಮೇಲೆ ತಂದಿದ್ದಾರೆ ಎನ್ನುವ ವಿಚಾರ ಗೊತ್ತಾಗಿದೆ. ಭಾರತೀಯ ಇತಿಹಾಸದಲ್ಲಿ ಕದಂಬರ ಕಾಲಘಟ್ಟವನ್ನು ಸುವರ್ಣ ಯುಗವೆಂದು ಬಣ್ಣಿಸಲಾಗುತ್ತದೆ. ಇದೇ ಕಾರಣಕ್ಕೆ ಚಿತ್ರ ಯಾವ ರೀತಿ ಮೂಡಿ ಬಂದಿದೆ ಎನ್ನುವ ಕುತೂಹಲವೂ ಮನೆ ಮಅಡಿದೆ.