ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kantara Chapter 1: ಕಾಂತಾರ ಚಾಪ್ಟರ್ 1 ರಿಲೀಸ್‌ಗೆ ಕ್ಷಣಗಣನೆ: 1000 ಕೋಟಿ ಕಲೆಕ್ಷನ್ ಮಾಡೋದು ಗ್ಯಾರಂಟಿ!

Kantara Chapter 1: ದೈವತ್ವ, ಮನುಷ್ಯ ಹಾಗೂ ಪ್ರಕೃತಿಯ ನಡುವಿನ ಸಂಬಂಧ, ರಾಜ ಪರಂಪರೆಯ ಸಂಸ್ಕೃತಿ ಇತ್ಯಾದಿ ವಿಚಾರಗಳ ಸುತ್ತ ಸಾಗುವ ಕಾಂತಾರ ಸಿನಿಮಾವು 2025ರಲ್ಲಿ ಭಾರತೀಯ ಸಿನಿಮಾ ರಂಗದಲ್ಲಿ 1000ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ‌. ಈ ವರ್ಷದಲ್ಲಿ ಈ ಮಟ್ಟಿಗೆ ದಾಖಲೆಯನ್ನು ಕಾಂತಾರ ಬಿಟ್ಟು ಉಳಿದ್ಯಾವುದೇ ಸಿನಿಮಾಮಾಡಲು ಸಾಧ್ಯವಿಲ್ಲ ಎಂದೇ ಹೇಳಲಾಗುತ್ತಿದೆ..

ಕಾಂತಾರ ಚಾಪ್ಟರ್ 1 ಸಿನಿಮಾ 1000 ಕೋಟಿ ಕಲೆಕ್ಷನ್ ಮಾಡುವ ಚಿತ್ರ ಆಗುತ್ತಾ?

-

Profile Pushpa Kumari Sep 30, 2025 4:27 PM

ಬೆಂಗಳೂರು: ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಟ ರಿಷಭ್ ಶೆಟ್ಟಿ ಅವರು ನಟಿಸಿ ನಿರ್ದೇಶಿಸುತ್ತಿರುವ ಕಾಂತಾರ ಚಾಪ್ಟರ್ 1 (Kantara: Chapter 1) ಸಿನಿಮಾ ರಿಲೀಸ್ ಗೂ ಮುನ್ನವೇ ಪ್ರೇಕ್ಷಕರಲ್ಲಿ ದೊಡ್ಡ ಮಟ್ಟಿಗೆ ನಿರೀಕ್ಷೆ ಹುಟ್ಟಿಸಿದೆ. 2022ರಲ್ಲಿ ತೆರೆಕಂಡ ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟಕ್ಕೆ ಯಶಸ್ವಿಯಾದ ಬಳಿಕ ಪ್ರೇಕ್ಷಕರ ಒತ್ತಾಸೆಗೆ ಮಣಿದು ಕಾಂತಾರ ಚಾಪ್ಟರ್ 1 ಪ್ರಾಜೆಕ್ಟ್ ಗೆ ನಟ ರಿಷಭ್ ಸಮ್ಮತಿ ಕೊಟ್ಟಿದ್ದರು. ಅಂತೆಯೇ ಕಾಂತಾರ ಚಾಪ್ಟರ್ ರಿಲೀಸ್ ಗೆ ಇನ್ನು ಕೇವಲ ಒಂದೇ ದಿನ ಬಾಕಿ ಉಳಿದಿದೆ. ಈಗಾಗಲೇ ಆನ್ಲೈನ್ ನಲ್ಲಿ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ಭರ್ಜರಿಯಾಗಿ ನಡೆಯುತ್ತಿದೆ. ದೈವತ್ವ, ಮನುಷ್ಯ ಹಾಗೂ ಪ್ರಕೃತಿಯ ನಡುವಿನ ಸಂಬಂಧ, ರಾಜ ಪರಂಪರೆಯ ಸಂಸ್ಕೃತಿ ಇತ್ಯಾದಿ ವಿಚಾರಗಳ ಸುತ್ತ ಸಾಗುವ ಕಾಂತಾರ ಸಿನಿಮಾವು 2025ರಲ್ಲಿ ಭಾರತೀಯ ಸಿನಿಮಾ ರಂಗದಲ್ಲಿ 1000ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ‌. ಈ ವರ್ಷದಲ್ಲಿ ಈ ಮಟ್ಟಿಗೆ ದಾಖಲೆಯನ್ನು ಕಾಂತಾರ ಬಿಟ್ಟು ಉಳಿದ್ಯಾವುದೇ ಸಿನಿಮಾ ಮಾಡಲು ಸಾಧ್ಯವಿಲ್ಲ ಎಂದೇ ಹೇಳಲಾಗುತ್ತಿದೆ.

ಕಾಂತಾರ ಸಿನಿಮಾ 2022ರಲ್ಲಿ ತೆರೆಕಂಡಾಗ ಅದಕ್ಕೆ ಅಷ್ಟಾಗಿ ಪ್ರಚಾರ ನೀಡಿರಲಿಲ್ಲ. ಚಿತ್ರವು ಪ್ರಾದೇಶಿಕ ಮಟ್ಟದಲ್ಲಿ ಯಶಸ್ಸು ಪಡೆಯುತ್ತಾ ಹೋಗಿ ಬಳಿಕ ಅದು ರಾಷ್ಟ್ರವ್ಯಾಪಿ ಸಂಚಲವನ್ನೇ ಸೃಷ್ಟಿ ಮಾಡಿತ್ತು. ಮೊದಲು ಕನ್ನಡ ಭಾಷೆಯಲ್ಲಿ ಮಾತ್ರ ಇದ್ದ ಕಾಂತಾರ ಸಿನಿಮಾವನ್ನು ಬಳಿಕ ಐದು ಭಾಷೆಗಳಿಗೆ ರಿಲೀಸ್ ಮಾಡಲಾಯಿತು. ಈ ಮೂಲಕ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂ.ಗಳನ್ನು ಗಳಿಸಿ ದಾಖಲೆ ಮಾಡಿತ್ತು. ಈ ಸಿನಿಮಾದ ಹ್ಯಾಂಗ್ ಓವರ್ ಇನ್ನು ಹಾಗೆ ಉಳಿದಿರುವಾಗಲೇ ಈಗ ಕಾಂತಾರ ಚಾಪ್ಟರ್ 1 ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ಹೀಗಾಗಿ ಈ ಬಾರಿ 1000 ಕೋಟಿ ಕಲೆಕ್ಷನ್ ಮಾಡುತ್ತದೆ ಎಂದು ಹೇಳಲಾಗುತ್ತಿದೆ.

ಕಾಂತಾರ ಸಿನಿಮಾದಲ್ಲಿ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಕತೆಯ ಸುತ್ತ ದೈವತ್ವದ ಬಾಂಧವ್ಯ ಸಾರಲಾಗಿತ್ತು. ಇದೀಗ ಕಾಂತಾರ ಚಾಪ್ಟರ್ 1 ನಲ್ಲಿ ಸುಮಾರು 2,000 ವರ್ಷಗಳ ಹಿಂದೆ ಕದಂಬ ರಾಜವಂಶದ ಕಾಲದ ಅನೇಕ ವಿಚಾರಗಳ ಸುತ್ತ ಕಥೆ ಹೆಣೆಯಲಾಗಿದೆ. ಪ್ರಕೃತಿಯ ಜೊತೆಗೆ ದೈವಿಕ ನಂಬಿಕೆಯ ಜೊತೆಗೆ ನಾಗರಿಕತೆಗಳ ಉಗಮದ ಬಗ್ಗೆ ಇದರಲ್ಲಿ ತಿಳಿಸಲಾಗುವುದು. ಸಿನಿಮಾ ಟ್ರೇಲರ್ ಹಾಗೂ ಒಂದು ಹಾಡು ಈಗಾಗಲೆ ರಿಲೀಸ್ ಆಗಿದ್ದು ಇದು ಕೂಡ ಸಿನಿಮಾ ಕಲೆಕ್ಷನ್ ವಿಚಾರಕ್ಕೆ ಪ್ಲಸ್ ಪಾಯಿಂಟ್‌ ಆಗಲಿದೆ.

ಇದನ್ನು ಓದಿ:Movie Ticket Price: ಟಿಕೆಟ್ ದರ ಗರಿಷ್ಠ 200 ರೂ. ಮಿತಿ; ಸರ್ಕಾರದ ಪರ ಅಂತಿಮ ತೀರ್ಪು ಬಂದರೆ ಪ್ರೇಕ್ಷಕರಿಗೆ ಹೆಚ್ಚುವರಿ ಹಣ ವಾಪಸ್‌

ಬಾಹುಬಲಿ', 'ಕೆಜಿಎಫ್' ಅಥವಾ 'ಪುಷ್ಪ' ನಂತಹ ಫ್ರಾಂಚೈಸಿಗಳಿಗಿಂತ ಕಾಂತಾರ ಸಿನಿಮಾ ವಿಭಿನ್ನವಾಗಿದ್ದು ಕಥೆ , ಸಂಗೀತ , ಹೊಸ ಪ್ರತಿಭೆ ಎಲ್ಲವೂ ಇಲ್ಲಿ ಇರಲಿದೆ. ಕಾಂತಾರ ಚಾಪ್ಟರ್ 1 ನಲ್ಲಿ ರುಕ್ಮಿಣಿ ವಸಂತ್, ಜಯರಾಮ್, ಗುಲ್ಶನ್ ದೇವಯ್ಯ ಅವರಂತಹ ನಟರು ಮತ್ತು ರಿಷಬ್ ಅವರ ಹಿಂದಿನ ಯೋಜನೆಗಳ ಜೊತೆಯಾದ ಪ್ರಕಾಶ್ ತುಮ್ಮಿನಾಡ್ ಮತ್ತು ದೀಪಕ್ ಪಣಾಜೆ ಯಂತಹ ಪರಿಚಿತ ಮುಖಗಳೊಂದಿಗೆ ಈ ಸಿನಿಮಾ ಬೆಸೆಯಲಿದೆ. ಹೀಗಾಗಿ ಕೂಡ ಜನರಿಗೆ ಈ ಸಿನಿಮಾ ಮೇಲೆ ಕುತೂಹಲ ಹೆಚ್ಚಲಿದೆ ಎನ್ನಬಹುದು.

2022 ಕನ್ನಡ ಚಿತ್ರರಂಗಕ್ಕೆ ಒಂದು ಮೈಲಿಗಲ್ಲು ವರ್ಷವೆಂದೆ ಹೇಳಬಹುದು. 'ಕೆಜಿಎಫ್: ಚಾಪ್ಟರ್ 2', 'ಕಾಂತಾರ', '777 ಚಾರ್ಲಿ' ಮತ್ತು 'ವಿಕ್ರಾಂತ್ ರೋಣ' ಮುಂತಾದ ಚಿತ್ರಗಳು ರಾಷ್ಟ್ರವ್ಯಾಪಿ ಪ್ರಭಾವ ಬೀರಿದ್ದವು. ಅದರೆ ಅದರ ಬಳಿಕ ಯಾವ ಸಿನಿಮಾಕ್ಕು ಅಷ್ಟು ಮನ್ನಣೆ ಸಿಗಲಿಲ್ಲ. ಕೂಲಿ', 'ವಾರ್ 2' ಮತ್ತು 'ಸಿಕಂದರ್' ನಂತಹ ದೊಡ್ಡ ಬಜೆಟ್ ಸಿನಿಮಾಗಳು ಈ ವರ್ಷ ಬಾಕ್ಸ್ ಆಫೀಸ್ ಸೋಲು ಕಂಡಿದೆ. 'ಛಾವಾ', 'ಸೈಯಾರಾ' ಮತ್ತು 'ಕೂಲಿ' ಮಾತ್ರ 500 ಕೋಟಿ ರೂ. ಗಡಿ ದಾಟಿವೆ. ಹೀಗಾಗಿ ಮೂರು ವರ್ಷದಿಂದ ಕಾಂತಾರ ಚಾಪ್ಟರ್ 1ಗಾಗಿ ಕಾಯುತ್ತಿದ್ದ ಜನರಿಗೆ ಈಗ ಕಾಲ ಸನ್ನಿಹಿತವಾಗಿದೆ‌. ಈ ಕಾರಣಕ್ಕೂ ಕೂಡ ಕಾಂತಾರ ಸಿನಿಮಾ 1,000 ಕೋಟಿ ರೂ. ದಾಟುವ ನಿರೀಕ್ಷೆ ಇದೆ.