ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dinesh Karthik: ಶಾರ್ಜಾ ವಾರಿಯರ್ಸ್ ತಂಡ ಸೇರಿಕೊಂಡ ದಿನೇಶ್ ಕಾರ್ತಿಕ್

ಶಾರ್ಜಾ ಕೂಡ ಯಾವಾಗಲೂ ಆಡಲು ಬಯಸುವ ಪ್ರತಿಷ್ಠಿತ ಕ್ರೀಡಾಂಗಣಗಳಲ್ಲಿ ಒಂದಾಗಿದೆ. ಮತ್ತು ಶಾರ್ಜಾ ವಾರಿಯರ್ಸ್‌ ಫ್ರಾಂಚೈಸಿಯ ಭಾಗವಾಗುವುದು ಕನಸನ್ನು ನನಸಾಗಿಸುತ್ತದೆ ಎಂದು ಕಾರ್ತಿಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ SA20 ನಲ್ಲಿ ಪಾರ್ಲ್ ರಾಯಲ್ಸ್‌ನ ಭಾಗವಾಗಿದ್ದ ಕಾರ್ತಿಕ್‌, ಆರು ಇನ್ನಿಂಗ್ಸ್‌ಗಳಲ್ಲಿ 97 ರನ್‌ಗಳನ್ನು ಗಳಿಸಿದ್ದರು.

ಬದಲಿ ಆಟಗಾರನಾಗಿ ಶಾರ್ಜಾ ವಾರಿಯರ್ಸ್ ಸೇರಿದ ದಿನೇಶ್ ಕಾರ್ತಿಕ್

-

Abhilash BC Abhilash BC Sep 30, 2025 5:10 PM

ದುಬೈ: ಟೀಮ್‌ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್(Dinesh Karthik) ಮಂಗಳವಾರ ಇಂಟರ್ನ್ಯಾಷನಲ್ ಲೀಗ್ ಟಿ20 (ILT20) ನ ನಾಲ್ಕನೇ ಸೀಸನ್‌ಗೆ ಮುಂಚಿತವಾಗಿ ಶಾರ್ಜಾ ವಾರಿಯರ್ಸ್(Sharjah Warriorz) ಸೇರಿಕೊಂಡರು. ಶ್ರೀಲಂಕಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕುಸಲ್ ಮೆಂಡಿಸ್ ಟೂರ್ನಿಯಿಂದ ಹೊರಬಿದ್ದ ಕಾರಣ ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಕಾರ್ತಿಕ್ ಸ್ಥಾನ ಪಡೆದರು.

ಡಿಪಿ ವರ್ಲ್ಡ್ ಐಎಲ್‌ಟಿ20 ಟೂರ್ನಮೆಂಟ್‌ಗಾಗಿ ಶಾರ್ಜಾ ವಾರಿಯರ್ಸ್ ತಂಡವನ್ನು ಸೇರಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಅದು ಯುವಕರಿಂದ ಕೂಡಿದ ತಂಡ ಎಂದು ನನಗೆ ತಿಳಿದಿದೆ. ಕೆಲವು ವಿಶೇಷ ಸಾಧನೆ ಮಾಡಲು ಆಸಕ್ತರಾಗಿದ್ದಾರೆ. ನಾನು ಅವರ ಜೊತೆ ಇರುವುದಕ್ಕೆ ಸಂತೋಷಪಡುತ್ತೇನೆ ಎಂದು ದಿನೇಶ್ ತಿಳಿಸಿದ್ದಾರೆ.

"ಶಾರ್ಜಾ ಕೂಡ ಯಾವಾಗಲೂ ಆಡಲು ಬಯಸುವ ಪ್ರತಿಷ್ಠಿತ ಕ್ರೀಡಾಂಗಣಗಳಲ್ಲಿ ಒಂದಾಗಿದೆ. ಮತ್ತು ಶಾರ್ಜಾ ವಾರಿಯರ್ಸ್‌ ಫ್ರಾಂಚೈಸಿಯ ಭಾಗವಾಗುವುದು ಕನಸನ್ನು ನನಸಾಗಿಸುತ್ತದೆ" ಎಂದು ಕಾರ್ತಿಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ SA20 ನಲ್ಲಿ ಪಾರ್ಲ್ ರಾಯಲ್ಸ್‌ನ ಭಾಗವಾಗಿದ್ದ ಕಾರ್ತಿಕ್‌, ಆರು ಇನ್ನಿಂಗ್ಸ್‌ಗಳಲ್ಲಿ 97 ರನ್‌ಗಳನ್ನು ಗಳಿಸಿದ್ದರು.

ಕಾರ್ತಿಕ್ ಐಪಿಎಲ್ 2025ರ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಬ್ಯಾಟಿಂಗ್ ಕೋಚ್ ಕೂಡ ಆಗಿದ್ದಾರೆ. 2025 ರ ಹಾಂಗ್ ಕಾಂಗ್ ಸಿಕ್ಸಸ್(Hong Kong sixes) ಟೂರ್ನಮೆಂಟ್‌ನಲ್ಲಿ ಕಾರ್ತಿಕ್‌ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಇದನ್ನೂ ಓದಿ ಹಾಂಗ್ ಕಾಂಗ್ ಸಿಕ್ಸರ್‌ ಟೂರ್ನಿ; ಭಾರತ ತಂಡಕ್ಕೆ ದಿನೇಶ್‌ ಕಾರ್ತಿಕ್‌ ನಾಯಕ