ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiccha Sudeep Birthday: ಬರ್ತ್‌ಡೇಗೆ ಅಭಿಮಾನಿಗಳಿಂದ ಕಿಚ್ಚ ಸುದೀಪ್‌ ಕೇಳಿದ ಆ 2 ಗಿಫ್ಟ್‌ ಯಾವುದು?

Kiccha Sudeep: ಸೆಪ್ಟೆಂಬರ್‌ 2ರಂದು ಹುಟ್ಟುಹಬ್ಬ ಆಚರಿಸಿಕೊಂಡ ಕಿಚ್ಚ ಸುದೀಪ್‌ ಅಬಿಮಾನಿಗಳ ಬಳಿ 2 ಅಪರೂಪದ ಉಡುಗೊರೆ ಕೇಳಿದ್ದಾರೆ. ಯಾವುದೇ ಕಾರಣಕ್ಕೂ ಯಾವ ಕಲಾವಿದನಿಗೂ ಅವಮಾನ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಆ ಮೂಲಕ ಎಲ್ಲರಿಗೂ ಮದರಿಯಾಗಿದ್ದಾರೆ.

ಕಿಚ್ಚ ಸುದೀಪ್‌

ಬೆಂಗಳೂರು: ಸೆಪ್ಟೆಂಬರ್‌ 2ರಂದು ಹುಟ್ಟುಹಬ್ಬ ಆಚರಿಸಿಕೊಂಡ ಕಿಚ್ಚ ಸುದೀಪ್‌ (Kiccha Sudeep Birthday) ಅಭಿನಯದ ಮುಂಬರುವ ʼಮಾರ್ಕ್‌ʼ ಮತ್ತು ʼಬಿಲ್ಲ ರಂಗ ಭಾಷʼ ಚಿತ್ರಗಳ ಪೋಸ್ಟರ್‌ ರಿಲೀಸ್‌ ಆಗಿದೆ. ಜತೆಗೆ ಅವರು ಅಭಿಮಾನಿಗಳ ಸಮ್ಮುಖದಲ್ಲಿ ಸರಳವಾಗಿ ಜನ್ಮದಿನ ಆಚರಿಸಿಕೊಂಡಿದ್ದಾರೆ. ಮನೆಯಲ್ಲಿ ಯಾವುದೇ ಸಂಭ್ರಮಾಚರಣೆ ಇಲ್ಲದೆ ಕಾರಣ ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್​ನಲ್ಲಿ ಸೆಪ್ಟೆಂಬರ್‌ 1ರ ಮಧ್ಯರಾತ್ರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿಮಾನಿಗಳನ್ನು ಭೇಟಿಯಾಗಿ ಅವರೊಂದಿಗೆ ಸಮಯ ಕಳೆದಿದ್ದಾರೆ. ಈ ವೇಳೆ ಸುದೀಪ್‌ ಅಭಿಮಾನಿಗಳ ಬಳಿ 2 ಮನವಿ ಮಾಡಿದ್ದಾರೆ.

ʼʼಎಲ್ಲರೂ ಊಟ ಮಾಡಿದ್ರಾ?ʼʼ ಎಂದು ಮಾತು ಆರಂಭಿಸಿದ ಸುದೀಪ್‌, ʼʼಈ ಸಂದರ್ಭದಲ್ಲಿ 2 ಮನವಿಯನ್ನು ಮಾಡುತ್ತೇನೆ. ಅದನ್ನು ನೆರವೇರಿಸುತ್ತೀರಾ?ʼʼ ಎಂದು ಅಭಿಮಾನಿಗಳ ಬಳಿ ಕೇಳಿದ್ದಾರೆ.



ಈ ಸುದ್ದಿಯನ್ನೂ ಓದಿ: BBK 12: ಇಂದು ಬಿಗ್ ಬಾಸ್ ಕನ್ನಡ 12ರ ಮೊದಲ ಪ್ರೋಮೋ ಬಿಡುಗಡೆ: ಏನಿರಬಹುದು ಕಾನ್ಸೆಪ್ಟ್?

ಸುದೀಪ್‌ ಮಾಡಿದ ಮನವಿಯೇನು?

ʼʼಮೊದಲನೆ ಮನವಿ. ಎಲ್ಲರೂ ದಯವಿಟ್ಟು ಮನೆಯಲ್ಲಿ ಸುರಕ್ಷಿತವಾಗಿರಿ. ಎಲ್ಲರೂ ಪ್ರೀತಿಯಿಂದ ಬರುತ್ತೀರಾ. ಆದರೆ ಎಲ್ಲೋ ಒಂದುಕಡೆ ಹೆಚ್ಚುಕಮ್ಮಿಯಾದರೆ ನೋವಾಗುತ್ತದೆ. ನಿಮ್ಮ ಪ್ರೀತಿ ಸಾಕು ನನಗೆ. ದಯಬಿಟ್ಟು ಸುರಕ್ಷಿತವಾಗಿರಿʼʼ ಎಂದು ಹೇಳಿದ್ದಾರೆ.

ಬಳಿಕ ಮತ್ತೊಂದು ಮನವಿಯನ್ನೂ ಮಾಡಿದ್ದಾರೆ. ಎಲ್ಲ ಪೊಲೀಸ್‌ ಮಿತ್ರರಿಗೆ ಧನ್ಯವಾದ ಹೇಳಿದ ಸುದೀಪ್‌, ʼʼನೀವೆಲ್ಲ ನನ್ನನ್ನು ತುಂಬ ಚೆನ್ನಾಗಿ ಪ್ರೀತಿಸುತ್ತಿದ್ದೀರಾ ಎನ್ನುವುದು ನನಗೆ ಗೊತ್ತು. ಹೀಗಾಗಿ ಆನ್‌ಲೈನ್‌ನಲ್ಲಿ ಯಾರೇ ಯಾವುದೇ ಪೇಜ್‌ನಿಂದ ನನಗೆ ಎಷ್ಟೇ ಕೆಟ್ಟದಾಗಿ ಬೈದರೂ ದಯವಿಟ್ಟು ರಿಯಾಕ್ಟ್‌ ಮಾಡಬೇಡಿ. ಹಾಗೇ ನಮ್ಮ ಫ್ಯಾನ್‌ ಪೇಜ್‌ನಿಂದ ಯಾವ ಕಲಾವಿದನಿಗೂ ಅವಮಾನವಾಗಬಾರದು. ಯಾರೂ ಅವಮಾನ ಮಾಡಬೇಡಿ. ಯಾವುದೇ ಅವಮಾನ ಬಂದರೂ ತಡೆದುಕೊಳ್ಳಲು ನಾನು ತಯಾರಿದ್ದೇನೆ. ಅವಮಾನಗಳಿಂದ ನಾನ್ಯಾವತ್ತೂ ಬಿದ್ದಿಲ್ಲ, ಹೊಗಳಿಕೆಯಿಂದ ಎದ್ದಿಲ್ಲ. ನಮ್ಮ ಸಿನಿಮಾಗಳೇ ನಮ್ಮ ಆಸ್ತಿ. ಯಾವ ಅವಮಾನಕ್ಕೂ ತಲೆ ಬಾಗ್ಬೇಡಿ. ಅಷ್ಟಕ್ಕೂ ಏನಾದರೂ ಮಾಡ್ಲೇಬೇಕು ಎಂದರೆ 2 ಕೆಲಸ ಮಾಡಿ. ಯಾರ್ಯಾರೊ ಕಿತ್ತೋಗಿರುವ ನನ್ಮಕ್ಕಳ ಮೇಲೆ ತಲೆಕೆಡಿಸಿಕೊಳ್ಳಬೇಡಿ.ಯಾವತ್ತೂ ನಿಮ್ಮ ಮೇಲೆ ನಂಬಿಕೆ ಇಟ್ಟುಕೊಳ್ಳಿ.ನೀವೇನು ಮಾಡ್ತಿರೋ ನಿಮ್ಮ ಮನೆಯಲ್ಲಿರುವ ಮಕ್ಕಳು ಅದನ್ನೇ ಕಲಿಯೋದು. ಹೀಗಾಗಿ ಒಳ್ಳೆದು ಮಾಡಿ. ನಾನ್ಯಾವತ್ತೂ ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಲ್ಲ. ಮತ್ತೆ ನೀವ್ಯಾಕೆ ತಲೆ ಕಡೆಸಿಕೊಳ್ತೀರಾ?ʼʼ ಎಂದು ಹೇಳಿದ್ದಾರೆ.

ಸಮಾಜ ಸೇವೆ ಮಾಡುತ್ತಿರುವ ತಮ್ಮ ಅಭಿಮಾನ ಸಂಘಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ʼʼನನ್ನ ಹೆಸರಲ್ಲಿ ಮನೆ ಕಟ್ಟಿಸಿ ಕೊಟ್ಟಿದ್ದೀರಿ. ರಕ್ತದಾನ ಮಾಡಿದ್ದೀರಿ. ಯಾವ ಜನ್ಮದಲ್ಲಿ ಪುಣ್ಯ ಮಾಡಿದ್ದೇನೋ ಗೊತ್ತಿಲ್ಲ. ನಿಮ್ಮಂತವರ ಋಣ ತೀರಿಸಲು ಸಾಧ್ಯವಿಲ್ಲ. ಕೊಟ್ಟ ಮಾತನ್ನು ಮರೆಯದಿರಿʼʼ ಎಂದಿದ್ದಾರೆ.



ಗಮನ ಸೆಳೆದ ʼಮಾರ್ಕ್‌ʼ, ʼಬಿಲ್ಲ ರಂಗ ಭಾಷʼ ಚಿತ್ರದ ಪೋಸ್ಟರ್‌

ಸೆಪ್ಟೆಂಬರ್‌ 2ರಂದು ರಿಲೀಸ್‌ ಆದ ʼಮಾರ್ಕ್‌ʼ, ʼಬಿಲ್ಲ ರಂಗ ಭಾಷʼ ಚಿತ್ರಗಳ ಪೋಸ್ಟರ್‌ ಗಮನ ಸೆಳೆದಿದೆ. ʼಮಾರ್ಕ್‌ʼ ಈ ವರ್ಷದ ಕೊನೆಗೆ ತೆರೆಕಂಡರೆ, ʼಬಿಲ್ಲ ರಂಗ ಭಾಷʼ ಮುಂದಿನ ವರ್ಷ ರಿಲೀಸ್‌ ಆಗಲಿದೆ. ವಿಶೇಷ ಎಂದರೆ ಈ ಎರಡೂ ಚಿತ್ರಗಳು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿವೆ.