ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

OTT Releases This Week : OTT ಪ್ರಿಯರಿಗೆ ಗುಡ್ ನ್ಯೂಸ್; ಈ ವಾರ ಒಟಿಟಿಗೆ ಬಂದಿವೆ ಸಾಲು ಸಾಲು ಸಿನಿಮಾಗಳು

ಈ ವಾರ ಇಂಟ್ರೆಸ್ಟಿಂಗ್ ಸಿನಿಮಾಗಳು (Movies OTT) ವೀಕ್ಷಕರ ಮುಂದೆ ಬರ್ತಿವೆ. ಪಟ್ಟಿಯಲ್ಲಿ ಕನ್ನಡ ಚಿತ್ರಗಳು ಇವೆ. ಪ್ರತಿ ವೀಕೆಂಡ್‌ನಲ್ಲೂ ಒಟಿಟಿ ವೇದಿಕೆಗಳಲ್ಲಿ ಹೊಸ ಹೊಸ ಸಿನಿಮಾಗಳು ರಿಲೀಸ್ ಆಗುತ್ತವೆ. ʻಜಾಲಿ ಎಲ್​ಎಲ್​​ಬಿ 3’ (Jolly LLB 3 on OTT) ಕಾಮಿಡಿ ಸಿನಿಮಾ ಜೊತೆಗೆ ಯುವರಾಜ್‌ಕುಮಾರ್ ನಟನೆಯ ಎಕ್ಕ ಸಿನಿಮಾ ಕೂಡ ಒಟಿಟಿಗೆ ಎಂಟ್ರಿ ಕೊಡಲಿದೆ. ಇಲ್ಲಿದೆ ಲಿಸ್ಟ್‌.

ಒಟಿಟಿ ಸಿನಿಮಾಗಳು

ಈ ವಾರ ಇಂಟ್ರೆಸ್ಟಿಂಗ್ ಸಿನಿಮಾಗಳು (Movies OTT) ವೀಕ್ಷಕರ ಮುಂದೆ ಬರ್ತಿವೆ. ಪಟ್ಟಿಯಲ್ಲಿ ಕನ್ನಡ ಚಿತ್ರಗಳು ಇವೆ. ವಿವಿಧ ಭಾಷೆಗಳಲ್ಲೂ (Different Language) ಹೊಸ ಹೊಸ ಸಿನಿಮಾಗಳು ಎಂಟ್ರಿ ಕೊಟ್ಟಿವೆ. ದೆಹಲಿ ಕ್ರೈಮ್‌ನ ಹೊಸ ಸೀಸನ್‌ನಿಂದ ಜಾಲಿ LLB 3 ಮತ್ತು ಡೈನಮೈಟ್ ಕಿಸ್‌ವರೆಗೆ, ವೀಕ್ಷಿಸಲು ಟಾಪ್ OTT ಸಿನಿಮಾಗಳ ಲಿಸ್ಟ್‌ ಇಲ್ಲಿವೆ.

ʻಜಾಲಿ ಎಲ್​ಎಲ್​​ಬಿ 3’

ʻಜಾಲಿ ಎಲ್​ಎಲ್​​ಬಿ 3’ (Jolly LLB 3 on OTT) ಸಿನಿಮಾದಲ್ಲಿ ಕೋರ್ಟ್​ ರೂಮ್ ಡ್ರಾಮಾ ಇದೆ. ಅಕ್ಷಯ್ ಕುಮಾರ್ (akshay Kumr) ಅವರು ಜೊತೆಗೆ ಅರ್ಷದ್ ವಾರ್ಸಿ ಕೂಡ ಅಭಿನಯಿಸಿದ್ದಾರೆ. ಅವರಿಬ್ಬರದ್ದೂ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವಿದೆ.

ಇದನ್ನೂ ಓದಿ: Bigg Boss Kannada 12: ನಿಮ್ಮ ಜೊತೆ ಮಾತಾಡೋಕೆ ಹೆಣ್ಮಕ್ಕಳಿಗೆ ಇಷ್ಟ ಇಲ್ಲ! ಧ್ರುವಂತ್‌ಗೆ ಚಳಿ ಬಿಡಿಸಿದ್ರು ರಾಶಿಕಾ, ಕಾವ್ಯ

ಇಬ್ಬರೂ ಕೂಡ ಲಾಯರ್ ಪಾತ್ರವನ್ನು ನಿಭಾಯಿಸಿದ್ದಾರೆ. ಅಕ್ಷಯ್ ಕುಮಾರ್ ಮತ್ತು ಅರ್ಷದ್ ವಾರ್ಸಿ ಅವರ ಜಾಲಿ LLB 3 ಚಿತ್ರದಲ್ಲಿ , ಇದು ಒಂದಲ್ಲ ಎರಡು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಬರಲಿದೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಅಭಿಮಾನಿಗಳು ಅಕ್ಷಯ್ ಕುಮಾರ್ ಮತ್ತು ಅರ್ಷದ್ ವಾರ್ಸಿ ಅಭಿನಯದ ಜಾಲಿ ಎಲ್‌ಎಲ್‌ಬಿ 3 ಚಿತ್ರವನ್ನು ನವೆಂಬರ್ 14, ಶುಕ್ರವಾರದಿಂದ ತಮ್ಮ ಮನೆಯಿಂದಲೇ ಆನಂದಿಸಬಹುದು. ಆದಾಗ್ಯೂ, ಈ ಚಿತ್ರವು ಎರಡೂ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದೇ ದಿನ ಬಿಡುಗಡೆಯಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.



ʻತೆಲುಸು ಕದ'

ತೆಲುಸು ಕದ' ನವೆಂಬರ್ 14 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಡಿಜಿಟಲ್‌ಗೆ ಪದಾರ್ಪಣೆ ಮಾಡಲು ಸಜ್ಜಾಗಿದೆ. ಈ ಚಿತ್ರವು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ - ಐದು ಭಾಷೆಗಳಲ್ಲಿ ಲಭ್ಯವಿರುತ್ತದೆ. ನೆಟ್‌ಫ್ಲಿಕ್ಸ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಪುಟವು ಚಿತ್ರದ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದು, "ಇದು ಮ್ಯಾಜಿಕಲ್‌ ಪ್ರೇಮಕಥೆಯಲ್ಲ, ಇದು ರ್ಯಾಡಿಕಲ್‌ ಪ್ರೇಮಕಥೆ.

ನವೆಂಬರ್ 14 ರಂದು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುವ ನೆಟ್‌ಫ್ಲಿಕ್ಸ್‌ನಲ್ಲಿ 'ತೆಲುಸು ಕದ' ವೀಕ್ಷಿಸಿ" ಎಂದು ಶೀರ್ಷಿಕೆ ನೀಡಿದೆ. . ನೀರಜ್ ಕೋನಾ (Neeraj) ನಿರ್ದೇಶನದ ಈ ತೆಲುಗು ಭಾಷೆಯ ಸಿನಿಮಾ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿತು. ಇದು ಹೆಚ್ಚು ನಿರೀಕ್ಷಿತ OTT (OTT) ಚಲನಚಿತ್ರಗಳಲ್ಲಿ ಒಂದಾಗಿದೆ.

ಎಕ್ಕ ಸಿನಿಮಾ

ಯುವರಾಜ್‌ಕುಮಾರ್ ನಟನೆಯ 2ನೇ ಸಿನಿಮಾ ಇದು. ರೋಹಿತ್ ಪದಕಿ ನಿರ್ದೇಶನದ ಚಿತ್ರದ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ. ಚರಣ್ ರಾಜ್ ಸಂಗೀತದಲ್ಲಿ ಹಾಡುಗಳು ಹಿಟ್ ಆಗಿತ್ತು. ನವೆಂಬರ್ 13ಕ್ಕೆ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ನವೆಂಬರ್ 13ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಸನ್‌ನೆಕ್ಸ್ಟ್ ಒಟಿಟಿ ಸಂಸ್ಥೆ ಅಧಿಕೃತವಾಗಿ ಮಾಹಿತಿ ನೀಡಿದೆ.

ಅತುಲ್ ಕುಲಕರ್ಣಿ, ಆದಿತ್ಯಾ, ಶ್ರುತಿ, ಸಾಧು ಕೋಕಿಲ, ಪೂರ್ಣಚಂದ್ರ ಮೈಸೂರು ಚಿತ್ರದ ತಾರಾಗಣದಲ್ಲಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ, ಚರಣ್ ರಾಜ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನ ಚಿತ್ರಕ್ಕಿದೆ. 'ಬ್ಯಾಂಗಲ್ ಬಂಗಾರಿ' ಸಾಂಗ್ ಹಿಟ್ ಆಗಿ ಚಿತ್ರಕ್ಕೆ ಪ್ಲಸ್ ಆಗಿತ್ತು.

'ಎ ಮೆರ್ರಿ ಲಿಟಲ್ ಎಕ್ಸ್-ಮಾಸ್'

ನವೆಂಬರ್ 12ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಸ್ಟೀವ್ ಕಾರ್ ನಿರ್ದೇಶನದ ಅಮೆರಿಕನ್ ಕ್ರಿಸ್‌ಮಸ್ ರೋಮ್ಯಾಂಟಿಕ್ ಹಾಸ್ಯ ಚಿತ್ರ 'ಎ ಮೆರ್ರಿ ಲಿಟಲ್ ಎಕ್ಸ್-ಮಾಸ್',

ಡೈನಮೈಟ್ ಕಿಸ್

ದಕ್ಷಿಣ ಕೊರಿಯಾದ ರೊಮ್ಯಾಂಟಿಕ್‌ ಹಾಸ್ಯ-ಡ್ರಾಮ. ಗೋ ಡಾ-ರಿಮ್ ಎಂಬ ಒಂಟಿ ಮಹಿಳೆ ಕುರಿತು ಇರುವ ಸಿನಿಮಾ. ನವೆಂಬರ್ 12ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ.

ಇದನ್ನೂ ಓದಿ: Bigg Boss Kannada 12: ರಾಶಿಕಾ ಬಿಗ್‌ ಬಾಸ್‌ ಮನೆಯ ಕಸ ಆದರೆ ಸಗಣಿ ಧ್ರುವಂತೆ ಅಂತೆ; ಮಾಳು ಕೊಟ್ಟ ಕಾರಣ ಇದು



ದೆಹಲಿ ಕ್ರೈಮ್ ಸೀಸನ್ 3

ನಟಿ ಹುಮಾ ಖುರೇಷಿ ಇಲ್ಲಿ "ಬಡಿ ದೀದಿ" ಅನ್ನುವ ರೋಲ್ ಮಾಡಿದ್ದಾರೆ. ಶೆಫಾಲಿ ಶಾ ಇಲ್ಲಿ ಡಿಸಿಪಿ ವರ್ತಿಕಾ ಚತುರ್ವೇದಿ ರೋಲ್ ಮಾಡಿದ್ದಾರೆ. ದೆಹಲಿ ಕ್ರೈಮ್ ಸೀಸನ್-3 (Delhi Crime Season 3) ವೆಬ್‌ ಸರಣಿ (Web Series) ಸ್ಟ್ರೀಮಿಂಗ್ ಡೇಟ್ ಅನೌನ್ಸ್ ಆಗಿದೆ. ಈ ಹಿಂದಿನ ಎರಡು ಸರಣಿಗಳು ಯಶಸ್ವಿ ಆಗಿವೆ. ದೆಹಲಿ ಕ್ರೈಮ್ ಸೀಸನ್-3 ಮಾನವ ಕಳ್ಳಸಾಗಣೆ ಮೇಲೇನೆ ಇದೆ. ಡಿಸಿಪಿ ವರ್ತಿಕಾ ಚತುರ್ವೇದಿ ತಮ್ಮ ತಂಡದೊಂದಿಗೆ ಮಾನವ ಕಳ್ಳಸಾಗಣೆ ಮಾಡೋರನ್ನ ಹಿಡಿಯೋಕೆ ಮುಂದಾಗುವ ಕಥೆ ಇದೆ. ನವೆಂಬರ್ 13ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ.

Yashaswi Devadiga

View all posts by this author