ಬೆಂಗಳೂರು: ಯುವ ರಾಜ್‌ಕುಮಾರ್ (Yuva Rajkumar) ನಾಯಕನಾಗಿ ನಟಿಸುತ್ತಿರುವ ʼಎಕ್ಕʼ ಸಿನಿಮಾದಿಂದ (Ekka Movie) ಹೊಸ ಅಪ್‌ಡೇಟ್ ಸಿಕ್ಕಿದೆ. ಟೈಟಲ್ ಟ್ರ್ಯಾಕ್ ಹಾಗೂ ಟೀಸರ್ ಮೂಲಕ ಕುತೂಹಲ ಹೆಚ್ಚಿಸಿರುವ ಚಿತ್ರತಂಡ 'ಬ್ಯಾಂಗಲ್ ಬಂಗಾರಿ' ಎಂಬ ಹೊಸ ಹಾಡನ್ನು ರಿಲೀಸ್ ಮಾಡಿದೆ. ಆನಂದ್ ಆಡಿಯೋ ಯುಟ್ಯೂಬ್‌ನಲ್ಲಿ ʼಬ್ಯಾಂಗಲ್ ಬಂಗಾರಿʼ ಲಿರಿಕಲ್ ವಿಡಿಯೊ ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ನಾಯಕ ಯುವ ರಾಜ್‌ಕುಮಾರ್ ಹಾಗೂ ನಾಯಕಿ ಸಂಜನಾ ಆನಂದ್ ಈ ಗೀತೆಗೆ ಹೆಜ್ಜೆ ಹಾಕಿದ್ದಾರೆ.
ತನ್ನ ಇಷ್ಟದ ಹುಡುಗಿಯನ್ನು ಬ್ಯಾಂಗಲ್ ಬಂಗಾರಿ ಅಂತ ಕರೆಯುತ್ತ ನಾಯಕ ಕುಣಿದು ಕುಪ್ಪಳಿಸಿರುವ ಮೆಲೋಡಿ ಹಾಡು ಇದಾಗಿದೆ. ಹಾಡಿಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ ಇದೆ. ಮುರಳಿ ಮಾಸ್ಟರ್ ಅವರ ನೃತ್ಯ ಸಂಯೋಜನೆ, ಚರಣ್ ರಾಜ್ ಅವರ ಸಂಗೀತ ನೀಡಿದ್ದು, ಅಂಥೋನಿ ದಾಸನ್ 'ಬ್ಯಾಂಗಲ್ ಬಂಗಾರಿ'ಗೆ ಕಂಠ ಕುಣಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Ekka Kannada Movie: ʼಎಕ್ಕʼ ರಿಲೀಸ್ ಡೇಟ್ ಫಿಕ್ಸ್; ಜು. 18ಕ್ಕೆ ತೆರೆಗೆ ಬರಲಿದೆ ಯುವ ರಾಜ್‌ಕುಮಾರ್ ಚಿತ್ರ
ʼಎಕ್ಕ' ಸಿನಿಮಾವನ್ನು ಪಿಆರ್‌ಕೆ, ಜಯಣ್ಣ ಹಾಗೂ ಕೆಆರ್‌ಜಿ ಸ್ಟುಡಿಯೋ ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದೆ. ಚಿತ್ರದಲ್ಲಿ ಯುವ ರಾಜ್‌ಕುಮಾರ್ ಸಖತ್ ರಫ್ ಆ್ಯಂಡ್ ಟಫ್ ರೋಲ್ ಮಾಡಿದ್ದಾರೆ. ರಕ್ತಸಿಕ್ತ ಜಗತ್ತಿನ ಹೊಸ ಅಧ್ಯಾಯ ಅಂತಲೂ ಫೀಲ್ ಆಗುತ್ತದೆ. ಆ ರೀತಿಯ ಪೋಸ್ಟರ್‌ಗಳು ಈಗಾಗಲೇ ರಿಲೀಸ್ ಆಗಿವೆ. ನಾಯಕ ಯುವ ರಾಜ್‌ಕುಮಾರ್‌ಗೆ ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯ ಸೇರಿದಂತೆ ದೊಡ್ಡ ತಾರಗಣ ಚಿತ್ರದಲ್ಲಿದೆ. ಭಾರಿ ನಿರೀಕ್ಷೆ ಹೆಚ್ಚಿಸಿರುವ ಸಿನಿಮಾವೀಗ ಜು. 18ಕ್ಕೆ ರಿಲೀಸ್ ಆಗಲಿದೆ.
ರೋಹಿತ್ ಪದಕಿ ನಿರ್ದೇಶನದ ಪಕ್ಕಾ ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾ 'ಎಕ್ಕ'. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗುತ್ತಿದೆ. ಇತ್ತೀಚೆಗೆ ನಟ ಯುವ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಸಣ್ಣ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿತ್ತು. ಅದಕ್ಕೂ ಮುನ್ನ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿ ಗಮನ ಸೆಳೆದಿತ್ತು.
ʼಎಕ್ಕʼ ಚಿತ್ರದಲ್ಲಿ ಬೆಂಗಳೂರಿನ ಅಂಡರ್‌ವರ್ಲ್ಡ್ ಕಥೆ ಇದೆ ಎಂದು ಹೇಳಲಾಗುತ್ತಿದೆ. ಯುವ ರಾಜ್‌ಕುಮಾರ್ ಸಿಕ್ಕಾಪಟ್ಟೆ ರಡಗ್ ಲುಕ್‌ನಲ್ಲಿ ನಟಿಸಿದ್ದಾರೆ. 'ಜಾಕಿ' ಚಿತ್ರದಲ್ಲಿ 'ಎಕ್ಕ ರಾಜ ರಾಣಿ' ಎಂಬ ಸಾಂಗ್ ಹಿಟ್ ಆಗಿತ್ತು. ಇನ್ನು 'ಜಾಕಿ' ಚಿತ್ರದ ದೃಶ್ಯವೊಂದರಲ್ಲಿ ಅಪ್ಪು ವಿಭಿನ್ನ ಅವತಾರದಲ್ಲಿ ದರ್ಶನ ಕೊಟ್ಟಿದ್ದರು. 'ಎಕ್ಕ' ಟೀಸರ್‌ನಲ್ಲಿ ಯುವ ಕೂಡ ಅಂಥದ್ದೇ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಗಮನ ಸೆಳೆದ ಟೀಸರ್
ಕೆಲವು ದಿನಗಳ ಹಿಂದೆ ಹೊರಬಂದ ಟೀಸರ್ ಗಮನ ಸೆಳೆಯುತ್ತಿದೆ. ʼಎಕ್ಕʼ ಚಿತ್ರತಂಡ ರಿಯಲಿಸ್ಟಿಕ್ ಜಾಗದಲ್ಲಿ ತಮ್ಮ ಚಿತ್ರದ ಫಸ್ಟ್ ಲುಕ್ನ ಶೂಟಿಂಗ್ ಮಾಡಿದ್ದು, ಯುವನ ಎಂಟ್ರಿ ಸಖತ್ ಕಿಕ್ ನೀಡಿದೆ. ಟೀಸರ್‌ನಲ್ಲಿ ಅವರು ಮಗು-ಮೃಗ ಎನ್ನುವ ಡೈಲಾಗ್ ಹೊಡೆಯುತ್ತಾ ಕೈಯಲ್ಲಿ ಪೊರಕೆ ಹಿಡಿದು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.