ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

S Janaki: ದಕ್ಷಿಣ ಭಾರತದ ಗಾನ ಕೋಗಿಲೆ ಎಸ್‌ ಜಾನಕಿ ಮೊದಲ ಹಾಡು ಹಾಡಿದ್ದು ಯಾವಾಗ?

ದಕ್ಷಿಣ ಭಾರತದ ಗಾನ ಕೋಗಿಲೆ ಎಂದೇ ಖ್ಯಾತಿಯನ್ನು ಗಳಿಸಿರುವ ಎಸ್‌ ಜಾನಕಿ ಜುಲೈ 11 ರಂದು ಶನಿವಾರ ಮೈಸೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ತಮ್ಮ ಸಂಗೀತ ಲೋಕದ ವೃತ್ತಿ ಜೀವನದಲ್ಲಿ 48 ಸಾವಿರ ಹಾಡುಗಳನ್ನು ಹಾಡುವ ಮೂಲಕ ದೊಡ್ಡ ಸಾಧನೆಗೆ ಭಾಜನರಾಗಿದ್ದಾರೆ. ಅಂದ ಹಾಗೆ ಅವರು ತಮ್ಮ ವೃತ್ತಿ ಜೀವನದಲ್ಲಿ ರೆಕಾರ್ಡ್‌ ಮಾಡಿದ ಮೊದಲ ಹಾಡಿನ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಎಸ್‌ ಜಾನಕಿ ರೆಕಾರ್ಡ್‌ ಮಾಡಿದ್ದ ಮೊದಲ ಹಾಡು ಯಾವುದು?

ನವದೆಹಲಿ: ಭಾರತೀಯ ಸಂಗೀತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಾಗೂ ದಕ್ಷಿಣ ಭಾರತದ ಗಾನ ಕೋಗಿಲೆ ಎಂದೇ ಖ್ಯಾತಿ ಗಳಿಸಿರುವ ಎಸ್‌ ಜಾನಕಿ (S Janaki) ಅವರು ಜುಲೈ 11 ರಂದು ಶನಿವಾರ ಮೈಸೂರಿನ ತಮ್ಮ ನಿವಾಸದಲ್ಲಿ ಕೊನೆಯಯುಸಿರೆಳೆದಿದ್ದಾರೆ. ಅವರು ತಮ್ಮ 60 ವರ್ಷಗಳ ಸಂಗೀತ ವೃತ್ತಿ ಬದುಕಿನಲ್ಲಿ 48,000 ಹಾಡುಗಳನ್ನು ಹಾಡುವ ಮೂಲಕ ದಾಖಲೆಯನ್ನು ಬರೆದಿದ್ದಾರೆ. ಅಂದ ಹಾಗೆ ಅವರು ಜಾನಕಿ ಅವರ ಮೊದಲ ಹಾಡು ರೆಕಾರ್ಡ್‌ ಆಗಿದ್ದು ಯಾವಾಗ? ಯಾವ ಸಿನಿಮಾಕ್ಕೆ ಅವರು ಮೊದಲ ಹಾಡನ್ನು ಹಾಡಿದ್ದರು ಎಂಬ ಮಾಹಿತಿಯನ್ನು ನಾವಿಲ್ಲಿ ವಿವರಿಸಿದ್ದೇವೆ.

ಜಾನಕಿ ಅಮ್ಮ ಎಂದೇ ಜನಮನ ಗಳಿಸಿರುವ ಎಸ್‌ ಜಾನಕಿ ಅವರು 1957ರ ಏಪ್ರಿಲ್‌ 4 ರಂದು ʻವಿಧಿಯಿನ್‌ ವಿಲೈಯಾಟುʼ ತಮಿಳು ಸಿನಿಮಾದ ʻಸಿಂಗಾರ ವೇಲನೇ ದೇವಾʼ ಹಾಡನ್ನು ಹಾಡಿದ್ದರು. ಈ ಹಾಡು ಸಾಕಷ್ಟು ಪ್ರಖ್ಯಾತಿಯನ್ನು ತಂದುಕೊಟ್ಟಿತ್ತು. ಈ ಹಾಡಿನ ಬೆನ್ನಲ್ಲೆ ಅವರು ʻಎಂಎಲ್‌ಎʼ ತೆಲುಗು ಸಿನಿಮಾಗೆ ಹಾಡಿದ್ದರು. ಅವರು ಕನ್ನಡ ಸೇರಿದಂತೆ ಒಟ್ಟು ಆರು ಭಾಷೆಗಳಲ್ಲಿ ಚಲನಚಿತ್ರ ಹಾಡುಗಳನ್ನು ಹಾಡಿದ್ದಾರೆ.

ಹಾಡು ನಿಲ್ಲಿಸಿದ ʻಕೋಗಿಲೆʼ; ಎಸ್‌.ಜಾನಕಿ ನಿಧನಕ್ಕೆ ಸಿಎಂ ಡಿ.ಕೆ.ಶಿವಕುಮಾರ್‌ ಸೇರಿ ಗಣ್ಯರ ಸಂತಾಪ

ಎಲ್ಲಾ ಭಾಷೆಗಳ ಪೈಕಿ ಅವರು ಕನ್ನಡದಲ್ಲಿಯೇ ಅವರು ಅತಿ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ವರನಡ ಡಾ ರಾಜಕುಮಾರ್‌, ಪಿಬಿ ಶ್ರೀನಿವಾಸ್‌ ಹಾಗೂ ಎಸ್‌ಪಿ ಬಾಲಸುಬ್ರಮಣ್ಯ ಅವರ ಜೊತೆಗೆ ಯುಗಳ ಗೀತೆಗಳನ್ನು ಹಾಡಿದ್ದಾರೆ. ಭಾರತೀಯ ಭಾಷೆಗಳ ಜೊತೆಗೆ ವಿದೇಶದ ಇಂಗ್ಲಿಷ್‌, ಫ್ರೆಂಚ್‌, ಜಪಾನೀಸ್‌, ಜರ್ಮನ್‌ ಹಾಗೂ ಸಿಂಹಳೀಸ್‌ ಭಾಷೆಗಳಲ್ಲಿಯೂ ಹಾಡುಗಳನ್ನು ಹಾಡಿ ದಾಖಲೆ ಬರೆದಿದ್ದಾರೆ.

ಅಂದ ಹಾಗೆ ಅವರು ಮಕ್ಕಳ ರೀತಿಯು ಹಾಡುಗಳನ್ನು ಹಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಜಿಕೆ ವೆಂಕಟೇಶ್‌ ಅವರಿಂದ ಅಶ್ವತ್‌, ಇಳಿಯರಾಜ ಅವರಿಂದ ಹಂಸಲೇಖ ಹಾಗೂ ನಂತರ ಎಆರ್‌ ರೆಹಮಾನ್‌ ಅವರಿಂದ ಹಲವು ವಿಭಿನ್ನ ತಲೆ ಮಾರಿನ ಸಂಗೀಶ ನಿರ್ದೇಶಕರ ಜೊತೆ ಜಾನಕಿ ಕೆಲಸ ಮಾಡಿದ್ದಾರೆ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಖ್ಯಾತ ಗಾಯಕಿ ಎಸ್‌. ಜಾನಕಿ ಇನ್ನಿಲ್ಲ; ಮೈಸೂರಿನಲ್ಲಿ ನಿಧನ

ಎಸ್‌ ಜಾನಕಿ ಹಾಡಿದ ಕಠಿಣ ಹಾಡು ಯಾವುದು?

ಒಮ್ಮೆ ಸಂದರ್ಶನವೊಂದರಲ್ಲಿ ತಾವು ತಮ್ಮ ವೃತ್ತಿ ಜೀವನದಲ್ಲಿ ಹಾಡಿದ ಅತ್ಯಂತ ಕಠಿಣ ಹಾಡು ಯಾವುದು ಎಂದು ಬಹಿರಂಗಪಡಿಸಿದ್ದರು. ಅವರು ಕನ್ನಡದ ಹೇಮಾವತಿ ಚಿತ್ರದ ʻಶಿವ ಶಿವ ಎನ್ನದ ನಾಲಿಗೆಯೇಕುʼ ಎಂಬ ಹಾಡು ತಮಗೆ ಅತ್ಯಂತ ಕಠಿಣವಾಗಿತ್ತು ಎಂದು ಹೇಳಿಕೊಂಡಿದ್ದರು.

ನಾಲ್ಕು ರಾಷ್ಟ್ರೀಯ ಪ್ರಶಸ್ತಿ

ಸಂಗೀತ ಲೋಕದಲ್ಲಿನ ಸಾಧನೆಯ ಫಲವಾಗಿ ಎಸ್‌ ಜಾನಕಿ ಅವರು ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳು ಹಾಗೂ 33 ವಿಭಿನ್ನ ರಾಜ್ಯಗಳ ಪ್ರಶಸ್ತಿಗಳನ್ನು ಅವರು ತಮ್ಮ ವೃತ್ತಿ ಜೀವನದಲ್ಲಿ ಮುಡಿಗೇರಿಸಿಕೊಂಡಿದ್ದಾರೆ. ಮೈಸೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟೇರೇಟ್‌ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಪ್ರಶಸ್ತಿ ಹಾಗೂ ಕರ್ನಾಟಕ ಸರ್ಕಾರದಿಂದ ಕರ್ನಟಕ ರಾಜ್ಯೋತ್ಸವ ಪ್ರಶಸ್ತಿ ಕೂಡ ಲಭಿಸಿತ್ತು. 2023ರಲ್ಲಿ ಭಾರತ ಸರ್ಕಾರ ಪದ್ಮ ಶ್ರೀ ಘೋಷಣೆ ಮಾಡಿದ್ದಾಗ, ಅವರು ಇದನ್ನು ನಿರಾಕರಿಸಿದ್ದರು. ಏಕೆಂದರೆ ಇದು ನನಗೆ ಚಿಕ್ಕದ ಹಾಗೂ ತುಂಬಾ ತಡವಾಗಿ ಈ ಗೌರವವನ್ನು ನೀಡಲಾಗುತ್ತಿದೆ ಎಂದು ಹೇಳಿದ್ದರು.

2017ರ ಅಕ್ಟೋಬರ್‌ 28 ರಂದು ಮೈಸೂರಿನಲ್ಲಿ ನಡೆದಿದ್ದ ಸಂಗೀತ ಕಾರ್ಯಕ್ರಮದಲ್ಲಿ ಕೊನೆಯ ಹಾಡನನು ಹಾಡುವ ಮೂಲಕ ತಮ್ಮ 60 ವರ್ಚಗಳ ವೃತ್ತಿ ಜೀವನಕ್ಕೆ ಪೂರ್ಣ ವಿರಾಮ ಇಟ್ಟಿದ್ದರು.