ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rajinikanth And Kamal Haasan: ರಜನಿ- ಕಮಲ್ ಕಾಂಬಿನೇಶನ್ ಹೊಸ ಸಿನಿಮಾ ಘೋಷಣೆ; ನಿರ್ದೇಶಕ ಯಾರು ಗೊತ್ತಾ?

Rajinikanth And Kamal Haasan: ನಟ ರಜನೀಕಾಂತ್ ಅವರ ಇತ್ತೀಚಿನ ಕೆಲವು ಸಿನಿಮಾಗಳಲ್ಲಿ ಪರ ಭಾಷೆಯ ಮೇರು ನಟರ ಜೊತೆಗೆ ಅಭಿನಯಿಸುತ್ತಿದ್ದಾರೆ. ಜೈಲರ್, ಕೂಲಿ ಇತ್ಯಾದಿ ಸಿನಿಮಾದಲ್ಲಿ ಅತಿಥಿ ಪಾತ್ರಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರನ್ನು ನಾವು ಕಂಡಿದ್ದೇವೆ. ಆದರೆ ಕಮಲ್ ಹಾಸನ್ ಜೊತೆಗೆ ಅವರು ಮತ್ತೆ ತೆರೆ ಹಂಚಿಕೊಂಡಿರಲಿಲ್ಲ. ಈ ಮೂಲಕ 4 ದಶಕದ ಬಳಿಕ ಕಮಲ್ ಹಾಸನ್ ತಮ್ಮದೇ ನಿರ್ಮಾಣ ಸಂಸ್ಥೆಯಾದ ರಾಜ್‌ ಕಮಲ್ ಫಿಲ್ಮ್ ಇಂಟರ್‌ನ್ಯಾಷನಲ್ ಕಂಪನಿ ಮೂಲಕ ರಜನೀಕಾಂತ್ ಜೊತೆ ಹೊಸ ಸಿನಿಮಾ ನಿರ್ಮಿಸಲು ಸಜ್ಜಾಗಿದ್ದಾರೆ..

ನವದೆಹಲಿ: ಸೂಪರ್ ಸ್ಟಾರ್ ರಜನೀಕಾಂತ್ (Rajinikanth) ಹಾಗೂ ನಟ ಕಮಲ್ ಹಾಸನ್ (Kamal Haasan) ಅವರು ಭಾರತೀಯ ಸಿನಿಮಾ ಇಂಡಸ್ಟ್ರಿಗೆ ನೀಡಿದ್ದ ಕೊಡುಗೆ ಅಪಾರ. ಅವರಿ ಬ್ಬರು ಒಂದೆ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಇದೀಗ ಅನೇಕ ದಶಕಗಳ ಬಳಿಕ ಮತ್ತೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. 1985ರಲ್ಲಿ ತೆರೆಕಂಡ ಬಾಲಿವುಡ್‌ನ 'ಗಿರಫ್ತಾರ್' ಚಿತ್ರದಲ್ಲಿ ರಜನಿಕಾಂತ್ ಹಾಗೂ ಕಮಲ್ ಹಾಸನ್ ಒಟ್ಟಿಗೆ ನಟಿಸಿದ್ದು, ಆರಂಭದಲ್ಲಿ ಒಟ್ಟಿಗೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಬಳಿಕ ಸುದ್ದಿಗೋಷ್ಠಿ ಕರೆದು ಇನ್ನು ಮುಂದೆ ನಾವಿಬ್ಬರು ಒಟ್ಟಿಗೆ ನಟಿಸಲ್ಲ ಎಂದು ಘೋಷಿಸಿದ್ದರು. ಸಂಭಾವನೆ ವಿಚಾರಕ್ಕೆ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಇಬ್ಬರು ಇನ್ನು ಮುಂದೆ ಸಿನಿಮಾ ಮಾಡುವುದು ಬೇಡ ಎಂಬ ತೀರ್ಮಾನಕ್ಕೆ ಬಂದರು. ಆನಂತರ ದಿನದಲ್ಲಿ ಇಬ್ಬರು ಒಟ್ಟಿಗೆ ಯಾವುದೇ ಸಿನಿಮಾದಲ್ಲಿ ಮಾಡಿರಲಿಲ್ಲ. ಆದರೆ ಈಗ ಇಬ್ಬರು ಮತ್ತೆ ಸಿನಿಮಾ ಮಾಡಲು ಮನಸ್ಸು ಮಾಡಿದ್ದಾರೆ.

ನಟ ರಜನೀಕಾಂತ್ ಅವರ ಇತ್ತೀಚಿನ ಕೆಲವು ಸಿನಿಮಾಗಳಲ್ಲಿ ಪರ ಭಾಷೆಯ ಮೇರು ನಟರ ಜೊತೆಗೆ ಅಭಿನಯಿಸುತ್ತಿದ್ದಾರೆ. ಜೈಲರ್, ಕೂಲಿ ಇತ್ಯಾದಿ ಸಿನಿಮಾದಲ್ಲಿ ಅತಿಥಿ ಪಾತ್ರಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರನ್ನು ನಾವು ಕಂಡಿದ್ದೇವೆ. ಆದರೆ ಕಮಲ್ ಹಾಸನ್ ಜೊತೆಗೆ ಅವರು ಮತ್ತೆ ತೆರೆ ಹಂಚಿ ಕೊಂಡಿರಲಿಲ್ಲ. ಈ ಮೂಲಕ 4 ದಶಕದ ಬಳಿಕ ಕಮಲ್ ಹಾಸನ್ ತಮ್ಮದೇ ನಿರ್ಮಾಣ ಸಂಸ್ಥೆ ಯಾದ ರಾಜ್‌ ಕಮಲ್ ಫಿಲ್ಮ್ ಇಂಟರ್‌ನ್ಯಾಷನಲ್ ಕಂಪನಿ ಮೂಲಕ ರಜನೀಕಾಂತ್ ಜೊತೆ ಹೊಸ ಸಿನಿಮಾ ನಿರ್ಮಿಸಲು ಸಜ್ಜಾಗಿದ್ದಾರೆ. ಬರೋಬ್ಬರಿ 40 ವರ್ಷಗಳ ಬಳಿಕ ಒಟ್ಟಿಗೆ ಸಿನಿಮಾದಲ್ಲಿ ಇವರಿಬ್ಬರು ನಟಿಸಲಿದ್ದಾರೆ.

ಲೋಕೇಶ್ ಕನಗರಾಜ್ (Lokesh Kanagaraj) ನಿರ್ದೇಶನದ ಕೂಲಿ ಸಿನಿಮಾ ಬಾಕ್ಸ್ ಆಫೀಸ್ ಹಿಟ್ ಗಳಿಕೆ ಮಾಡಿದ್ದ ಬಳಿಕ ಇವರ ನಿರ್ದೇಶನದಲ್ಲಿಯೇ ರಜನೀಕಾಂತ್ ಹಾಗೂ ಕಮಲ್ ಹಾಸನ್ ಒಟ್ಟಿಗೆ ಸಿನಿಮಾ ಮಾಡ್ತಾರೆ ಎಂದು ಹೇಳಲಾಗಿತ್ತು. ಆದರೆ ಇನ್ನೊಂದು ವರದಿಯ ಪ್ರಕಾರ ಅದು ನಿಜ ಅಲ್ಲ ಎಂಬುದು ತಿಳಿದುಬಂದಿದೆ. ಲೋಕೇಶ್ ಅವರ ಬಳಿಕ ನಿರ್ದೇಶಕ ಪ್ರದೀಪ್ ರಂಗ ನಾಥನ್, ಸುಂದರ್ ಸಿ. ಹೆಸರು ಕೂಡ ಕೇಳಿಬಂದಿತ್ತು. ಇದೀಗ ಜೈಲರ್ ಸಿನಿಮಾ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರು ಈ ಇಬ್ಬರು ಸ್ಟಾರ್ ನಟರಿಗೆ ನಿರ್ದೇಶನ ಮಾಡುತ್ತಿದ್ದಾರೆ ಎಂಬ ಮಾಹಿತಿ ವೈರಲ್ ಆಗುತ್ತಿದೆ. ಆದರೆ ಯಾವ ನಿರ್ದೇಶಕರು ಇವರಿಗೆ ಆ್ಯಕ್ಷನ್ ಕಟ್ ಹೇಳುತ್ತಾರೆ ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.

ಇದನ್ನೂ ಓದಿ:Varna Movie: ಟೀಸರ್‌ನಲ್ಲೇ ಕುತೂಹಲ ಮೂಡಿಸಿದೆ ಅರ್ಜುನ್ ಯೋಗಿ ನಟನೆಯ ʼವರ್ಣʼ

ಸದ್ಯ ಲೋಕೇಶ್ ಕನಗರಾಜ್ ಅವರು ಕೈದಿ 2 ಸಿನಿಮಾದ ಕೆಲಸ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಅವರು ರಜನಿ ಹಾಗೂ ಕಮಲ್ ಹಾಸನ್ ಅಭಿನಯದ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ಅವಕಾಶವು ಖ್ಯಾತ ನಿರ್ದೇಶಕ ನೆಲ್ಸನ್ ಅವರಿಗೆ ಸಿಗಲಿದೆಯಂತೆ. ಈಗಾಗಲೇ ನೇಲ್ಸನ್ ಅವರು ಕಮಲ್-ರಜನಿ ನಟಿಸಲು ಒಂದು ಕಥೆಯನ್ನು ನೆಲ್ಸನ್ ಸಿದ್ಧಪಡಿಸಿದ್ದಾರಂತೆ. ಆ ಹೊಸ ಸಿನಿಮಾ ಕಥೆ ರಜನಿ ಅವರಿಗೆ ಬಹಳ ಇಷ್ಟ ಆಗಿದೆ ಎಂದು ಸಹ ಹೇಳಲಾಗುತ್ತಿದೆ.

ರಜನಿಕಾಂತ್ ಸೀರಿಯಸ್ ಆ್ಯಕ್ಸನ್ ಸಿನಿಮಾ ಮಾಡಿದ್ದರೂ ಅದರಲ್ಲಿ ಕಾಮಿಡಿ, ಸಸ್ಪೆನ್ಸ್ ಎಲ್ಲವು ಇದ್ದೇ ಇರುತ್ತದೆ. ಅಂತೆಯೇ ಕಮಲ್ ಹಾಸನ್ ಕೂಡ ಕಾಮಿಡಿ, ಸೀರಿಯಸ್ ಎಲ್ಲ ಪಾತ್ರಕ್ಕೂ ಸೂಟ್ ಆಗುತ್ತಾರೆ. ಹೀಗಾಗಿ ಇವರಿಬ್ಬರ ಕಾಂಬಿನೇಶನ್ ನಲ್ಲಿ ಕಾಮಿಡಿ ಜಲಕ್ ಹೊಂದಿದ್ದ ಕಮರ್ಷಿಯಲ್ ಸಿನಿಮಾ ಮಾಡಲು ನೆಲ್ಸನ್ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾ ಶೀಘ್ರವೇ ಹೆಸರು ಅನೌನ್ಸ್ ಮಾಡಿ ಅಧಿಕೃತ ಮಾಹಿತಿ ಸಿಗಲಿದ್ದು ಮುಂದಿನ ವರ್ಷದ ಅಂತ್ಯದೊಳಗೆ ಸಿನಿಮಾ ತೆರೆ ಮೇಲೆ ತರಲು ಸಿದ್ಧತೆ ಮಾಡಿಕೊಳ್ಳಲಾಗುವ ನಿರೀಕ್ಷೆ ಇದೆ.