ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vijay Deverakonda: ಮತ್ತೆ ತೆರೆಮೇಲೆ ಒಂದಾಗಲಿದ್ದಾರೆ ವಿಜಯ್‌ ದೇವರಕೊಂಡ-ರಶ್ಮಿಕಾ ಮಂದಣ್ಣ

Rashmika Mandanna: ಟಾಲಿವುಡ್‌ನ ಕ್ಯೂಟ್‌ ಕಪಲ್‌ ಎಂದೇ ಕರೆಯಿಸಿಕೊಳ್ಳುವ ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರೆ ಎನ್ನುವ ವದಂತಿಯ ನಡುವೆ ಇವರಿಬ್ಬರು ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಶೀರ್ಷಿಕೆ ಅಂತಿಮವಾಗದ ಈ ಚಿತ್ರದ ಶೂಟಿಂಗ್‌ ಸದ್ಯದಲ್ಲೇ ಆರಂಭವಾಗಲಿದೆ.

3ನೇ ಬಾರಿ ತೆರೆಮೇಲೆ ಒಂದಾಗಲಿದ್ದಾರೆ ವಿಜಯ್‌ ದೇವರಕೊಂಡ-ರಶ್ಮಿಕಾ

Ramesh B Ramesh B Jul 29, 2025 6:19 PM

ಹೈದರಾಬಾದ್‌: ವಿಜಯ್‌ ದೇವರಕೊಂಡ (Vijay Deverakonda)-ರಶ್ಮಿಕಾ ಮಂದಣ್ಣ (Rashmika Mandanna) ಟಾಲಿವುಡ್‌ ಜನಪ್ರಿಯ ಜೋಡಿ. ಈಗಾಗಲೇ ಇವರು ತೆಲುಗಿನ ʼಗೀತ ಗೋವಿಂದಂʼ ಮತ್ತು ʼಡಿಯರ್‌ ಕಾಮ್ರೇಡ್‌ʼ ಚಿತ್ರಗಳಲ್ಲಿ ಜತೆಯಾಗಿ ನಟಿಸಿದ್ದಾರೆ. ಇದೀಗ 3ನೇ ಬಾರಿ ಮತ್ತೆ ತೆರೆಮೇಲೆ ಒಂದಾಗಲು ಸಜ್ಜಾಗಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಈ ಸುದ್ದಿ ಕೇಳಿ ಫ್ಯಾನ್ಸ್‌ ರೋಮಾಂಚನಗೊಂಡಿದ್ದು, ಶೀರ್ಷಿಕೆ ಇನ್ನೂ ಅಂತಿಮವಾಗದ ಈ ಚಿತ್ರಕ್ಕೆ ತಾತ್ಕಾಲಿಕವಾಗಿ ʼವಿಡಿ 14ʼ (VD 14) ಎಂದು ಹೆಸರಿಡಲಾಗಿದೆ.

2021ರಲ್ಲಿ ತೆರೆಕಂಡ ಟಾಲಿವುಡ್‌ನ ʼಶ್ಯಾಮ್‌ ಸಿಂಘ ರಾಯ್‌ʼ (Shyam Singha Roy) ಚಿತ್ರದ ಮೂಲಕ ಸಿನಿಪ್ರಿಯರನ್ನು ಆಕರ್ಷಿಸಿದ್ದ ನಿರ್ದೇಶಕ ರಾಹುಲ್‌ ಸಂಕೃತ್ಯಾನ್‌ (Rahul Sankrityan) ಈ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ʼಶ್ಯಾಮ್‌ ಸಿಂಘ ರಾಯ್‌ʼ ಮೂಲಕ ಸ್ವಾತಂತ್ರ್ಯೋತ್ತರ ಭಾರತದ ಕಥೆಯನ್ನು ಆಧುನಿಕ ಕಾಲಘಟ್ಟದೊಂದಿಗೆ ಬೆರೆಸಿ ಗಮನ ಸೆಳೆದಿದ್ದ ರಾಹುಲ್‌ ಈ ಬಾರಿ ಹೊಸದೊಂದು ಮಾದರಿಯ ಚಿತ್ರಕ್ಕೆ ಮುಂದಾಗಿದ್ದಾರೆ. ಈಗಾಗಲೇ 2 ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿ ಹಿಟ್‌ ಪೇರ್‌ ಎನಿಸಿಕೊಂಡಿರುವ ರಶ್ಮಿಕಾ ಮತ್ತು ವಿಜಯ್‌ ದೇವರಕೊಂಡ ಅವರನ್ನು ತಮ್ಮ ಮುಂದಿನ ಸಿನಿಮಾಕ್ಕೆ ಆಯ್ಕೆ ಮಾಡಿದ್ದು, ಇಬ್ಬರೂ ಕಥೆ ಕೇಳಿ ಒಪ್ಪಿಗೆ ಸೂಚಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: Rashmika-Vijay Deverakonda: ಮತ್ತೆ ರಶ್ಮಿಕಾ-ವಿಜಯ್‌ ದೇವರಕೊಂಡ ಭರ್ಜರಿ ವೆಕೇಶನ್‌? ವೈರಲ್‌ ಆಗಿರೋ ವಿಡಿಯೊದಲ್ಲೇನಿದೆ?

ಸದ್ಯ ರಶ್ಮಿಕಾ ತಮ್ಮ ಮುಂದಿನ ಹಿಂದಿ ಸಿನಿಮಾ ʼಥಮ್ಮʼದ ಚಿತ್ರೀಕರಣಕ್ಕಾಗಿ ಹೈದರಾಬಾದ್‌ನಲ್ಲಿ ಬೀಡುಬಿಟ್ಟಿದ್ದಾರೆ. ಸದ್ಯದಲ್ಲೇ ʼವಿಡಿ 14ʼ ಶೂಟಿಂಗ್‌ ಕೂಡ ಆರಂಭವಾಗಲಿದ್ದು, ರಶ್ಮಿಕಾ ಏಕಕಾಲಕ್ಕೆ ಎರಡೂ ಕಡೆ ಭಾಗಿಯಾಗಲಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ. ʼಥಮ್ಮʼದಲ್ಲಿ ಅವರು ಬಾಲಿವುಡ್‌ನ ಆಯುಷ್ಮಾನ್‌ ಖುರಾನಗೆ ಜೋಡಿಯಾಗಿ ನಟಿಸುತ್ತಿದ್ದು, ಹಾರರ್‌ ಶೈಲಿಯಲ್ಲಿ ಇದು ಮೂಡಿ ಬರಲಿದೆ.

ವಿಜಯ್‌ ದೇವರಕೊಂಡ-ರಶ್ಮಿಕಾ ಕಾಂಬಿನೇಷನ್‌ನ ಚಿತ್ರ ಕಳೆದ ವರ್ಷದ ಮೇಯಲ್ಲಿ ಘೋಷಣೆಯಾಗಿತ್ತು. ಕಳೆದ ವಾರವೇ ಶೂಟಿಂಗ್‌ ಆರಂಭವಾಗಬೇಕಿತ್ತು. ಆದರೆ ವಿಜಯ್‌ ದೇವರಕೊಂಡ ಅವರಿಗೆ ಡೆಂಘಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶೂಟಿಂಗ್‌ ಮುಂದೂಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಸದ್ಯ ರಶ್ಮಿಕಾ ತೆಲುಗಿನ ʼದಿ ಗರ್ಲ್‌ ಫ್ರೆಂಡ್‌ʼ, ʼಮೈಸಾʼ ಚಿತ್ರದಲ್ಲಿ ನಿರತರಾಗಿದ್ದು, ಅಟ್ಲಿ-ಅಲ್ಲು ಅರ್ಜುನ್‌ ಕಾಂಬಿನೇಷನ್‌ನ ಸಿನಿಮಾವನ್ನೂ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತ ವಿಜಯ್‌ ದೇವರಕೊಂಡ ಅಭಿನಯಿಸಿರುವ ʼಕಿಂಗ್‌ಡಮ್‌ʼ ಇದೇ ತಿಂಗಳ 31ರಂದು ರಿಲೀಸ್‌ ಆಗಲಿದ್ದು, ಅವರು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಈಗಾಗಲೇ ಕುತೂಹಲ ಕೆರಳಿಸಿದೆ. ಇದಾದ ಬಳಿಕ ಅವರು ʼಎಸ್‌ವಿಸಿ 59ʼ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

ಹಸೆಮಣೆಗೇರಲಿದ್ದಾರ ವಿಜಯ್‌-ರಶ್ಮಿಕಾ?

ಈ‌ ಮಧ್ಯೆ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಡೇಟಿಂಗ್‌ ನಡೆಸುತ್ತಿದ್ದಾರೆ ಎನ್ನುವ ವದಂತಿಗೆ ಮತ್ತಷ್ಟು ರೆಕ್ಕೆ-ಪುಕ್ಕ ಬಂದಿದೆ. ಶೀಘ್ರದಲ್ಲೇ ಹಸೆಮಣೆಗೇರಲಿದ್ದಾರೆ ಎನ್ನುವ ಮಾತೂ ಕೇಳಿ ಬಂದಿದೆ. ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಇದುವರಗೆ ಬಾಯಿಬಿಟ್ಟು ಹೇಳದಿದ್ದರೂ ಜತೆಯಾಗಿ ಓಡಾಡುವ ಮೂಲಕ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇಬ್ಬರೂ ಪರಸ್ಪರರ ಚಿತ್ರ ಬಿಡುಗಡೆಯಾಗುವ ವೇಳೆ ಬಹಿರಂಗವಾಗಿಯೇ ಬೆಂಬಲ ಸೂಚಿಸುತ್ತಿರುತ್ತಾರೆ. ಒಟ್ಟಿನಲ್ಲಿ ರೀಲ್‌ ಜತೆಗೆ ರಿಯಲ್‌ ಆಗಿಯೂ ಈ ಜೋಡಿ ಒಂದಾಗಲಿ ಎನ್ನುವುದು ಅಭಿಮಾನಿಗಳ ಹಾರೈಕೆ.