ʻನಾನು ವಿಜಯ್ ದೇವರಕೊಂಡರನ್ನ ಮದುವೆ ಆಗುತ್ತೇನೆʼ ; ವದಂತಿ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ನೇರ ಹೇಳಿಕೆ
ಇತ್ತೀಚೆಗೆ ರಶ್ಮಿಕಾ (Rashmika Mandanna) ಅವರು ಥಾಮಾ ಸಿನಿಮಾ ರಿಲೀಸ್ ಸಂದರ್ಭ ದಲ್ಲಿ ಎಂಗೆಜ್ ಮೆಂಟ್ ಬಗ್ಗೆ ಸ್ಪಷ್ಟನೆ ನೀಡಿದ್ದರು.ರಶ್ಮೀಕಾ ಹಾಗೂ ವಿಜಯ್ (Vijay Devarkonda) 'ಗೀತಾ ಗೋವಿಂದಂ' ಹಾಗೂ 'ಡಿಯರ್ ಕಾಮ್ರೇಡ್' ಚಿತ್ರಗಳಲ್ಲಿ ಒಟ್ಟಿಗೆ ನಟಿಸುವ ಮೂಲಕ ಈ ಜೋಡಿಯ ಕೆಮಿಸ್ಟ್ರಿ ಇಷ್ಟವಾಗಿತ್ತು. ಸದ್ಯ ಅವರ ಆಫ್-ಸ್ಕ್ರೀನ್ ಪ್ರೀತಿಯು ಈಗ ಮದುವೆಯ ಹಂತಕ್ಕೆ ತಲುಪಿದ್ದು ಈ ಸುದ್ದಿಗಾಗಿ ಅಭಿಮಾನಿಗಳು (Fans) ಕಾತರದಿಂದ ಕಾಯು ತ್ತಿದ್ದಾರೆ. ಸದ್ಯ ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.
ವಿಜಯ್ ದೇವರಕೊಂಡ ಅವರೊಂದಿಗಿನ ನಿಶ್ಚಿತಾರ್ಥದ ಸುದ್ದಿ ಬೆನ್ನಲ್ಲೇ ಮತ್ತೊಂದು ಹೇಳಿಕೆ ನೀಡಿದ್ದಾರೆ ರಶ್ಮಿಕಾ ಮಂದಣ್ಣ. ಇಬ್ಬರೂ ಫೆಬ್ರವರಿ 2026 ರಲ್ಲಿ ಮದುವೆಯಾಗಬಹುದು ಎಂದು ವದಂತಿಗಳಿವೆ. ಊಹಾಪೋಹಗಳ ನಡುವೆ, ತಾವು ವಿಜಯ್ನ ಮದುವೆ ಆಗೋದಾಗಿ ಅವರು ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ ನಟನೆಯ ‘ದಿ ಗರ್ಲ್ಫ್ರೆಂಡ್’ ಸಿನಿಮಾ ನವೆಂಬರ್ 7ರಂದು ರಿಲೀಸ್ ಆಗಿದೆ. ಈ ಚಿತ್ರದ ಪ್ರಚಾರದಲ್ಲಿ ರಶ್ಮಿಕಾ ಭಾಗಿ ಆಗಿದ್ದಾರೆ. ಈ ವೇಳೆ ರಶ್ಮಿಕಾಗೆ ವಿವಿಧ ಪ್ರಶ್ನೆಗಳು ಎದುರಾಗಿವೆ. ಇದರಲ್ಲಿ ಅವರ ಮದುವೆ ವಿಚಾರದ ಬಗ್ಗೆ ಹೆಚ್ಚು ಪ್ರಶ್ನೆಗಳು ಎದುರಾಗಿವೆ.
ಪ್ರೀತಿಯ ಬಗ್ಗೆ ಮತ್ತು ಜೀವನ ಸಂಗಾತಿ ಬಗ್ಗೆ ರಶ್ಮಿಕಾಗೆ ಪ್ರಶ್ನೆ ಎದುರಾದಾಗ "ನನ್ನ ಪ್ರಕಾರ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿರುವ ವ್ಯಕ್ತಿ. ನಾನು ಸಾಮಾನ್ಯ ಅರ್ಥದಲ್ಲಿ ಮಾತನಾಡುತ್ತಿಲ್ಲ ಅರ್ಥಮಾಡಿಕೊಳ್ಳಲು ಮುಕ್ತ ವ್ಯಕ್ತಿಯನ್ನು ನಾನು ಬಯಸುತ್ತೇನೆ. ನಾಳೆ ನನ್ನ ವಿರುದ್ಧ ಯುದ್ಧ ನಡೆದರೆ, ಆ ವ್ಯಕ್ತಿ ನನ್ನೊಂದಿಗೆ ಹೋರಾಡುತ್ತಾನೆ ಎಂದು ನನಗೆ ತಿಳಿದಿದೆ ಎಂದರು.
ಇಲ್ಲಿಯವರೆಗೆ ಕೆಲಸ ಮಾಡಿರುವ ಎಲ್ಲಾ ನಟರಲ್ಲಿ ಯಾರನ್ನು ಮದುವೆಯಾಗುತ್ತೀರಿ? ಎಂದು ಪ್ರಶ್ನೆ ಬಂದಾಗ, ವಿಜಯ್ ದೇವರಕೊಂಡ ಅವರನ್ನು ಮದುವೆಯಾಗುತ್ತೇನೆ ಎಂದು ಹೇಳಿದರು.
ವಿಜಯ್ ಜೊತೆಗಿನ ಅವರ ವಿವಾಹದ ಸುತ್ತ ವದಂತಿಗಳು ಹರಡುತ್ತಿರುವ ನಡುವೆಯೇ ಅವರ ಹೇಳಿಕೆ ಹೊರಬಿದ್ದಿದೆ. ರಶ್ಮಿಕಾ ಈಗಾಗಲೇ ಮದುವೆಯ ಸಿದ್ಧತೆಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.
ಈ ಜೋಡಿ ಇನ್ನೂ ಅಧಿಕೃತವಾಗಿ ಈ ವಿಚಾರವನ್ನು ದೃಢೀಕರಿಸದಿದ್ದರೂ ಈಗಾಗಲೇ ಅಭಿಮಾನಿಗಳ ಉತ್ಸಾಹ ಹೆಚ್ಚಾಗಿದೆ. ಹೌದು ಟಾಲಿವುಡ್‌ನ ಜೋಡಿಗಳಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಮುಂಬರುವ ವರ್ಷದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ.
ರಶ್ಮಿಕಾ- ವಿಜಯ್ ಮದುವೆಯೂ ಫೆಬ್ರವರಿ 26, 2026 ರಂದು ನಡೆಯಲಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ, ಈ ಜೋಡಿ ರಾಜಸ್ಥಾನದ ಪ್ರಸಿದ್ಧ ಪ್ರವಾಸಿ ತಾಣವಾದ ಉದಯಪುರದಲ್ಲಿ ಅದ್ದೂರಿ 'ರಾಯಲ್ ವೆಡ್ಡಿಂಗ್'ಗೆ ಪ್ಲಾನ್ ಕೂಡ ಮಾಡಿ ಕೊಂಡಿದ್ದಾರಂತೆ. ಕಳೆದ ತಿಂಗಳು, ಅಂದರೆ ಅಕ್ಟೋಬರ್ 3, 2025 ರಂದು ವಿಜಯ್ ಅವರ ಹೈದರಾಬಾದ್ ನಿವಾಸದಲ್ಲಿ ಕೇವಲ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಖಾಸಗಿ ನಿಶ್ಚಿತಾರ್ಥ ನಡೆದಿದೆ.
ಇತ್ತೀಚೆಗೆ ರಶ್ಮಿಕಾ ಅವರು ಥಾಮಾ ಸಿನಿಮಾ ರಿಲೀಸ್ ಸಂದರ್ಭ ದಲ್ಲಿ ಎಂಗೆಜ್ ಮೆಂಟ್ ಬಗ್ಗೆ ಸ್ಪಷ್ಟನೆ ನೀಡಿದ್ದರು.ರಶ್ಮೀಕಾ ಹಾಗೂ ವಿಜಯ್ 'ಗೀತಾ ಗೋವಿಂದಂ' ಹಾಗೂ 'ಡಿಯರ್ ಕಾಮ್ರೇಡ್' ಚಿತ್ರಗಳಲ್ಲಿ ಒಟ್ಟಿಗೆ ನಟಿಸುವ ಮೂಲಕ ಈ ಜೋಡಿಯ ಕೆಮಿಸ್ಟ್ರಿ ಇಷ್ಟವಾಗಿತ್ತು. ಸದ್ಯ ಅವರ ಆಫ್-ಸ್ಕ್ರೀನ್ ಪ್ರೀತಿಯು ಈಗ ಮದುವೆಯ ಹಂತಕ್ಕೆ ತಲುಪಿದ್ದು ಈ ಸುದ್ದಿಗಾಗಿ ಅಭಿಮಾನಿಗಳು ಕಾತರದಿಂದ ಕಾಯು ತ್ತಿದ್ದಾರೆ. ಸದ್ಯ ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.