ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

VIROSH: ವಿಜಯ್‌ ದೇವರಕೊಂಡ-ರಶ್ಮಿಕಾ ಮಂದಣ್ಣ ಮದುವೆಯ ಫೋಟೊ ಔಟ್‌

VIROSH Wedding: ರಾಜಸ್ಥಾನದ ಉದಯಪುರದಲ್ಲಿ ನಟ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಇದೀಗ ರಶ್ಮಿಕಾ ಮಂದಣ್ಣ ಮದುವೆ ಸಮಾರಂಭದ ಫೋಟೊ ಇನ್‌ಸ್ಟಾಗ್ರಾಮ್‌ನಲ್ಲಿ ಹರಿಯಬಿಟ್ಟಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಇಲ್ಲಿದೆ ಫೋಟೊಗಳು.

ರಶ್ಮಿಕಾ ಮಂದಣ್ಣ-ವಿಜಯ್‌ ದೇವರಕೊಂಡ ಮದುವೆಯ ಕ್ಷಣ.

ಜೈಪುರ, ಫೆ. 26: ಕೊನೆಗೂ ಸಿನಿಪ್ರಿಯರ ಕಾಯುವಿಕೆ ಅಂತ್ಯಗೊಂಡಿದೆ. ರಾಜಸ್ಥಾನದ ಉದಯಪುರದಲ್ಲಿ ನಟ ವಿಜಯ್‌ ದೇವರಕೊಂಡ (Vijay Devarakonda) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದು, ಸಮಾರಂಭದ ಫೋಟೊ, ವಿಡಿಯೊ ಹೊರ ಬಿದ್ದಿದೆ. ಸಂಪ್ರದಾಯದಂತೆ ನಡೆದ ಮದುವೆಯಲ್ಲಿ ವಿಜು - ರಶೀ ಸತಿಪತಿಗಳಾಗಿದ್ದಾರೆ (VIROSH Wedding). ಇದೀಗ ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಮದುವೆ ಸಮಾರಂಭದ ಫೋಟೊ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕಿತ್ತಳೆ ಬಣ್ಣದ ಸೀರೆಯಲ್ಲಿ ರಶ್ಮಿಕಾ ಮಂದಣ್ಣ ಮಿಂಚಿದರೆ ವಿಜಯ್‌ ದೇವರಕೊಂಡ ರೇಷ್ಮೆ ಪಂಚೆಯಲ್ಲಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದಾರೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟ ವಿರೋಶ್ (ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ) ಅವರಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ಉದಯಪುರದಲ್ಲಿ ಅತ್ಯಂತ ಖಾಸಗಿಯಾಗಿ ನಡೆದ ಈ ಸಮಾರಂಭಕ್ಕೆ ಆತ್ಮೀಯರಿಗಷ್ಟೇ ಆಹ್ವಾನವಿತ್ತು.

ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್‌ ಪೋಸ್ಟ್‌:



ಫೆಬ್ರವರಿ 26ರಂದು ಉದಯಪುರದಲ್ಲಿ ಮದುವೆ ನಡೆದರೆ, ಮಾರ್ಚ್‌ 4ರಂದು ಹೈದರಾಬಾದ್‌ನಲ್ಲಿ ಮದುವೆ ಆರತಕ್ಷತೆ ನಡೆಯಲಿದೆ. ಉದಯಪುರದಲ್ಲಿ ನಡೆದ ಈ ಮದುವೆಗೆ ಕೆಲವೇ ಕೆಲವು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಹೈದರಾಬಾದ್‌ ಮತ್ತು ವಿರಾಜಪೇಟೆಯಲ್ಲಿ ಆರತಕ್ಷತೆ ಆಯೋಜಿಸಲಾಗುತ್ತದೆ ಎನ್ನಲಾಗಿದೆ. ಭಾರತದ ವಿವಿಧ ಭಾಷೆಗಳ ಗಣ್ಯರನ್ನು ಆರತಕ್ಷತೆ ಆಹ್ವಾನಿಸುವ ಸಾಧ್ಯತೆ ಇದೆ.

ಹೈದರಾಬಾದ್‌ನಲ್ಲಿ ಮದುವೆ ಆರತಕ್ಷತೆ ಮಾರ್ಚ್‌ 4ರಂದು ನಡೆದರೆ ವಿರಾಜಪೇಟೆಯಲ್ಲಿ ಯಾವ ನಡೆಯಲಿದೆ ಎನ್ನುವುದು ತಿಳಿದು ಬಂದಿಲ್ಲ. ಇನ್ನು ಒಂದೇ ದಿನ ತೆಲುಗು ಮತ್ತು ಕೊಡವ ಸಂಪ್ರದಾಯದಂತೆ ಮದುವೆ ನಡೆದಿದ್ದು ವಿಶೇಷ.

8 ವರ್ಷಗಳ ಹಿಂದೆಯೇ ತೆರೆಮೇಲೆ ಶಾಸ್ತ್ರೋಕ್ತವಾಗಿ ನಡೆದಿತ್ತು ವಿಜಯ್‌ ದೇವರಕೊಂಡ - ರಶ್ಮಿಕಾ ಮದುವೆ

ಉದಯಪುರದಲ್ಲಿ ಬೀಡುಬಿಟ್ಟ ಕುಟುಂಬಸ್ಥರು

ಈ ಅದ್ಧೂರಿ ಮದುವೆಗಾಗಿ ಕೆಲವು ದಿನಗಳ ಹಿಂದೆಯೇ ಎರಡೂ ಕುಟುಂಬಸ್ಥರು ಉದಯಪುರಕ್ಕೆ ಆಗಿಮಿಸಿವೆ. ರಶ್ಮಿಕಾ ಮತ್ತು ವಿಜಯ್ ಅವರ ಕುಟುಂಬ ಸದಸ್ಯರು, ಅತ್ಯಾಪ್ತರು ಪರಸ್ಪರ ಗೇಮ್​​​ಗಳನ್ನು ಆಡಿದ್ದಾರೆ. ಅದ್ಧೂರಿಯಾಗಿ ನಡೆದ ಮೆಹಂದಿ, ಹಳದಿ, ಸಂಗೀತ್ ಕಾರ್ಯಕ್ರಮದಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ ಅವರಿಗೆ ವಿಜಯ್ ದೇವರಕೊಂಡ ಅವರ ತಾಯಿ, ತಮ್ಮ ಕುಟುಂಬಕ್ಕೆ ತಲೆ ತಲೆಮಾರುಗಳಿಂದಲೂ ಬಳುವಳಿಯಾಗಿ ಬಂದಿರುವ ಚಿನ್ನದ ಬಳೆಗಳನ್ನು ನೀಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಇನ್ನು ಈ ಮದುವೆ ಸಮಾರಂಭದಲ್ಲಿ ಅತಿಥಿಗಳಿಗೆ ಮೊಬೈಲ್‌, ಕ್ಯಾಮರಾ ಬಳಸಲು ನಿರ್ಬಂಧ ಹೇರಿದ್ದರಿಂದ ಇದುವರೆಗೆ ಫೋಟೊ ಹೊತಬಿದ್ದಿರಲಿಲ್ಲ.

ತಮ್ಮ ನೆಚ್ಚಿನ ನಟ-ನಟಿಯ ವಿವಾಹ ಸಮಾರಂಭದ ಕ್ಷಣವನ್ನು ಕಣ್ತುಂಬಿಕೊಳ್ಳಲು ಅವರ ಅಬಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದರು. ಅದರಂತೆ ಇದೀಗ ಅವರೇ ಫೋಟೊ ಹಂಚಿಕೊಂಡಿದ್ದು, ಸದ್ಯ ವೈರಲ್‌ ಆಗಿದೆ. ಸ್ಯಾಂಡಲ್‌ವುಡ್‌ ಮೂಲಕ ಬಣ್ಣದ ಲೋಕ ಪ್ರವೇಶಿಸಿದ ರಶ್ಮಿಕಾ ಬಳಿಕ ತೆಲುಗು, ತಮಿಳು ಬಳಿಕ ಹಿಂದಿಯಲ್ಲೂ ಮಿಂಚು ಹರಿಸುತ್ತಿದ್ದಾರೆ. ಹೀಗಾಗಿ ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಜತೆಗೆ ಅವರನ್ನು ನ್ಯಾಶನಲ್‌ ಕ್ರಶ್‌ ಎಂದೇ ಕರೆಯಲಾಗುತ್ತದೆ. ಈ ಎಲ್ಲ ಕಾರಣಗಳಿಂದ ಅವರ ಮದುವೆ ಭಾರಿ ಸದ್ದು ಮಾಡಿದೆ.

Ramesh Ballamoole

View all posts by this author