ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ನಾಡಿನಾದ್ಯಂತ ಜೋರಾಗಿಯೇ ನಡೆಯುತ್ತಿದೆ. ಬಾಲಿವುಡ್, ಕಾಲಿವುಡ್ , ಸ್ಯಾಂಡಲ್ ವುಡ್ ಸ್ಟಾರ್ ಸೆಲೆಬ್ರಿಟಿಗಳ ತಮ್ಮ ಪ್ರೀತಿ ಪಾತ್ರರ ಜೊತೆ ಅದ್ದೂರಿಯಾಗಿ ದೀಪಾವಳಿ ಸಂಭ್ರಮ ಆಚರಿಸಿಕೊಳ್ಳುತ್ತಿದ್ದಾರೆ. ಅಂತೆಯೆ ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ (Yash) ಅವರು ಕೂಡ ತಮ್ಮ ಕುಟುಂಬದ ಜೊತೆಗೆ ದೀಪಾವಳಿ ಹಬ್ಬವನ್ನು ಸೆಲೆಬ್ರೇಶನ್ ಮಾಡಿಕೊಂಡಿದ್ದಾರೆ. ಪತ್ನಿ ರಾಧಿಕಾ ಪಂಡಿತ್ (Radhika Pandit) ಮತ್ತು ಇಬ್ಬರು ಮಕ್ಕಳ ಜೊತೆಗೆ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಅದೇ ರೀತಿ ರಾಕಿ ಬಾಯ್ ಕುಟುಂಬ ತಮ್ಮ ಅಭಿಮಾನಿಗಳಿಗೆ , ಸಿನಿಮಾ ಇಂಡಸ್ಟ್ರಿಯ ಸಹಕಲಾವಿದರಿಗೆ ಮತ್ತು ಆಪ್ತರಿಗೆ ಕುಟುಂಬ ಸಮೇತರಾಗಿ ಶುಭ ಹಾರೈಸಿದ್ದಾರೆ. ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದೆ.
ನಟಿ ರಾಧಿಕಾ ಪಂಡಿತ್ ಅವರು ಮದುವೆಯಾದ ಬಳಿಕ ಸಿನಿಮಾ ಇಂಡಸ್ಟ್ರಿಯಿಂದ ಬಹುತೇಕ ದೂರವೇ ಉಳಿದಿದ್ದಾರೆ. ತಮ್ಮ ಮಕ್ಕಳ ಲಾಲನೆ ಪೋಷಣೆಗೆ ಅಧಿಕ ಒತ್ತು ನೀಡುವ ಇವರು ಮಕ್ಕಳ ಜೊತೆಗೆ ಕಳೆಯುವ ಅತ್ಯಮೂಲ್ಯ ಕ್ಷಣಗಳ ವಿಡಿಯೋವನ್ನು ಸೋಶಿಯಲ್ ಮಿಡಿಯಾದಲ್ಲಿ ಆಗಾಗ ಹಂಚಿಕೊಳ್ಳುತ್ತಲೇ ಇರುತ್ತಾರೆ. ಮಕ್ಕಳ ತಮಾಷೆ ವಿಡಿಯೊ, ,ಡ್ಯಾನ್ಸ್ ವಿಡಿಯೊ, ಮಕ್ಕಳ ಜೊತೆಗೆ ಕೇಕ್ ತಯಾರಿಸುವುದು ಹೀಗೆ ನಾನಾತರನಾದ ವಿಡಿಯೋವನ್ನು ಈ ಹಿಂದೆ ಅವರು ಹಂಚಿ ಕೊಂಡಿದ್ದರು. ಈ ಬಾರಿ ಕುಟುಂಬ ಸಮೇತರಾಗಿ ದೀಪಾವಳಿ ಸಲಬ್ರೇಟ್ ಮಾಡಿಕೊಂಡ ವಿಡಿಯೋ ಹಂಚಿಕೊಂಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಕುಟುಂಬದಲ್ಲಿ ದೀಪಾವಳಿ ಸಂಭ್ರಮ: ವಿಡಿಯೋ ಇಲ್ಲಿದೆ
ವೈರಲ್ ಆದ ವಿಡಿಯೋದಲ್ಲಿ ರಾಕಿಂಗ್ ಸ್ಟಾರ್ ಯಶ್, ನಟಿ ರಾಧಿಕಾ ಪಂಡಿತ್ ಅವರು ಪರ್ಪಲ್ ಕಲರ್ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಹಾಗೂ ಅವರ ಮಕ್ಕಳಾರ ಐರಾ (Ayra) ಹಾಗೂ ಯಥರ್ವ್ (Yatharv) ಅವರು ಪಿಸ್ತಾ ಕಲರ್ ಟ್ರೆಡಿಶನಲ್ ಬಟ್ಟೆಯಲ್ಲಿ ಕ್ಯೂಟ್ ಆಗಿ ಕಂಡಿದ್ದಾರೆ. ಅವರೆಲ್ಲರು ಒಟ್ಟಿಗೆ ಬಾಲ್ಕನಿಯಲ್ಲಿ ದೀಪಾವಳಿ ಹಬ್ಬವನ್ನು ಸಲಬ್ರೇಟ್ ಮಾಡಿದ್ದಾರೆ. ಬಳಿಕ ಅಲ್ಲಿಯೇ ತಮ್ಮ ಪ್ರೀತಿ ಪಾತ್ರರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಇದನ್ನು ಓದಿ:Dilmaar Movie: 'ದಿಲ್ಮಾರ್' ಪ್ರೀ-ರಿಲೀಸ್ ಇವೆಂಟ್ ಗೆ ಶಿವಣ್ಣ ಭಾಗಿ- ಇದೇ 24ರಂದು ಸಿನಿಮಾ ರಿಲೀಸ್!
ಎಲ್ಲರಿಗೂ ನಮಸ್ಕಾರ , ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಹೇಳುತ್ತಾರೆ. ಬಳಿಕ ಮಕ್ಕಳಿಬ್ಬರು ಕುಣಿದು ಕುಪ್ಪಳಿಸಿದ್ದು ಅದನ್ನು ಕಂಡ ಯಶ್ ಮತ್ತು ರಾಧಿಕಾ ಅವರು ಮುಗುಳ್ನ ಕ್ಕಿದ್ದಾರೆ. ಈ ಮೂಲಕ ಈ ವಿಡಿಯೋ ಅಭಿಮಾನಿಗಳ ಮನ ಸೆಳೆಯುತ್ತಿದ್ದು ವಿಡಿಯೋ ಬಗ್ಗೆ ಅವರ ಫ್ಯಾನ್ಸ್ ನಾನಾ ಬಗೆಯ ಕಾಮೆಂಟ್ ಹಾಕಿದ್ದಾರೆ. ರಾಕಿ ಬಾಯ್ ಫ್ಯಾಮಿಲಿ ಕಂಡರೆ ತುಂಬಾ ಖುಷಿ ಯಾಗುತ್ತೆ.. ಇದ್ದರೆ ಹೀಗೆ ಇರಬೇಕು.. ಯಾರ ದೃಷ್ಟಿಯೂ ಈ ಕುಟುಂಬಕ್ಕೆ ತಾಗದಿರಲಿ ಎಂದು ಅಭಿಮಾನಿಯೊಬ್ಬರು ವಿಡಿಯೋಗೆ ಕಾಮೆಂಟ್ ಹಾಕಿದ್ದಾರೆ.
ನಟಿ ರಾಧಿಕಾ ಪಂಡಿತ್ ಅವರು ಮದುವೆಯಾದ ಬಳಿಕ ಅನುಪ್ ಬಂಡಾರಿ ಅವರು ನಾಯಕ ನಟನಾಗಿ ಅಭಿನಯಿಸಿದ್ದ ಆದಿಲಕ್ಷ್ಮೀ ಪುರಾಣ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ಅದಾದ ಬಳಿಕ ಯಾವ ಸಿನಿಮಾದಲ್ಲಿಯೂ ಕಾಣಿಸಿಕೊಂಡಿಲ್ಲ. ಇನ್ನು ರಾಕಿಂಗ್ ಸ್ಟಾರ್ ಯಶ್ ಅವರು ಕೆ.ಜಿ.ಎಫ್. ಚಾಪ್ಟರ್ 2 ರಿಲೀಸ್ ಆದ ಬಳಿಕ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಹಾಗಿದ್ದರು ಕುಟುಂಬದ ಜೊತೆ ಹಬ್ಬಗಳನ್ನು ಸಲಬ್ರೇಟ್ ಮಾಡಿಕೊಳ್ಳುದನ್ನು ಅವರು ಮಿಸ್ ಮಾಡಿಕೊಂಡಿಲ್ಲ