Kantara Movie: ಕಾಂತಾರ ಚಾಪ್ಟರ್ -1 ನಲ್ಲಿ ರುಕ್ಮಿಣಿ ವಸಂತ್- ಕನಕವತಿಯ ಫಸ್ಟ್ ಲುಕ್ ರಿಲೀಸ್..!
Kanakavathi First look: ನಾಯಕ ನಟ ರಿಷಬ್ ಶೆಟ್ಟಿ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಿದ್ದ ಅವರ ಫಸ್ಟ್‌ಲುಕ್ ಮತ್ತು ನಂತರ ಬಂದ ಶೂಟಿಂಗ್ ಮುಕ್ತಾಯದ ವೀಡಿಯೋಗಳು ಈಗಾಗಲೇ ಭಾರೀ ಕುತೂಹಲ ಮೂಡಿಸಿವೆ. ಇದೀಗ ‘ಕನಕವತಿ’ಯ ಪಾತ್ರದ ಪರಿಚಯ, ಚಿತ್ರದ ಕುರಿತಾದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕನಕವತಿಯಾಗಿ ಲುಕ್‌ನಲ್ಲಿ ರುಕ್ಮಿಣಿ ವಸಂತ್(Rukmini Vasantha) ಭರ್ಜರಿಯಾಗಿಯೇ ಕಾಣಿಸಿಕೊಂಡಿದ್ದಾರೆ.


ಬೆಂಗಳೂರು: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶಿರುವ ಪ್ಯಾನ್ ಇಂಡಿಯಾ ಬಹು ನಿರೀಕ್ಷಿತ ಕಾಂತಾರಾ ಚಾಪ್ಟರ್-1(Kantara Movie) ಚಿತ್ರತಂಡದಿಂದ ಮತ್ತೊಂದು ಬಿಗ್ ಅಪ್ಡೇಡ್‌ವೊಂದು ಹೊರಬಿದ್ದಿದೆ. ಚಿತ್ರದಲ್ಲಿ ರುಕ್ಮಿಣಿ ವಸಂತ್ ನಟಿಸಿದ್ದು, ಇದೀಗ ಅವರು ಕನಕವತಿ ಪಾತ್ರದಲ್ಲಿ ಮಿಂಚಲು ರೆಡಿ ಆಗಿದ್ದಾರೆ. ಇಂದು ವರಮಹಾಲಕ್ಷ್ಮೀ ಹಬ್ಬದ ದಿನವೇ ಕಾಂತಾರ ಚಾಪ್ಟರ್ -1 ನ ಕನಕವತಿ ಫಸ್ಟ್ ಲುಕ್ ರಿಲೀಸ್ ಆಗಿದೆ. ಕನಕವತಿಯಾಗಿ ಲುಕ್‌ನಲ್ಲಿ(Kanakavathi First look) ರುಕ್ಮಿಣಿ ವಸಂತ್ ಭರ್ಜರಿಯಾಗಿಯೇ ಕಾಣಿಸಿಕೊಂಡಿದ್ದಾರೆ.
#ಕಾಂತಾರ Chapter-1 ಕನಕವತಿಯ ಪರಿಚಯ ನಿಮ್ಮ ಮುಂದೆ…
— Rishab Shetty (@shetty_rishab) August 8, 2025
Introducing @rukminitweets as ‘KANAKAVATHI’ from the world of #KantaraChapter1.
In Cinemas #KantaraChapter1onOct2 🔥#Kantara @hombalefilms @KantaraFilm @shetty_rishab @VKiragandur @ChaluveG #ArvindKashyap @AJANEESHB… pic.twitter.com/irB9Lg4Qk7
ರುಕ್ಮಿಣಿ ವಸಂತ್ ರಾಯಲ್ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಮೇಲಿನ ಪ್ರೇಕ್ಷಕರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಸುದ್ದಿಯನ್ನೂ ಓದಿ: Kantara Chapter 1: 250 ದಿನಗಳ ಶೂಟಿಂಗ್...ಮೈ ನವಿರೇಳಿಸೋ ಸೀನ್! ಕಾಂತಾರ-1 ಮೇಕಿಂಗ್ ವಿಡಿಯೊದ ಝಲಕ್ ನೋಡಿ
2022 ರಲ್ಲಿ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಹಿಟ್ ಕಂಡಿದ್ದ ಕಾಂತಾರ ಸಿನಿಮಾ(Kantara Movie), ಆ ವರ್ಷ ಭಾರತೀಯ ಚಿತ್ರರಂಗದಲ್ಲಿ ಅತಿದೊಡ್ಡ ವಾಣಿಜ್ಯ ಯಶಸ್ಸು ಕಂಡಿದ್ದ ಚಿತ್ರವಾಗಿತ್ತು. ಒಂದು ಸಾಧಾರಣ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರವು ಭಾರಿ ಬಾಕ್ಸ್ ಆಫೀಸ್ ಹಿಟ್ ಧೂಳೆಬ್ಬಿಸಿದ್ದು ಮಾತ್ರವಲ್ಲದೇ ಭಾಷಾ ಅಡೆತಡೆಗಳನ್ನು ಮೀರಿ ಜನಪ್ರಿಯತೆಯನ್ನು ಗಳಿಸಿತು. ಕರಾವಳಿ ಭಾಗದ ಆಚರಣೆ, ಪದ್ಧತಿ, ಸಂಸ್ಕೃತಿಯ ಸುತ್ತಲೂ ಹೆಣೆದಿರುವ ಈ ಕಾಂತಾರ ಬಹಳ ಬೇಗವಾಗಿ ಜನ ಮನ ಮುಟ್ಟುವಲ್ಲಿ ಯಶಸ್ವಿಯಾಯಿತು.
ಇಷ್ಟು ದೊಡ್ಡ ಯಶಸ್ಸು ಕಂಡ ನಂತರ ಚಿತ್ರದ ನಿರ್ದೇಶಕ, ನಟ ರಿಷಬ್ ಶೆಟ್ಟಿ ಕಾಂತಾರ ಪ್ರೀಕ್ವೆಲ್ ಶೂಟಿಂಗ್‌ಗೆ ಮುಂದಾದರು. ಕಾಂತಾರ: ಅಧ್ಯಾಯ 1 ಎಂಬ ಶೀರ್ಷಿಕೆಯೊಂದಿಗೆ, ಈ ಚಿತ್ರವನ್ನು ರಿಷಬ್ ಶೆಟ್ಟಿ ಬರೆದು, ನಿರ್ದೇಶಿಸಿದ್ದಾರೆ ಮತ್ತು ಚಿತ್ರದ ಶೂಟಿಂಗ್ ಇತ್ತೀಗಷ್ಟೇ ಪೂರ್ಣಗೊಂಡಿತ್ತು. ಇನ್ನು ಸುಮಾರು ಮೂರು ವರ್ಷಗಳ ಸುದೀರ್ಘ ಚಿತ್ರೀಕರಣದ ನಂತರ ಈ ವರ್ಷ ಅಕ್ಟೋಬರ್ 2 ರಂದು ತೆರೆ ಮೇಲೆ ಅಬ್ಬರಿಸಲು ಕಾಂತಾರ 1ರೆಡಿಯಾಗಿದೆ.
ಇದೆಲ್ಲದರ ನಡುವೆ ಮತ್ತೊಂದು ಮಹತ್ವದ ಬೆಳವಣಿಗೆಯೊಂದು ಅಭಿಮಾನಿಗಳ ಗಮನ ಸೆಳೆದಿತ್ತು. ತೆಲುಗು ನಟ ಜೂ. ಎನ್‌ಟಿಆರ್ ಅಧ್ಯಾಯ 1 ರ ನಂತರ ಬಿಡುಗಡೆಯ ನಿರೀಕ್ಷೆಯಲ್ಲಿರುವ ಕಾಂತಾರ ಭಾಗ 3ಕ್ಕೆ ಎಂಟ್ರಿ ಕೊಡುತ್ತಾರೆಂಬ ಮಾತು ಕೇಳಿ ಬರುತ್ತಿದೆ. ನಿರ್ಮಾಪಕರು ಅಥವಾ ನಟರಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.