ಬೆಂಗಳೂರು: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶಿರುವ ಪ್ಯಾನ್ ಇಂಡಿಯಾ ಬಹು ನಿರೀಕ್ಷಿತ ಕಾಂತಾರಾ ಚಾಪ್ಟರ್-1(Kantara Movie) ಚಿತ್ರತಂಡದಿಂದ ಮತ್ತೊಂದು ಬಿಗ್ ಅಪ್ಡೇಡ್‌ವೊಂದು ಹೊರಬಿದ್ದಿದೆ. ಚಿತ್ರದಲ್ಲಿ ರುಕ್ಮಿಣಿ ವಸಂತ್ ನಟಿಸಿದ್ದು, ಇದೀಗ ಅವರು ಕನಕವತಿ ಪಾತ್ರದಲ್ಲಿ ಮಿಂಚಲು ರೆಡಿ ಆಗಿದ್ದಾರೆ. ಇಂದು ವರಮಹಾಲಕ್ಷ್ಮೀ ಹಬ್ಬದ ದಿನವೇ ಕಾಂತಾರ ಚಾಪ್ಟರ್ -1 ನ ಕನಕವತಿ ಫಸ್ಟ್ ಲುಕ್ ರಿಲೀಸ್ ಆಗಿದೆ. ಕನಕವತಿಯಾಗಿ ಲುಕ್‌ನಲ್ಲಿ(Kanakavathi First look) ರುಕ್ಮಿಣಿ ವಸಂತ್ ಭರ್ಜರಿಯಾಗಿಯೇ ಕಾಣಿಸಿಕೊಂಡಿದ್ದಾರೆ.
#ಕಾಂತಾರ Chapter-1 ಕನಕವತಿಯ ಪರಿಚಯ ನಿಮ್ಮ ಮುಂದೆ…
— Rishab Shetty (@shetty_rishab) August 8, 2025
Introducing @rukminitweets as ‘KANAKAVATHI’ from the world of #KantaraChapter1.
In Cinemas #KantaraChapter1onOct2 🔥#Kantara @hombalefilms @KantaraFilm @shetty_rishab @VKiragandur @ChaluveG #ArvindKashyap @AJANEESHB… pic.twitter.com/irB9Lg4Qk7
ರುಕ್ಮಿಣಿ ವಸಂತ್ ರಾಯಲ್ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಮೇಲಿನ ಪ್ರೇಕ್ಷಕರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಸುದ್ದಿಯನ್ನೂ ಓದಿ: Kantara Chapter 1: 250 ದಿನಗಳ ಶೂಟಿಂಗ್...ಮೈ ನವಿರೇಳಿಸೋ ಸೀನ್! ಕಾಂತಾರ-1 ಮೇಕಿಂಗ್ ವಿಡಿಯೊದ ಝಲಕ್ ನೋಡಿ
2022 ರಲ್ಲಿ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಹಿಟ್ ಕಂಡಿದ್ದ ಕಾಂತಾರ ಸಿನಿಮಾ(Kantara Movie), ಆ ವರ್ಷ ಭಾರತೀಯ ಚಿತ್ರರಂಗದಲ್ಲಿ ಅತಿದೊಡ್ಡ ವಾಣಿಜ್ಯ ಯಶಸ್ಸು ಕಂಡಿದ್ದ ಚಿತ್ರವಾಗಿತ್ತು. ಒಂದು ಸಾಧಾರಣ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರವು ಭಾರಿ ಬಾಕ್ಸ್ ಆಫೀಸ್ ಹಿಟ್ ಧೂಳೆಬ್ಬಿಸಿದ್ದು ಮಾತ್ರವಲ್ಲದೇ ಭಾಷಾ ಅಡೆತಡೆಗಳನ್ನು ಮೀರಿ ಜನಪ್ರಿಯತೆಯನ್ನು ಗಳಿಸಿತು. ಕರಾವಳಿ ಭಾಗದ ಆಚರಣೆ, ಪದ್ಧತಿ, ಸಂಸ್ಕೃತಿಯ ಸುತ್ತಲೂ ಹೆಣೆದಿರುವ ಈ ಕಾಂತಾರ ಬಹಳ ಬೇಗವಾಗಿ ಜನ ಮನ ಮುಟ್ಟುವಲ್ಲಿ ಯಶಸ್ವಿಯಾಯಿತು.
ಇಷ್ಟು ದೊಡ್ಡ ಯಶಸ್ಸು ಕಂಡ ನಂತರ ಚಿತ್ರದ ನಿರ್ದೇಶಕ, ನಟ ರಿಷಬ್ ಶೆಟ್ಟಿ ಕಾಂತಾರ ಪ್ರೀಕ್ವೆಲ್ ಶೂಟಿಂಗ್‌ಗೆ ಮುಂದಾದರು. ಕಾಂತಾರ: ಅಧ್ಯಾಯ 1 ಎಂಬ ಶೀರ್ಷಿಕೆಯೊಂದಿಗೆ, ಈ ಚಿತ್ರವನ್ನು ರಿಷಬ್ ಶೆಟ್ಟಿ ಬರೆದು, ನಿರ್ದೇಶಿಸಿದ್ದಾರೆ ಮತ್ತು ಚಿತ್ರದ ಶೂಟಿಂಗ್ ಇತ್ತೀಗಷ್ಟೇ ಪೂರ್ಣಗೊಂಡಿತ್ತು. ಇನ್ನು ಸುಮಾರು ಮೂರು ವರ್ಷಗಳ ಸುದೀರ್ಘ ಚಿತ್ರೀಕರಣದ ನಂತರ ಈ ವರ್ಷ ಅಕ್ಟೋಬರ್ 2 ರಂದು ತೆರೆ ಮೇಲೆ ಅಬ್ಬರಿಸಲು ಕಾಂತಾರ 1ರೆಡಿಯಾಗಿದೆ.
ಇದೆಲ್ಲದರ ನಡುವೆ ಮತ್ತೊಂದು ಮಹತ್ವದ ಬೆಳವಣಿಗೆಯೊಂದು ಅಭಿಮಾನಿಗಳ ಗಮನ ಸೆಳೆದಿತ್ತು. ತೆಲುಗು ನಟ ಜೂ. ಎನ್‌ಟಿಆರ್ ಅಧ್ಯಾಯ 1 ರ ನಂತರ ಬಿಡುಗಡೆಯ ನಿರೀಕ್ಷೆಯಲ್ಲಿರುವ ಕಾಂತಾರ ಭಾಗ 3ಕ್ಕೆ ಎಂಟ್ರಿ ಕೊಡುತ್ತಾರೆಂಬ ಮಾತು ಕೇಳಿ ಬರುತ್ತಿದೆ. ನಿರ್ಮಾಪಕರು ಅಥವಾ ನಟರಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.