ನವದೆಹಲಿ: ಬೆಳಕಿನ ಹಬ್ಬ ದೀಪಾವಳಿ ಎಂದರೆ ಎಲ್ಲೆಡೆ ಸಂಭ್ರಮ ಇದ್ದೇ ಇರುತ್ತದೆ. ಅಂತೆಯೇ ಭಾರತೀಯ ಸಿನಿಮಾ ರಂಗದ ಅನೇಕ ಸೆಲೆಬ್ರಿಟಿಗಳು ದೀಪಾವಳಿ ಹಬ್ಬವನ್ನು ಅತ್ಯಂತ ವಿಜೃಂಭಣೆ ಯಿಂದ ಆಚರಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ಕಪೂರ್ ಕುಟುಂಬ, ಸಿದ್ಧಾರ್ಥ್ ಕುಟುಂಬದ ದೀಪಾವಳಿ ಸಲಬ್ರೇಶನ್ ಸಂಭ್ರಮ ಕೂಡ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ನಟಿ ಸಮಂತಾ ರುತು ಪ್ರಭು (Samantha Ruth Prabhu) ಅವರು ದೀಪಾವಳಿಯನ್ನು ತುಂಬಾ ಚೆನ್ನಾಗಿ ಸಲಬ್ರೇಟ್ ಮಾಡಿದ್ದಾರೆ. ಈ ಬಾರಿ ನಟಿ ಸಮಂತಾ ಅವರು ನಿರ್ದೇಶಕ ರಾಜ್ ನಿಧಿಮೋರ್ (Raj Nidimoru) ಅವರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅವರ ಸಂಬಂಧದ ಬಗ್ಗೆ ಅನೇಕ ವದಂತಿಗಳು ಹರಿದಾಡುತ್ತಿದ್ದರೂ ನಟಿ ಸಮಂತಾ ಇದ್ಯಾವುದಕ್ಕೂ ತಲೆಗೊಡದೆ ದೀಪಾವಳಿ ಹಬ್ಬವನ್ನು ರಾಜ್ ಕುಟುಂಬ ಹಾಗೂ ಆಪ್ತರ ಜೊತೆಗೆ ಸೆಲಬ್ರೇಟ್ ಮಾಡಿಕೊಂಡಿದ್ದಾರೆ.
ನಟಿ ಸಮಂತಾ ಅವರು ಮೊದಲು ಅನಾಥ ಮಕ್ಕಳ ಜೊತೆಗೆ ದೀಪಾವಳಿ ಹಬ್ಬವನ್ನು ಆಚರಿಸಿ ಕೊಂಡು ಅನಂತರ ನಿರ್ದೇಶಕ ರಾಜ್ ನಿಧಿಮೋರ್ ಕುಟುಂಬದೊಂದಿಗೆ ಹಬ್ಬವನ್ನು ಸಲಬ್ರೇಟ್ ಮಾಡಿಕೊಂಡಿದ್ದಾರೆ. ಈ ಕುರಿತಾದ ಫೋಟೊಗಳನ್ನು ಸ್ವತಃ ಸಮಂತಾ ಅವರೇ ತಮ್ಮ ಇನ್ ಸ್ಟಾ ಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಟಿ ಸಮಂತಾ ಅವರು ಹಸಿರು ಬಣ್ಣದ ಟ್ರೆಡಿಶನಲ್ ಅನಾರ್ಕಲಿ ಬಟ್ಟೆ ಧರಿಸಿದ್ದು ಕ್ಲಾಸಿಕ್ ಲುಕ್ ನಲ್ಲಿ ಕಂಗೊಳಿಸಿದ್ದಾರೆ ರಾಜ್ ಅವರು ನೀಲಿ ಬಣ್ಣದ ಕುರ್ತಾ ಧರಿಸಿದ್ದು ಗ್ಲಾಮರಸ್ ಆಗಿ ಕಂಡಿದ್ದಾರೆ.
ವೈರಲ್ ಆದ ಫೋಟೊದಲ್ಲಿ ನಟಿ ಸಮಂತಾ ಅವರು ಮನೆಯ ದೀಪಾವಳಿ ಅಲಂಕಾರವನ್ನು ಕೂಡ ಶೇರ್ ಮಾಡಿದ್ದಾರೆ. ಅದರ ಜೊತೆಗೆ ಪಟಾಕಿ ಸಿಡಿಸುವ ಕ್ಯಾಂಡೀಡ್ ಫೋಟೊ ಕೂಡ ಹೈಲೈಟ್ ಆಗಿದೆ. ಹಾಗೆಯೇ ರಾಜ್ ಹಾಗೂ ಅವರ ಕುಟುಂಬದ ಜೊತೆಗೆ ತೆಗೆಸಿಕೊಂಡ ಗ್ರೂಪ್ ಫೋಟೊವನ್ನು ಕೂಡ ಅವರು ಶೇರ್ ಮಾಡಿದ್ದಾರೆ. ಈ ಮೂಲಕ ಇವರಿಬ್ಬರು ಮದುವೆ ಯಾಗಲಿದ್ದಾರೆ ಎಂಬ ವದಂತಿಗೆ ಪುಷ್ಟಿ ಸಿಕ್ಕಂತಾಗಿದೆ.
ಇದನ್ನು ಓದಿ:Samantha: ಸಮಂತಾ ರುತ್ ಹೊಸ ಫೋಟೋಶೂಟ್ ಗೆ ಫ್ಯಾನ್ಸ್ ಫುಲ್ ಫಿದಾ!
ಫೋಟೊ ಕಂಡ ಅಭಿಮಾನಿಗಳು ನಾನಾ ತರನಾಗಿ ಕಾಮೆಂಟ್ ಹಾಕುತ್ತಿದ್ದಾರೆ. ಸ್ಯಾಮ್ ನಿಮ್ಮ ಬದುಕಲ್ಲಿ ಈ ಹಿಂದೆ ಆಗಿದ್ದಕ್ಕೆ ತಲೆಕೆಡಿಸಿಕೊಳ್ಳಬೇಡಿ...ನಿಮಗೆ ಯಾವುದು ಇಷ್ಟವೊ ಅದನ್ನೇ ಮಾಡಿ.. ನೀವು ಹೇಗಿದ್ದರೂ ನಿಮ್ಮ ಅಭಿಮಾನಿಗಳು ನಿಮ್ಮನ್ನು ಇಷ್ಟಪಡುತ್ತಾರೆ ಎಂದು ನೆಟ್ಟಿಗ ರೊಬ್ಬರು ಕಾಮೆಂಟ್ ಹಾಕಿದ್ದಾರೆ. ಸ್ಯಾಮ್ ನೀವು ಕ್ರಿಟಿಕ್ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ.... ನಿಮ್ಮನ್ನು ಇನ್ನಷ್ಟು ಹೊಸ ಪಾತ್ರದಲ್ಲಿ ನೋಡಬೇಕು ಎಂಬುದು ಅಭಿಮಾನಿಗಳ ಮನದಾಸೆ ಎಂದು ಬಳಕೆದಾರರೊಬ್ಬರು ಫೋಟೊಗೆ ಕಾಮೆಂಟ್ ಹಾಕಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
ರಾಜ್ ಅವರ ವೆಬ್ ಸರಣಿಗಳಾದ ದಿ ಫ್ಯಾಮಿಲಿ ಮ್ಯಾನ್ (The Family Man) ಮತ್ತು ಸಿಟಾಡೆಲ್: ಹನಿ ಬನ್ನಿ ನಲ್ಲಿ ನಟಿ ಸಮಂತಾ ಅವರು ಒಟ್ಟಿಗೆ ಕೆಲಸ ಮಾಡಿದ್ದಾರೆ. ನಟಿ ಸಮಂತಾ ಹಾಗೂ ನಾಗ ಚೈತನ್ಯಾ ನಡುವೆ ವಿಚ್ಛೇದನವಾಗಿದ್ದ ಬೆನ್ನಲ್ಲೆ ನಟಿ ಸಮಂತಾ ಅವರು ರಾಜ್ ಜೊತೆಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ವದಂತಿ ವೈರಲ್ ಆಗಿದೆ. ಈ ವದಂತಿಗೆ ನಟಿ ಸ್ಪಷ್ಟೀಕರಣ ಕೂಡ ನೀಡಲಿಲ್ಲ. ಬಳಿಕ 2022ರಲ್ಲಿ ರಾಜ್ ಅವರು ತಮ್ಮ ಪತ್ನಿ ಶ್ಯಾಮಲಿ ಜೊತಗೆ ವಿಚ್ಛೇದನ ಪಡೆದರು. ಆಗ ಈ ವಿಚ್ಛೇದನಕ್ಕು ಸ್ಯಾಮ್ ಕಾರಣ ಎಂದು ಹೇಳಲಾಗುತ್ತಿತ್ತು. ಆಗಲೂ ಅವರು ಮೌನವಹಿಸಿದ್ದರು. ಮುಂದಿನ ದಿನದಲ್ಲಿ ಇವರಿಬ್ಬರು ವಿವಾಹವಾಗುತ್ತಾರೆ ಎಂಬ ವದಂತಿ ಹರಿದಾಡಿದೆ.