ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ತಾರಕಕ್ಕೇರಿದ ಅಶ್ವಿನಿ-ಗಿಲ್ಲಿ ಮಾತಿನ ಯುದ್ಧ: ಹೊಸ ಪ್ರೋಮೋ ಔಟ್

ಮೂರನೇ ದಿನ ಕೂಡ ಇವರ ನಡುವೆ ಜಗಳ ತಾರಕಕ್ಕೇರಿದೆ. ಕಲರ್ಸ್ ಕನ್ನಡ ಇಂದಿನ ಎಪಿಸೋಡ್ನ ಪ್ರೋಮೋ ರಿಲೀಸ್ ಮಾಡಿದ್ದು, ಇದರಲ್ಲಿ ಗಿಲ್ಲಿ-ಅಶ್ವಿನಿ ನಡುವೆ ದೊಡ್ಡ ಜಗಳ ಆಗಿದೆ. ಸ್ಲಾಪ್ ಎಲ್ಲ ಗಲೀಜಾಗಿದೆ.. ನೀವು ದರ್ಪ ತೋರ್ಸಿ ನಾವು ಇಲ್ಲಿಂದಲೇ ಮಜಾ ತೆಗೋತೀನಿ ಎಂದು ಅಶ್ವಿನಿ ಹೇಳಿದ್ದಾರೆ.

Ashwini and Gilli Nata Fight BBK 12

ಬಿಗ್ ಬಾಸ್ ಕನ್ನಡ ಸೀಸನ್ 12 (Bigg boss kannada 12) ಶುರುವಾಗಿ ಮೂರು ದಿನ ಕಳೆದಿದೆ. ಸಾಮಾನ್ಯವಾಗಿ ಹೊಸ ಸೀಸನ್ ಶುರುವಾದಾಗ ಮೊದಲ ವಾರ ಎಲ್ಲರೂ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ. ಪರಸ್ಪರ ಪ್ರೀತಿಯಿಂದ ಮಾತನಾಡಿಕೊಂಡು ಸಮಯ ಕಳೆಯುತ್ತಾರೆ. ಜಗಳಗಳ ಸನ್ನಿವೇಶ ಎರಡು-ಮೂರು ವಾರಗಳ ನಂತರ ಶುರುವಾಗುತ್ತೆ. ಆದರೆ, ಈ ಬಾರಿಯ ಬಿಗ್ ಬಾಸ್​ ಸೀಸನ್ ಹಿಂದಿನಂತಿಲ್ಲ.. ಪ್ರಾರಂಭವಾದ ಎರಡೇ ದಿನಕ್ಕೆ ಜಗಳ ಶುರುವಾಗಿತ್ತು. ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ನಡುವೆ ನಿನ್ನೆ ಫೈಟ್ ನಡೆದಿತ್ತು, ಇದು ಮೂರನೇ ದಿನ ಕೂಡ ಮುಂದುವರೆದಿದೆ.

ನಿನ್ನೆಯ ಎಪಿಸೋಡ್​ನಲ್ಲಿ ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ನಡುವೆ ನಾಮಿನೇಷನ್ ವಿಚಾರಕ್ಕೆ ಜಗಳ ಶುರುವಾಗಿತ್ತು. ಗಿಲ್ಲಿ ಹಾಗೂ ಕಾವ್ಯಾ ಜಂಟಿ ಆಗಿದ್ದಾರೆ. ಅಶ್ವಿನಿ ಅವರು ನಾಮಿನೇಷನ್​ನಲ್ಲಿ ಇವರಿಬ್ಬರನ್ನು ನಾಮಿನೇಟ್ ಮಾಡಿದ್ದರು. ಇದಕ್ಕೆ ಕಾರಣವನ್ನೂ ನೀಡಿದ ಅವರು, ನಾವು ನಿಮ್ಗೆ ಏನೋ ಹೇಳಿದಾಗ ನೀವು ಅದನ್ನ ತುಂಬಾ ಪರ್ಸನಲ್ ಆಗಿ ತೆಗೆದುಕೊಳ್ಳುತ್ತೀರಿ.. ನೀವು ಗೌರವಯುತವಾಗಿ ನಡೆದುಕೊಂಡರೆ ಮಾತ್ರ ನಮಗೂ ಒಂದು ಗೌರವ ಎಂದು ಗಿಲ್ಲಿಗೆ ಹೇಳಿದ್ದರು.

ಇವರ ಮಾತಿನಿಂದ ಕೋಪಗೊಂಡ ಗಿಲ್ಲಿ, ಗೌರವ ಇರೋದಕ್ಕೆ ಮೇಡಂ ಅಂತ ಕರೀತಾ ಇರೋದು ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಆಗ ಅಶ್ವಿನಿ ಅವರು, ಇಲ್ಲಾಂದ್ರೆ ಏನು ಅಂತ ಮಾತಾಡ್ತಾ ಇದ್ರಿ ಎಂದು ಕೇಳಿದ್ದಾರೆ. ಅದಕ್ಕೆ ಗಿಲ್ಲಿ, ಇಲ್ಲಾಂದ್ರೆ ಹೋಗೆ.. ಬಾರೆ.. ಅಂತ ಮಾತಾಡ್ತಾ ಇದ್ದೆ ಎಂದು ಹೇಳಿದ್ದಾರೆ. ಗಿಲ್ಲಿಯ ಈ ಮಾತು ಅಶ್ವಿನಿ ಅವರನ್ನು ಮತ್ತಷ್ಟು ಕೆರಳಿಸಿದೆ. ಹೋಗೆ.. ಬಾರೆ ಅಂತ ಏಕವಚನ ಎಲ್ಲ ನನ್ನ ಹತ್ರ ನಡೆಯೋದಿಲ್ಲ.. ಹೋಗೆ.. ಬಾರೆ.. ಅಂತ ಮಾತಾಡ್ತೀನಿ ಅಂತ ಯಾರತ್ರ ಮಾತಾಡ್ತಾ ಇದ್ದೀಯಾ.. ಮರಿಯಾದೆ ಕೊಟ್ಟು ಮರಿಯಾದೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು.

ಇದೀಗ ಮೂರನೇ ದಿನ ಕೂಡ ಇವರ ನಡುವೆ ಜಗಳ ತಾರಕಕ್ಕೇರಿದೆ. ಕಲರ್ಸ್ ಕನ್ನಡ ಇಂದಿನ ಎಪಿಸೋಡ್​ನ ಪ್ರೋಮೋ ರಿಲೀಸ್ ಮಾಡಿದ್ದು, ಇದರಲ್ಲಿ ಗಿಲ್ಲಿ-ಅಶ್ವಿನಿ ನಡುವೆ ದೊಡ್ಡ ಜಗಳ ಆಗಿದೆ. ಸ್ಲಾಪ್ ಎಲ್ಲ ಗಲೀಜಾಗಿದೆ.. ನೀವು ದರ್ಪ ತೋರ್ಸಿ ನಾವು ಇಲ್ಲಿಂದಲೇ ಮಜಾ ತೆಗೋತೀನಿ ಎಂದು ಅಶ್ವಿನಿ ಹೇಳಿದ್ದಾರೆ. ಅಲ್ಲದೆ ಗಿಲ್ಲಿಯನ್ನು ನೋಡಿಕೊಂಡು ನಾವು-ನೀವು ಒಂದೇ ಅಲ್ಲ.. ನೀವು ಸೇವಕರು ಎಂದಿದ್ದಾರೆ.



ಅಶ್ವಿನಿ ಅವರು ಹೀಗೆ ಮಾತನಾಡುತ್ತಿರುವಾಗ ಗಿಲ್ಲಿ ನಟ ಎಲ್ಲೋ ನೋಡುತ್ತಿದ್ದರು. ಇದರಿಂದ ಕೆರಳಿದ ಅಶ್ವಿನಿ, ನನ್ನ ಕಣ್ಣಿದೆ ಅಲ್ವಾ.. ನನ್ನ ಕಣ್ಣನ್ನು ನೋಡು.. ನೀವಿಬ್ರು ನನ್ನನ್ನ ನೋಡಿ ಎಂದು ಗಿಲ್ಲಿ-ಕಾವ್ಯಾಗೆ ಹೇಳಿದ್ದಾರೆ. ಇದು ಗಿಲ್ಲಿಗೆ ಕೋಪ ತರಿಸಿದೆ. ಕೇಳಿಸಿಕೊಳ್ತಾ ಇದ್ದೀವಿ ಅಲ್ವಾ ನಾವು ಎಂದು ಏರು ಧ್ವನಿಯಲ್ಲಿ ಹೇಳಿದ್ದಾರೆ. ಇಲ್ಲಿ ಕೇಳಿಸ್ಕೋಬೇಡಿ ನೀವು ರೂಮ್​ಗೆ ಹೋಗಿ ಎಂದು ಅಶ್ವಿನಿ ಹೇಳಿದಾಗ.. ಅದನ್ನ ಹೇಳೋದಕ್ಕೆ ನೀವು ಯಾರು ಎಂದು ಗಿಲ್ಲಿ ಪ್ರಶ್ನಿಸಿದ್ದಾರೆ. ನೀನು ತುಂಬಾ ಮಾತಾಡ್ತಾ ಇದ್ದೀಯಾ ಎಂದು ಅಶ್ವಿನಿ ಹೇಳಿದ್ದಕ್ಕೆ ನೀವೂ ಕೂಡ ತುಂಬಾ ಮಾತಾಡ್ತಾ ಇದ್ದೀರಾ ಎಂದು ಗಿಲ್ಲಿ ಹೇಳಿದ್ದಾರೆ.

ಇಲ್ಲಿಗೇ ನಿಲ್ಲದ ಇವರಿಬ್ಬರ ಜಗಳ, ನಿನ್ನಿಂದಲೇ ನಮಗೆಲ್ಲ ಊಟ ಇಲ್ಲದಂತಾಯಿತು.. ಪಶ್ಚಾತಾಮ ಇದೆಯಾ ನಿಮಗಿಬ್ಬರಿಗು ಎಂದು ಅಶ್ವಿನಿ ಕೇಳಿದ್ದಕ್ಕೆ ಗಿಲ್ಲಿ ನೇರವಾಗಿ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ ನನ್ನ ನೋಡು.. ನನ್ನ ನೋಡು ಎಂದು ಹೇಳುತ್ತಾರೆ ಅವರ ಮುಖದಲ್ಲಿ ಏನು ಕೋತಿ ಕುಣಿತಿದ್ಯಾ ಎಂದು ಅಶ್ವಿನಿ ಮೇಲೆ ಗಿಲ್ಲ ಸಖತ್ ಕೋಪಗೊಂಡಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಒಂದು ವಾರ ಆಗುವ ಮುನ್ನವೇ ಸ್ಪರ್ಧಿಗಳ ನಡುವಣ ಕಿತ್ತಾಟ ತಾರಕಕ್ಕೇರಿದೆ.

BBK 12: ಬಿಗ್ ಬಾಸ್​ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್: ಈ ಬಾರಿ ಒಬ್ಬರಲ್ಲಿ, ಇಬ್ಬರು ವಿನ್ನರ್?