BBK 12: ಬಿಗ್ ಬಾಸ್ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್: ಈ ಬಾರಿ ಒಬ್ಬರಲ್ಲಿ, ಇಬ್ಬರು ವಿನ್ನರ್?
ಕಳೆದ ಸೀಸನ್ನಲ್ಲಿ ಸ್ವರ್ಗ- ನರಕ ಇದ್ದಂತೆ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಒಂಟಿ ವರ್ಸಸ್ ಜಂಟಿ ಕಾನ್ಸೆಪ್ಟ್ ಇದೆ. ಈ ಕಾನ್ಸೆಪ್ಟ್ ಅದೆಷ್ಟು ದಿನ ನಡೆಯುತ್ತೋ ಗೊತ್ತಿಲ್ಲ. ಆದರೆ, ಈ ಬಾರಿ ಒಬ್ಬರು ವಿನ್ನರ್ ಆಗಬಹುದು ಅಥವಾ ಇಬ್ಬರು ಸಹ ವಿನ್ನರ್ ಆಗಬಹುದು ಎಂಬ ಸೂಚನೆಯನ್ನ ಸ್ವತಃ ಬಿಗ್ ಬಾಸ್ ನೀಡಿದ್ದಾರೆ.

BBK 12 -

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶುರುವಾದಾಗಿನಿಂದ ಪ್ರತಿ ದಿನ ಒಂದಲ್ಲ ಒಂದು ಟ್ವಿಸ್ಟ್ ನೀಡಲಾಗುತ್ತಿದೆ. ಸ್ಪರ್ಧಿಗಳು ಮನೆಯೊಳಗೆ ಕಾಲಿಟ್ಟ ಕ್ಷಣದಿಂದ ಯಾರೂ ಊಹಿಸಿರದಂತೆ ಬಿಗ್ ಬಾಸ್ ಒಂದೊಂದೆ ಅನೌನ್ಸ್ ಮಾಡುತ್ತಿದ್ದಾರೆ. ಈಗಾಗಲೇ ಈ ಸೀಸನ್ನಲ್ಲಿ ಎರಡು ಫೈನಲ್ ಇದೆ ಎಂದು ಬಿಗ್ ಬಾಸ್ ಹೇಳಿದ್ದಾರೆ. ಮೂರನೇ ವಾರ ಒಂದು ಫಿನಾಲೆ ನಡೆಯಲಿದೆ ಎಂದಿದ್ದಾರೆ. ಅಲ್ಲಿಯ ವರೆಗೆ ಮನೆಗೆ ಯಾವುದೇ ಕ್ಯಾಪ್ಟನ್ ಕೂಡ ಇರುವುದಿಲ್ಲ. ಈ ಬಾರಿ ಎಲ್ಲ ಡಬಲ್.. ಡಬಲ್.. ಎಂದು ಬಿಗ್ ಬಾಸ್ ಹೇಳಿರುವ ಕಾರಣ ಇದೀಗ ಈ ಸೀಸನ್ನಲ್ಲಿ ಇಬ್ಬರು ವಿನ್ನರ್ ಕೂಡ ಇರುತ್ತಾರ ಎಂಬ ಅನುಮಾನ ಮೂಡಿದೆ.
ಕಳೆದ ಸೀಸನ್ನಲ್ಲಿ ಸ್ವರ್ಗ- ನರಕ ಇದ್ದಂತೆ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಒಂಟಿ ವರ್ಸಸ್ ಜಂಟಿ ಕಾನ್ಸೆಪ್ಟ್ ಇದೆ. ಈ ಕಾನ್ಸೆಪ್ಟ್ ಅದೆಷ್ಟು ದಿನ ನಡೆಯುತ್ತೋ ಗೊತ್ತಿಲ್ಲ. ಆದರೆ, ಈ ಬಾರಿ ಒಬ್ಬರು ವಿನ್ನರ್ ಆಗಬಹುದು ಅಥವಾ ಇಬ್ಬರು ಸಹ ವಿನ್ನರ್ ಆಗಬಹುದು ಎಂಬ ಸೂಚನೆಯನ್ನ ಸ್ವತಃ ಬಿಗ್ ಬಾಸ್ ನೀಡಿದ್ದಾರೆ.
‘ಈ ಮುಂಚೆ ತಿಳಿಸಿದಂತೆ ಸೀಸನ್ 12 ಎಂದರೆ ಒಂದರ ವಿರುದ್ಧ ಎರಡು. ಡಬಲ್ ಟ್ವಿಸ್ಟ್ಗಳ ಸೀಸನ್ನಲ್ಲಿ ಫಿನಾಲೆ ಕೂಡ ಡಬಲ್. ಯಾರಿಗೆ ಗೊತ್ತು? ವಿನ್ನರ್ ಕೂಡ ಡಬಲ್ ಆಗಬಹುದು. ಮಿಂಚಿನ ಓಟ ಆರಂಭ ಆಗಿ 24 ಗಂಟೆಗಳೇ ಕಳೆದಿವೆ. ಆದರೆ ನೀವೆಲ್ಲ ಇನ್ನೂ ಈಗಷ್ಟೇ ಎಚ್ಚರಗೊಂಡು ಕಣ್ಣು ಉಜ್ಜಿಕೊಳ್ಳುತ್ತಾ, ಮೈ ಮುರಿಯುತ್ತ, ನಾನು ಎಲ್ಲಿದ್ದೇನೆ ಎಂದು ತಮ್ಮನ್ನು ತಾವು ಕೇಳಿಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ.’ ಎಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಗೆಲ್ಲುವ ಆಸೆ ಇದ್ದರೆ ಮೈಕೊಡುವಿ ಸಿದ್ಧರಾಗಿ. ಗೆಲ್ಲಲು ಆರಂಭಿಸಿ.. ಹೆಮ್ಮಾರಿ ಮಹೋತ್ಸವಕ್ಕೆ ನಿಮಗೆ ಆತ್ಮೀಯ ಸ್ವಾಗತ ಎಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ಹೇಳಿದ್ದಾರೆ. ಇದನ್ನ ಕೇಳಿದ ಬಳಿಕ ಕೇವಲ ಸ್ಪರ್ಧಿಗಳು ಮಾತ್ರವಲ್ಲದೆ ವೀಕ್ಷಕರು ಕೂಡ ಶಾಕ್ ಆಗಿದ್ದಾರೆ. ಶೋ ಶುರುವಾಗಿ ಒಂದು ವಾರ ಕೂಡ ಆಗಿಲ್ಲ.. ಮೂರೇ ದಿನಕ್ಕೆ ಎಂತೆಂತ ಟ್ವಿಸ್ಟ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೇನು ಕಾದಿದೆಯೊ ಎಂದು ಹೇಳುತ್ತಿದ್ದಾರೆ.
BBK 12: ತಮ್ಮ ತಂಡವನ್ನೇ ಸೋಲಿಸಲು ಮಾಸ್ಟರ್ ಪ್ಲ್ಯಾನ್ ಮಾಡಿದ ಡಾಗ್ ಸತೀಶ್-ಚಂದ್ರಪ್ರಭ
ಮೂರನೇ ವಾರದ ಫಿನಾಲೆಗೆ ಆಯ್ಕೆ ಹೇಗೆ?:
ಎಲಿಮಿನೇಷನ್ ಭಯದಿಂದ ಮುಕ್ತರಾಗಿ ಸ್ಪರ್ಧಿಗಳು ಫೈನಲ್ ತಲುಪಬೇಕು ಎಂದರೆ ಸರಣಿ ಟಾಸ್ಕ್ ಗೆಲ್ಲಬೇಕು. ಪ್ರತೀ ವಾರದ ಅಂತ್ಯದಲ್ಲಿ ಸರಣಿ ಟಾಸ್ಕ್ ಗೆಲ್ಲುವವರು ನೇರವಾಗಿ ಫೈನಲಿಸ್ಟ್ ಆಗಿ ಆಯ್ಕೆ ಆಗುತ್ತಾರೆ. ಆ ಫೈನಲಿಸ್ಟ್ಗಳ ಪೈಕಿ ಒಬ್ಬರು ಮೂರನೇ ವಾರ ನಡೆಯಲಿರುವ ಮೊದಲ ಫಿನಾಲೆಯನ್ನು ಗೆಲ್ಲುತ್ತಾರೆ.