ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಪೂಜಾಗೆ ವಿಪರೀತ ಜ್ವರ: ಆದರೂ ನಿಲ್ಲುತ್ತಿಲ್ಲ ಮೀನಾಕ್ಷಿ-ಕನ್ನಿಕಾ ಹಿಂಸೆ

ಮದುವೆಯಾದ ಮೊದಲ ದಿನವೇ ಮೀನಾಕ್ಷಿ-ಕನ್ನಿಕಾ ಶಾಸ್ತ್ರ ಎಂಬ ಅಸ್ತ್ರ ಹಿಡಿದುಕೊಂಡು ಪೂಜಾಳನ್ನು ಆಟವಾಡಿಸಿದರು. ಬೆಳಗ್ಗೆ ಬೇಗ ತಿಂಡಿ ಮಾಡಬೇಕು.. ಅದುಕೂಡ ಒಲೆಯಲ್ಲೇ ಆಗಬೇಕು.. ಎಂದು ಹೇಳಿದ್ದರು. ಅಲ್ಲದೆ ಸ್ಥಾನ ಮಾಡಿ ಇದನ್ನೆಲ್ಲ ಶುರುಮಾಡಬೇಕು ಎಂದು ಕನ್ನಿಕಾ ಒಂದು ಬಕೆಟ್ ತಣ್ಣೀರು ತಂದು ಪೂಜಾಳ ತಲೆ ಮೇಲೆ ಸುರಿದಿದ್ದಾಳೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಪೂಜಾ ರಾಮ್​ದಾಸ್ ಮನೆಗೆ ಸೊಸೆಯಾಗಿ ಕಾಲಿಟ್ಟ ಕ್ಷಣದಿಂದ ಒಂದಲ್ಲ ಒಂದು ತೊಂದರೆ ಅನುಭವಿಸುತ್ತಲೇ ಇದ್ದಾಳೆ. ಮೀನಾಕ್ಷಿ-ಕನ್ನಿಕಾ ಪೂಜಾಳಿಗೆ ಬೆಂಬಿಡದೆ ತೊಂದರೆ ಕೊಡುತ್ತಿದ್ದಾಳೆ. ಮೊದಲಿಗೆ ಈ ಮದುವೆ ನಿಲ್ಲಿಸಲು ಮೀನಾಕ್ಷಿ-ಕನ್ನಿಕಾ ಪ್ಲ್ಯಾನ್ ಮಾಡಿದ್ದರು. ಆದರೆ ಅದು ಫೇಲ್ ಆಗಿದ್ದು, ಈ ಪೂಜಾಳಿಗೆ ಹೇಗಾದರು ಮಾಡಿ ಬುದ್ದಿ ಕಲಿಸಬೇಕು.. ಅವಳಾಗಿಯೇ ಈ ಮನೆಯಿಂದ ಹೊರಹೋಗಬೇಕು ಎಂದು ಹೊಸ ಯೋಜನೆ ಹಾಕಿಕೊಂಡು ಚಿತ್ರಹಿಂಸೆ ಕೊಡುತ್ತಿದ್ದಾರೆ. ಇದರಿಂದ ಆಕೆಗೆ ಜ್ವರ ಬಂದಿದೆ.

ಮದುವೆಯಾದ ಮೊದಲ ದಿನವೇ ಮೀನಾಕ್ಷಿ-ಕನ್ನಿಕಾ ಶಾಸ್ತ್ರ ಎಂಬ ಅಸ್ತ್ರ ಹಿಡಿದುಕೊಂಡು ಪೂಜಾಳನ್ನು ಆಟವಾಡಿಸಿದರು. ಬೆಳಗ್ಗೆ ಬೇಗ ತಿಂಡಿ ಮಾಡಬೇಕು.. ಅದುಕೂಡ ಒಲೆಯಲ್ಲೇ ಆಗಬೇಕು.. ಎಂದು ಹೇಳಿದ್ದರು. ಅಲ್ಲದೆ ಸ್ಥಾನ ಮಾಡಿ ಇದನ್ನೆಲ್ಲ ಶುರುಮಾಡಬೇಕು ಎಂದು ಕನ್ನಿಕಾ ಒಂದು ಬಕೆಟ್ ತಣ್ಣೀರು ತಂದು ಪೂಜಾಳ ತಲೆ ಮೇಲೆ ಸುರಿದಿದ್ದಾಳೆ. ಇದೆಲ್ಲ ರಾಮ್​ದಾಸ್ ಕುಟುಂಬದ ಸಂಪ್ರದಾಯ ಎಂದು ಹೇಳಿದ್ದಾಳೆ. ಒಲೆಗೆ ಇಡಲು ಸೌದೆಯನ್ನು ಮೀನಾಕ್ಷಿ ಒದ್ದೆ ಮಾಡಿ ಕೊಟ್ಟಿದ್ದಳು. ಪೂಜಾ ಬೆಂಕಿ ಹಚ್ಚಲು ಕಷ್ಟಪಡುತ್ತಿದ್ದಾಗ ಭಾಗ್ಯ ಬಂದು ಸಹಾಯ ಮಾಡಿದ್ದಳು.

ಪೂಜಾ ಈ ಕೆಲಸವನ್ನೆಲ್ಲ ಹೇಗೋ ಕಷ್ಟಪಟ್ಟು ಮಾಡಿದ್ದಾಳೆ. ಕನ್ನಿಕಾ ತಲೆಮೇಲೆ ತಣ್ಣೀರು ಎರೆದ ಪರಿಣಾಮ ಪೂಜಾಳಿಗೆ ಮರುದಿನ ಜೋರು ಜ್ವರ ಬಂದಿದೆ. ಆದರೆ, ಕನ್ನಿಕಾ-ಮೀನಾಕ್ಷಿ ಇದನ್ನ ನಂಬಲು ರೆಡಿಯಿಲ್ಲ. ನಾವು ಕೆಲಸ ಹೇಳುತ್ತೇವೆ ಎಂದು ಆಕೆ ನಾಟಕ ಆಡುತ್ತಿದ್ದಾಳೆ ಎಂದು ಮತ್ತಷ್ಟು ಕೆಲಸ ಮಾಡಿಸಿದ್ದಾರೆ. ಇದರಿಂದ ಪೂಜಾಗೆ ತುಂಬಾ ವೀಕ್​ನೆಸ್ ಆಗಿದೆ. ಹೀಗಾಗಿ ರಾಮ್​ದಾಸ್ ಬಳಿ ಬಂದು ಹೇಳಿದಾಗ ಮೀನಾಕ್ಷಿಯನ್ನು ಕರೆದು ಫ್ಯಾಮಿಲಿ ಡಾಕ್ಟರ್​ನ ಬರೋಕೆ ಹೇಳಿ ಎಂದು ಹೇಳಿದ್ದಾರೆ.

ಆದರೆ, ಮೀನಾಕ್ಷಿ ಡಾಕ್ಟರ್​ಗೆ ಫೋನ್ ಮಾಡಿದಂತೆ ನಟಿಸಿ.. ಅವರು ಈಗ ಬ್ಯುಸಿ ಇದ್ದಾರಂತೆ ಮತ್ತೆ ಬರುತ್ತೇನೆ ಎಂದು ಹೇಳಿದ್ದಾರೆ ಅಂತ ಸುಳ್ಳು ಹೇಳುತ್ತಾಳೆ. ಇದಕ್ಕೆ ರಾಮ್​ದಾಸ್ ನೀನು ರೂಮ್​ನಲ್ಲಿ ಮಲ್ಕೊ.. ರೆಸ್ಟ್ ಮಾಡು ಎಂದು ಪೂಜಾಗೆ ಹೇಳಿದ್ದಾರೆ. ಹೀಗೆ ಪೂಜಾ ರೂಮ್​ನಲ್ಲಿ ರೆಸ್ಟ್ ಮಾಡುತ್ತಿರುವಾಗ ಇಲ್ಲೂ ಕನ್ನಿಕಾ ತನ್ನ ಬುದ್ದಿ ತೋರಿಸಿದ್ದಾಳೆ. ಪೂಜಾಳಿಗೆ ತಿಳಿಯದಂತೆ ರೂಮ್​ನ ಎಸಿಯನ್ನು ತುಂಬಾ ಕೋಲ್ಡ್ ಆಗುವಂತೆ ಇಟ್ಟು ಹಿಂಸೆ ಕೊಟ್ಟಿದ್ದಾಳೆ.

ಬಳಿಕ ಆಕೆಯನ್ನು ಎಬ್ಬಿಸಿ ಇವತ್ತು ಕೆಲಸದವನು ಬಂದಿಲ್ಲ ಗಾರ್ಡನ್ ಪಾಟ್​ಗಳನ್ನೆಲ್ಲ ಅವನು ಬೇಕಾಬಿಟ್ಟಿ ಬಿಸಾಕಿ ಹೋಗಿದ್ದಾನೆ.. ಇವತ್ತು ಅವನು ಕ್ಲೀನ್ ಮಾಡ್ಬೇಕಿತ್ತು.. ಆದರೆ ಅವರು ಬಂದಿಲ್ಲ.. ಸರಿ ಮಾಡಬೇಕು ಬಾ ಎಂದು ಕರೆದುಕೊಂಡು ಹೋಗಿದ್ದಾಳೆ. ಜ್ವರ ಹಾಗೂ ಚಳಿಯ ಮಧ್ಯೆ ಪೂಜಾ ಈ ಕೆಲಸ ಮಾಡುತ್ತಿರುವಾಗ ಆದೀಶ್ವರ್ ಕಾಮತ್​ನ ಕಾಲ್ ಬರುತ್ತದೆ. ಆದರೆ, ಪೂಜಾಳಿಗೆ ಆ ಕಾಲ್ ರಿಸಿವ್ ಮಾಡಲು ಕನ್ನಿಕಾ ಬಿಡುವುದಿಲ್ಲ.



ನಿನ್ಗೆ ಹುಷಾರಿಲ್ಲ ಅಂತ ಆದೀಗೆ ಗೊತ್ತಾದ್ರೆ ಅವನು ಟೆನ್ಶನ್ ಮಾಡ್ತಾನೆ.. ಅವನಿಗೆ ಇವತ್ತು ಆಫೀಸ್​ನಲ್ಲಿ ತುಂಬಾ ಇಂಪಾರ್ಟೆಟ್ ಮೀಟಿಂಗ್ ಬೇರೆ ಇದೆ.. ನಿನ್ಗೆ ಹಿಷಾರಿಲ್ಲ ಅಂತಾದ್ರೆ ಅವನು ಮೀಟಿಂಗ್ ಅಟೆಂಡ್ ಮಾಡೋಕೆ ಆಗಲ್ಲ.. ಎಲ್ಲ ಹಾಳಾಗುತ್ತೆ ಎಂದು ಪೂಜಾಗೆ ಹೇಳಿ ಕನ್ನಿಕಾಳೇ ಕಾಲ್ ರಿಸಿವ್ ಮಾಡುತ್ತಾಳೆ. ಪೂಜಾ ರೆಸ್ಟ್ ಮಾಡ್ತಾ ಇದ್ದಾಳೆ.. ಪಾಪಾ ನಿನ್ನೆ ಎಲ್ಲ ಕೆಲಸ ಮಾಡಿ ಸುಸ್ತಾಗಿ ಇರುತ್ತಾಳೆ ಅಂತ ನಾನೇ ರೆಸ್ಟ್ ಮಾಡು ಅಂತ ಹೇಳಿದೆ ಎಂದು ಸುಳ್ಳು ಹೇಳಿದ್ದಾಳೆ.

ಸದ್ಯ ಕನ್ನಿಕಾ ಹಾಗೂ ಮೀನಾಕ್ಷಿ ಪೂಜಾಗೆ ಬೆಂಬಿಡದೆ ಕೆಲಸ ಕೊಟ್ಟು ಚಿತ್ರ ಹಿಂಸೆ ನೀಡುತ್ತಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದಾಗ ಅನಗತ್ಯ ಕೆಲಸವನ್ನೆಲ್ಲ ಪೂಜಾಗೆ ಹೇಳಿ ಆಕೆಯನ್ನು ಮನೆಯಿಂದ ಓಡಿಸುವ ಪ್ಲ್ಯಾನ್ ಇವರದ್ದು. ಇದೆಲ್ಲ ಯಾವಾಗ ಆದೀ, ಕಿಶನ್​ಗೆ ಗೊತ್ತಾಗುತ್ತೆ ಎಂಬುದು ನೋಡಬೇಕಿದೆ.. ಗೊತ್ತಾದಾಗ ಮೀನಾಕ್ಷಿ-ಕನ್ನಿಕಾರ ಗ್ರಹಚಾರ ಬಿಡಿಸುವುದು ಖಚಿತ.

Niveditha Gowda: ನಿವೇದಿತಾ ಗೌಡ ಮಾದಕ ನೃತ್ಯಕ್ಕೆ ಪಡ್ಡೆ ಹೈಕ್ಳು ಸುಸ್ತು