ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Niveditha Gowda: ನಿವೇದಿತಾ ಗೌಡ ಮಾದಕ ನೃತ್ಯಕ್ಕೆ ಪಡ್ಡೆ ಹೈಕ್ಳು ಸುಸ್ತು

Niveditha Gowda reels: ವಿಚ್ಛೇದನದ ಬಳಿಕ ನಿವೇದಿತಾ ಗೌಡ ಸುತ್ತಾಟ, ಅವರ ರೀಲ್ಸ್‌ ವಿಡಿಯೋಗಳು ಸಿಕ್ಕಾಪಟ್ಟೆ ಹೆಚ್ಚಾಗಿವೆ. ಪ್ರತಿ ದಿನ ಒಂದಲ್ಲ ಒಂದು ರೀಲ್ಸ್ ಇವರು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಇವರ ಒಂದು ಹಾಟ್ ರೀಲ್ಸ್ ವೈರಲ್ ಆಗುತ್ತಿದೆ.

ನಿವೇದಿತಾ ಗೌಡ ಮಾದಕ ನೃತ್ಯಕ್ಕೆ ಪಡ್ಡೆ ಹೈಕ್ಳು ಸುಸ್ತು

Niveditha Gowda

Profile Vinay Bhat Jul 30, 2025 7:22 AM

ಬಿಗ್ ಬಾಸ್‌ ಕನ್ನಡ ಸೀಸನ್ 5ರಲ್ಲಿ ಖ್ಯಾತಿಯಾಗಿ ಕನ್ನಡಿಗರ ಮನಸ್ಸಿನಲ್ಲಿ ಗೊಂಬೆಯಾಗಿ ಮಿಂಚಿದ ನಿವೇದಿತಾ ಗೌಡ (Niveditha Gowda) ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ತನ್ನ ಬ್ಯೂಟಿ ಮತ್ತು ಗ್ಲಾಮರಸ್‌ ಲುಕ್‌ಗಳಿಂದ ನಿವೇದಿತಾ ವೇಗವಾಗಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದವರು. ಅಂದು ಟಿಕ್‌ ಟಾಕ್‌ ಮೂಲಕವೇ ಖ್ಯಾತಿಯಾಗಿದ್ದ ನಿವೇದಿತಾ ಗೌಡ ಇಂದು ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್ ಮೂಲಕ ಮಿಂಚುತ್ತಿದ್ದಾರೆ.

ಚಂದನ್‌ ಶೆಟ್ಟಿ ಅವರೊಂದಿಗಿನ ಸ್ನೇಹ, ಪ್ರೇಮ, ವಿವಾಹ-ವಿಚ್ಛೇದನದ ಬಳಿಕ ನಿವೇದಿತಾ ಈಗ ಸಿಂಗಲ್‌ ಆಗಿದ್ದಾರೆ. ಹಾಗಂತ ಅವರ ಲೈಫ್‌ನಲ್ಲಿ ಎಂಜಾಯ್‌ಮೆಂಟ್‌ ಕಡಿಮೆನೂ ಆಗಿಲ್ಲ. ವಿಚ್ಛೇದನದ ಬಳಿಕ ನಿವೇದಿತಾ ಗೌಡ ಸುತ್ತಾಟ, ಅವರ ರೀಲ್ಸ್‌ ವಿಡಿಯೋಗಳು ಸಿಕ್ಕಾಪಟ್ಟೆ ಹೆಚ್ಚಾಗಿವೆ. ಪ್ರತಿ ದಿನ ಒಂದಲ್ಲ ಒಂದು ರೀಲ್ಸ್ ಇವರು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಇವರ ಒಂದು ಹಾಟ್ ರೀಲ್ಸ್ ವೈರಲ್ ಆಗುತ್ತಿದೆ.

ನಿವೇದಿತಾ ಗೌಡ ಜಲಪರಿಯಂತೆ ಉಡುಗೆ ತೊಟ್ಟು ಪೋಸ್​ ಕೊಟ್ಟಿದ್ದಾರೆ. ಥೇಟ್​ ಮತ್ಸ್ಯಕನ್ಯೆಯಂತೆಯೇ ಹಾಟ್​ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹೋಟೆಲ್ ರೂಮ್ ಒಂದರಲ್ಲಿ ವಿಡಿಯೋ ಮಾಡಿದಂತೆ ಕಾಣುತ್ತಿದೆ. ಸದ್ಯ ಈ ರೀಲ್ಸ್​ಗೆ ನಾನಾ ಬಗೆಯ ಕಮೆಂಟ್​ಗಳು ಬರುತ್ತಿದ್ದು, ಭರ್ಜರಿ ವೀವ್ಸ್ ಕೂಡ ಪಡೆದುಕೊಳ್ಳುತ್ತಿದೆ.

ರಿಯಾಲಿಟಿ ಶೋಗಳಿಂದಲೇ ಫೇಮಸ್ ಆದ ನಿವೇದಿತಾ ಗೌಡ ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕ್ವಾಟ್ಲೆ ಕಿಚನ್ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ನಿವೇದಿತಾ ಗೌಡ ಇಲ್ಲಿಯವರೆಗೆ ಹಲವು ಬಾರಿ ಟ್ರೋಲ್ ಕೂಡ ಆಗಿದ್ದಾರೆ. ತಮ್ಮ ದೇಹಸಿರಿಯನ್ನು ಪ್ರದರ್ಶಿಸುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗುತ್ತಲೇ ಇರುತ್ತಾರೆ.

ಅದರಲ್ಲೂ ಚಂದನ್ ಶೆಟ್ಟಿ ಜೊತೆಗಿನ ವಿಚ್ಚೇದನದ ಬಳಿಕ ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಪ್ರತೀ ಬಾರಿ ಅವರು ವಿಡಿಯೋಗಳನ್ನು ಹಂಚಿಕೊಂಡಾಗಲೆಲ್ಲಾ ಕಾಮೆಂಟ್ ಬಾಕ್ಸ್ ಫುಲ್ ಆಗಿರುತ್ತದೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನಿವ್ವಿ ತಮ್ಮದೇ ಸೈಲ್​ನಲ್ಲಿ ರೀಲ್ಸ್ ಮಾಡಿಕೊಂಡು ಇದ್ದಾರೆ.

Bharjari Bachelors: ಅರ್ಧ ಹಣವನ್ನು..: ಭರ್ಜರಿ ಬ್ಯಾಚುಲರ್ಸ್ ಮುಗಿದ ಬಳಿಕ ಮನಗೆದ್ದ ಡ್ರೋನ್ ಪ್ರತಾಪ್