ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಭಾಗ್ಯ ಅರೆಸ್ಟ್: ಸ್ಟೇಷನ್​ಗೆ ಕಮಿಷನರ್ ಬರುವಂತೆ ಮಾಡಿದ ಆದೀಶ್ವರ್

ಭಾಗ್ಯಾಳನ್ನು ಅರೆಸ್ಟ್ ಮಾಡಿ ಸ್ಟೇಷನ್ಗೆ ಎಳೆದುಕೊಂಡು ಹೋಗಿದ್ದಾರೆ. ಈ ವಿಷಯ ತಿಳಿದ ಕೂಡಲೇ ಆದೀಶ್ವರ್ ಸ್ಟೇಷನ್ಗೆ ಓಡೋಡಿ ಬಂದಿದ್ದಾನೆ. ಅಲ್ಲದೆ ಅಲ್ಲಿನ ಇನ್ಸ್ಪೆಕ್ಟರ್ ಕೀಳಾಗಿ ಮಾತನಾಡಿದ ಕಾರಣ ಆದೀ ನೇರವಾಗಿ ಕಮಿಷನರ್ಗೆ ಕಾಲ್ ಮಾಡಿದ್ದು, ಸ್ವತಃ ಅವರೇ ಸ್ಟೇಷನ್ಗೆ ಬಂದಿದ್ದಾರೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಸದ್ಯ ತಾನು ಮಾಡಿಲ್ಲದ ತಪ್ಪಿಗೆ ಭಾಗ್ಯ ಅರೆಸ್ಟ್ ಆಗಿದ್ದಾಳೆ. ಕಳ್ಳತನದ ಆರೋಪದ ಮೇಲೆ ಆದೀಶ್ವರ್​ನನ್ನು ಹುಡುಕಿಕೊಂಡು ಬಂದ ಪೊಲೀಸರು ಅವನು ಸಿಗದ ಕಾರಣ ಭಾಗ್ಯಾಳನ್ನು ಅರೆಸ್ಟ್ ಮಾಡಿ ಸ್ಟೇಷನ್​ಗೆ ಎಳೆದುಕೊಂಡು ಹೋಗಿದ್ದಾರೆ. ಈ ವಿಷಯ ತಿಳಿದ ಕೂಡಲೇ ಆದೀಶ್ವರ್ ಸ್ಟೇಷನ್​ಗೆ ಓಡೋಡಿ ಬಂದಿದ್ದಾನೆ. ಅಲ್ಲದೆ ಅಲ್ಲಿನ ಇನ್​ಸ್ಪೆಕ್ಟರ್ ಕೀಳಾಗಿ ಮಾತನಾಡಿದ ಕಾರಣ ಆದೀ ನೇರವಾಗಿ ಕಮಿಷನರ್​ಗೆ ಕಾಲ್ ಮಾಡಿದ್ದು, ಸ್ವತಃ ಅವರೇ ಸ್ಟೇಷನ್​ಗೆ ಬಂದಿದ್ದಾರೆ.

ಆದೀಶ್ವರ್ ಬೀದಿಯಲ್ಲಿ ನಡೆದುಕೊಂಡು ಹೋಗುವಾಗ ಓರ್ವ ಶ್ರೀಮಂತ ಮಹಿಳೆ ತನ್ನ ಕಾರಿಗೆ ಹತ್ತುವಾಗ ಬೆಲೆ ಬಾಳುವ ಡೈಮೆಂಡ್ ನೆಕ್ಲೆಸ್ ಕೈಯಿಂದ ಜಾರಿ ಕೆಳ ಬಿದ್ದಿದೆ. ಇದನ್ನು ಗಮನಿಸಿದ ಆದೀ ಆ ಮಹಿಳೆಗೆ ಅದನ್ನು ಕೊಡುತ್ತಾನೆ. ಇದರಿಂದ ಆ ಮಹಿಳೆ ತುಂಬಾ ಖುಷಿಯಾಗಿ ನೀವು ದೊಡ್ಡ ಸಹಾಯ ಮಾಡಿದ್ದೀರಿ ಎಂದು 10 ಸಾವಿರ ರೂಪಾಯಿಯನ್ನು ನೀಡುತ್ತಾಳೆ. ಆದರೆ, ಆಕೆ ಮನೆಗೆ ಹೋಗಿ ನೋಡುವಾಗ ಆ ಬಾಕ್ಸ್​ನಲ್ಲಿ ನೆಕ್ಲೆಸ್ ಕಾಣಿಸುವುದಿಲ್ಲ. ಆಕೆ ನೇರವಾಗಿ ಸ್ಟೇಷನ್​ಗೆ ಹೋಗಿ ನನ್ನ ಡೈಮೆಂಡ್ ಸೆಕ್ಲೆಸ್ ಕಾಣುತ್ತಿಲ್ಲ.. ಓರ್ವ ಕದ್ದಿದ್ದಾನೆ ಎಂದು ದೂರು ನೀಡಿದ್ದಾಳೆ.

ಪೊಲೀಸರು ನೆಕ್ಲೆಸ್ ಬಿದ್ದ ಜಾಗಕ್ಕೆ ತೆರಳಿ ಸಿಸಿಟಿವಿ ಫೂಟೆಜ್ ನೋಡುತ್ತಾರೆ. ಅಲ್ಲಿ ಆದೀಶ್ವರ್ ಆ ಮಹಿಳೆ ಬೀಳಿಸಿದ ವಸ್ತುವನ್ನು ತೆಗೆದುಕೊಂಡು ಹೋಗುವುದು ಕಾಣುತ್ತದೆ. ಅಸಲಿಗೆ ಆದೀ ಆ ವಸ್ತುವನ್ನು ತೆಗೆದುಕೊಂಡು ಹೋಗಿ ಆ ಮಹಿಳೆಗೇ ನೀಡಿರುತ್ತಾನೆ. ಪೊಲೀಸರು ಆದೀಯ ಫೋಟೋ ತೆಗೆದುಕೊಂಡು ಗಲ್ಲಿ ಗಲ್ಲಿಯಲ್ಲಿ ವಿಚಾರಿಸಿದ್ದಾರೆ. ಕೊನೆಗೆ ಓರ್ವ ವ್ಯಕ್ತಿ ನಾನು ಇವರನ್ನು ಭಾಗ್ಯಕ್ಕನ ಮನೆಯಲ್ಲಿ ನೋಡಿದ್ದೇನೆ.

ಪೊಲೀಸರು ಭಾಗ್ಯ ಮನೆಗೆ ತೆರಳಿ ಆದೀಯನ್ನು ವಿಚಾರಿಸಿದಾಗ ಆತ ಇಲ್ಲದ ಕಾರಣ ಭಾಗ್ಯಾಳನ್ನು ಎಳೆದುಕೊಂಡು ಹೋಗಿದ್ದಾರೆ. ವಿಷಯ ತಿಳಿದ ಆದೀ ಆಫೀಸ್​ನಿಂದ ನೇರವಾಗಿ ಸ್ಟೇಷನ್​ಗೆ ಬಂದಿದ್ದಾನೆ. ಆದೀ ವಿಚಾರಿಸಿದಾಗ ನೀನು ಕಳ್ಳ.. ನಿನ್ನಿಂದ ನಾನು ಮಾತು ಕೇಳಬೇಕಾಗಿಲ್ಲ.. ನಿಮ್ಮದೆಲ್ಲ ದೊಡ್ಡ ಗ್ಯಾಂಗ್ ಇದೆ ಎಂದೆಲ್ಲ ಕೀಳಾಗಿ ಮಾತನಾಡಿದ್ದಾನೆ. ಆದರೆ, ಆದೀ ಇಲ್ಲಿ ನಿಯಮದ ಪ್ರಕಾರ ನನ್ನ ಇನ್​ಫ್ಯುಲೆನ್ಸ್ ಉಪಯೋಗಿಸುವ ಹಾಗಿಲ್ಲ.. ಹಾಗೆ ಮಾಡಿದರೆ ನಿಯಮ ಮುರಿದಂತೆ.



ಆದರೆ, ಭಾಗ್ಯಾಳನ್ನು ಹೀಗೆ ಸ್ಟೇಷನ್​ನಲ್ಲಿ ಇರುವುದನ್ನು ಸಹಿಸದ ಆದೀ ನೇರವಾಗಿ ಕಮಿಷನ್​ಗೆ ಕಾಲ್ ಮಾಡಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ಸ್ವತಃ ಅವರೇ ಸ್ಟೇಷನ್​ಗೆ ಬಂದಿದ್ದಾರೆ. ಬಂದಿದ್ದೆ ತಡ ಆದೀಯನ್ನು ಸರ್ ಎಂದು ಕರೆದಿದ್ದಾರೆ. ಕಳ್ಳನನ್ನು ಸರ್ ಎಂದು ಕರೆಯುವುದನ್ನು ಕಂಡು ಇನ್​ಸ್ಪೆಕ್ಟರ್​ಗೆ ಶಾಕ್ ಆಗುತ್ತದೆ. ಅಲ್ಲದೆ ಕಮಿಷನರ್ ಆ ಇನ್​ಸ್ಪೆಕ್ಟರ್​ನ ಮೈಚಳಿ ಬಿಡಿಸಿದ್ದಾರೆ. ಇವರು ಯಾರು ಅಂತ ಗೊತ್ತ ನಿಮ್ಗೆ. ಕಾಮತ್ ಬ್ಯುಸಿನೆಸ್ ಆ್ಯಂಡ್ ವೆನ್ಚರ್ ಇದೆಯಲ್ಲ ಅದರ ವೋನರ್ ಹಾಗೂ ಎಂಡಿ ಎಂದಿದ್ದಾರೆ. ಇದನ್ನು ಕೇಳಿದ ತಕ್ಷಣ ಇನ್​ಸ್ಪೆಕ್ಟರ್​ಗೆ ನಡುಕ ಶುರುವಾಗಿದೆ.

ಇವರನ್ನು ಡೈಮೆಂಡ್ ನೆಕ್ಲೆಸ್ ಕದ್ದಿದ್ದಾರೆ ಅಂತ ಕೇಸ್ ಹಾಕಿದ್ದೀರಾ.. ಅಂತಹ ಡೈಮೆಂಡ್ ನೆಕ್ಲೆಸ್ ಇರುವ ಅಂಗಡಿಯನ್ನೇ ಇವರು ಕೊಂಡುಕೊಳ್ಳುವಷ್ಟು ಹಣ ಇದೆ. ಎಷ್ಟು ಜನರಿಗೆ ಇವರು ಸಹಾಯ ಮಾಡಿದ್ದಾರೆ ಗೊತ್ತಾ?, ಪ್ರತಿ ತಿಂಗಳು ಕೋಟಿ ಕೋಟಿ ಹಣವನ್ನು ಅನಾತಾಶ್ರಮ, ಶಾಲಾ ಮಕ್ಕಳಿಗೆ ನೀಡುತ್ತಾರೆ. ಅಷ್ಟೇ ಅಲ್ಲದೆ ನಮ್ಮ ಡಿಪಾರ್ಟ್​ಮೆಂಟ್​ನಲ್ಲಿ ಎಷ್ಟೋ ಜನ ಪೊಲೀಸ್ ಆಗಿರುವವರು ಕೂಡ ಇವರ ಉಚಿತ ಶಾಲೆಯಿಂದ ಕಲಿತು ಬಂದವರೇ ಎಂದು ಆದೀಯನ್ನು ಹಾಡಿಹೊಗಳಿದ್ದಾರೆ ಕಮಿಷನರ್.



ಬಳಿಕ ಆದೀ ಬಳಿ ಇನ್​ಸ್ಪೆಕ್ಟರ್​ ಕ್ಷಮೆ ಕೇಳಿದ್ದಾನೆ. ನಂತರ ಆದೀ ಹಾಗೂ ಭಾಗ್ಯ ಇಬ್ಬರೂ ಜೊತೆಯಾಗಿ ಅಟೋದಲ್ಲಿ ಮನೆಗೆ ತೆರಳಿದ್ದಾರೆ. ಅತ್ತ ಆ ಶ್ರೀಮಂತ ತನ್ನ ನೆಕ್ಲೆಸ್ ಕದ್ದಿದ್ದಾನೆ ಎಂಬ ಸಿಟ್ಟಿನಲ್ಲಿ ಕೈಯಲ್ಲಿರುವ ಬಾಕ್ಸ್​ ಅನ್ನೆಲ್ಲ ಬಿಸಾಡಿದ್ದಾಳೆ. ಆಗ ಚೀಲದ ಒಳಗೆ ನೆಕ್ಲೆಸ್ ಬಿದ್ದಿರುವುದು ಕಾಣುತ್ತದೆ. ಅಯ್ಯೋ ನೆಕ್ಲೆಸ್ ಯಾರೂ ಕದ್ದಿಲ್ಲ.. ನನ್ನ ತಪ್ಪಿನಿಂದ ಹೀಗಾಗಿದೆ ಎಂದು ಪೊಲೀಸ್​ಗೆ ವಿಷಯ ಮುಟ್ಟಿಸಿದ್ದಾಳೆ.

ಸದ್ಯ ಈ ನೆಕ್ಲೆಸ್ ಕಳ್ಳತನದ ಪ್ರಕರಣ ಅಂತ್ಯ ಕಂಡಿದೆ. ಅತ್ತ ಆದೀಶ್ವರ್​ಗೆ ಕೊನೆಯ ದಿನ ಸಾಕಷ್ಟು ಮಿಡಲ್ ಕ್ಲಾಸ್ ಜನರ ಅನುಭವ ಆಗಿದೆ. ನನಗೆ ದೊಡ್ಡವರ ಕಾಂಟೆಕ್ಟ್ ಇತ್ತು ಸೋ ಸುಲಭವಾಗಿ ಆಚೆ ಬಂದೆ ಎಲ್ಲಾದರು ನಾನು ಮಿಡಲ್ ಕ್ಲಾಸ್ ಜನನೇ ಆಗಿದ್ದರೆ ಜೈಲಿಗೆ ಹೋಗಬೇಕಿತ್ತು ಅಂದುಕೊಂಡಿದ್ದಾನೆ. ಮತ್ತೊಂದೆಡೆ ಆದೀ ಇಷ್ಟೆಲ್ಲ ಕಷ್ಟಪಡಲು ನಾನೇ ಕಾರಣಳಾದೆ.. ಹೀಗಾಗಿ ಆ ಹಣವನ್ನು ನಾನು ಪಡೆದುಕೊಳ್ಳುತ್ತೇನೆ ಎಂದು ಅಂದುಕೊಂಡಿದ್ದಾಳೆ. ಅತ್ತ ಆದೀ ಮಿಡಲ್ ಕ್ಲಾಸ್ ಜನರಿಗೆ ಈ ಹಣ ಎಷ್ಟು ಭಾರ ಎಂಬುದು ನನಗೆ ಅರ್ಥ ಆಗಿದೆ ಸೋ ಈ ಹಣವನ್ನು ಪುನಃ ನಾನೇ ತೆಗೆದುಕೊಳ್ಳುತ್ತೇನೆ ಎಂದು ಅಂದುಕೊಂಡಿದ್ದಾನೆ. ಮುಂದಿನ ಸಂಚಿಕೆಯಲ್ಲಿ ಏನಾಗುತ್ತದೆ ಎಂಬುದು ರೋಚಕತೆ ಸೃಷ್ಟಿಸಿದೆ.

BBK 12: ಬಿಗ್ ಬಾಸ್ 12ಕ್ಕೆ ಈ ಇಬ್ಬರನ್ನು ತೆಗೆದುಕೊಳ್ಳಿ ಎಂದ ರಜತ್ ಕಿಶನ್